ಚಲಿಸುತ್ತಿರುವ ಬೈಕ್ ನಲ್ಲೇ ಅಪ್ಪುಗೆ,ಮುದ್ದು, ಮುತ್ತು ಇತ್ಯಾದಿ.. ಪ್ರೇಮಿಗಳ ವಿಡಿಯೋ ವೈರಲ್
Team Udayavani, Feb 8, 2023, 12:42 PM IST
ಜೈಪುರ: ಇತ್ತೀಚೆಗೆ ಚಲಿಸುವ ಬೈಕ್ ನಲ್ಲಿ ಯುವ ಜನರು ಸಾಹಸಗಳನ್ನು ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ರಾಜಸ್ಥಾನದ ಅಜ್ಮೀರ್ ನಲ್ಲಿ ಯುವ ಜೋಡಿಯೊಂದು ಚಲಿಸುತ್ತಿರುವ ಬೈಕ್ ನಲ್ಲಿ ರೊಮ್ಯಾನ್ಸ್ ಮಾಡುತ್ತಾ ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಾದೇಶಿಕ ಕಾಲೇಜು ಕ್ರಾಸ್‌ರೋಡ್ಸ್ – ನೌಸರ್ ವ್ಯಾಲಿ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ರೊಮ್ಯಾನ್ಸ್ ಮಾಡುತ್ತಾ ಬೈಕ್ ನಲ್ಲಿ ಹೋಗಿದ್ದಾರೆ. ಯುವತಿ ಬೈಕ್ ನ ಮುಂಭಾಗದಲ್ಲಿ ಕೂತು, ಯುವಕನನ್ನು ಅಪ್ಪಿಕೊಂಡು, ಮುದ್ದಾಡಿದ್ದಾಳೆ. ಯುವಕ ಆಕೆಗೆ ಮುತ್ತು ಕೊಟ್ಟಿದ್ದಾನೆ. ಚಲಿಸುತ್ತಿರುವ ಬೈಕ್ ನಲ್ಲೇ ಈ ರೀತಿ ಮಾಡಿಕೊಂಡು ಹೋಗುತ್ತಿರುವುದನ್ನು ಬೇರೆ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ.
ಸೋಮವಾರ ( ಫೆ.6 ರಂದು) ರಾತ್ರಿ ಈ ಘಟನೆ ನಡೆದಿದ್ದು, ಅಜ್ಮೀರ್‌ನ ಕ್ರಿಶ್ಚಿಯನ್ ಗಂಜ್ ಠಾಣೆ ಪೊಲೀಸರು ವಿಷಯ ತಿಳಿದು ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದು, ತಡರಾತ್ರಿ ಪೊಲೀಸರು ಬೈಕ್ ವಶಪಡಿಸಿಕೊಂಡಿದ್ದಾರೆ.
ಸವಾರ ಸಾಹಿಲ್ ಹಾಗೂ ಯುವತಿಯನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ಈ ಹಿಂದೆ ಜಾರ್ಖಂಡ್ ಹಾಗೂ ಲಕ್ನೋದಲ್ಲಿ ಇದೇ ರೀತಿಯ ಘಟನೆಗಳು ನೆಡೆದಿತ್ತು.
मोहब्बत का महीना कहलाने वाले फरवरी में अजमेर के प्रेमी जोड़े ने सड़क पर इस तरह किया प्रेम प्रदर्शन#ValentinesWeek #Ajmer pic.twitter.com/T3O9UI1BxL
— Sumit Saraswat SP (@SumitSaraswatSP) February 8, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.