ಆರೋಗ್ಯ ಸಚಿವರು ಮಾತು ಮರೆತಂತಿದೆ: ಶಾಸಕ ಮಂಜುನಾಥ್ ಬೇಸರ

ಉಸ್ತುವಾರಿಯೂ ನಾಪತ್ತೆ, ಅನುದಾನವೂ ಅಷ್ಟಕಷ್ಟೆ

Team Udayavani, Feb 2, 2023, 10:28 PM IST

1-sadsad

ಹುಣಸೂರು: ಈ ಬಿಜೆಪಿ ಸರಕಾರವು ಕಾಂಗ್ರೆಸ್ ಶಾಸಕನೆಂಬ ಕಾರಣಕ್ಕೆ ಅನುದಾನ ಬಿಡುಗಡೆಗೂ ಅಲಕ್ಷ್ಯ, ಯಾವುದೇ ಜಲ್ವಂತ ಸಮಸ್ಯೆಗಳ ಮನವಿಗೂ ಸ್ಪಂದಿಸದೆ ಮಲತಾಯಿ ದೋರಣೆ ಅನುಸರಿಸುತ್ತಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಗಂಭೀರ ಆರೋಪ ಮಾಡಿದರು.

ನಗರಸಭೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಅವರು ಅಲೆಮಾರಿ ಸಮುದಾಯಗಳಿಗೆ 3.75 ಲಕ್ಷರೂ ವೆಚ್ಚದ ಮನೆ ನಿರ್ಮಿಸಿ ಕೊಡುವುದಾಗಿ ಘೋಷಿಸಿ ಹಕ್ಕುಪತ್ರ ವಿತರಿಸಿರುವ ಮುಖ್ಯಮಂತ್ರಿಗಳು, ಇದೀಗ ಕೇವಲ 1.75 ಲಕ್ಷಗಳಿಗೆ ನಿಗದಿಪಡಿಸಿರುವುದು ಸರಕಾರ ಅಲೆಮಾರಿಗಳಿಗೆ ಮಾಡಿರುವ ದ್ರೋಹ, ಇನ್ನು ಸಿದ್ದರಾಮಯ್ಯರ ಅವಧಿಯಲ್ಲಿ ಮಂಜೂರಾಗಿದ್ದ 918 ಜಿ.ಪ್ಲಸ್ 2 ಮನೆಗಳನ್ನು ಹಾಗೂ ಶಾಸಕರ ಮೂಲಕ ಮಂಜೂರು ಮಾಡಿದ್ದ 820 ಮನೆಗಳನ್ನು ಹಿಂಪಡೆದಿರುವುದು ರಾಜಕೀಯ ದುರುದ್ದೇಶದಿಂದ ಎಂದು ಆರೋಪಿಸಿದರು.

ಸಚಿವರು ಕೊಟ್ಟ ಮಾತು ಮರೆತರೇ?
ಸಿದ್ದರಾಮಯ್ಯರ ಅವಧಿಯಲ್ಲಿ ಮಂಜೂರಾದ ಹೈಟೆಕ್ ಆಸ್ಪತ್ರೆ ಪೂರ್ಣಗೊಳಿಸಲು ಉಳಿಕೆ ಅನುದಾನ ಬಿಡುಗಡೆ ಮಾಡುವಂತೆ ಮೂರು ಬಾರಿ ಸದನದಲ್ಲಿ ಚರ್ಚಿಸಿದ್ದರೂ ಆರೋಗ್ಯ ಸಚಿವ ಡಾ.ಸುಧಾಕರ್‌ರವರೇ ಖುದ್ದಾಗಿ ಭೇಟಿಯಿತ್ತು. ಅಗತ್ಯ ಅನುದಾನ ಬಿಡುಗಡೆ ಮಾಡುವ, ಡಿಸೆಂಬರ್-೨೦೨೨ ಅಂತ್ಯದಲ್ಲಿ ಸೇವೆಗೆ ಸಮರ್ಪಿಸುವ ಭರವಸೆಯಿತ್ತು ಯಾವುದೇ ಕ್ರಮವಹಿಸಿಲ್ಲ. ಸಚಿವರು ತಮ್ಮ ಮಾತನ್ನೇ ಮರೆತಂತಿದೆ ಎಂದು ಟೀಕಿಸಿದರು.

ಅರಸು ಭವನಕ್ಕೆ ಗ್ರಹಣ
ಅರಸುಭವನ ಕಾಮಗಾರಿ ಪೂರ್ಣಗೊಳಿಸಲು ಇರುವ ಎರಡು ಕೋಟಿ ಅನುದಾನವನ್ನು ಬಿಡುಗಡೆ ಮಾಡದೆ ದೇವರಾಜಅರಸರಿಗೆ ಅವಮಾನ ಮಾಡುತ್ತಿದೆ. ಇನ್ನು ನೀರಾವರಿ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳಿಗೆ ನಿಗಧಿತ ಅನುದಾನ ಬಿಡುಗಡೆ ಮಾಡಿಲ್ಲಾ. ಇನ್ನು ಅನುದಾನ ಬಿಡುಗಡೆಯಲ್ಲೂ ತಾರತಮ್ಯವೆಸಗಿದ್ದು. ರಾಜ್ಯದ ಎಲ್ಲಾ ಬಿ.ಜೆ.ಪಿ. ಕ್ಷೇತ್ರಗಳಿಗೆ ತಲಾ 70 ಕೋಟಿ, ಜೆಡಿಎಸ್ ಕ್ಷೇತ್ರಗಳಿಗೆ 40ಕೋಟಿ, ಹುಣಸೂರು ಕ್ಷೇತ್ರಕ್ಕೆ ಮಾತ್ರ ಹತ್ತು ಕೋಟಿ ಅನುದಾನ ನೀಡುವ ಮೂಲಕ ಅನ್ಯಾಯವೆಸಗಿದೆ.

ದಿನಾಂಕ ನಿಗದಿ ಪಡಿಸಿದ್ದ ಸಚಿವರೂ ನಾಪತ್ತೆ!
ನಗರದ ಸ್ಲಂಬೋರ್ಡ್ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಸಚಿವರು ದಿನಾಂಕ ನಿಗದಿಪಡಿಸಿ ಕ್ಷೇತ್ರಕ್ಕೆ ಬಾರದೆ ಪಕ್ಕದ ಕ್ಷೇತ್ರಕ್ಕೆ ಆದ್ಯತೆ ನೀಡಿ ಸ್ಲಂನಿವಾಸಿಗಳಿಗೆ ಘೋರ ಅನ್ಯಾಯ ಮಾಡಿದ್ದಾರೆ. ಇಂತಹ ತಾರತಮ್ಯ ನೀತಿಯ ಸರಕಾರದಿಂದಾಗಿ ತಾಲೂಕಿನ ಜನತೆಗೆ ದೊಡ್ಡಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ತಾಲೂಕಿಗೆ 2640 ಕೋಟಿ ಅನುದಾನ ಬಿಡುಗಡೆಯಾಗಿತ್ತು, ಆವೇಳೆ ನೀರಾವರಿ, ಶಿಕ್ಷಣ ಹಾಗೂ ರಸ್ತೆ ಅಭಿವೃದ್ದಿ ಸೇರಿದಂತೆ ತಾಲೂಕಿನ ಸಮಗ್ರ ಅಭಿವೃದ್ದಿ ಪರ್ವವೇ ನಡೆದಿತ್ತೆಂದು ಸ್ಮರಿಸಿದರು.

ರಾಗಿ ಖರೀದಿಗೆ ಸರ್ವರ್ ಪ್ರಾಬ್ಲಂ?
ಸರಕಾರ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ವಾರವೂ ಕಳೆದಿಲ್ಲ. ಇನ್ನೂ ಖರೀದಿ ಕೇಂದ್ರ ಆರಂಭವಾಗಿಲ್ಲ. ಸರ್ವರ್ ಪ್ರಾಬ್ಲಂ ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಕನಿಷ್ಟ ಸರಿಪಡಿಸುವಲ್ಲಿ ವಿಫಲವಾಗಿದ್ದು, ಇದರಿಂದಾಗಿ ಮಧ್ಯವರ್ತಿಗಳಿಗೆ ಅನುಕೂಲವಾಗಿದೆ. ತಾಲೂಕಿನಾದ್ಯಂತ ಬಸ್‌ಗಳ ಸಮಸ್ಯೆ ಸಾಕಷ್ಟಿದ್ದು, ಸರಿಪಡಿಸಲು ಸೂಚಿಸಿದ್ದರೂ ಕ್ರಮಕೈಗೊಳ್ಳದ ಕುರಿತು ಡಿಪೋಮ್ಯಾನೇಜರ್ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.

ಅಕ್ರಮ ಮದ್ಯನಿಲ್ಲಿಸಿ
ತಾಲೂಕಿನ ಎಲ್ಲೆಡೆ ಅಕ್ರಮ ಮದ್ಯ ಮಾರಾಟದ ದೂರುಗಳಿದ್ದು, ಕ್ರಮವಹಿಸುವಂತೆ ಅಬಕಾರಿ ಇನ್ಸ್ಪೆಕ್ಟರ್ ನಾಗಲಿಂಗಸ್ವಾಮಿಗೆ ಶಾಸಕರು ತಾಕೀತು ಮಾಡಿದರು.

ಬಹುತೇಕ ಇಲಾಖೆಗಳಿಗೆ ಅನುದಾನ ಬಾರದ ಹಿನ್ನಲೆಯಲ್ಲಿ ಪರಿಶೀಲನೆ ನಡೆಸದೆ ಕೇವಲ ಮಾಹಿತಿ ಪಡೆದುಕೊಂಡರು. ಸಭೆಯಲ್ಲಿ ತಾ.ಪಂ. ಆಡಳಿತಾಧಿಕಾರಿ ನಂದ, ಇಒ.ಮನು ಬಿ.ಕೆ, ತಹಶೀಲ್ದಾರ್ ಡಾ.ಅಶೋಕ್, ನಗರಸಭೆ ಆಯುಕ್ತೆ ಮಾನಸ, ಕೆ.ಡಿ.ಪಿ. ಸದಸ್ಯರಾದ ಬಸವರಾಜೇಗೌಡ, ಕಾಂತರಾಜ್, ಸತೀಶ್, ಮಂಜುಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲವೇ, ಸರ್ವೇಯರ್‌ಗೆ ತರಾಟೆ
ವಿಕಲಚೇತನ ರೈತ ಆಡಿಗನಹಳ್ಳಿಯ ನಿಂಗಯ್ಯರಿಂದ ಕೋರ್ಟ್ ಆದೇಶದಂತೆ ಭೂಮಿ ಸರ್ವೆ ಮಾಡಿಕೊಡಲು 15 ಸಾವಿರ ರೂ ಲಂಚ ಕೇಳಿದ್ದ ಸರ್ವೇಯರ್ ಜಯಕುಮಾರ್‌ರನ್ನು ಸಭೆಗೆ ಕರೆಸಿ, ಛೀಮಾರಿ ಹಾಕಿ ಎರಡು ದಿನದಲ್ಲಿ ದಾಖಲಾತಿ ಮಾಡಿಕೊಡುವಂತೆ ಎಚ್ಚರಿಸಿದರು.

ಕ್ಷೇತ್ರದ ಅಭಿವೃದ್ದಿಗೆ ಸರಕಾರದ ಸ್ಪಂದಿಸುತ್ತಿಲ್ಲವೆಂದು ಶಾಸಕರು ಮಾಡುತ್ತಿದ್ದ ಆರೋಪದ ವಿರುದ್ದ ಕೆಡಿಪಿ ಸದಸ್ಯ ಕಾಂತರಾಜ್ ಪ್ರಶ್ನಿಸಿದರು. ಇದಕ್ಕೆ ಶಾಸಕರು ಸಮಜಾಯಿಸಿ ನೀಡುತ್ತಿದ್ದಂತೆ ಸುಮ್ಮನಾದರು. ಸಭೆಯಲ್ಲಿ ಕಳೆದ ಬಾರಿಯ ಅನುಪಾಲನಾ ವರದಿ ಮಂಡಿಸದಿರುವುದಕ್ಕೆ ಶಾಸಕರು ಅಸಮಾದಾನ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.