ಉಡುಪಿ ಜಿಲ್ಲೆ: ಅಗ್ನಿ ಅವಘಡ ಪ್ರಮಾಣ ಇಳಿಮುಖ
ಕಳೆದ ವರ್ಷ ಒಟ್ಟಾರೆ 351 ಅಗ್ನಿಅವಘಡ - ಈ ವರ್ಷಾರಂಭದಲ್ಲೇ ಹೆಚ್ಚಳ; ತಿಂಗಳಲ್ಲಿಯೇ 93 ಪ್ರಕರಣ- ಮುನ್ನೆಚ್ಚರಿಕೆ ಅಗತ್ಯ
Team Udayavani, Feb 6, 2023, 10:17 AM IST
ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಳೆದ ವರ್ಷ ಕಾಡ್ಗಿಚ್ಚು , ಕೃಷಿ ಪ್ರದೇಶಕ್ಕೆ ಬೆಂಕಿಯಂತಹ ಅಗ್ನಿ ಅವಘಡ ಪ್ರಕರಣಗಳ ಸಂಖ್ಯೆ ಇಳಿಮುಖಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ ಈ ವರ್ಷದ ಆರಂಭದಲ್ಲಿ ಮಾತ್ರ ಅಗ್ನಿ ಅವಘಡ ಪ್ರಕರಣಗಳು ಗರಿಷ್ಠ ಪ್ರಮಾಣದಲ್ಲಿ ಸಂಭವಿಸಿದೆ.
ಆದರೂ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ, ಇಂತಹ ಅವಘಡಗಳನ್ನು ತಡೆಗಟ್ಟಬಹುದು. ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟಾರೆ 351 ಅಗ್ನಿ ಅವಘಡ ಪ್ರಕರಣಗಳು ಸಂಭವಿಸಿದ್ದರೆ, ಈ ವರ್ಷದ ಜನವರಿ ತಿಂಗಳೊಂದರಲ್ಲಿಯೇ ಬರೋಬ್ಬರಿ 93 ಪ್ರಕರಣಗಳು ವರದಿಯಾಗಿವೆ. ಇದಕ್ಕೂ ಹಿಂದಿನ ವರ್ಷಗಳಲ್ಲಿ ಅಂದರೆ ಕೊರೊನಾಗಿಂತಲೂ ಮುನ್ನ ವರ್ಷಕ್ಕೆ ಸುಮಾರು 800ರಷ್ಟು ಅಗ್ನಿ ಅವಘಡದಂತಹ ಪ್ರಕರಣಗಳು ಸಂಭವಿಸುತ್ತಿದ್ದವು. ಈಗ ಈ ಪ್ರಮಾಣ ಒಂದಷ್ಟರ ಮಟ್ಟಿಗೆ ಕಡಿಮೆಯಾಗಿರುವುದು ಒಳ್ಳೆಯ ಬೆಳವಣಿಗೆ.
ಕಾಡ್ಗಿಚ್ಚು ಪ್ರಕರಣವೇ ಜಾಸ್ತಿ ಪ್ರತಿ ವರ್ಷ ಕಾಡಿಗೆ ಬೆಂಕಿ, ಗೇರು ಬೀಜ ಪ್ಲಾಂಟೇಶನ್‌ನಲ್ಲಿ ಅಗ್ನಿ ಅನಾಹುತ, ಕೃಷಿ ಪ್ರದೇಶಗಳಿಗೆ ಬೆಂಕಿ ತಗುಲಿ ಹಾನಿಯಾಗುತ್ತಿರುವ ಪ್ರಕರಣಗಳೇ ಕಳೆದ ವರ್ಷವೂ ಜಾಸ್ತಿ ಇದೆ. ಅದರಲ್ಲೂ ಜನವರಿಯಿಂದ ಎಪ್ರಿಲ್ – ಮೇ ವರೆಗೆ ಬೇಸಗೆಯಲ್ಲಿ ದಿನಕ್ಕೆ 4-5
ಪ್ರಕರಣಗಳು ಸಂಭವಿಸುತ್ತಿದೆ. ಉಳಿದಂತೆ ಕೈಗಾರಿಕಾ ಕಟ್ಟಡಗಳು, ವಾಣಿಜ್ಯ ಕಟ್ಟಡ, ಗ್ಯಾಸ್ ಸೋರಿಕೆ, ಮಳಿಗೆಗಳಿಗೆ ಬೆಂಕಿಪ್ರಕರಣಗಳು ಸೇರಿವೆ.
ರಕ್ಷಣಾ ಕರೆ-115 ಪ್ರಕರಣ
ನೀರಿಗೆ ಬಿದ್ದು ಮುಳುಗಿರುವುದು, ನೀರಲ್ಲಿ ಕೊಚ್ಚಿಕೊಂಡು ಹೋಗಿರುವುದು, ಕೆರೆಗೆ ಬಿದ್ದಿರುವ ಘಟನೆಗಳು ಸೇರಿದಂತೆ ಒಟ್ಟಾರೆ ಕಳೆದ ವರ್ಷ ಜಿಲ್ಲೆಯಲ್ಲಿ 4 ಅಗ್ನಿ ಶಾಮಕ ಠಾಣೆಗಳಿಗೆ ರಕ್ಷಣೆಗಾಗಿ 115 ಕರೆಗಳು ಬಂದಿವೆ. ಉಡುಪಿ ಅಗ್ನಿ ಶಾಮಕ ಠಾಣೆಗೆ 49, ಕಾರ್ಕಳ ಠಾಣೆಗೆ 17, ಕುಂದಾಪುರಕ್ಕೆ 19, ಬೈಂದೂರಿಗೆ 24 ಹಾಗೂ ಮಲ್ಪೆ ಠಾಣೆಗೆ 6 ಕರೆಗಳು ಬಂದಿವೆ.
ಅಗ್ನಿಶಾಮಕ ಠಾಣಾವಾರು ಅಗ್ನಿಅವಘಡ ಪ್ರಕರಣ ಠಾಣೆ
2022 2023 (ಜನವರಿ)
ಉಡುಪಿ 149 28
ಕಾರ್ಕಳ 103 20
ಕುಂದಾಪುರ 50 20
ಬೈಂದೂರು 19 15
ಮಲ್ಪೆ 30 10
ಒಟ್ಟು 351 93
“ಜಾಗೃತಿ ಅವಶ್ಯ”
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇತ್ತೀಚಿಗೆ ಅಂದರೆ ಕೊರೊನಾದ ಅನಂತರದಿಂದ ಅಗ್ನಿ ಅವಘಡ ಪ್ರಕರಣಗಳ ಸಂಖ್ಯೆ ಒಂದಷ್ಟು ಕಡಿಮೆಯಾಗಿದೆ. ಕಾಡ್ಗಿಚ್ಚು ಪ್ರಕರಣ ಸಹ ಇಳಿಮುಖವಾಗಿದೆ. ಬೇಸಗೆಯಲ್ಲಿ ಆಗಾಗ್ಗೆ ಅಲ್ಲಲ್ಲಿ ಸಂಭವಿಸುತ್ತಿರುತ್ತದೆ. ಕೆಲವೊಂದು ಕಡೆಗಳಲ್ಲಿ ಮುನ್ನೆಚ್ಚರಿಕೆಯ ಜಾಗೃತಿ ವಹಿಸಿದರೆ ಖಂಡಿತ ನಿಯಂತ್ರಣ ಸಾಧ್ಯ.– ಎಚ್.ಎಂ. ವಸಂತ ಕುಮಾರ್, ಉಡುಪಿ ಜಿಲ್ಲಾ ಅಗ್ನಿ ದಳದ ಅಧಿಕಾರಿ
ಯಾವುದೇ ಅವಘಡ ಸಂಭವಿಸಿದಾಗ ತುರ್ತು ಕರೆಗಾಗಿ 112 ಅಥವಾ 101ಕ್ಕೆ ಕರೆ ಮಾಡಬಹುದು
ಉಡುಪಿ ಅಗ್ನಿ ಶಾಮಕ ಠಾಣೆ –
0820-2520333
ಮಲ್ಪೆ ಅಗ್ನಿ ಶಾಮಕ ಠಾಣೆ –
0820-2537222
ಕುಂದಾಪುರ ಅಗ್ನಿ ಶಾಮಕ ಠಾಣೆ –
08254-200724, 08254-230724
ಬೈಂದೂರು ಅಗ್ನಿ ಶಾಮಕ ಠಾಣೆ-
08254-251101, 08254-251102
ಕಾರ್ಕಳ ಅಗ್ನಿ ಶಾಮಕ ಠಾಣೆ –
08258-232223
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.