ಎಚ್-1ಬಿ ವೀಸಾ ಗ್ರೇಸ್ ಅವಧಿ ಹೆಚ್ಚಳಕ್ಕೆ ಮನವಿ
Team Udayavani, Feb 9, 2023, 8:00 PM IST
ವಾಷಿಂಗ್ಟನ್: ಅಮೆರಿಕದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಉದ್ಯೋಗ ಕಡಿತದಿಂದಾಗಿ ಭಾರತೀಯ ವೃತ್ತಿಪರರು ಕೆಲಸ ಕಳೆದುಕೊಳ್ಳುತ್ತಿರುವ ನಡುವೆಯೇ, ಎಚ್-1ಬಿ ವೀಸಾ ಹೊಂದಿರುವವರಿಗೆ ನೀಡಲಾಗುವ ಗ್ರೇಸ್ ಅವಧಿಯನ್ನು ಈಗಿರುವ 2 ತಿಂಗಳಿಂದ 1 ವರ್ಷಕ್ಕೆ ಏರಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ಎರಡು ಭಾರತೀಯ-ಅಮೆರಿಕನ್ ಸಂಸ್ಥೆಗಳು ಇದಕ್ಕೆ ಸಂಬಂಧಿಸಿದ ಆನ್ಲೈನ್ ಅರ್ಜಿಯೊಂದನ್ನು ರೂಪಿಸಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಕೋರಿಕೆ ಸಲ್ಲಿಸಲು ಮುಂದಾಗಿವೆ. ಈ ಕೋರಿಕೆಯನ್ನು ಬೈಡೆನ್ ಅವರೇನಾದರೂ ಒಪ್ಪಿದರೆ, ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿರುವ ಭಾರತೀಯರಿಗೆ (ಎಚ್1ಬಿ ವೀಸಾ ಹೊಂದಿರುವವರು) ಹೊಸ ಉದ್ಯೋಗ ಹುಡುಕಲು 1 ವರ್ಷ ಕಾಲಾವಕಾಶ ಸಿಗಲಿದೆ. ಪ್ರಸ್ತುತ ಇರುವ ನಿಯಮದಂತೆ, ಒಮ್ಮೆ ಕೆಲಸ ಹೋದರೆ ಅವರ ವೀಸಾದ ಅವಧಿ 60 ದಿನಗಳಲ್ಲಿ ಮುಗಿಯುವ ಕಾರಣ, ಅಂಥವರು ದೇಶ ಬಿಟ್ಟು ಹೋಗಬೇಕಾಗುತ್ತದೆ. 2023 ಜನವರಿ ವರೆಗೆ 91 ಸಾವಿರ ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಲೇಆಫ್ ಟ್ರ್ಯಾಕರ್ ಡಾಟ್ ಕಾಮ್ ವರದಿ ಮಾಡಿದೆ.
ವಲಸಿಗರ ಪರವಾಗಿ (ಭಾರತ, ಚೀನಾ ಸೇರಿದಂತೆ) ನಾವು ಈ ಅರ್ಜಿ ಸಲ್ಲಿಸಿದ್ದು, ಗ್ರೇಸ್ ಅವಧಿಯನ್ನು 1 ವರ್ಷಕ್ಕೆ ಹೆಚ್ಚಿಸುವಂತೆ ಈ ಅರ್ಜಿ ಸಲ್ಲಿಸುತ್ತಿದ್ದೇವೆ ಎಂದು ಫೌಂಡೇಷನ್ ಫಾರ್ ಇಂಡಿಯಾ ಮತ್ತು ಇಂಡಿಯನ್ ಡಯಾನ್ಪೋರಾ ಸ್ಟಡೀಸ್ ಆ್ಯಂಡ್ ಗ್ಲೋಬಲ್ ಟೆಕ್ನಾಲಜಿ ಪ್ರೊಫೆಷನಲ್ಸ್ ಅಸೋಸಿಯೇಷನ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.