ಕಲಘಟಗಿ ಪೊಲೀಸ್‌ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ


Team Udayavani, Feb 9, 2023, 9:00 AM IST

add-thumb-1

– ನೀಗಿದೆ ಪೊಲೀಸ್‌ ಫೈರಿಂಗ್‌ ತರಬೇತಿ ಮೈದಾನದ ಕೊರತೆ

– ಸ್ಥಳೀಯ ಪೊಲೀಸರ ಶ್ರಮಕ್ಕೆ ಎಸ್ಪಿ ಧನ್ಯತೆ

– ಅಪರಾ ಧಿಗಳ ಹೆಡೆಮುರಿ ಕಟ್ಟುವಲ್ಲಿ ಆರಕ್ಷಕ ನಿರೀಕ್ಷಕ ಶ್ರೀಶೈಲ್‌ ಕೌಜಲಗಿ ನೇತೃತ್ವದ ಸಿಬ್ಬಂದಿ ಯಶಸ್ವಿ

– ಕಲಘಟಗಿ ತಾಲೂಕಿನಾದ್ಯಂತ ಅಕ್ರಮ ಚಟುವಟಿಕೆಗಳಿಗೆ ಬಿದ್ದಿದೆ ಕಡಿವಾಣ

ಕಲಘಟಗಿ: ತಾಲೂಕಿನ ಗಂಜೀಗಟ್ಟಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿರುವ ಪೊಲೀಸ್‌ ಇಲಾಖೆ ಮಾಲೀಕತ್ವದ 12 ಎಕರೆ ಜಮೀನಿನಲ್ಲಿ ಇಲ್ಲಿನ ಪೊಲೀಸ್‌ ಅಧಿ ಕಾರಿ ಮತ್ತು ಸಿಬ್ಬಂದಿ ಒಂದು ತಿಂಗಳು ಕಾಲ ನಿರ್ವಹಿಸಿದ್ದ ಪರಿಶ್ರಮದಿಂದ ಜಿಲ್ಲೆಯಲ್ಲಿ ಪೊಲೀಸ್‌ ಫೈರಿಂಗ್‌ ತರಬೇತಿ ಮೈದಾನದ ಕೊರತೆ ನೀಗಿಸಿದಂತಾಗಿದೆ.

ಬೆಳಗಾವಿ ಉತ್ತರ ವಲಯ ಪೊಲೀಸ್‌ ಮಹಾನಿರೀಕ್ಷಕ ಎನ್‌. ಸತೀಶಕುಮಾರ ಅವರು ಜಿಲ್ಲೆಯ ಹಿರಿಯ ಪೊಲೀಸ್‌ ಅಧಿ ಕಾರಿಗಳ ಜತೆ ಸೇರಿ ನವೆಂಬರ್‌ನಲ್ಲಿ ಲೋಕಾರ್ಪಣೆಗೊಳಿಸಿದ್ದಾರೆ.

ಜಿಲ್ಲೆಯ ಪೊಲೀಸರಿಗೆ ಫೈರಿಂಗ್‌ ತರಬೇತಿಗಾಗಿ ಒಂದು ಪ್ರತ್ಯೇಕ ಮೈದಾನವಿಲ್ಲದೇ ಅಭ್ಯಾಸಕ್ಕಾಗಿ ದೂರದ ಹಾವೇರಿ ಜಿಲ್ಲೆ ಗಂಗಿಬಾವಿಯಲ್ಲಿನ 10ನೇ ಬಟಾಲಿಯನ್‌ ಮೈದಾನಕ್ಕೆ ಹೋಗಬೇಕಿತ್ತು. ಇಲಾಖೆ ಸ್ಥಳೀಯ ಸಿಬ್ಬಂದಿ ವರ್ಗ ಸಣ್ಣ ಸಣ್ಣ ಗುಡ್ಡ, ಕುರುಚಲು ಗಿಡಗಂಟಿಗಳಿಂದ ಕೂಡಿದ್ದ ಪೊಲೀಸ್‌ ಇಲಾಖೆ ಮಾಲೀಕತ್ವದ ಈ ಪ್ರದೇಶವನ್ನು ಅಗತ್ಯವಿರುವಷ್ಟು ಸಮತಟ್ಟುಗೊಳಿಸಿ ಗುಂಡು ಗುರಿ(ಫೈರಿಂಗ್‌) ಅಭ್ಯಾಸಕ್ಕೆ ಸುಸಜ್ಜಿತ ಮೈದಾನ ಸಿದ್ಧಗೊಳಿಸಲಾಗಿದೆ.

ಜಿಲ್ಲಾ ಪೊಲೀಸ್‌ ಇಲಾಖೆ ಜತೆಗೆ ಫೈರಿಂಗ್‌ ತರಬೇತಿ ಅಗತ್ಯವಿರುವ ಮಹಾನಗರ ಪೊಲೀಸ್‌, ಪೊಲೀಸ್‌ ತರಬೇತಿ ಶಾಲೆ, ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆ, ಅರಣ್ಯ ತರಬೇತಿ ಅಕಾಡೆಮಿ, ಅಬಕಾರಿ ಇಲಾಖೆ, ಎನ್‌ಸಿಸಿ ಸೇರಿದಂತೆ ಫೈರಿಂಗ್‌ ತರಬೇತಿ ಅಭ್ಯಾಸ ಅಗತ್ಯವಿರುವ ಇತರೆ ಇಲಾಖೆಯವರಿಗೂ ಈ ಮೈದಾನ ಅನುಕೂಲವಾಗಲಿದೆ ಎಂದು ಜಿಲ್ಲಾ ಪೊಲೀಸ್‌ ಅಧಿಧೀಕ್ಷಕ ಲೋಕೇಶ್‌ ಜಗಲಾಸರ ಅವರು ಸಂತಸ ವ್ಯಕ್ತಪಡಿಸಿರುವುದು ಸ್ಥಳೀಯ ಪೊಲೀಸರ ಶ್ರಮಕ್ಕೆ ಧನ್ಯತೆ ತೋರಿದಂತಾಗಿದೆ.

ಹಲವಾರು ವರ್ಷಗಳಿಂದ ಈ ಭಾಗದ ಜನರು ಫೈರಿಂಗ್‌ ತರಬೇತಿ ಮೈದಾನದಲ್ಲಿ ಓಡಾಡುತ್ತ ದನಗಳನ್ನು ಮೇಯಿಸುತ್ತ ಇತರೇ ಕೆಲಸಗಳಲ್ಲಿ ತೊಡಗಿದವರಿಗೆ ಅಲ್ಲದೇ ಅವರ ಎಲ್ಲ ಚಟುವಟಿಕೆಗಳಿಗೂ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ಉಪಾಧಿಧೀಕ್ಷಕ ಎಂ.ಬಿ.ಸಂಕದ ಅವರು ಪ್ರೀತಿಯಿಂದಲೇ ತಿಳಿಸಿದ್ದಾರೆ.

ಇತ್ತೀಚೆಗೆ ತಾಲೂಕಿನಾದ್ಯಂತ ಕೊಲೆ, ದರೋಡೆ ಮುಂತಾದ ಕ್ರಿಮಿನಲ್‌ ಪ್ರಕರಣಗಳನ್ನು ತ್ವರಿತವಾಗಿ ಭೇದಿಸಿ ಅಪರಾಧಿಗಳ ಹೆಡೆಮುರಿ ಕಟ್ಟುವಲ್ಲಿಯೂ ಆರಕ್ಷಕ ನಿರೀಕ್ಷಕ ಶ್ರೀಶೈಲ್‌ ಕೌಜಲಗಿ ನೇತೃತ್ವದ ಸಿಬ್ಬಂದಿ ವರ್ಗ ಯಶಸ್ವಿಯಾಗಿದ್ದು, ತಾಲೂಕಿನ ಜನರಿಗೆ ನೆಮ್ಮದಿ ತಂದಿದೆ.

ಹುಬ್ಬಳ್ಳಿಯಿಂದ ದಾಂಡೇಲಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಮೂಟೆಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಅಪಹರಣಗೊಳಿಸಿದ ಪ್ರಕರಣವನ್ನು ಚಾಕಚಕ್ಯತೆಯಿಂದ ಕಾರ್ಯೋನ್ಮುಖರಾಗಿ ಶಿಗ್ಗಟ್ಟಿ ಮತ್ತು ಅರೆಬಸನಕೊಪ್ಪ ಗ್ರಾಮಗಳಲ್ಲಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುವಾಗಲೇ ಧಾವಿಸಿ ಲಾರಿ ಮತ್ತು ಮಾಲು ಸಹಿತ ಆರೋಪಿಯನ್ನು ಬಂಧಿಸಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ವಿವಿಧ ಭಾಗಗಳಿಂದ ಎಮ್ಮೆ ಕೋಣಗಳನ್ನು ಖರೀದಿಸಿ ಕೇರಳ ರಾಜ್ಯಕ್ಕೆ ಸಾಗಿಸುವ ಅಕ್ರಮ ಪ್ರಕರಣಗಳನ್ನು ಸಾಗಿಸುವ ಪೂರ್ವದಲ್ಲಿಯೇ ಭೇದಿಸಿ ಅಕ್ರಮ ಸಾಗಾಟಕ್ಕೆ ಬಳಸಿದ ಲಾರಿ, ಎರಡು ಕಾರುಗಳನ್ನು ಜಪ್ತಿ ಮಾಡಿ ಕ್ರಮ ಜರುಗಿಸಿ ರುವುದಲ್ಲದೇ ಎಲ್ಲ ಮೂಕ ಪ್ರಾಣಿಗಳನ್ನು ಬುಡರ ಸಿಂಗಿ ಗೋಶಾಲೆಗೆ ಸ್ಥಳಾಂತರಿಸಿದ್ದಾರೆ.ಇದಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಬಂಗಾರದ ಆಭರಣಗಳನ್ನು ಧರಿಸಿ ಒಂಟಿಯಾಗಿ ಓಡಾಡುವ 40 ರಿಂದ 45ರ ವಯೋಮಾನದ ಮಹಿಳೆಯರನ್ನು ಗುರುತಿಸಿ, ತಿಂಗಳು ಕಾಲ ಅವರನ್ನು ಹಿಂಬಾಲಿಸಿ ರಸ್ತೆಯಲ್ಲಿ ಯಾರೂ ಸಂಚರಿಸದ ಸಮಯದಲ್ಲಿ ನೇರವಾಗಿ ಅವರ ಮನೆಯೊಳಗೆ ಕುಡಿಯುವ ನೀರು ಬೇಕೆಂದು ಹೇಳಿ ಸೇರಿಕೊಂಡು ನಂತರ ಮಾರಕಾಸ್ತ್ರದಿಂದ ತಲೆ-ಕುತ್ತಿಗೆಗೆ ಇರಿದು ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿಕೊಂಡು ಸಾಗ ಹಾಕಿ ಅವರ ಮೈಮೇಲಿದ್ದ ಬಂಗಾರ ಆಭರಣಗಳನ್ನು ತೆಗೆದುಕೊಂಡು ಆಮೇಲೆ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಮೃತ ದೇಹವನ್ನು ಎಸೆದು, ಸಾಕ್ಷಿ ನಾಶಪಡಿಸಲು ಪೆಟ್ರೋಲ್‌, ಡಿಸೇಲ್‌ ದೇಹದ ಮೇಲೆ ಸುರಿದು ಬೆಂಕಿ ಹಚ್ಚಿದ ಪ್ರಕರಣ ಸ್ಥಳೀಯ ಹಾಗೂ ಜಿಲ್ಲಾ ಪೊಲೀಸರಿಗೆ ತಲೆ ನೋವಾಗಿತ್ತು. ಈ ಪ್ರಕರಣ ಜರುಗಿದ 40 ರಿಂದ 45 ದಿನಗಳಲ್ಲಿ ಇದೇ ಗುಂಪು ತಮ್ಮ ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿರುವು ದನ್ನು ಗಮನಿಸಿ ಇನ್ನೊಂದು ಒಂಟಿ ಮಹಿಳೆಯನ್ನು ಕೊಲೆ ಮಾಡಿ ಬಂಗಾರ ಕಳವು ಮಾಡಿ ಸಾಕ್ಷé ನಾಶ ಪಡಿಸಿರುವುದನ್ನು ಗಂಭೀರವಾಗಿ ಸ್ವೀಕರಿಸಿದ ಸ್ಥಳೀಯ ಪೊಲೀಸರು ಕೆಲವೇ ದಿನಗಳಲ್ಲಿ ಎರಡೂ ಪ್ರಕರಣವನ್ನು ಭೇದಿಸಿ ಕೊಲೆಗಾರರ ಹೆಡೆ ಮುರಿಕಟ್ಟಿರುವುದಲ್ಲದೇ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುವುದನ್ನು ಹಿರಿಯ ಅ ಧಿಕಾರಿ ವರ್ಗದವರು ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಕೆಲವರ್ಷ ಗಳಿಂದ ತಾಲೂಕಿನಾದ್ಯಂತ ಅಪಘಾತದಿಂದ ಮೃತರಾಗುತ್ತಿರು ವುದು ಹಾಗೂ ಅಪರಾಧ ಪ್ರಕರಣಗಳು ಹೆಚ್ಚಾಗಿರುವುದನ್ನು ನಿಯಂತ್ರಣಕ್ಕೆ ತರಲು ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಿದ್ದಾರೆ. ಅಲ್ಲದೇ ಅಪಘಾತ ಹಾಗೂ ಅಪರಾಧ ಪ್ರಕರಣಗಳನ್ನು ಕಡಿಮೆಗೊಳಿಸಲು ಆರಕ್ಷಕ ನಿರೀಕ್ಷಕ ಶ್ರೀಶೈಲ ಕೌಜಲಗಿ ನೇತೃತ್ವದ ಸಿಬ್ಬಂದಿ ವರ್ಗ ಹಗಲು-ರಾತ್ರಿ ಗಸ್ತು¤, ಗುಡ್‌ ಮಾರ್ನಿಂಗ್‌ ಬೀಟ್‌, ನಾಕಾ ಬಂದಿ ಪೆಟ್ರೋಲಿಂಗ್‌ಗಳನ್ನು ನಿರಂತರವಾಗಿ ಮಾಡುವ ಮೂಲಕ ಜನಸ್ನೇಹಿ ಪೊಲೀಸರಾಗಿ ಕಾರ್ಯ ನಿರ್ವಹಿಸಿ ಹಿರಿಯ ಅಧಿಕಾರಿಗಳ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Chikkamagaluru: ಸಾವಿನಲ್ಲೂ ಸಾರ್ಥಕತೆ; ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

9

Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.