ಕಲಿಕೆಯ “ಜಂಬೋ” ಅವಕಾಶ: ಪೋದಾರ್‌ ಲರ್ನ್ ಸ್ಕೂಲ್‌

2023-24ಕ್ಕೆ ಪ್ರವೇಶಗಳು ಆರಂಭ 1 ರಿಂದ 8ನೇ ತರಗತಿ ಪ್ರಸ್ತಾವಿತ ಸಿಬಿಎಸ್‌ಇ ಶಾಲೆ

Team Udayavani, Feb 9, 2023, 9:30 AM IST

add-thumb-2

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆ ಮಾತಿದೆ. ಆದರೆ, ಸುಶಿಕ್ಷಿತ ಮಹಿಳೆಯೊಬ್ಬರು ವಿದ್ಯಾಸಂಸ್ಥೆಯನ್ನು ಮುನ್ನಡೆಸುತ್ತಿದ್ದರೆ? ವಿದ್ಯಾರ್ಥಿಗಳ ಭಾಗ್ಯಕ್ಕೆ ಎಣೆಯುಂಟೇ?

1927ರಲ್ಲಿ ಶೇಠ್ ಆನಂದಿಲಾಲ್‌ ಪೋದಾರ್‌ ಅವರಿಂದ ಪೋದಾರ್‌ ಎಜ್ಯುಕೇಶನ್‌ ಗ್ರೂಪ್‌ನಿಂದ ಚಾಲನೆ ಪಡೆದ ಪೋದಾರ್‌ ಎಜ್ಯುಕೇಶನ್‌ ನೆಟ್ವರ್ಕ್ ಇಂದು 136ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಶಾಲೆಗಳನ್ನು ನಡೆಸುತ್ತಿದೆ ಹಾಗೂ 98ಕ್ಕೂ ಹೆಚ್ಚು ಪೋದಾರ್‌ ಸಹಭಾಗಿತ್ವದ ಶಾಲೆಗಳಿವೆ. ಈವರೆಗೆ 1.90 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿತಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಆನಂದಿಲಾಲ್‌ ಪೋದಾರ್‌ ಟ್ರಸ್ಟ್‌ನ ಪ್ರಥಮ ಅಧ್ಯಕ್ಷರಾಗಿದ್ದರು ಎನ್ನುವುದು ಉಲ್ಲೇಖನೀಯ. ಪರಂಪರೆ, ನಂಬಿಕೆ, ಶ್ರದ್ಧೆ, ಪ್ರಮಾಣಿಕತೆ, ಭಾವೈಕ್ಯ ಮತ್ತು ಸೇವೆಯಂತಹ ಭಾರತೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಶ್ರಮಿಸುತ್ತಿದೆ. ಶಿಕ್ಷಣ, ಕ್ರೀಡೆ, ನೈತಿಕತೆ, ತಾಂತ್ರಿಕ ಪರಿಣಿತಿ ಸಹಿತ ಎಲ್ಲ ಜ್ಞಾನವನ್ನೂ ಧಾರೆ ಎರೆದು ಭವಿಷ್ಯದ ಜಾಗತಿಕ ನಾಯಕರನ್ನು ರೂಪಿಸುವ ಪ್ರಯತ್ನ ನಿರಂತರವಾಗಿರುತ್ತದೆ.

ಪಾಲಾಕ್ಷ ಪೋದಾರ್‌ ಲರ್ನ್ ಸ್ಕೂಲ್‌ನ ತರಗತಿಗಳಿಗೆ ನಾಲ್ಕು ಗೋಡೆಗಳನ್ನು ಮೀರಿದ ಕಲಿಕೆಯು ಸಾಧ್ಯವಾಗುತ್ತದೆ. ಜಗತ್ತಿನ ಅನಂತ ಸಾಧ್ಯತೆಗಳಿಗೆ ಈ ತರಗತಿಯ ಬಾಗಿಲುಗಳು ತೆರೆದುಕೊಂಡಿವೆ. ಕಲ್ಪನೆಗಳಿಗೆ, ಅಮೂಲ್ಯವಾದ ಚಿಂತನೆಗಳಿಗೆ ಮಿತಿಯೇ ಇಲ್ಲ. ಸೃಜನಶೀಲತೆಯನ್ನು ಬೆಳೆಸುವ ಸಂವಾದಾತ್ಮಕ ತರಗತಿಗಳು, ತಂತ್ರಜ್ಞಾನದ ಬಳಕೆ, ಭೇದ ತೋರದೇ ಎಲ್ಲ ಮಕ್ಕಳನ್ನೂ ಸಮಾನವಾಗಿ ಕಾಣುವ ಮತ್ತು ಅವರ ಅಭಿಪ್ರಾಯಗಳನ್ನು ಗೌರವಿಸುವ ಮನಃಸ್ಥಿತಿ ಈ ಶಾಲೆಯನ್ನು ಎಲ್ಲಕ್ಕಿಂತ ಭಿನ್ನವಾಗಿಸುತ್ತದೆ. ಪಠ್ಯಕ್ಕೆ ಪೂರಕವಾಗಿ ಪರಿಸರದ ಜತೆಗಿನ ಕಲಿಕೆ ಮಕ್ಕಳಿಗೆ ಆಸಕ್ತಿದಾಯಕವಾಗುತ್ತದೆ. ತರಗತಿಗೆ ಸೀಮಿತವಾಗದೆ, ಜಗಲಿ, ಆಟದ ಮೈದಾನ ಮತ್ತು ಮನೆಗಳಲ್ಲೂ ಕಲಿಕೆಯು ನಡೆಯುತ್ತಲೇ ಇರುತ್ತದೆ. ಶಾಲೆಯ ಆಕರ್ಷಕ ಮತ್ತು ಉತ್ಸಾಹದಾಯಕ ಪರಿಸರವೇ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುತ್ತದೆ.

ಪಾಲಾಕ್ಷ ಎಜ್ಯುಕೇಶನ್‌ ಟ್ರಸ್ಟ್‌ ಹಾಗೂ ಸದಸ್ಯರು ಧಾರವಾಡಕ್ಕೆ ವಿಶ್ವದರ್ಜೆಯ ಶಿಕ್ಷಣವನ್ನು ತರುವ ಉದ್ದೇಶದಿಂದ ಪೋದಾರ್‌ ಜಂಬೋ ಕಿಡ್ಸ್‌ ಸಂಸ್ಥೆಯನ್ನು 2015 ರಲ್ಲಿ ಆರಂಭಿಸಿದರು. ಪ್ರತಿ ವರ್ಷವೂ 200 ಮಕ್ಕಳು ಇಲ್ಲಿ ಸಂತೋಷದಿಂದ ಕಲಿಯುತ್ತಿದ್ದಾರೆ.

ಧಾರವಾಡ ಲಯನ್ಸ್‌ ಸ್ಕೂಲ್‌ ಆಡಳಿತವನ್ನೂ ತೆಕ್ಕೆಗೆ ತೆಗೆದುಕೊಂಡರು. 2020 ರಲ್ಲಿ ಪಾಲಾಕ್ಷ್ ಪೋದಾರ್‌ ಲರ್ನ್ ಸ್ಕೂಲ್‌ ಜೀವ ತಳೆಯಿತು.

ವೈಶಿಷ್ಟ್ಯಗಳ ಆಗರ
ಸುಸಜ್ಜಿತ ಪ್ರಯೋಗಾಲಯಗಳು, ತರಗತಿ ಕೊಠಡಿಗಳು, ತಾಂತ್ರಿಕವಾಗಿ ಶ್ರೀಮಂತವಾಗಿ ಸ್ಮಾರ್ಟ್‌ ಎನಿಸಿಕೊಂಡಿವೆ. ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಲು ಸಿಸಿ ಟಿವಿ ನಿಗಾ (ಈ ಸುರಕ್ಷತಾ ಕ್ರಮವನ್ನು ಬಸ್‌ಗಳಲ್ಲೂ ಅಳವಡಿಸಲಾಗಿದೆ), ಆರೋಗ್ಯಕರ ಆಹಾರವನ್ನು ಒದಗಿಸಲು ಕ್ಯಾಂಪಸ್‌ ಒಳಗೆ ಕೆಫೆಟೀರಿಯಾ ಸೌಲಭ್ಯ(ಒಬ್ಬ ಆಹಾರ ತಜ್ಞರ ಮಾರ್ಗದರ್ಶನವೂ ಲಭ್ಯ). ಅಥ್ಲೆಟಿಕ್ಸ್‌, ಫ‌ುಟ್‌ಬಾಲ್‌, ಲಾನ್‌ ಟೆನಿಸ್‌, ಸ್ಕೇಟಿಂಗ್‌, ಕ್ರಿಕೆಟ್‌ ಮತ್ತಿತರೆ ಆಟಗಳನ್ನು ಆಡಲು ಕ್ರೀಡಾ ಸೌಕರ್ಯಗಳನ್ನು ಒದಗಿಸಲಾಗಿದೆ. ಕಲೆ, ಸಂಗೀತ, ನೃತ್ಯ, ಝುಂಬಾ, ಯೋಗ, ಹೂದೋಟ ನಿರ್ಮಾಣಕ್ಕೂ ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ಫ್ರೆಂಚ್‌ ಭಾಷೆಯನ್ನೂ ಕಲಿಸಲಾಗುತ್ತಿದೆ. ಆಧುನಿಕ ಸೌಲಭ್ಯಗಳಿರುವ ಕಂಪ್ಯೂಟರ್‌ ಮತ್ತು ವಿಜ್ಞಾನ ಪ್ರಯೋಗಾಲಯಗಳು ಕಲಿಕೆಗೆ ಅನುಕೂಲ ಕಲ್ಪಿಸುತ್ತಿವೆ.

ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರಲಿ, ಸಂತೋಷದಿಂದ ಕಲಿಯಲು ಎಲ್ಲ ವಕಾಶಗಳು ಇಲ್ಲಿವೆ. ಅನ್ವೇಷಣೆ, ಅನುಭವ ಮತ್ತು ಅನುಷ್ಠಾನ ಈ ಮುರು ಮಾದರಿಗಳಲ್ಲಿ ಕಲಿಕೆಯು ಇಲ್ಲಿ ಪರಿಪೂರ್ಣವಾಗುತ್ತಿದೆ.

ಸೌಕರ್ಯಗಳು
– ಸುಸಜ್ಜಿತ ಪ್ರಯೋಗಾಲಯಗಳು
– ಟೆಕ್‌-ಫ್ರಂಡ್ಲಿ ಸ್ಮಾರ್ಟ್‌ ತರಗತಿ ಕೊಠಡಿಗಳು
– ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ.
– ಉದ್ಯಮದಲ್ಲಿ ಅತ್ಯುತ್ತಮ ಶಿಕ್ಷಕರು, ನಿಯಮಿತವಾದ ತರಬೇತಿಗಳು
– ಶಾಲಾ ಆವರಣದಲ್ಲಿ 24×7 ಸಿಸಿ ಕ್ಯಾಮರಾ ಕಣ್ಗಾವಲು.
– ಕ್ಯಾಂಪಸ್‌ನಲ್ಲಿರುವ ಕೆಫೆಟೇರಿಯಾ ಆರೋಗ್ಯಕರ ಆಹಾರ ನೀಡುತ್ತಿದೆ
– ನ್ಪೋರ್ಟ್ಸ್ ಕ್ಲಬ್‌, ಹವ್ಯಾಸ ತರಗತಿಗಳು ಮತ್ತು ಇನ್ನೂ ಅನೇಕ.
– ವಿದೇಶಿ ಭಾಷೆಯ ಪರಿಚಯ- 1ರಿಂದ 5ನೇ ತರಗತಿಗಳಿಗೆ ಫ್ರೆಂಚ್‌.

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

Paddy 2

Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ

R Ashok (2)

BPL ಕಾರ್ಡ್‌ನಿಂದ ಎಪಿಎಲ್‌ಗೆ 6ನೇ ಗ್ಯಾರಂಟಿ: ಅಶೋಕ್‌ ಲೇವಡಿ

renukaacharya

Waq ಹೋರಾಟಕ್ಕೆ ವಿಜಯೇಂದ್ರ ತಂಡಗಳೇ ಅಧಿಕೃತ: ರೇಣುಕಾಚಾರ್ಯ

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.