ಕಳಪೆ ರೇಷನ್‌ ಅಕ್ಕಿ ವಿತರಣೆ:ಆಕ್ರೋಶ

Team Udayavani, Feb 8, 2023, 10:36 AM IST

ration

ಜೋಯಿಡಾ: ತಾಲೂಕಿನಾದ್ಯಂತ ಪೋರ್ಟಿಫೈಡ್‌ ಅಕ್ಕಿ ಹೆಸರಿನಲ್ಲಿ ಜನರಿಗೆ ರೇಷನ್‌ ನೀಡಲಾಗುತ್ತಿದ್ದು, ಈ ರೇಷನ್‌ ಅಕ್ಕಿಯಲ್ಲಿ ಬೇಯಿಸಿದ ಅನ್ನವನ್ನು ಒಣಗಿಸಿ ರೇಷನ್‌ ಅಕ್ಕಿಯಲ್ಲಿ ಬೆರೆಸಿ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಜನಸಾಮಾನ್ಯರು ಇಂದಿಗೂ ಸಹಿತ ಇದೇ ರೇಷನ್‌ ಅಕ್ಕಿ ಊಟ ಮಾಡುತ್ತಾರೆ, ಕಳಪೆ ಮಟ್ಟದ ಅಕ್ಕಿಯನ್ನು ಜನರಿಗೆ ವಿತರಿಸಲಾಗುತ್ತಿದ್ದು, ಈ ಬಗ್ಗೆ ಯಾರು ಹೇಳುವವರು ಕೇಳುವವರೂ ಇಲ್ಲವಾಗಿದ್ದಾರೆ.

ಕಳೆದ ಒಂದು ವರ್ಷಗಳಿಂದ ಈ ಕಳ್ಳ ದಂಧೆ ನಡೆಯುತ್ತಿದ್ದು, ಇದರಿಂದ ಜನರಿಗೆ ಗುಣಮಟ್ಟದ ಅಕ್ಕಿ ಸರಬರಾಜು ಆಗುತ್ತಿಲ್ಲ, ಜನಸಾಮಾನ್ಯರು ದಿನವೂ ಇದೇ ಅಕ್ಕಿ ಊಟ ಮಾಡುತ್ತಿದ್ದು, ಬಡವರ ಕಷ್ಟಕ್ಕೆ ಸ್ಪಂದಿಸುವವರು ಯಾರು ಎನ್ನುವುದು ಪ್ರಶ್ನೆಯಾಗಿದೆ. ಈ ಅಕ್ಕಿ ತೊಳೆಯುತ್ತಿದಂತೆ ಉತ್ತಮ ಅಕ್ಕಿ ಜೊತೆ ಮಿಕ್ಸ್‌ ಮಾಡಿದ ಕಳಪೆ ಗುಣಮಟ್ಟದ ಅಕ್ಕಿಯು ನೀರಿನಲ್ಲಿ ಮೇಲೆ ತೇಲುತ್ತದೆ, ಅದಾಗಿಯೂ ಅನ್ನವನ್ನು ಮಾಡಿದರೆ ಅಂಟು ಅನ್ನವಾಗಿ ಊಟ ಮಾಡಲು ಸಾಧ್ಯವಾಗುವುದಿಲ್ಲ, ಹೀಗಾಗಿ ಜನರು ರೇಷನ್‌ ಅಕ್ಕಿಯನ್ನು ಊಟ ಮಾಡಲು ಆಗದೆ, ಸಿಗುವ ರೇಷನ್‌ ಅಕ್ಕಿಯನ್ನು ಚೆಲ್ಲಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೇಷನ್‌ ಅಕ್ಕಿಯಲ್ಲಿಯೂ ಕಾಳ ದಂಧೆಯೇ?: ಇಂತಹ ರೇಷನ್‌ ಅಕ್ಕಿಯನ್ನು ರಾಜ್ಯಾದ್ಯಂತ ನೀಡಲಾಗುತ್ತಿದೆಯೇ ಅಥವಾ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ನೀಡಲಾಗಿದೆಯೇ ಅಥವಾ ಜೋಯಿಡಾ ತಾಲೂಕಿನ ಜನರು ಮುಗ್ಧರು ಎಂದು ಇಲ್ಲಿಯ ಬಡ ಜನರಿಗೆ ಮೋಸ ಮಾಡಲಾಗುತ್ತಿದೆಯೇ ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದ್ದು, ಇಂತಹ ರೇಷನ್‌ ಅಕ್ಕಿ ವಿತರಿಸುವಲ್ಲಿ ಅಧಿಕಾರಿಗಳು ಶಾಮೀಲಿದ್ದಾರೆಯೇ? ಅಥವಾ ಕಾಳ ದಂಧೆಕೋರರ ಕೈವಾಡವೇ? ಎಂಬುದು ತನಿಖೆಯನಂತರ ತಿಳಿದು ಬರಬೇಕಿದೆ.

ಬಡವರ ಅಕ್ಕಿ ಮೇಲೂ ಸರ್ಕಾರದ ಕರಿನೆರಳು

ಒಂದು ವರ್ಷದಿಂದ ಕಳಪೆ ಗುಣಮಟ್ಟದ ರೇಷನ್‌ ಅಕ್ಕಿಯನ್ನು ಸರ್ಕಾರ ನೀಡುತ್ತಿದೆ. ಈ ಅಕ್ಕಿಯಿಂದ ಅನ್ನಮಾಡಲು ಆಗುವುದಿಲ್ಲ, ನಮಗೆ ರೇಷನ್‌ ನೀಡುವ ಅಧಿಕಾರಿಗಳು ಈ ಅಕ್ಕಿಯ ಅನ್ನವನ್ನು ಒಮ್ಮೆ ಊಟ ಮಾಡಿ ತೋರಿಸಲಿ.ಕೂಡಲೇ ಜಿಲ್ಲಾಧಿಕಾರಿಗಳು ವ್ಯವಸ್ಥೆ ಸರಿಪಡಿಸಬೇಕು.
ಪರಶುರಾಮ ದೇಸಾಯಿ, ಸ್ಥಳೀಯರು ಯರಮುಖ.

ಈ ಬಗ್ಗೆ ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಜನರ ಸಮಸ್ಯೆ ಬಗೆಹರಿಸಿ, ಉತ್ತಮ ಗುಣಮಟ್ಟದ ಅಕ್ಕಿ ನೀಡುವಂತೆ ಕ್ರಮ ಕೈಗೊಳ್ಳುತ್ತೇನೆ.
ಪ್ರಮೋದ ನಾಯ್ಕ ತಹಶೀಲ್ದಾರ್‌ ಜೋಯಿಡಾ

ಅಧಿಕಾರಿಗಳ ನಿರ್ಲಕ್ಷ್ಯ:

ಕಳೆದ ಒಂದು ವರ್ಷದಿಂದ ಉಣ್ಣಲು ಯೋಗ್ಯವಿಲ್ಲದ ಅಕ್ಕಿಯನ್ನು ಜನರಿಗೆ ನೀಡಲಾಗುತ್ತಿದ್ದರು ಅಧಿ ಕಾರಿಗಳು ಮಾತ್ರ ತಿಳಿದು ತಿಳಿಯದಂತೆ ವರ್ತಿಸುತ್ತಿರುವುದು ಜನರ ಶಾಪಕ್ಕೆ ಗುರಿಯಾಗಿದ್ದಾರೆ. ಬಹಳಷ್ಟು ದಿನಗಳಿಂದ ಇಂತಹ ಅಕ್ಕಿಯನ್ನು ನೀಡಲಾಗುತ್ತಿದ್ದು, ಈ ಅಕ್ಕಿಯನ್ನು ಅಧಿಕಾರಿಗಳು ಒಮ್ಮೆ ಅನ್ನ ಮಾಡಿ ತಿಂದು ನೋಡಲಿ ಎಂಬುದು ಸಾರ್ವಜನಿಕರ ಮಾತಾಗಿದೆ.ಈ ಹಿಂದೆ ಪೂರ್ಟಿಫೈಡ್‌ ಅಕ್ಕಿ ಎಂದರೆ ಆರೋಗ್ಯಕರ ಅಕ್ಕಿ ಎಂದು ಅರ್ಥ, ಆದರೆ ಪೋರ್ಟಿಫೈಡ್‌ ಅಕ್ಕಿ ಹೆಸರಿನಲ್ಲಿ ಇಂಥ ಹಾಳಾದ ಅಕ್ಕಿಯನ್ನು ನೀಡಲಾಗುತ್ತಿರುವುದು ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು ಲಕ್ಷ್ಯವಹಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಇಂತಹ ಅಕ್ಕಿಯ ಅನ್ನ ಊಟಕ್ಕೆ ಯೋಗ್ಯವಲ್ಲ, ಇದನ್ನು ಊಂಡರೆ ಹೊಟ್ಟೆಯಲ್ಲಿ ತೊಂದರೆ ಆಗುತ್ತದೆ, ಬಡವರು, ಹೊಟ್ಟೆಗೆ ಅನ್ನ ಇಲ್ಲದವರು ಅನಿವಾರ್ಯವಾಗಿ ಇದೆ. ಅಕ್ಕಿಯಿಂದ ಅನ್ನ ಮಾಡಿ ಊಟ ಮಾಡಬೇಕಾಗುತ್ತದೆ ಎನ್ನುತ್ತಾರೆ ಜೋಯಿಡಾ ತಾಲೂಕಿನ ಸಾರ್ವಜನಿಕರು. ಕೂಡಲೇ ಈ ವ್ಯವಸ್ಥೆ ಸರಿಪಡಿಸಿ ಜನರಿಗೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ಸರ್ಕಾರ ನೀಡಬೇಕಿದ್ದು, ಅಧಿಕಾರಿಗಳು ಜನರಿಗೆ ಯಾವ ಗುಣಮಟ್ಟದ ಅಕ್ಕಿ ಸಿಗುತ್ತಿದೆ ಎಂಬುದನ್ನು ಪರಿಶೀಲಿಸಿ ಜನರಿಗೆ ನ್ಯಾಯ ಒದಗಿಸಬೇಕಿದೆ.

ಸಂದೇಶ ದೇಸಾಯಿ

ಟಾಪ್ ನ್ಯೂಸ್

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Harassment of Hindu sentiment is going on: Vijayendra

Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ

Shiruru; Missing Kerala Arjuna’s lorry found; Operation of Ishwar Malpe Team

Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್‌ ಮಲ್ಪೆ ತಂಡದ ಕಾರ್ಯಾಚರಣೆ

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

BellaryBellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shiruru; Missing Kerala Arjuna’s lorry found; Operation of Ishwar Malpe Team

Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್‌ ಮಲ್ಪೆ ತಂಡದ ಕಾರ್ಯಾಚರಣೆ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Roopali Naik: ರಾಷ್ಟ್ರದ ಸಮಗ್ರ ಅಭಿವೃದ್ಧಿಯೇ ಬಿಜೆಪಿಯ ಗುರಿ

Roopali Naik: ರಾಷ್ಟ್ರದ ಸಮಗ್ರ ಅಭಿವೃದ್ಧಿಯೇ ಬಿಜೆಪಿಯ ಗುರಿ

ಶಿರೂರುಗುಡ್ಡ ಕುಸಿತ ಸ್ಥಳ ತಲುಪಿದ ಡ್ರೆಜ್ಜಿಂಗ್‌ ಯಂತ್ರ-3 ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ!

ಶಿರೂರುಗುಡ್ಡ ಕುಸಿತ ಸ್ಥಳ ತಲುಪಿದ ಡ್ರೆಜ್ಜಿಂಗ್‌ ಯಂತ್ರ-3 ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ!

15-ankola

Ankola: ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಯಂತ್ರ; ಇಂದಿನಿಂದ ಶೋಧ ಕಾರ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Harassment of Hindu sentiment is going on: Vijayendra

Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ

Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ

Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ

Shiruru; Missing Kerala Arjuna’s lorry found; Operation of Ishwar Malpe Team

Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್‌ ಮಲ್ಪೆ ತಂಡದ ಕಾರ್ಯಾಚರಣೆ

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.