![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Feb 7, 2023, 1:40 PM IST
ಮುಂಬೈ: ನೀವು ವಿವಿಧ ರೀತಿಯ ಆಹಾರ ಪ್ರೇಮಿಗಳನ್ನು ಕಂಡಿರಬಹುದು ಆದರೆ ತನ್ನ ನೆಚ್ಚಿನ ಖಾದ್ಯವನ್ನು ಹಚ್ಚೆ ಹಾಕಿಸಿಕೊಳ್ಳುವ ಆಹಾರ ಪ್ರಿಯರನ್ನು ನೀವು ನೋಡಿದ್ದೀರಾ? ಇದೀಗ ಖಾದ್ಯಕ್ಕಾಗಿ ವ್ಯಕ್ತಿಯೊಬ್ಬನ ಪ್ರೀತಿಯ ವಿಶಿಷ್ಟ ಕಥೆ ಬೆಳಕಿಗೆ ಬಂದಿದೆ. ಹೌದು, ತನ್ನ ತೋಳಿನ ಹಿಂಭಾಗದಲ್ಲಿ ತನ್ನ ನೆಚ್ಚಿನ ಖಾದ್ಯ ರಾಜ್ಮಾ ಚಾವಲ್ ನ ಶಾಶ್ವತ ಹಚ್ಚೆ ಹಾಕಿಸಿಕೊಂಡಿರುವ ವ್ಯಕ್ತಿಯ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಈ ವೈರಲ್ ಚಿತ್ರವನ್ನು ಸ್ವಿಗ್ಗಿಯ ಅಧಿಕೃತ ಹ್ಯಾಂಡಲ್ ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. “ಎಂದಾದರೂ ಏನನ್ನಾದರೂ ತುಂಬಾ ಇಷ್ಟಪಟ್ಟರೆ ಅದು ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯಬೇಕೆಂದು ನೀವು ಬಯಸುತ್ತೀರಿ” ಎಂದು ಕ್ಯಾಪ್ಷನ್ ನೀಡಲಾಗಿದೆ.
ಇದನ್ನೂ ಓದಿ:ಸಹಾಯಕ್ಕಾಗುವವನೇ ನಿಜವಾದ ದೋಸ್ತಿ: ಸಹಾಯಕ್ಕೆ ನಿಂತ ಭಾರತಕ್ಕೆ ಟರ್ಕಿಯ ಧನ್ಯವಾದ
ಟ್ವಿಟರ್ ಬಳಕೆದಾರರು ಕಾಮೆಂಟ್ ಗಳ ವಿಭಾಗದಲ್ಲಿ ಸ್ವಿಗ್ಗಿಯ ಪೋಸ್ಟ್ ಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು “ವಡಾ ಪಾವ್‌ಗೆ ಒಂದು ಟ್ಯಾಟೂ, ಪಾವ್ ಭಾಜಿಗೆ ಇನ್ನೊಂದು” ಎಂದು ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ, “ನಾನು ಚೋಲೆ ಭಟೂರೆ ಹಚ್ಚೆ ಹಾಕುತ್ತೇನೆ, ಅದಕ್ಕೆ ಸ್ವಿಗ್ಗಿ ‘ಪೂರ್ಣ ಬೆಂಬಲ’ ಎಂದು ಬರೆದಿದ್ದಾರೆ.
ever loved something so much you want it to stay with you forever pic.twitter.com/DP9nTdUSNR
— Swiggy (@Swiggy) February 5, 2023
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.