ಯಲ್ಲಮ್ಮನ ಜಾತ್ರೆಯಲ್ಲಿ ಎತ್ತುಗಳ ಪರಿಷೆ
ವಿವಿಧ ತಳಿಯ ಎತ್ತುಗಳು ಲಭ್ಯ, ಬೇರೆ ರಾಜ್ಯದಿಂದಲೂ ಬಂದ ವ್ಯಾಪಾರಿಗಳು
Team Udayavani, Feb 7, 2023, 12:26 PM IST
ಸಿರುಗುಪ್ಪ: ತಾಲೂಕಿನ ರಾರಾವಿ ಗ್ರಾಮದ ಅಧಿದೇವತೆ ಮುತ್ತಿನ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಎತ್ತುಗಳ ಪರಿಷೆ ಸೋಮವಾರದಿಂದ ಆರಂಭವಾಗಿದ್ದು ಮೂರು ದಿನಗಳ ಕಾಲ ನಡೆಯಲಿದೆ. ಪರಿಷೆಗೆ ವರ್ಷದಿಂದ ವರ್ಷಕ್ಕೆ ಬರುವ ಎತ್ತುಗಳ ಸಂಖ್ಯೆ ಹೆಚ್ಚಾಗಿದ್ದು, ಇದು ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಹೊಂದಿದ ಪರಿಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವರ್ಷ ಸುಮಾರು 500 ಜೋಡಿ ಎತ್ತುಗಳು ಪರಿಷೆಯಲ್ಲಿ ಭಾಗವಹಿಸಿರುವುದು ವಿಶೇಷ.
ಒಂದು ವಾರಗಳ ಕಾಲ ನಡೆಯುವ ಈ ಪರಿಷೆಯಲ್ಲಿ ಸಿಂಧನೂರು, ರಾಯಚೂರು, ಗಂಗಾವತಿ, ಕೋಲಾರ, ಬಳ್ಳಾರಿ, ಸಿರುಗುಪ್ಪ,ಸೀಮಾಂದ್ರ ಪ್ರದೇಶದ ಕರ್ನೂಲು, ಪತ್ತಿಕೊಂಡ, ಆಲೂರು, ಆದೋನಿ, ಹೊಳಗುಂದ, ಕೋಸ್ಗಿ, ಹರಿವಾಣಂ, ಕೌತಾಳಂ ಮತ್ತು ತಾಲೂಕಿನ ರಾರಾವಿ, ಬಾಗೇವಾಡಿ, ಅಗಸನೂರು ಮತ್ತು ಬಳ್ಳಾರಿ ತಾಲೂಕಿನ ಬಸರಕೋಡು, ಮೋಕಾ ಮುಂತಾದ ಹಳ್ಳಿಗಳ ಕಿಲಾರಿ, ಹಳ್ಳಿಕಾರ, ಜವಾರಿ ತಳಿಯ ಹೋರಿಗಳು, ಎತ್ತುಗಳು ಈ ಜಾತ್ರೆಗೆ ಬಂದಿರುವುದು ವಿಶೇಷ. ಕಿಲಾರಿ, ಹಳ್ಳಿಕಾರ, ಜವಾರಿ ಹೋರಿಗಳನ್ನು ಮಾರಾಟ ಮಾಡಲು ರಾಜ್ಯ ಸೇರಿದಂತೆ ಹೊರ ರಾಜ್ಯಗಳ ನೂರಾರು ರೈತರು ಮತ್ತು ವ್ಯಾಪಾರಿಗಳು ಇಲ್ಲಿಗೆ ಬರುತ್ತಾರೆ. ಒಂದು ಜೋಡಿ ಎತ್ತುಗಳಿಗೆ ರೂ.50 ಸಾವಿರದಿಂದ 3 ಲಕ್ಷ ಮೌಲ್ಯದ ಮೌಲ್ಯದ ಎತ್ತುಗಳೂ ಇಲ್ಲಿ ಬಂದಿರುತ್ತವೆ.
ನಾವು ಕಳೆದ 21ವರ್ಷಗಳಿಂದ ಈ ಜಾತ್ರೆಯಲ್ಲಿ ಎತ್ತುಗಳನ್ನು ಮಾರಾಟ ಮಾಡಲು ಬರುತ್ತಿದ್ದೇವೆ. ಈ ಬಾರಿ 7ಜೋಡಿಎತ್ತುಗಳನ್ನು ತಂದಿದ್ದೇವೆ. ಒಂದು ಜೋಡಿ
ಎತ್ತಿಗೆ ರೂ.1 ಲಕ್ಷದಿಂದ, 1.50 ಲಕ್ಷದ ವರೆಗೆ ಮಾರಾಟ ಮಾಡುತ್ತಿದ್ಧೇವೆ.
-ಮಲ್ಲಪ್ಪ, ರೈತ, ಬೆಣಕಲ್ಲು ಗ್ರಾಮ
ನಮ್ಮ ಜೋಡಿ ಎತ್ತುಗಳ ಬೆಲೆಯು ರೂ.1.95 ಲಕ್ಷವಿದ್ದು, ಕಳೆದೆರಡು ವರ್ಷಗಳಿಂದ ಎತ್ತುಗಳ ಮಾರಾಟಕ್ಕೆ ಇಲ್ಲಿಗೆ ಬರುತ್ತಿದ್ದೇವೆ. ಇದು ಎತ್ತುಗಳ ಉತ್ತಮ ಪರಿಷೆಯಾಗಿದೆ.
-ಸೋಮಲಿಂಗ, ರೈತ,ಅರಸನಗುತ್ತಿ.
ಅಗತ್ಯ ಸೌಕರ್ಯ:
ಈ ಪರಿಷೆಗೆ ಬರುವ ಎತ್ತುಗಳಿಗೆ ಕುಡಿಯುವ ನೀರು ಮತ್ತು ಮೇವು, ಎತ್ತು ಮಾರಾಟಕ್ಕೆ ಬಂದ ರೈತರಿಗೆ ಊಟದ ವ್ಯವಸ್ಥೆಯನ್ನು ದೇವಸ್ಥಾನ ಆಡಳಿತ ಮಂಡಳಿಯವರುಮಾಡಿದ್ದಾರೆ
ಎಂದು ರೈತರು ತಿಳಿಸಿದ್ದಾರೆ. ದೇವಸ್ಥಾನ ಸಮಿತಿ ವತಿಯಿಂದ ಎತ್ತುಗಳ ಪರಿಷೆಗೆ ಬರುವ ರೈತರಿಗೆ ಉಚಿತ ಊಟ ಮತ್ತು ಎತ್ತುಗಳಿಗೆ ಕುಡಿಯುವ ನೀರು, ಮೇವಿನ ವ್ಯವಸ್ಥೆ ಮಾಡಲಾಗಿದೆ, ಈ ವರ್ಪ ಪರಿಷೆಗೆ 500 ಜೋಡಿ ಎತ್ತುಗಳು ಬಂದಿವೆ ಎಂದು ದೇವಸ್ಥಾನ ಸಮಿತಿಯ ಸದಸ್ಯ ಸೋಮಪ್ಪ ನಾಯಕ ನೀಡಿದ್ದಾರೆ. ಎತ್ತುಗಳ ಪರಿಷೆಯಲ್ಲಿ ರೈತರು ತಮಗೆ ಬೇಕಾದ ಎತ್ತುಗಳ ಸುಳಿ, ಕೊಂಬು, ಬಾಲ ಮುಂತಾದವುಗಳನ್ನು ಪರೀಕ್ಷಿಸಿ ಖರೀದಿ ಮಾಡುತ್ತಾರೆ. ಇಲ್ಲಿ ದಲ್ಲಾಳಿಗಳ ಕಾಟ ಇರುವುದಿಲ್ಲ. ಕೊಳ್ಳುವವರು, ಮಾರುವವರು ನೇರವಾಗಿಯೇ ವ್ಯವಹರಿಸುತ್ತಾರೆ ಎಂಬುದು ಗಮನಾರ್ಹ. ಎತ್ತುಗಳನ್ನು ಶೃಂಗರಿಸಲು ಅಗತ್ಯವಾದ ವಸ್ತುಗಳೂ ಇಲ್ಲಿ ಲಭ್ಯವಿದ್ದು, ಎತ್ತುಗಳ ಪರಿಷೆ ರೈತ ಬಂಧುಗಳಿಗೆ ತುಂಬಾ ಸಂತಸ ತಂದಿದೆ.
ಆರ್.ಬಸವರೆಡ್ಡಿ ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.