![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 10, 2023, 7:30 AM IST
ನವದೆಹಲಿ: ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಇಸ್ರೋದ “ಗಗನಯಾನ’ ಯೋಜನೆಗೆ ಭಾರತೀಯ ನೌಕಾಪಡೆಯೂ ಕೈಜೋಡಿಸಿದೆ.
ಬಾಹ್ಯಾಕಾಶದಿಂದ ಭೂಮಿಯ ವಾತಾವರಣಕ್ಕೆ ಮರಳಿದ ಬಳಿಕ ಸಮುದ್ರದಲ್ಲಿ ಪತನಗೊಳ್ಳುವ ಕ್ರ್ಯೂ ಮಾಡ್ಯೂಲ್ ನ ರಿಕವರಿ ಪ್ರಯೋಗವನ್ನು ಇಸ್ರೋ ಮತ್ತು ನೌಕಾಪಡೆ ಜಂಟಿಯಾಗಿ ನಡೆಸಿವೆ.
ಕೊಚ್ಚಿಯಲ್ಲಿರುವ ನೌಕಾಪಡೆಯ ವಾಟರ್ ಸರ್ವೈವಲ್ ಟೆಸ್ಟ್ ಫೆಸಿಲಿಟಿ(ಡಬ್ಲ್ಯುಎಸ್‌ಟಿಎಫ್)ಯಲ್ಲಿ ಈ ಪ್ರಯೋಗ ನಡೆಸಲಾಗಿದೆ. ಡಬ್ಲ್ಯುಎಸ್‌ಟಿಎಫ್ ಎನ್ನುವುದು ಅತ್ಯಾಧುನಿಕ ಪರೀಕ್ಷೆಯಾಗಿದ್ದು, ಇಲ್ಲಿ ಗಗನಯಾತ್ರಿಗಳು ಅಥವಾ ಬಾಹ್ಯಾಕಾಶ ನೌಕೆಯಲ್ಲಿರುವವರು¬ ಬೇರೆ ಬೇರೆ ಸನ್ನಿವೇಶಗಳಲ್ಲಿ, ಅಪಘಾತ ಅಥವಾ ಪತನಗೊಳ್ಳುವ ಪರಿಸ್ಥಿತಿ ಎದುರಾದಾಗ ಹೇಗೆ ತಪ್ಪಿಸಿಕೊಳ್ಳಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುತ್ತದೆ. ಅಂದರೆ, ಈ ಪರೀಕ್ಷೆ ವೇಳೆ ಸಮುದ್ರದಲ್ಲಿನ ಬೇರೆ ಬೇರೆ ರೀತಿಯ ಪರಿಸ್ಥಿತಿಗಳು, ಪರಿಸರೀಯ ಸನ್ನಿವೇಶ, ಹಗಲು/ರಾತ್ರಿ ಸ್ಥಿತಿ ಸೇರಿದಂತೆ ವಿವಿಧ ರೀತಿಯ ಸನ್ನಿವೇಶಗಳ ಮಾದರಿಯನ್ನು ಸೃಷ್ಟಿಸಿರಲಾಗುತ್ತದೆ.
ಸಮಾನ ದ್ರವ್ಯರಾಶಿ, ಗುರುತ್ವ ಕೇಂದ್ರ, ಬಾಹ್ಯ ಆಯಾಮಗಳು ಮತ್ತು ನೈಜ ಕ್ರ್ಯೂ ಮಾಡ್ಯೂಲ್ ನ ಬಾಹ್ಯಗೋಚರತೆಯಿರುವಂಥ ಕ್ರ್ಯೂ ಮಾಡ್ಯೂಲ್ ರಿಕವರಿ ಮಾಡೆಲ್(ಸಿಎಂಆರ್‌ಎಂ) ಅನ್ನು ರೂಪಿಸಲಾಗುತ್ತದೆ. ಯಾವುದೇ ಮಾನವಸಹಿತ ಬಾಹ್ಯಾಕಾಶ ಯೋಜನೆ ಯಶಸ್ವಿಯಾಗಬೇಕೆಂದರೆ ಸಿಬ್ಬಂದಿಯು ಸುರಕ್ಷಿತವಾಗಿ ವಾಪಸಾಗುವುದು ಬಹಳ ಮುಖ್ಯ. ಹೀಗಾಗಿ, ಈ ಕುರಿತು ಸಾಕಷ್ಟು ಸಂಖ್ಯೆಯಲ್ಲಿ ಪ್ರಯೋಗಗಳನ್ನು ನಡೆಸಬೇಕಾಗುತ್ತದೆ ಎಂದು ಇಸ್ರೋ ಹೇಳಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.