ಆರ‍್ಹಾಳ: ಭೂಮಿ ಪೋಡಿ ಮುಕ್ತ ಮಾಡದಿದ್ದರೆ ಮತದಾನ ಬಹಿಷ್ಕಾರ
Team Udayavani, Feb 3, 2023, 6:42 PM IST
ಗಂಗಾವತಿ: ತಾಲೂಕಿನ ಆರ‍್ಹಾಳ ಗ್ರಾಮದಲ್ಲಿ ಎಸ್ಸಿ, ಎಸ್ಟಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ 20 ಫಲಾನುಭವಿಗಳಿಗೆ ಸರಕಾರ 1971 ರಲ್ಲಿ ಸುಮಾರು 39.27 ಎಕರೆ ಭೂಮಿಯನ್ನು ಮಂಜೂರು ಮಾಡಿ ಆದೇಶ ಪತ್ರ ನೀಡಿದೆ. ನಂತರ ಫಲಾನುಭವಿಗಳ ಹೆಸರಿನಲ್ಲಿ ಪೋಡಿ ಹಾಗೂ ನಕ್ಷೆ ನೀಡುವಲ್ಲಿ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರಿಂದ ಕಳೆದ 52 ವರ್ಷಗಳಿಂದ ಸರಕಾರದಿಂದ ಮಂಜೂರಿಯಾದ ಭೂಮಿ ಪೋಡಿ ಮುಕ್ತವಾಗಿಲ್ಲ. ಇದರಿಂದ ಕಳೆದ 52 ವರ್ಷಗಳಿಂದ ಭೂಮಿ ಮಂಜೂರಾತಿ ಪಡೆದ 20 ಫಲಾನುಭವಿ ರೈತರು ಕಂದಾಯ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.
ಕೂಡಲೇ ಪೋಡಿ ಮುಕ್ತ ಮಾಡಿ ನಕ್ಷೆ ನೀಡದಿದ್ದರೆ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಬಹಿಷ್ಕಾರ ಮಾಡಲು ರ‍್ಹಾಳ ಗ್ರಾಮದ 20 ರೈತ ಕುಟುಂಬಗಳು ನಿರ್ಧರಿಸಿವೆ ಎಂದು ನೋಂದ ರೈತರು ಆರ‍್ಹಾಳದ ತಮಗೆ ಮಂಜೂರಾದ ಭೂಮಿಯ ಹತ್ತಿರ ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರುದ್ರೇಶ, ತರಸಾಲೆಪ್ಪ, ಶಿವಪ್ಪ ಭೋವಿ,ಹಿರೇಖಾನಸಾಭ ಮಾತನಾಡಿ, ಕಳೆದ 52 ವರ್ಷಗಳಿಂದ ತಹಸೀಲ್ ಕಚೇರಿಗೆ ಅಲೆದಢಿದರೂ ಸರಕಾರ ಮಂಜೂರಿ ಮಾಡಿದ 39.27 ಎಕರೆ ಪ್ರದೇಶವನ್ನು ಕಂದಾಯ ಇಲಾಖೆಯವರು ಸರ್ವೇ ನಡೆಸಿ ಆಯಾ ರೈತರ ಭೂಮಿ ಹದ್ದುಬಸ್ತು ಮಾಡಿ ಪೋಡಿ ಮುಕ್ತಗೊಳಿಸಿ ನಕ್ಷೆ ತಯಾರಿಸಿ ಕೊಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.
ಸರಕಾರ ಬಡ ಕೃಷಿ ಕಾರ್ಮಿಕರಿಗೆ ಭೂಮಿ ಮಂಜೂರಿ ಮಾಡಿ ಆದೇಶ ಪತ್ರ ನೀಡಿದರೂ ಎಸಿಯವರು ಪೋಡಿ ಮುಕ್ತ ಮಾಡಿ ಆಯಾ ರೈತರ ಭೂಮಿ ಹದ್ದುಬಸ್ತು ಗುರುತಿಸಿ ನಕ್ಷೆ ತಯಾರು ಮಾಡಿ ದಾಖಲೆ ನೀಡಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದ ಸರಕಾರ ಭೂಮಿ ಮಂಜೂರಿ ಮಾಡಿ ಆದೇಶ ಕೊಟ್ಟರೂ ಪ್ರಯೋಜನ ಇಲ್ಲದಂತಾಗಿದೆ. ಗಂಗಾವತಿ ತಹಸೀಲ್ ಕಚೇರಿಯಿಂದ ಅಗತ್ಯ ಮಾಹಿತಿ ದಾಖಲೆಗಳ ಸಮೇತ ಕೊಪ್ಪಳದ ಎಸಿ ಕಚೇರಿಗೆ ಕಡತ ಹೋಗಿದ್ದರೂ ನೂರಾರು ಭಾರಿ ಕೊಪ್ಪಳದ ಎಸಿ ಕಚೇರಿಗೆ ಅಲೆದರೂ ಪ್ರಯೋಜನವಾಗಿಲ್ಲ. ಆದ್ದರಿಂದ 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯನ್ನು ಆರ‍್ಹಾಳ ಗ್ರಾಮದ 20 ಕುಟುಂಬಗಳ ಮತದಾರರು ಬಹಿಷ್ಕಾರ ಮಾಡಲು ನಿರ್ಧರಿಸಿದ್ದು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ಸರ್ವೇ ನಂ.64 ರಲ್ಲಿರುವ 39. 27 ಎಕರೆ ಪ್ರದೇಶವನ್ನು ಪೋಡಿ ಮುಕ್ತಗೊಳಿಸಿ ರೈತರಿಗೆ ಅಗತ್ಯ ದಾಖಲಾತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸರಕಾರದಿಂದ ಮಂಜೂರಿಯಾದ ಭೂಮಿಯಾಗಿರುವುದರಿಂದ ಆರ‍್ಹಾಳ ಪೋಡಿ ಮುಕ್ತ ಗ್ರಾಮವಾದರೂ ಸರ್ವೇ ನ.64 ರ 39.27 ಎಕರೆ ಪ್ರದೇಶದ ರೈತರ ಭೂಮಿ ಇನ್ನು ಪೋಡಿ ಮುಕ್ತವಾಗಿಲ್ಲ. ಇತ್ತೀಚೆಗೆ ಬಸಾಪಟ್ಟಣದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಶಾಸಕರು ಸಂಸದರು. ಸಹಾಯಕ ಆಯುಕ್ತರಿಗೂ ಮನವಿ ಮಾಡಲಾಗಿದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಅಗತ್ಯ ಕ್ರಮಕೈಗೊಳ್ಳದಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗುತ್ತದೆ. ಜತೆಗೆ ಇಡೀ ಕುಟುಂಬದವರ ಜತೆಗೂಡಿ ಎಸಿ ಕಚೇರಿ ಬಳಿ ಅಮರಣಾಂತರ ಉಪವಾಸ ಸತ್ಯಗ್ರಹ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿ.ರವಿಕುಮಾರ, ರುದ್ರೇಶ, ಹನುಮಂತಪ್ಪ, ಚಂದುವಂಶಿ, ನಾಗೇಶರಾವ್,ಸಣ್ಣ ಖಾಜಾ,ಹುಲಿಗೆಮ್ಮ, ವಿದ್ಯಾಶ್ರೀ, ಬಾಲಪ್ಪ ಕೊರವರ್,ಮರಿಯಮ್ಮ,ರಾಜಸಾಬ, ತರಸಲೆಪ್ಪ, ವೆಂಕಟರಾವ್, ಮೇದಾರ ಕೃಷ್ಣ ಸೇರಿ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.