ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ
Team Udayavani, Feb 10, 2023, 10:30 PM IST
ಬೆಂಗಳೂರು: ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ, ಮಾಜಿ ಶಾಸಕರಾದ ಡಾ| ಹೆಗ್ಗಪ್ಪ, ದೇಶಪ್ಪ ಲಮಾಣಿ, ಎಲ್.ಟಿ.ತಿಮ್ಮಪ್ಪ ಹೆಗಡೆ, ಗಾಯಕಿ ವಾಣಿ ಜಯರಾಂ ಸಹಿತ ಅಗಲಿದ ಹಲವು ಗಣ್ಯರಿಗೆ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿಧಾನಸಭೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ನಿರ್ಣಯ ಮಂಡಿಸಿದರು.
ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ, ಮಾಜಿ ಶಾಸಕರಾದ ಡಾ.ಹೆಗ್ಗಪ್ಪ, ದೇಶಪ್ಪ ಲಮಾಣಿ, ಎಲ್.ಟಿ.ತಿಮ್ಮಪ್ಪ ಹೆಗಡೆ, ಗಾಯಕಿ ವಾಣಿ ಜಯರಾಂ, ಶಿವಾನಂದ ಅಂಬಡಗಟ್ಟಿ, ಶಿಕ್ಷಣ ತಜ್ಞ ಡಾ| ಎಂ.ಕೆ.ಪಾಂಡುರಂಗ ಶೆಟ್ಟಿ, ಕಲಾವಿದ ಡಾ| ಬಿ.ಕೆ.ಎಸ್.ವರ್ಮಾ ಹಾಗೂ ಪತ್ರಕರ್ತ ಕೆ.ಸತ್ಯನಾರಾಯಣ, ಸಾಹಿತಿ ಸಾರಾ ಅಬೂಬಕ್ಕರ್, ಹಿರಿಯ ಗಮಕಿ ಹಾರ್ಯಾಡಿ ಚಂದ್ರಶೇಖರ್ ಕೆದ್ಲಾಯ, ಭಾಷಾ ವಿಜ್ಞಾನಿ ಕೆ.ವಿ. ತಿರುಮಲೇಶ್ ಮುಂತಾದ ಗಣ್ಯರಿಗೆ ಸಂತಾಪ ಸಲ್ಲಿಸಿದರು. ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷದ ಉಪನಾಯಕ ಯು.ಟಿ.ಖಾದರ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶಂಪೂರ್, ಮಾಜಿ ಸಚಿವರಾದ ಕೆ.ಆರ್.ರಮೇಶ್ ಕುಮಾರ್, ಎಚ್.ಕೆ.ಪಾಟೀಲ್ ಮಾತನಾಡಿದರು.
ಸಿದ್ದೇಶ್ವರ ಶ್ರೀಗಳ ಕುರಿತು ಮಾತನಾಡಿದ ಸಿಎಂ, ಸಿದ್ದೇಶ್ವರ ಶ್ರೀಗಳಿಗೆ ಸಂತಾಪ ಸೂಚಿಸುವ ಅಗತ್ಯವಿಲ್ಲ. ಯಾಕೆಂದರೆ ಅವರು ತಮ್ಮ ತತ್ವಾದರ್ಶಗಳ ಮೂಲಕ ಅಮರರಾಗಿದ್ದಾರೆ. ತ್ಯಾಗದ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟ ನಿಜವಾದ ಸಂತ. ಸಮಾಜದಲ್ಲಿ ಅಪ್ರಿಯವಾದ ಸತ್ಯವನ್ನು ಹೇಳುವುದು ಕಷ್ಟ. ಆದರೆ ಸಿದ್ದೇಶ್ವರ ಶ್ರೀಗಳು ಸತ್ಯವನ್ನು ಪ್ರಿಯವಾಗಿ ಮನದಟ್ಟು ಮಾಡುತ್ತಿದ್ದರು’ ಎಂದು ಅಭಿಪ್ರಾಯಪಟ್ಟರು.
ಪಕ್ಷಾತೀತ ಪ್ರಶಂಸೆ
ವಿಧಾನ ಪರಿಷತ್ತಿನಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ನುಡಿನಮನ ಸಲ್ಲಿಸಲಾಯಿತು. ಅಧಿವೇಶನದ ಆರಂಭದ ದಿನ ಅಗಲಿದ ಗಣ್ಯರು ಮತ್ತು ಸಾಧಕರಿಗೆ ಸದನದಲ್ಲಿ ಸಂತಾಪ ಸೂಚಿಸುವುದು ಸಂಪ್ರದಾಯ. ಆದರೆ ಸಿದ್ದೇಶ್ವರ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಬದಲಿಗೆ ನುಡಿನಮನ ಸಲ್ಲಿಸಿದ್ದು ಪಕ್ಷಾತೀತ ಪ್ರಶಂಸೆ ವ್ಯಕ್ತವಾಯಿತು. ಆಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸಭಾಪತಿ ಬಸವರಾಜ ಹೊರಟ್ಟಿಯವರು ಸಿದ್ದೇಶ್ವರ ಸ್ವಾಮೀಜಿಯವರಿಗೆ ನುಡಿನಮನ ಪ್ರಸ್ತಾವವನ್ನು ಸದನದ ಮುಂದೆ ಮಂಡಿಸಿದರು.
ಸಿದ್ದೇಶ್ವರ ಶ್ರೀಗಳು ಬದುಕು ಶ್ರೀಮಂತವಾಗಿರಬೇಕೆಂದು ಸದಾ ಹೇಳುತ್ತಿದ್ದರು. ಆದರೆ ಅದು ಲೌಕಿಕ ಶ್ರೀಮಂತಿಕೆಯಲ್ಲ. ಈ ತರದ ಸಂತರೊಬ್ಬರು ನಮ್ಮೊಂದಿಗೆ ಜೀವಿಸಿದ್ದರು ಎಂದು ಹೇಳಿದರೆ ಇನ್ನು ಹತ್ತು ಹದಿನೈದು ವರ್ಷದ ನಂತರ ಜನ ನಂಬುವುದು ಕಷ್ಟ. ನನಗೆ ಆಸ್ತಿಯೂ ಬೇಡ, ಅಸ್ತಿಯೂ ಬೇಡ ಎಂದು ಹೇಳಿದರು. ಹೀಗಾಗಿ ತಮ್ಮ ಸ್ಮಾರಕವನ್ನೂ ಕಟ್ಟುವುದು ಬೇಡ ಎಂದು ಅವರು ಸೂಚಿಸಿದ್ದರು ಎಂದು ಹೇಳಿದರು.
ಪರಿಷತ್
ವಿಧಾನ ಪರಿಷತ್ತಿನಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ನುಡಿನಮನ ಸಲ್ಲಿಸಲಾಯಿತು.
ಅಧಿವೇಶನದ ಆರಂಭ ದಿನ ಆಗಲಿಗ ಗಣ್ಯರು ಮತ್ತು ಸಾಧಕರಿಗೆ ಸದನದಲ್ಲಿ ಸಂತಾಪ ಸೂಚಿಸುವುದು ಸಂಪ್ರಾದಾಯ. ಆದರೆ, ಸಿದ್ದೇಶ್ವರ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಬದಲಿಗೆ ನುಡಿನಮನ ಸಲ್ಲಿಸಿದ್ದು ಪಕ್ಷಾತೀತ ಪ್ರಶಂಸೆ ವ್ಯಕ್ತವಾಯಿತು.
ಆಗಲಿದ ವಿವಿಧ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸಭಾಪತಿ ಬಸವರಾಜ ಹೊರಟ್ಟಿಯವರು ಸಿದ್ದೇಶ್ವರ ಸ್ವಾಮೀಜಿಯವರಿಗೆ ನುಡಿನಮನ ಪ್ರಸ್ತಾಪವನ್ನು ಸದನದ ಮುಂದೆ ಮಂಡಿಸಿದರು. ಸಿದ್ದೇಶ್ವರ ಸ್ವಾಮೀಜಿಯವರು ಅಂತಿಮ ಅಭಿವಾದನ ಪತ್ರದ ಆಪೇಕ್ಷೆಯಂತೆ ಹಾಗೂ ಶ್ರೀಗಳ ಅಸಂಖ್ಯಾತ ಭಕ್ತಾದಿಗಳ ಇಚ್ಛೆಯಂತೆ ಇಂತಹ ಮಹಾತ್ಮರಿಗೆ ಶ್ರದ್ಧಾಂಜಲಿ ಬೇಡ, ಕೇವಲ ನುಡಿ ನಮನ ಸಾಕು’ ಎಂದು ಭಾವಿಸಿ ಈ ಸದನದ ಮುಂದೆ ಪ್ರಸ್ತಾಪ ಮಂಡಿಸಿ ನುಡಿ ನಮನದ ಮೂಲಕ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ ಎಂದರು.
ನುಡಿನಮನ ಪ್ರಸ್ತಾಪ ಬೆಂಬಲಿಸಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಜೆಡಿಎಸ್ ನಾಯಕ ಭೋಜೇಗೌಡ, ಸದಸ್ಯರಾದ ತೇಜಸ್ವಿನಿ ರಮೇಶ್, ಹಣಮಂತ ನಿರಾಣಿ, ಸಲೀಂ ಅಹ್ಮದ್, ರುದ್ರೇಗೌಡ, ಅ. ದೇವೇಗೌಡ ಮತ್ತಿತರರು ಮಾತನಾಡಿದರು.
ಗಣ್ಯರಿಗೆ ಶ್ರದ್ಧಾಂಜಲಿ
ಇದಕ್ಕೂ ಮೊದಲು ಮಾಜಿ ಸಚಿವ ಡಾ. ಎಚ್.ಡಿ. ಲಮಾಣಿ, ಹಿರಿಯ ಸಾಹಿತಿ ಡಾ. ಎಚ್. ಚಂದ್ರಶೇಖರ್, ಲೇಖಕಿ ಸಾರಾ ಅಬೂಬಕ್ಕರ್, ಶಿಕ್ಷಣ ತಜ್ಞ ಪಾಂಡುರಂಗ ಶೆಟ್ಟಿ, ಹಿರಿಯ ಗಮಕಿ ಹಾರ್ಯಾಡಿ ಚಂದ್ರಶೇಖರ್ ಕೆದ್ಲಾಯ, ಭಾಷಾ ವಿಜ್ಞಾನಿ ಕೆ.ವಿ. ತಿರುಮಲೇಶ್, ಗಾಯಕಿ ವಾಣಿ ಜಯರಾಂ, ಚಿತ್ರ ಕಲಾವಿದ ಬಿ.ಕೆ.ಎಸ್ ವರ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.