ಹಿಂದೂಗಳೆಲ್ಲ ಸಮೃದ್ಧವಾಗಿದ್ದರೆ ಭಾರತ ಸಮೃದ್ಧ: ಗೋಪಾಲಜಿ

ವೇದ ಉಪನಿಷತ್ತು, ಭಗವದ್ಗೀತೆ ಇವುಗಳೆಲ್ಲವೂ ನಮಗೆ ಒಂದೇ ಸಂದೇಶ ನೀಡಿವೆ.

Team Udayavani, Feb 9, 2023, 11:16 AM IST

ಹಿಂದೂಗಳೆಲ್ಲ ಸಮೃದ್ಧವಾಗಿದ್ದರೆ ಭಾರತ ಸಮೃದ್ಧ: ಗೋಪಾಲಜಿ

ಬೀಳಗಿ: ಭಾರತ ಹಿಂದೂಗಳಿಂದ ಕೂಡಿದ ದೇಶ. ಹಿಂದೂಗಳೆಲ್ಲ ಸಮೃದ್ಧವಾಗಿದ್ದರೆ ಭಾರತ ಸಮೃದ್ಧವಾಗಿರುತ್ತದೆ. ಸಮೃದ್ಧತೆಗೆ ಆರ್ಥಿಕ ಸಂಪತ್ತಷ್ಟೇ ಇದ್ದರೆ ಸಾಲದು. ಬದಲಾಗಿ ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಸಹೃದಯತೆ, ಸೌಹಾರ್ದತೆ, ಸಾಮರಸ್ಯತೆ ಇರಬೇಕು. ಹಿಂದೂಗಳಿದ್ದರೆ ಮಾತ್ರ ಭಾರತ ಇಲ್ಲದಿದ್ದರೆ ಭಾರತವಿಲ್ಲ ಎಂದು ವಿಶ್ವ ಹಿಂದೂ ಪರಿಷತ್‌ ಭಜರಂಗದಳ ರಾಷ್ಟ್ರೀಯ ಸಹಕಾರ್ಯದರ್ಶಿ ಗೋಪಾಜೀ ಹೇಳಿದರು.

ಇಲ್ಲಿನ ಸಿದ್ಧೇಶ್ವರ ಕಾಲೇಜು ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಭಜರಂಗದಳದ ವತಿಯಿಂದ ಸಂಜೆ ಹಮ್ಮಿಕೊಂಡ ಮಹಾ ಲಕ್ಷ್ಮೀ ನಮೋಸ್ತುತೇ ಪೂಜಾ ಕಾರ್ಯಕ್ರಮ ಮತ್ತು ವಿರಾಟ ಹಿಂದೂ ಸಮಾಜೋತ್ಸವದಲ್ಲಿ ಗೋಪೂಜೆ ಹಾಗೂ ಭಾರತಾಂಬೆಯ ಭಾವಚಿತ್ರದ ಪೂಜೆ ನೆರವೇರಿಸಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.

ನಾವೆಲ್ಲ ಚಾಲುಕ್ಯರ ನಾಡಿನವರು. ಅತ್ಯಂತ ವೈಭವದಿಂದ ರಾಜ್ಯವನ್ನಾಳಿದ ದೊರೆ ಚಾಲುಕ್ಯ. ಮೊದಲ ಬಾರಿ ಮುಸಲ್ಮಾನರ ಆಕ್ರಮಣ( ಕ್ರಿ. ಶ 637) ಭಾರತದ ( ಮುಂಬೈ) ಮೇಲಾದಾಗ ಅವರನ್ನು ಮೆಟ್ಟಿ ನಿಂತು ಸೋಲಿಸಿ ವಾಪಸ ಕಳುಹಿಸಿದ ಪರಾಕ್ರಮಿಯ ನಾಡಿನಲ್ಲಿ ಹುಟ್ಟಿದ ನಾವುಗಳೆಲ್ಲ ಸಾಮರಸ್ಯದಿಂದ ಒಂದೇ ತಾಯಿಯ ಮಕ್ಕಳಂತೆ, ಯಾವುದೇ ಜಾತಿ, ಧರ್ಮ, ಮತ,ಪಂಥಗಳ ಭೇದ ಭಾವ ಇಲ್ಲದೇ ಎಲ್ಲರೂ ನಮ್ಮವರೆಂಬ ಭಾವದಿಂದ ಬದುಕಬೇಕು. ಅಣ್ಣ ಬಸವಣ್ಣ, ಅಕ್ಕ ಮಹಾದೇವಿ, ಎಲ್ಲ ಶರಣ ಸಂತರು, ದಾಸ ಮುನಿಗಳು, ವೇದ ಉಪನಿಷತ್ತು, ಭಗವದ್ಗೀತೆ ಇವುಗಳೆಲ್ಲವೂ ನಮಗೆ ಒಂದೇ ಸಂದೇಶ ನೀಡಿವೆ. ಅವುಗಳನ್ನು ಅರಿತು ನಡೆವ ಹಿಂದೂಗಳು ನಾವಾದರೆ ಮತ್ತೆ ಭಾರತ ವಿಜಯನಗರ ಸಾಮ್ರಾಜ್ಯವಾಗಿ, ವೈಭವದ ನಾಡಾಗಿ ಕಂಗೊಳಿಸುತ್ತದೆಂದು ಹೇಳಿದರು.

ಸಮಾರಂಭದಲ್ಲಿ ಬ್ರಹ್ಮರ್ಷಿ ಆನಂದ ಸಿದ್ಧಪೀಠದ ಆನಂದ ಗುರೂಜಿ, ಶ್ರೀನಿವಾಸ ಗುರೂಜಿ, ಪ್ರಾಂತ ಉಪಾಧ್ಯಕ್ಷ ಲಿಂಗರಾಜ ಅಪ್ಪ, ಸೋಮಪ್ಪಯ್ಯನ ಮಠದ ಚೆನ್ನಬಸವ ಸ್ವಾಮಿಗಳು, ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮಿಗಳು, ದೊಡ್ಯಾಳ ಬ್ರಹನ್ಮಠದ ಶಿವಾನಂದ ದೇವರು, ಡಾ.ಸಾಗರ ತೆಕ್ಕೆಣ್ಣವರ, ರಾಮಣ್ಣ ಕಾಳಪ್ಪಗೋಳ,ಎಸ್‌.ಎನ್‌.ಮುತ್ತಗಿ, ಪುಂಡಲೀಕ ದಳವಾಯಿ ಇತರರಿದ್ದರು.

ಸಚಿವ ಮುರುಗೇಶ ನಿರಾಣಿ, ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ, ಪ.ಪಂ.ಅಧ್ಯಕ್ಷ ವಿಠಲ ಬಾಗೇವಾಡಿ ಸೇರಿದಂತೆ ಇತರ ಗಣ್ಯರು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಗಮನ ಸೆಳೆದರು. ಅಂಬಾ ಭವಾನಿ ದೇವಸ್ಥಾನದಿಂದ ಮುಖ್ಯ ವೇದಿಕೆಯ ವರೆಗೆ ನಡೆದ ಶೋಭಾಯಾತ್ರೆ ಪ್ರೇಕ್ಷಕರ ಗಮನ ಸೆಳೆಯಿತು.

ಟಾಪ್ ನ್ಯೂಸ್

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

4-mudhol

Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.