ಕುಡಿದ ಮತ್ತಿನಲ್ಲಿ ಹೆಂಡತಿ- ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ; ಗಂಡನೂ ನೇಣಿಗೆ ಶರಣು!
Team Udayavani, Feb 1, 2023, 11:12 AM IST
ಹುಬ್ಬಳ್ಳಿ: ಗಂಡನೊಬ್ಬ ಕುಡಿದ ಮತ್ತಿನಲ್ಲಿ ಹೆಂಡತಿ ಹಾಗೂ ಮೂವರು ಮಕ್ಕಳ ಮೇಲೆ ಕೊಡಲಿ, ಸುತ್ತಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ತಾನು ಕೂಡ ನೇಣಿಗೆ ಶರಣಾದ ಘಟನೆ ತಾಲೂಕಿನ ಸುಳ್ಳ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಸುಳ್ಳ ಗ್ರಾಮದ ಪಕ್ಕೀರಪ್ಪ ಮಾದರ ಎಂಬಾತ ಇಂದು ಬೆಳಗಿನ ನಾಲ್ಕು ಗಂಟೆ ಸುಮಾರಿಗೆ ಮನೆಯಲ್ಲಿನ ಟಿವಿ ಸೌಂಡ್ ಜಾಸ್ತಿ ಮಾಡಿ ಮಾರಕಾಸ್ತ್ರದಿಂದ ಹೆಂಡತಿ ಮುದಕವ್ವನ ಮೇಲೆ ಹಲ್ಲೆ ನಡೆಸಿದಾಗ ಜೋರಾಗಿ ಕಿರುಚಿದ್ದಾಳೆ. ಆಗ ಮಲಗಿದ್ದ ಮೂರು ಮಕ್ಕಳು ಎದ್ದು ಅಳಲು ಶುರು ಮಾಡಿದಾಗ ಅಂತಕಕ್ಕೀಡಾದ ಪಕ್ಕೀರಪ್ಪನು ತನ್ನ ಮೂರು ಮಕ್ಕಳ ಮೇಲೂ ಅದೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಅವರು ರಕ್ತಸಿಕ್ತದಲ್ಲಿ ಪ್ರಜ್ಞಾಹೀನವಾಗಿ ಬಿದ್ದಿರುವುದನ್ನು ಕಂಡು ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಹಲ್ಲೆಯಲ್ಲಿ ಮಗ ಮೃತಪಟ್ಟಿದ್ದಾನೆ. ಪತ್ನಿ, ಇಬ್ಬರು ಪುತ್ರಿಯರ ಸ್ಥಿತಿ ಗಂಭೀರವಾಗಿದೆ.
ಗೌಂಡಿ ಕೆಲಸ ಮಾಡಿಕೊಂಡಿದ್ದ ಫಕ್ಕೀರಪ್ಪನು ಅನಾರೋಗ್ಯದಿಂದ ಬಳಲುತ್ತಿದ್ದ ಹಾಗೂ ಮದ್ಯವ್ಯಸನಿ ಕೂಡ ಆಗಿದ್ದ. ಬುಧವಾರ ಎಲ್ಲರೂ ಮಲಗಿಕೊಂಡಿದ್ದ ವೇಳೆ ಸುತ್ತಿಗೆಯಿಂದ ತಲೆ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಪುತ್ರ ಶ್ರೇಯಸ್ ಊರ್ಫ್ ಮೈಲಾರಪ್ಪ (6) ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟರೆ, ಪತ್ನಿ ಮುದಕವ್ವ (30), ಪುತ್ರಿಯರಾದ ಶಾಮಲಾ (8), ಸೃಷ್ಟಿ (4) ಗಂಭೀರವಾಗಿ ಗಾಯಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಕಿಮ್ಸ್ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಸ್ಥಿತಿಯು ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಅವಿಸ್ಮರಣೀಯ 27 ವರ್ಷ; ಸಿನಿಹಾದಿ ನೆನೆದ ಕಿಚ್ಚ ಸುದೀಪ್
ಬೆಳ್ಳಗ್ಗೆ 6:00 ಗಂಟೆ ಸುಮಾರಿಗೆ ಮನೆಯ ಅಕ್ಕಪಕ್ಕದವರು ಟಿವಿ ಸೌಂಡ್ ಕೇಳಿ ಬಾಗಿಲು ಬಡಿದಾಗ ಯಾರು ಬಾಗಿಯಲು ತೆರೆಯದಿದ್ದಾಗ ಮುರಿದಿದ್ದಾರೆ. ಆಗ ರಕ್ತದ ಮಡುವಿನಲ್ಲಿ ಮೂವರು ಮಕ್ಕಳು ಹಾಗೂ ಮುದಕವ್ವ ಬಿದ್ದಿದ್ದನ್ನು ನೋಡಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ ಪಿ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ ಸ್ಪೆಕ್ಟರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.