Health Tips: ಜೇನು ತುಪ್ಪ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ…
ರಕ್ತದ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗಿ, ರಕ್ತಹೀನತೆಯನ್ನು ಗುಣಪಡಿಸುತ್ತದೆ.
Team Udayavani, Feb 9, 2023, 6:28 PM IST
ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಹಲವಾರು ನೈಸರ್ಗಿಕ ಅಂಶಗಳು ನಮ್ಮನ್ನು ವಿವಿಧ ರೀತಿಯ ಆರೋಗ್ಯದ ಸಮಸ್ಯೆಗಳಿಂದಪಾರು ಮಾಡುತ್ತದೆ. ಅದು ಕೇವಲ ಗಿಡಮೂಲಿಕೆಗಳಿಗೆ ಮಾತ್ರ ಸೀಮಿತವಾಗಿರದೆ ಜೇನು ಹುಳುಗಳು ತಯಾರಿಸುವ ಜೇನುತುಪ್ಪದಂತಹ ವಸ್ತುಗಳಿಂದಲೂ ಸಿಗುತ್ತದೆ.
ವೈದ್ಯರಿಂದ ಪ್ರಿಸ್ಕ್ರಿಪ್ಶನ್ (prescription) ಮೂಲಕವಾಗಿ ಇದರ ಮೊದಲ ಬಳಕೆಯ ದಾಖಲೆಯು, ಸುಮೇರಿಯಾದಲ್ಲಿ 4000 ವರ್ಷ ಹಳೆಯದಾದ ಜೇಡಿಮಣ್ಣಿನ ಹಲಗೆಯಲ್ಲಿ ಕಂಡುಬರುತ್ತದೆ. ಶೇ.30% ಸುಮೇರಿಯನ್ನರ ವೈದ್ಯಕೀಯ ಚಿಕಿತ್ಸೆಗಳಲ್ಲಿ ಜೇನು ತುಪ್ಪದ ಬಳಕೆಯಿತ್ತು. ಭಾರತದಲ್ಲಿ, ಜೇನುತುಪ್ಪವು, ಪುರಾತನ, ಪ್ರಾಚೀನ ಸಾಂಪ್ರದಾಯಿಕ ಔಷಧಗಳಾದ ಸಿದ್ಧ ಮತ್ತು ಆಯುರ್ವೇದದ ಪ್ರಮುಖ ಭಾಗವಾಗಿದೆ. ಪ್ರಾಚೀನ ಈಜಿಪ್ಟ್ ನಲ್ಲಿ ಇದು ಚರ್ಮ ಮತ್ತು ಕಣ್ಣಿನ ರೋಗಗಳನ್ನು ನಿರ್ವಹಿಸುವಲ್ಲಿ ಹಾಗೂ ಹುಣ್ಣುಗಳು, ಸುಟ್ಟ ಗಾಯಗಳ ಮೇಲೆ ಹಾಕುವಂತಹ ಒಂದು ನೈಸರ್ಗಿಕ ಬ್ಯಾಂಡೇಜ್ ಆಗಿಯೂ ಬಳಸಲಾಗುತ್ತಿತ್ತು. ಇತರ ಹಲವಾರು ಸಂಸ್ಕೃತಿಗಳು ಕೂಡ, ವಿವಿಧ ವೈದ್ಯಕೀಯ ಉದ್ದೇಶಗಳಿಗಾಗಿ ಜೇನುತುಪ್ಪವನ್ನು ಬಳಸಿಕೊಂಡಿವೆ.
ಮಳೆಗಾಲ ಹಾಗೂ ಚಳಿಗಾಲದಲ್ಲಿ ಕಂಡುಬರುವ ಹಲವಾರು ಸಮಸ್ಯೆಗಳಿಗೆ ಜೇನು ಹುಳುಗಳು ತಯಾರಿಸುವ ಜೇನುತುಪ್ಪ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.
ಸಾಮಾನ್ಯವಾಗಿ ಚಳಿಗಾಲ ಆರಂಭವಾದ ಬಳಿಕ ಶುಷ್ಕ ಗಾಳಿ ನಮ್ಮ ತುಟಿ ಮತ್ತು ಚರ್ಮವನ್ನು ಶುಷ್ಕ ಮತ್ತು ಬಿಗಿಯಾಗಿಸುತ್ತದೆ. ನಮ್ಮ ತುಟಿ ಮತ್ತು ಮುಖ ಹಾಗೂ ಶರೀರದ ಇತರ ಭಾಗಗಳು ಶುಷ್ಕವಾಗುತ್ತವೆ. ಇದು ನಿಜಕ್ಕೂ ಸೂಕ್ಷ್ಮವಾಗಿದ್ದು ಪ್ರಚೋದಕಗಳಿಗೆ ಸುಲಭವಾಗಿ ಸ್ಪಂದಿಸುತ್ತದೆ. ವಾಸ್ತವದಲ್ಲಿ ಚಳಿಗಾಲದಲ್ಲಿ ನೆಗಡಿ, ಗಂಟಲು ಉರಿ ಮತ್ತು ಕೆಮ್ಮಿನಂತಹ ಅನೇಕ ಖಾಯಿಲೆಗಳನ್ನು ನಾವು ಸಾಮಾನ್ಯವಾಗಿ ಎದುರಿಸಬೇಕಾಗುತ್ತದೆ. ಶೀತ ಹವೆ, ಒಡೆದ ತುಟಿ, ಒಣಗಿದ ಮೊಣಕೈ, ನೆಗಡಿ ಮತ್ತು ಕೆಮ್ಮಿನಂತಹ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಉಷ್ಣಾಂಶದಲ್ಲಿ ಕುಸಿತವನ್ನು ಜೇನುತುಪ್ಪದ ಗುಣಕಾರಕ ಲಕ್ಷಣಗಳಿಂದ ಸರಿಪಡಿಸಬಹುದಾಗಿದೆ.
ಸಾಮಾನ್ಯವಾಗಿ ಜೇನುತುಪ್ಪವನ್ನು ಸೌಂದರ್ಯ ಆರೈಕೆ ಮತ್ತು ಅನೇಕ ಆರೋಗ್ಯ ಪ್ರಯೋಜನಗಳಿಗೆ ಬಳಸಲಾಗುತ್ತದೆ. ಆದರೆ, ಚಳಿಗಾಲದಲ್ಲಿ ಜೇನುತುಪ್ಪದ ಬಳಕೆಯನ್ನು ಹೆಚ್ಚಿಸಬೇಕು. ಜೇನುತುಪ್ಪ ಆಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳಿಂದ ಸಮೃದ್ಧವಾಗಿರುವುದರಿಂದ, ಇದು ಪ್ರಾಕೃತಿಕವಾಗಿ ಅನೇಕ ಸಮಸ್ಯೆಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.
ಜೇನು ತುಪ್ಪದ ಉಪಯೋಗಗಳು:
ಕೆಂಪು ರಕ್ತಕಣವನ್ನು ಹೆಚ್ಚಿಸುತ್ತದೆ
ನಮ್ಮ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳುವಲ್ಲಿ ಈ ಜೇನುತುಪ್ಪದ ಪಾತ್ರ ಅತ್ಯಂತ ಪ್ರಮುಖವಾದದ್ದು. ಸಾಮಾನ್ಯವಾಗಿ ಜೇನುತುಪ್ಪವನ್ನು ನೀರಿನಲ್ಲಿ ಬೆರೆಸಿ ಕುಡಿದರೆ, ಅದು ರಕ್ತದ ಕೆಂಪು ರಕ್ತಕಣಗಳ ಸಂಖ್ಯೆಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ರಕ್ತದಲ್ಲಿನ ಆಮ್ಲಜನಕವನ್ನು ದೇಹದಲ್ಲಿನ ವಿವಿಧ ಭಾಗಗಳಿಗೆ ಸಾಗಿಸಲು ಆರ್-ಬಿ-ಸಿಯು ಕಾರಣವಾಗಿದೆ. ತುಸು ಬೆಚ್ಚಗಿನ ನೀರಿನ ಜೊತೆ ಜೇನು ತುಪ್ಪವನ್ನು ಸೇರಿಸಿ ಸೇವಿಸಿದರೆ, ರಕ್ತದ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗಿ, ರಕ್ತಹೀನತೆಯನ್ನು ಗುಣಪಡಿಸುತ್ತದೆ.
ದೇಹದಲ್ಲಿ ಆಮ್ಲಜನಕ ಮಟ್ಟವನ್ನು ಹೆಚ್ಚಿಸುತ್ತದೆ
ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಸುಧಾರಿಸುವುದು ಬಹಳ ಮುಖ್ಯ. ಏಕೆಂದರೆ ದೇಹವು ಎಷ್ಟು ಆರೋಗ್ಯಕರವಾಗಿದೆ ಹಾಗೂ ಅದು ಎಷ್ಟು ಸುಲಭವಾಗಿ ತನ್ನನ್ನು ತಾನು ಪುನಃ ಚೈತನ್ಯಗೊಳಿಸಿಕೊಳ್ಳುತ್ತದೆ ಎಂಬುವುದು ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಅವಲಂಬಿಸಿರುತ್ತದೆ. ಅಧಿಕ ರಕ್ತದೊತ್ತಡದ ಮೇಲೆ ಜೇನುತುಪ್ಪದ ಧನಾತ್ಮಕ ಪರಿಣಾಮವನ್ನು, ಪ್ರಾಥಮಿಕ ಸಂಶೋಧನೆಯು ತೋರಿಸಿದೆ. ಸಾಂಪ್ರದಾಯಿಕವಾಗಿ, hypotension ಅಥವಾ ಕಡಿಮೆ ರಕ್ತದೊತ್ತಡದ ಪರಿಣಾಮಗಳನ್ನು ಕಡಿಮೆ ಮಾಡಲು ಕೂಡ ಜೇನುತುಪ್ಪವನ್ನು ಸೇವಿಸಲಾಗುತ್ತದೆ.
ಜೇನುತುಪ್ಪದ ಬಳಕೆಯು ಸಕ್ಕರೆಗೆ ಒಂದು ಉತ್ತಮ ಪರ್ಯಾಯವಾಗಿದೆ. ಸೇವಿಸಲು ಸುರಕ್ಷಿತವೂ ಆಗಿದೆ. ಅದರ ರಾಸಾಯನಿಕ ರಚನೆಯಲ್ಲಿ ಜೇನುತುಪ್ಪವು, ಸರಳವಾದ ಸಕ್ಕರೆಗಳನ್ನು ಒಳಗೊಂಡಿರುತ್ತದೆಯಾದರೂ, ಇದು ಬಿಳಿ ಸಕ್ಕರೆಗಿಂತ ಭಿನ್ನವಾಗಿದೆ. ಅಲ್ಲದೆ ಸಕ್ಕರೆಯ ಬದಲಾಗಿ ಜೇನುತುಪ್ಪವನ್ನು ಸೇವನೆ ಮಾಡುವುದರಿಂದಾಗಿ ಮಧುಮೇಹ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಜೇನುತುಪ್ಪದ ಸೇವನೆಯು, ಪ್ರಯೋಜನಕಾರಿ ಉತ್ಕರ್ಷಣ ನಿರೋಧಕದ ಶಕ್ತಿಯ (antioxidant agents) ಹೆಚ್ಚಳವನ್ನು ಉತ್ತೇಜಿಸುತ್ತದೆ, ಪ್ರತಿಕಾಯಗಳನ್ನು (antibodies) ಪ್ರಚೋದಿಸುತ್ತದೆ ಮತ್ತು ಹಾನಿಕಾರಕ ಸೂಕ್ಷ್ಮಜೀವಿ ಚಟುವಟಿಕೆಯನ್ನು (microbial activity) ಪ್ರತಿರೋಧಿಸುತ್ತದೆ. ಗಾಯದ ಚಿಕಿತ್ಸೆಯಲ್ಲಿ ಜೇನುತುಪ್ಪದ ಉಪಯೋಗದ ಕಡೆಗೆ ಹಲವಾರು ಅಧ್ಯಯನಗಳು ದೃಷ್ಟಿ ಹರಿಸುತ್ತಿವೆ. ಒಂದು ಅಧ್ಯಯನವು, ವಿಶೇಷವಾಗಿ ಪರಿಶುದ್ಧಗೊಳಿಸಿದ ಚಿಕಿತ್ಸಕ ಜೇನುತುಪ್ಪವನ್ನು ಉಪಯೋಗಿಸಿತು. ಅಧ್ಯಯನದಲ್ಲಿ ಭಾಗವಹಿಸಿದವರ ಗಾಯಗಳಲ್ಲಿನ ಬ್ಯಾಕ್ಟೀರಿಯಾದ ಎಲ್ಲಾ ತಳಿಗಳನ್ನು ಇದು ನಾಶಪಡಿಸಿತು. ಮತ್ತೊಂದು ಅಧ್ಯಯನವು, 59 ರೋಗಿಗಳ, ಗಾಯ ಮತ್ತು ಕಾಲಿನ ಹುಣ್ಣುಗಳಿಗೆ ಸಂಸ್ಕರಿಸದ (unprocessed) ಜೇನುತುಪ್ಪದೊಂದಿಗೆ ಚಿಕಿತ್ಸೆ ನೀಡಿತು, ಇವರಲ್ಲಿ ಶೇ. 80% ರಷ್ಟು ಜನರು ಸಾಂಪ್ರದಾಯಿಕ ಚಿಕಿತ್ಸೆಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಒಬ್ಬ ರೋಗಿಯನ್ನು ಹೊರತುಪಡಿಸಿ, ಇತರರ ಗಾಯಗಳು ಸುಧಾರಣೆಯನ್ನು ತೋರಿಸಿದವು, ಜೇನುತುಪ್ಪದ ಉಪಯೋಗದಿಂದ, ಒಂದು ವಾರದೊಳಗೆ ಸೋಂಕಿತ ಗಾಯಗಳು ಕ್ರಿಮಿರಹಿತವಾದವಾದವು ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.