ಜೆ.ಡಿ.ಎಸ್ ಮುಗಿಸಲು ಕಾಂಗ್ರೆಸ್ ಮಾಡಿದ ಅಪಪ್ರಚಾರವೇ ಇಂದು ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ
Team Udayavani, Feb 9, 2023, 9:48 PM IST
ಭಟ್ಕಳ: ರಾಜ್ಯದಲ್ಲಿ ಜೆ.ಡಿ.ಎಸ್. ಮುಗಿಸಬೇಕು ಎನ್ನುವ ದುರಾಸೆಯಿಂದ ಕಾಂಗ್ರೆಸ್ ಪಕ್ಷ ಮಾಡಿದ ಅಪಪ್ರಚಾರವೇ ಇಂದು ರಾಜ್ಯದಲ್ಲಿ ಅತ್ಯಂತ ಕೆಟ್ಟ ಬಿ.ಜೆ.ಪಿ. ಸರಕಾರ ಆಡಳಿತ ಮಾಡಲು ಕಾರಣವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಅವರು ಗುರುವಾರ ರಾತ್ರಿ ಪಟ್ಟಣದ ರಿಕ್ಷಾ ಚಾಲಕರ ಮಾಲಕರ ಗಣೇಶೋತ್ಸವ ಮೈದಾನದಲ್ಲಿ ಪಂಚರತ್ನ ಯಾತ್ರೆಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಜೆ.ಡಿ.ಎಸ್. ಮುಗಿಸಲು ಹೋಗಿ ರಾಜ್ಯದಲ್ಲಿ ಬಿ.ಜೆ.ಪಿ. ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ಮಾಡಿದೆ. ತಾಕತ್ತಿದ್ದರೆ ಬಿ.ಜೆ.ಪಿ.ಯನ್ನು ನೇರವಾಗಿ ಎದುರಿಸಿ ಎಂದು ಸವಾಲು ಹಾಕಿದ ಅವರು ಕಾಂಗ್ರೆಸ್ ಪಕ್ಷ ಜೆ.ಡಿ.ಎಸ್.ಗೆ ಮುಸ್ಲಿಮರು ಮತ ನೀಡಿದರೆ ಅದು ಬಿಜೆಪಿಗೆ ಮತ ನೀಡಿದಂತೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ತಾವು ಒಮ್ಮೆ ಅನಿವಾರ್ಯವಾಗಿ ಬಿ.ಜೆ.ಪಿ. ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದು, ತಮ್ಮ ಪಕ್ಷ ಮುಸ್ಲೀಮರ ಪರವಾಗಿಯೇ ಇದೆ ಎಂದು ಹೇಳಿದರು.
ಕಳೆದ 14 ತಿಂಗಳು ಮುಖ್ಯ ಮಂತ್ರಿಯಾಗಿದ್ದಾಗ ಬಿ.ಜೆ.ಪಿ. ಪಕ್ಷವನ್ನು ಹಿಡತದಲ್ಲಿಟ್ಟುಕೊಂಡಿದ್ದರೂ ಸಹ, ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕ (ಸಿದ್ದರಾಮಯ್ಯ ಅವರ ಹೆಸರು ಹೇಳದೇ) ಮುಂದಿನ ಮುಖ್ಯ ಆಗಬೇಕೆನ್ನುವ ಆಶೆಯಿಂದ ಬಿ.ಜೆ.ಪಿ.ಗೆ ಅಧಿಕಾರ ಹಿಡಿಯಲು ಸಹಾಯ ಮಾಡಿದರು ಎಂದು ಕಟುಕಿದರು.
ಪದೇ ಪದೇ ಮುಸ್ಲೀಮರನ್ನು ಓಲೈಸಿದ ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ಭಟ್ಕಳ ಕ್ಷೇತ್ರದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಮುಸ್ಲೀಮರು ತಮ್ಮದೇ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಬೇಕು ಎಂದು ಪರೋಕ್ಷಗಾಗಿ ಇನಾಯತ್‌ವುಲ್ಲಾ ಶಾಬಂದ್ರಿಯವರನ್ನ ಜೆ.ಡಿ.ಎಸ್. ಅಭ್ಯರ್ಥಿಯನ್ನಾಗಿಸಲು ತಂಜೀ ಸಂಸ್ಥೆಗೆ ಆಸೆ ಹುಟ್ಟಿಸುವ ಕಾರ್ಯ ಮಾಡಿದರು. ಕರಾವಳೀಯಲ್ಲಿನ್ ದರ್ಮ ದಂಗಲ್ ಕೊನೆಗೊಳಿಸಲು ಮುಸ್ಲೀಮ್ ಅಭ್ಯರ್ಥಿಯನ್ನೇ ಆರಿಸಿ ತರುವಂತೆಯೂ ಅವರು ಕೋರಿದರು. ತಮ್ಮ ಭಾಷಣದುದ್ದಕ್ಕೂ ಮುಸ್ಲೀಮರನ್ನೇ ಓಲೈಕೆ ಮಾಡಿದ ಕುಮಾರಸ್ವಾಮಿಯವರ ಭಾಷಣದಿಂದ ಜೆ.ಡಿ.ಎಸ್. ನಲ್ಲಿಯೇ ಇರುವ ಅನೇಕ ಹಿಂದೂ ಮುಖಂಡರೂ ಅಸಾಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಅಪಪ್ರಚಾರಕ್ಕೆ ಯಾವುದೇ ಕಾರಣಕ್ಕೂ ಮುಸ್ಲೀಮರು ಕಿವಿಗೊಡಬಾರದು ಎಂದ ಅವರು ಬಿಜೆಪಿಯವರಿಗೆ ಜನತೆ ವಿದ್ಯಾವಂತರಾಗುವುದು ಬೇಡವಾಗಿದೆ. ಜನತೆಯನ್ನು ಮತ್ತೆ ಮನುಕುಲಕ್ಕೆ ಕರೆದುಕೊಂಡು ಹೋಗುವುದು ಬೇಕಾಗಿದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಗ್ರಾಮ ಪಂಚಾಯತ್‌ಗೊಂದು 30 ಹಾಸಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸುತ್ತೇವೆ. 3 ವೈದ್ಯರು, 30 ಸಿಬ್ಬಂದಿಗಳನ್ನು ಕೊಡುತ್ತೇನೆ. ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತವನ್ನು 5 ಸಾವಿರಕ್ಕೆ ಮತ್ತು ವಿಧವಾ ವೇತನವನ್ನು 2500ಕ್ಕೆ ಏರಿಕೆ ಮಾಡಲಾಗುವುದು ಎಂದರು.
ಜೆಡಿಎಸ್ ಮುಖಂಡ ಇನಾಯತುಲ್ಲಾ ಶಾಬಂದ್ರಿ ಪ್ರಸ್ತಾವಿಕ ಮಾತನಾಡಿ, ಭಟ್ಕಳದ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು. ಕುಮಟಾದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಮಾತನಾಡಿದರು. ವೇದಿಕೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ, ಮಾಜಿ ಎಮ್ಮೆಲ್ಸಿ ರಮೇಶ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜವರ್ಧನ್ ನಾಯ್ಕ, ಮುಖಂಡರಾದ ಗಣಪತಿ ಭಟ್ಟ, ಅಲ್ತಾಪ್ ಖರೂರಿ, ಕೃಷ್ಣಾನಂದ ಪೈ, ಪಾಂಡುರಂಗ ನಾಯ್ಕ, ಮಂಜು ಗೊಂಡ, ವೆಂಕಟೇಶ ನಾಯ್ಕ, ದೇವಯ್ಯ ನಾಯ್ಕ ಮುಂತಾದವರಿದ್ದರು. ಕುಂದಾಪುರ ಜೆಡಿಎಸ್ ಕ್ಷೇತ್ರಾಧ್ಯಕ್ಷ ಹುಸೇನ್ ಹೈಕಾಡಿ ನಿರೂಪಿಸಿದರು.
ಕುಮಾರಸ್ವಾಮಿ ದರುಶನದ ವೇಳೆ ಹನುಮಂತನಿಂದ ಪ್ರಸಾದ !
ಭಟ್ಕಳದಲ್ಲಿನ ಜೆಡಿಎಸ್ ಸಮಾವೇಶಕ್ಕೆ ಬರುವ ಪೂರ್ವದಲ್ಲಿ ಕುಮಾರಸ್ವಾಮಿಯವರು ಶಿರಾಲಿಯ ಸಾರದಹೊಳೆ ಹಳೇಕೋಟೆ ಹನಮಂತ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಹನುಮಂತನ ದರುಶನವನ್ನು ಪಡೆಯುತ್ತಿರುವಾಗಲೇ ದೇವರು ಪ್ರಸಾದ ನೀಡಿ ಹರಿಸಿರುವುದು ವಿಶೇಷವಾಗಿದ್ದು ಇದುವೇ ಭಟ್ಕಳ ಕ್ಷೇತ್ರಕ್ಕೆ ಶುಭ ಶಕುನ ಎಂದು ಹಲವರು ಮಾತನಾಡಿಕೊಂಡರು. ಕುಮಾರಸ್ವಾಮಿಯವರಿಗೂ ವಿಷಯ ತಿಳಿಸಿ ಪಂಚರತ್ನ ಯಾತ್ರೆಯ ಯಶಸ್ಸು ದೊರೆಯುವುದಕ್ಕೆ ಮುನ್ಸೂಚನೆ ಎಂದು ಹೇಳಿದರೆನ್ನಲಾಗಿದೆ.
ಪಂಚರತ್ನ ಯಾತ್ರೆಯ ಮೂಲಕ ಹಳ್ಳಿ ಹಳ್ಳಿಗೂ ಭೇಟಿ ನೀಡಿದ್ದೇನೆ. ಭಟ್ಕಳಕ್ಕೆ ಇನಾಯತ್‌ವುಲ್ಲಾ ಅವರ ಒತ್ತಾಯಕ್ಕೆ ಬಂದಿದ್ದು ಇಡೀ ನನ್ನ ಯಾತ್ರೆಯಲ್ಲಿ ಅತ್ಯಂತ ಕಡಿಮೆ ಜನ ಸೇರಿದ್ದು ಭಟ್ಕಳದಲ್ಲಿ ಮಾತ್ರ ಎಂದು ತಮ್ಮ ಅಸಾಮಾಧಾನವನ್ನು ಕುಮಾರಸ್ವಾಮಿ ಹೊರ ಹಾಕಿದರು. ಸಭೆಯಲ್ಲಿ ತಮ್ಮ ಭಾಷಣದುದ್ದಕ್ಕೂ ಅಲ್ಪ ಸಂಖ್ಯಾತರ ಕುರಿತೇ ಮಾತನಾಡಿದ್ದ ಕುಮಾರಸ್ವಾಮಿ ಸಭೆಯಲ್ಲಿ ಅಲ್ಪ ಸಂಖ್ಯಾತರೇ ಕೇವಲ ಕೆಲವು ಸಂಖ್ಯೆಲ್ಲಿದ್ದುದು ವಿಶೆಷವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.