ಚನ್ನಬಸವೇಶ್ವರ ಮಹಾ ರಥೋತ್ಸವ
ಉಳವಿ ಜಾತ್ರೆಗೆ ಸಕಲ ಸಿದ್ಧತೆ | ಹರಹರ ಮಹಾದೇವ ಉದ್ಘೋಷದೊಂದಿಗೆ ಉಳವಿಯತ್ತ ಭಕ್ತರ ದಂಡು
Team Udayavani, Feb 5, 2023, 5:20 PM IST
ಜೋಯಿಡಾ: ಶ್ರೀ ಕ್ಷೇತ್ರ ಉಳವಿ ಜಾತ್ರೆಗೆ ಸಕಲ ಸಿದ್ಧತೆಗೊಂಡಿದ್ದು, ಹರ ಹರ ಮಹಾದೇವ ಅಡಿಕೇಶ್ವರ ಮಡಿಕೇಶ್ವರ ಉಳವಿ ಚೆನ್ನಬಸವೇಶ್ವರ ಎನ್ನುತ್ತ ದಿನವೂ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಜ.28 ರಿಂದ ಜಾತ್ರೆ ಆರಂಭವಾಗಿದ್ದು, ಫೆ 6 ರಂದು ಸಂಜೆ 4ಕ್ಕೆ ಮಹಾರಥೋತ್ಸವ ಜರುಗಲಿದ್ದು, ದೇವಸ್ಥಾನ ಟ್ರಸ್ಟ್ ಕಮಿಟಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ಈಗಾಗಲೇ ಉಳವಿ ಟ್ರಸ್ಟ್ ಕಮಿಟಿ ಮತ್ತು ಉಳವಿ ಗ್ರಾಪಂ ಮುಂದಾಳತ್ವದಲ್ಲಿ ಬಂದ ಭಕ್ತರಿಗೆ ವಸತಿ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಅನ್ನಛತ್ರಗಳನ್ನು ಮಾಡಲಾಗಿದೆ. ಜಾತ್ರೆಗೆ ಹೊಸ ರಥಬೀದಿ ನಿರ್ಮಾಣವಾದ ಕಾರಣ ರಥೋತ್ಸವಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಈ ವರ್ಷ ಹೆಚ್ಚಿನ ಭಕ್ತರು ಜಾತ್ರೆಗೆ ಬರುವ ನಿರೀಕ್ಷೆ ಇದೆ ಎಂಬುದು ಟ್ರಸ್ಟ್ ಕಮಿಟಿಯವರ ಮಾತಾಗಿದೆ.
ಕಾಲ್ನಡಿಗೆಯಲ್ಲಿ ಬರುವ ಭಕ್ತರು: ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ಕೊಪ್ಪಳ, ವಿಜಯಪುರ, ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ದಿನವೂ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಉಳವಿಗೆ ಬರುತ್ತಾರೆ. ಇಲ್ಲಿಗೆ ಬರಬೇಕಾದರೆ ಡಟ್ಟ ಕಾಡಿನ
ಮಧ್ಯದಿಂದಲೇ ಬರಬೇಕು. ಕಾಡಿನ ದಾರಿಯಿದ್ದರು ಸಹಿತ ಭಕ್ತರು ಗುಂಪು ಗುಂಪಾಗಿ ಕಾನೇರಿ ಹೊಳೆ, ಅಂಬುಳಿ ಹೊಳೆ, ಹಳ್ಳಗಳು ಇರುವ ಭಾಗದಲ್ಲಿ ರಾತ್ರಿ ತಂಗುತ್ತಾರೆ.
ವಾರಗಟ್ಟಲೇ ನಡೆದುಕೊಂಡು ಬಂದು ತಮ್ಮ ಇಷ್ಟ ದೇವರ ದರ್ಶನ ಪಡೆಯುತ್ತಾರೆ.
ಚಕ್ಕಡಿ ಎತ್ತುಗಳ ಗೆಜ್ಜೆಯ ನಿನಾದ: ಉಳವಿ ಜಾತ್ರೆಗೆ ಚಕ್ಕಡಿಗಾಡಿಗಳು ಬರುವುದು ಬೇಡ ಎಂಬ ಸರ್ಕಾರದ ಆದೇಶವಿದ್ದರೂ ನೂರಾರು ಚಕ್ಕಡಿಗಾಡಿಗಳು ಈಗಾಗಲೇ ಬಂದಿವೆ. ಉಳವಿ ಚೆನ್ನಬಸವಣ್ಣನ ದರ್ಶನ ಪಡೆದರೆ ನಮ್ಮ ಎತ್ತುಗಳು, ಕುಟುಂಬ, ಊರು ಸುಖದಿಂದ ಇರುತ್ತದೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ಚಕ್ಕಡಿ ಗಾಡಿಗಳನ್ನು ಭಕ್ತರು ತರುತ್ತಿದ್ದಾರೆ.
ಸಿದ್ಧಗೊಳುಳುತ್ತಿದೆ ತೇರು: ಉಳವಿ ಮಹಾರಥೋತ್ಸವಕ್ಕೆ ತೇರು ಸಜ್ಜಾಗುತ್ತಿದೆ. ಬಣ್ಣ ಬಣ್ಣದ ಕಾಗದಗಳನ್ನು ಬಳಸಿ, ಹೂವುಗಳಿಂದ, ಬಣ್ಣಗಳಿಂದ ತೇರನ್ನು ಸಿದ್ಧಗೊಳಿಸಲಾಗುತ್ತಿದೆ. ಉಳವಿ ಜಾತ್ರೆಯಲ್ಲಿ ಎರಡು ತೇರನ್ನು ಎಳೆಯಲಾಗುತ್ತದೆ. ಒಂದು ಸಣ್ಣ ತೇರು ಹಾಗೂ ಇನ್ನೊಂದು ದೊಡ್ಡ ತೇರು. ನೀರಿನ ವ್ಯವಸ್ಥೆ: ಉಳವಿ ಗ್ರಾಪಂನಿಂದ ಜಾತ್ರೆಗೆ ಬಂದ ಲಕ್ಷಾಂತರ ಭಕ್ತಾದಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಹೆಚ್ಚುವರಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ ಎಂದು ಪಿಡಿಒ ಮಹಮ್ಮದ್ ಹನೀಫ್ ತಿಳಿಸಿದ್ದಾರೆ.
ಪೊಲೀಸ್-ಅರಣ್ಯ ಇಲಾಖೆ ಸಹಕಾರ: ಶ್ರೀಕ್ಷೇತ್ರ ಉಳವಿ ಜಾತ್ರೆಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಹಕಾರ ಅತ್ಯಗತ್ಯವಾಗಿದೆ. ಪೊಲೀಸರು ಟ್ರಾಫಿಕ್ ಕಿರಿಕಿರಿ ತಪ್ಪಿಸಿದರೆ, ಹಚ್ಚ ಹಸಿರಿನ ಕಾಡಿಗೆ ಯಾವುದೇ ತರಹದ ಹಾನಿಯಾಗದಂತೆ ಅರಣ್ಯ ಇಲಾಖೆ ನೋಡಿಕೊಳ್ಳುತ್ತದೆ.
ಸಂದೇಶ ದೇಸಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.