ಪೂಜಾ ಹೆಗ್ದೆ ಸಹೋದರನ ಮದುವೆಯಲ್ಲಿ ಸಲ್ಮಾನ್ ಖಾನ್: ಮತ್ತೆ ‘ಪ್ರೀತಿ ವದಂತಿ’ ಶುರು
Team Udayavani, Feb 3, 2023, 10:53 AM IST
ಮುಂಬೈ: ನಟ ಸಲ್ಮಾನ್ ಖಾನ್ ಇತ್ತೀಚೆಗೆ ನಟಿ ಪೂಜಾ ಹೆಗ್ಡೆ ಅವರ ಸಹೋದರ ರಿಷಬ್ ಹೆಗ್ಡೆ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಹಲವಾರು ಸಾಮಾಜಿಕ ಮಾಧ್ಯಮ ಫ್ಯಾನ್ ಕ್ಲಬ್ ಗಳು ಸಲ್ಮಾನ್ ವಧು ಮತ್ತು ವರನೊಂದಿಗೆ ಪೋಸ್ ನೀಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿವೆ.
ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿಗಳು ಹರಿದಾಡಿದ್ದವು. ಸಲ್ಮಾನ್ ಪೂಜಾ ಜೊತೆ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಇವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಹೀಗಾಗಿ ಸಲ್ಮಾನ್ ತನ್ನ ಮುಂಬರುವ ಎರಡು ಚಿತ್ರಗಳಲ್ಲಿ ಪೂಜಾ ಹೆಗ್ಡೆ ಅವರಿಗೆ ಅವಕಾಶ ನೀಡಿದ್ದಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡಿದ್ದವು. ಬಳಿಕ ಈ ಸುದ್ದಿಗಳು ಸುಳ್ಳು ಎಂದು ಸಲ್ಮಾನ್ ಆಪ್ತ ವಲಯ ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ:ವಿದಾಯದ ಸೂಚನೆ ನೀಡಿದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ
ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರ ‘ಕಿಸಿ ಕಾ ಭಾಯ್ ಕಿಸಿ ಕಾ ಜಾನ’ ಚಿತ್ರದಲ್ಲಿ ಪೂಜಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಮದುವೆ ಸಮಾರಂಭದಲ್ಲಿ ಸಲ್ಮಾನ್ ಖಾನ್ ಅವರು ಪೂಜಾ ಕುಟುಂಬದ ಜೊತೆ ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ. ಪೂಜಾ ಹೆಗ್ಡೆ ಅವರು ಸಮಾರಂಭದಲ್ಲಿ ಸಲ್ಮಾನ್ ಅವರ ‘ಚೋಟೆ ಚೋಟೆ ಭೈಯೋಂ ಕೆ ಬಡೇ ಭಯ್ಯಾ’ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.
Letest : Pooja Hegde With His Family Dancing MegaStar Salman Khan Song.🤩❤️🥰😍🔥#SalmanKhan𓃵 #SalmanKhan #PoojaHegde #KisiKaBhaiKisiKiJaan #Bhaijaan #Pooja #Poojahegdehot @BeingSalmanKhan @hegdepooja pic.twitter.com/juvUxQkxOp
— SalmanKhanFC-Rajasthan (@SalmanKhanFCRaj) February 2, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ನನ್ನ ಬಾತ್‌ರೂಮ್ ವಿಡಿಯೋ ಲೀಕ್ ಮಾಡಲು ಅನುಮತಿ ಕೊಟ್ಟಿದ್ದು ನಾನೇ – ಊರ್ವಶಿ
Saif Ali Khan: 5 ದಿನದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಸೈಫ್ ಅಲಿಖಾನ್
Emergency;ಪಂಜಾಬ್ ಬಳಿಕ ಇಂಗ್ಲೆಂಡ್‌ನಲ್ಲಿ ಕಂಗನಾ ಚಿತ್ರಕ್ಕೆ ವಿರೋಧ
Amitabh Bachchan; ಫ್ಲ್ಯಾಟ್ ಮಾರಿ 4 ವರ್ಷದಲ್ಲಿ 52 ಕೋಟಿ ರೂ. ಲಾಭ ಗಳಿಸಿದ ಬಿಗ್ ಬಿ
BBT8: ಬಿಗ್ ಬಾಸ್ ತಮಿಳು ಟ್ರೋಫಿ ಗೆದ್ದ ಮುತ್ತುಕುಮಾರನ್; ವೀಕ್ಷಕರು ಫುಲ್ ಖುಷ್