ವಿಐಎಸ್ಎಲ್ ಉಳಿಸುವಂತೆ ಕಾರ್ಖಾನೆ ಎದುರು ಜೆಡಿಎಸ್ ಪ್ರತಿಭಟನೆ ; ಹೆಚ್ ಡಿಕೆ ಭಾಗಿ
ನಿಮಗೆ ಧೈರ್ಯ ಇದ್ದರೆ.... ಯಡಿಯೂರಪ್ಪ ಅವರಿಗೆ ಸವಾಲು...
Team Udayavani, Feb 3, 2023, 10:26 PM IST
ಶಿವಮೊಗ್ಗ : ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಉಳಿಸುವಂತೆ ಜೆಡಿಎಸ್ ಶುಕ್ರವಾರ ಪ್ರತಿಭಟನೆ ನಡೆಸಿದ್ದು, ಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭಾಗಿಯಾದರು.
ಈ ವೇಳೆ ಮಾತನಾಡಿದ ಮಾಜಿ ಸಿಎಂ, ಭದ್ರಾವತಿಯ ಕಾರ್ಮಿಕರು ಎಲ್ಲರೂ ಆತಂಕದಲ್ಲಿದ್ದಾರೆ. ಕುಷ್ಟಗಿಯ ಪಂಚರತ್ನ ಯಾತ್ರೆ ವೇಳೆ ಈ ಭಾಗದ ಕಾರ್ಮಿಕರು ನನ್ನ ಭೇಟಿ ಮಾಡಿದ್ದರು.ಅವರಿಗೆ ಭದ್ರಾವತಿಗೆ ಬರುತ್ತೇನೆ ಎಂದು ಮಾತು ಕೊಟ್ಟಂತೆ ಬಂದಿದ್ದೇನೆ. ಕಾರ್ಖಾನೆ ಉಳಿಸಲು ಕನ್ನಡಿಗರು ಇದ್ದಾರೆ ಎಂಬ ಎಚ್ಚರಿಕೆಯನ್ನು ಕೇಂದ್ರ ಸರ್ಕಾರಕ್ಕೆ ಕೊಡುತ್ತೇನೆ.ಸೇಲ್ ಸಂಸ್ಥೆಗೆ ವಿಐಎಸ್ಎಲ್ ಸೇರಿಸಿಕೊಳ್ಳಲು ವಿರೋಧ ಮಾಡಿದ್ದರು. ಕಾರ್ಖಾನೆಗೆ ಬಂಡವಾಳ ತೊಡಗಿಸುವಂತೆ ಸೇಲ್ ಗೆ ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಬಂಡವಾಳ ತೊಡಗಿಸಿಲ್ಲ ಎಂದರು.
ಯಾವ ಪುರುಷಾರ್ಥಕ್ಕೆ ಏರ್ಪೋರ್ಟ್ ಕಟ್ಟಿಕೊಂಡು ಕೂತ್ತಿದ್ದಾರೋ ಗೊತ್ತಿಲ್ಲ. ಇಲ್ಲಿ ಕಾರ್ಮಿಕರನ್ನು ಬೀದಿ ಪಾಲು ಮಾಡಿದ್ದಾರೆ. ಯಡಿಯೂರಪ್ಪ ಅಂದು ಬಿಜೆಪಿಯಲ್ಲಾದ ನೋವನ್ನು ಹೇಳಿಕೊಂಡು ನಮ್ಮ ಬಳಿ ಬಂದಿದ್ದರು.ಮಂತ್ರಿ ಸ್ಥಾನ ನೀಡುವಂತೆ ನಮ್ಮ ಬಳಿ ಬಂದಿದ್ದರು. ಆದರೇ, ನೀವು ಒಬ್ಬರೇ ರಾಜೀನಾಮೆ ಕೊಡಬೇಡಿ ಎಂದು ಸಲಹೆ ನೀಡಿದ್ದೆ.ನಾನು ಯಾವುದನ್ನು ಮರೆತಿಲ್ಲ.ಮಂಡ್ಯದಲ್ಲಿ ಹುಟ್ಟಿ, ಶಿವಮೊಗ್ಗದಲ್ಲಿ ಬೆಳೆದು ಮುಂದೆ ಬಂದಿದ್ದೀರಿ.ನಿಮಗೆ ಧೈರ್ಯ ಇದ್ದರೆ, ಕೇಂದ್ರದ ಬಳಿ ಹೋಗಿ ಕೇಳಿ ಕಾರ್ಖಾನೆ ಉಳಿಸಿಕೊಳ್ಳಿ ಎಂದು ಸವಾಲು ಹಾಕಿದರು.
ಭದ್ರಾವತಿಯ ಎಂಪಿಎಂ ಅನ್ನು ತಿಂದು ತೆಗಲಾಗಿದೆ.ನಿಮ್ಮನ್ನ ಬೆಳೆಸಿದ ಜನಕ್ಕೆ ಯಡಿಯೂರಪ್ಪ, ಈಶ್ವರಪ್ಪ ಕೊಟ್ಟ ಕೊಡುಗೆ ಏನು? ನಿಮಗೆ ನರೇಂದ್ರ ಮೋದಿ ಬಳಿ ಮಾತನಾಡುವ ಯೋಗ್ಯತೆ, ಧೈರ್ಯ ಇಲ್ಲದಿದ್ದರೆ ಬಿಡಿ. ನಾಲ್ಕು ತಿಂಗಳು ಯಾರಿಗೂ ಕೊಡದೇ ಸುಮ್ಮನೇ ಇರಿ ಸಾಕು..
ರಾಜ್ಯದಲ್ಲಿ ನಾನು, ಇಬ್ರಾಹಿಂ ಇಬ್ಬರೂ ಓಡಾಟ ಮಾಡುತ್ತಿದ್ದೇವೆ. ಜೂನ್ ನಂತರ ಏನು ಮಾಡಬೇಕು ಎಂದು ನನಗೆ ಗೊತ್ತಿದೆ. ಈ ಜಿಲ್ಲೆಯಿಂದ ಬದುಕಿದ್ದೀರಿ ಎಂಬ ಭಾವನೆ ಇದ್ದರೆ, ಕಾರ್ಮಿಕರ ಉಳಿಸಿ. ನೀವು ಕೇಂದ್ರ ಸರ್ಕಾರದವರೂ ಒಂದು ರೂಪಾಯಿ ಕೊಡುವುದು ಬೇಡ. ನನ್ನ ರಾಜ್ಯದ ಜನರ ತೆರಿಗೆ ದುಡ್ಡಿನಲ್ಲಿ ನಾನು ಕಾರ್ಖಾನೆ ಉಳಿಸುತ್ತೇನೆ ಎಂದರು.
1 ಅಥವಾ 2 ಸಾವಿರ ಕೋಟಿ ಕೊಟ್ಟು ಕಾರ್ಖಾನೆ ಉಳಿಸುವ ಸವಾಲು ನಾನು ಸ್ವೀಕರಿಸುತ್ತೇನೆ. ಕಾರ್ಖಾನೆ ನಾನು ಉಳಿಸಿಕೊಡ್ತೇನೆ ಕಣ್ಣೀರು ಹಾಕಬೇಡಿ. 2023 ರ ಒಳ್ಳೆಯ ದಿನಗಳು ಕೆಲವೇ ತಿಂಗಳಲ್ಲಿ ಬರುತ್ತವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿ ಕಾರಿ, 27ಕ್ಕೆ ಬರ್ತಾರಲ್ಲಾ ಒಂದು 15 ಸಾವಿರ ಜನರು ಹೋಗಿ ನಿಂತುಕೊಳ್ಳಿ.. ನಾನು ಬರ್ತೇನೆ.ಇಲ್ಲಿನ ಸಂಸದರಿಗೆ ಮಾತಾನಾಡುವ ಧೈರ್ಯ ಇಲ್ಲ. ಚುನಾವಣೆಗಾಗಿ ಬಂದು ಇಲ್ಲಿ ಭಾಯಿಯೋ, ಬೆಹನೋ ಅನ್ನೋದಲ್ಲ.ಜನರ ಕಷ್ಟಗಳನ್ನು ಕೇಳಿ ಎಂದರು.
ವಸ್ತುಗಳನ್ನು ಮಾರಾಟ ಮಾಡಿದ್ದಾರೆ
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭಾರತೀಯ ಉಕ್ಕು ಪ್ರಾಧಿಕಾರ ವಿರುದ್ಧ ವಾಗ್ದಾಳಿ ನಡೆಸಿ, ಅಧಿಕಾರಿಗಳು ವಿಐಎಸ್ಎಲ್ ಎಲ್ಲ ವಸ್ತುಗಳನ್ನು ಮಾರಾಟ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಹೆಚ್ ಡಿಕೆ ಸಿಎಂ ಆದರೆ ವಿಐಎಸ್ಎಲ್ ಮುಚ್ಚಲು ಬಿಡುವುದಿಲ್ಲ. ಸೇಲ್ ನಿಂದ ಭದ್ರಾವತಿಯ ಕಾರ್ಖಾನೆ ಶ್ಮಶಾನ ಮಾಡಿದ್ದಾರೆ. ಮತ್ತೆ ಭದ್ರಾವತಿ ಕೈಲಾಸ ಮಾಡುತ್ತೇವೆ. 1995 ರ ಫಲಿತಾಂಶ, 2023 ರಲ್ಲಿ ಮತ್ತೆ ರಿಪಿಟ್ ಆಗಲಿದೆಎಂದರು.
ಇದು ರಾಜ್ಯ ಮಟ್ಟದ ಹೋರಾಟ ಆಗಿ ಪರಿವರ್ತನೆ ಆಗಲಿದೆ.ಸಿಎಂ ಬೊಮ್ಮಾಯಿ ಕೂಡ ಮಧ್ಯಪ್ರವೇಶ ಮಾಡಬೇಕು. ಬಿಎಸ್ ವೈ ಅವರ ಒಂದು ಫ್ಯೂಸ್ ಮೋದಿ, ಮತ್ತೊಂದು ಫ್ಯೂಸ್ ಅಮಿತ್ ಶಾ ಬಳಿ ಇದೆ. ಬಿಎಸ್ ವೈ ಹಲ್ಲು ಕಿತ್ತ ಹಾವು ಆಗಿದ್ದಾರೆ. ಸಚಿವರಾಗಿದ್ದ ಆರ್ ವಿ ದೇಶಪಾಂಡೆ ಅಂದು ಎಂಪಿಎಂ ಗೆ 50 ಕೋಟಿ ಅನುದಾನ ಇಲ್ಲ ಎಂದಿದ್ದರು. ಆರಗ ಜ್ಞಾನೇಂದ್ರ ಅಂದು ಎಂಪಿಎಂ ಕಾರ್ಖಾನೆ ಲೂಟಿ ಮಾಡಿ ಹೋಗಿದ್ದಾರೆ ಎಂದರು.
ಕೋತ್ವಾಲ್ ರಾಮಚಂದ್ರ ಶಿಷ್ಯ ರಾಜಕೀಯದಲ್ಲಿ ಇದ್ದಾನೆ. ಸಿಡಿಯಲ್ಲಿ ಏನೀದೆ ಗೃಹ ಸಚಿವರು ತೋರಿಸಬೇಕು.12 ಮಂತ್ರಿಗಳ ಕುರಿತು ಏನು ಇದೆ ಅನ್ನುವುದನ್ನು ತೋರಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.