ಕಣ ರಂಗೇರಿಸಿದ ದಿಢೀರ್ “ಸೇವೆಗಳು’: ಮತದಾರರ ಓಲೈಕೆಗೆ ಕ್ರೀಡೆ, ಮನೋರಂಜನೆ ಕಾರ್ಯಕ್ರಮ
ಹಲವು ನಾಯಕರಿಂದ ತೀರ್ಥ ಕ್ಷೇತ್ರ ದರ್ಶನ ವ್ಯವಸ್ಥೆ
Team Udayavani, Feb 11, 2023, 6:15 AM IST
ದಾವಣಗೆರೆ
ಕ್ರೀಡಾಕೂಟಗಳ ಭರಾಟೆ
ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ತಮ್ಮ ಜನ್ಮದಿನಾಚರಣೆ ಅಂಗವಾಗಿ ಡಿ.16ರಿಂದ 18ರ ವರೆಗೆ ಜಗಳೂರಿನಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಿದ್ದರು. ಶಾಸಕ ಎಸ್.ವಿ. ರಾಮಚಂದ್ರ ಮತ್ತು ಆರ್.ಎಲ್.ಶಿವಪ್ರಕಾಶ್ ಇಬ್ಬರೂ ಸಿದ್ದೇಶ್ವರ ಕಪ್ ಹೆಸರಲ್ಲಿ ಪಂದ್ಯಾವಳಿ ಆಯೋಜಿಸಿದ್ದು ವಿಶೇಷ. ಇಲ್ಲಿನ ಇನ್ನೊಬ್ಬ ಬಿಜೆಪಿ ಯುವ ಮುಖಂಡ ಜಿ.ಎಸ್.ಶ್ಯಾಂ ಸಹ ಕಬ್ಬಳ, ಮಾಯಕೊಂಡ ಮತ್ತಿತರರ ಕಡೆ ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿ ನಡೆಸುವ ಮೂಲಕ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ| ಸವಿತಾಬಾಯಿ ಮಲ್ಲೇಶ್ ನಾಯ್ಕ ಸಹ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮತದಾರರ ಮನ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ದಕ್ಷಿಣ ಭಾಗದಲ್ಲಿ ಮಿನಿ ಕ್ರಿಕೆಟ್ ಪಂದ್ಯಾವಳಿ, ಮತ್ತೋರ್ವ ಆಕಾಂಕ್ಷಿ ಮಾಜಿ ಮೇಯರ್ ಬಿ.ಜಿ.ಅಜಯ್‌ಕುಮಾರ್ ದೇಹದಾಡ್ಯì ಸ್ಪರ್ಧೆಗಳ ಮೂಲಕ ಮತದಾರರತ್ತ ಚಿತ್ತ ಹರಿಸಿದ್ದಾರೆ.
ಉಡುಪಿ
ಉತ್ಸವಗಳ ಸರಮಾಲೆ
ಜಿಲ್ಲೆಯ ರಜತೋತ್ಸವದ ಅಡಿಯಲ್ಲಿ ಮೂರು ದಿನಗಳ ಕಾಲ ನಡೆದ ಮಲ್ಪೆ ಬೀಚ್ ಉತ್ಸವ ನಡೆದಿತ್ತು. ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಪು ಬೀಚ್ ಉತ್ಸವವನ್ನು ನಡೆಸಲಾಯಿತು. ಕಾರ್ಕಳ ವ್ಯಾಪ್ತಿಯಲ್ಲಿ ನಾಲ್ಕೈದು ತಿಂಗಳ ಹಿಂದೆ ಕಾರ್ಕಳ ಉತ್ಸವವನ್ನು ವೈಭವದಿಂದ ನಡೆಸಲಾಗಿತ್ತು. ಇತ್ತೀಚಿಗೆ ಬೈಲೂರಿನ ಉಮಿಕ್ಕಳ್ ಗುಡ್ಡದ ಮೇಲೆ ಪರಶುರಾಮನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ 3 ದಿನಗಳ ಜನಜಾತ್ರೆ, ವಿಶೇಷ ಕಾರ್ಯಕ್ರಮ ನಡೆಸಲಾಗಿತ್ತು. ಈ ಎಲ್ಲ ಉತ್ಸವಗಳ ಜತೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ರೀಡಾಕೂಟಗಳು, ಸಣ್ಣಪುಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಸಕರ ಪ್ರೋತ್ಸಾಹ, ಬೆಂಬಲದೊಂದಿಗೆ ನಡೆಯುತ್ತಲೇ ಇದೆ. ಕಾರ್ಯಕ್ರಮಗಳು, ಉತ್ಸವ ಗಳಿಗೆ ಜನರು ಸೇರುತ್ತಿರುವುದು ಚುನಾವಣೆ ಮೇಲೂ ಇದು ಪ್ರಭಾವ ಬೀರಲಿದೆ. ಕಾಪು, ಬೈಂದೂರು ಹಾಗೂ ಕುಂದಾಪುರದಲ್ಲಿ ಅದ್ದೂರಿ ಉತ್ಸವಗಳು ನಡೆಯದಿದ್ದರೂ ಚುನಾವಣೆ ಹಿನ್ನೆಲೆಯಲ್ಲಿ ಕೆಲವೊಂದು ಕಾರ್ಯಕ್ರಮಗಳು ಕ್ರಮಬದ್ಧವಾಗಿ ನಡೆಯುತ್ತಿವೆ.
ಗದಗ
ಗದಗ ಹಾಗೂ ನರಗುಂದ ಕ್ಷೇತ್ರದಲ್ಲಿ ಕ್ರೀಡಾಕೂಟ ಆಯೋಜನೆಯ ರಂಗೇರುತ್ತಿದೆ. ಶಾಸಕ ಎಚ್.ಕೆ.ಪಾಟೀಲ ಅಭಿಮಾನಿ ಬಳಗವು ಕೆ.ಎಚ್.ಪಾಟೀಲ ಕ್ರಿಕೆಟ್, ಫುಟ್ಬಾಲ್ ಹಾಗೂ ವಾಲಿಬಾಲ್ ಲೀಗ್ ಏರ್ಪಡಿಸಿತ್ತು. ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಕೂಡ ತಮ್ಮ 64ನೇ ಹುಟ್ಟು ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಿದ್ದರು. ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಕ್ರಿಕೆಟ್, ಸಾಹಿತ್ಯ, ಸಂಗೀತ, ಕ್ರೀಡೆಗಳ ಹಬ್ಬ, ವಾಲಿಬಾಲ್, ಖೋಖೋ, ಕಬಡ್ಡಿ, ಕುಸ್ತಿ ಪಂದ್ಯಾವಳಿ ಆಯೋಜಿಸುತ್ತಿದ್ದಾರೆ. ಸಚಿವ ಸಿ.ಸಿ.ಪಾಟೀಲ ನೇತೃತ್ವದಲ್ಲಿ ಫೆ.11, 12ರಂದು ಲಕ್ಕುಂಡಿ ಉತ್ಸವ ನಡೆಯಲಿದೆ.
ತುಮಕೂರು
ಕಲ್ಪತರು ನಾಡಿನಲ್ಲಿ ಜನರಿಗೆ ರಂಜನೆ
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಮತದಾರರನ್ನು ಸೆಳೆಯಲು ಹಲವಾರು ತಂತ್ರಗಳನ್ನು ವಿವಿಧ ಪಕ್ಷಗಳು ಹಾಗೂ ನಾಯಕರು ಹೆಣೆಯುತ್ತಿದ್ದಾರೆ. ಹೆಚ್ಚು ಜನರನ್ನು ಸೇರಿಸಲು ಕಲೋತ್ಸವ ಹಾಗೂ ಕ್ರೀಡಾಕೂಟಗಳನ್ನು ಆಯೋಜಿಸಿ ಹೆಸರಾಂತ ಚಿತ್ರನಟರು, ಕಿರುತೆರೆ ನಟರನ್ನು ಕರೆಸಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದಾರೆ. ಕುಣಿಗಲ್ ಶಾಸಕ ಡಾ| ರಂಗನಾಥ್ ಕುಣಿಗಲ್ ಉತ್ಸವ ಮಾಡಿ ಕ್ಷೇತ್ರದ ಮತದಾರರ ಗಮನ ಸೆಳೆದರು, ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ| ಜಿ.ಪರಮೇಶ್ವರ್ ವೈಭವದ ಕನ್ನಡ ರಾಜ್ಯೋತ್ಸವ ಮಾಡಿ ಜನರನ್ನು ಆಕರ್ಷಿಸಿದರು, ತುಮಕೂರು ಗ್ರಾಮಾಂತರದಲ್ಲಿ ಶಾಸಕ ಡಿ.ಸಿ.ಗೌರಿಶಂಕರ್ ಮಹಿಳೆಯರಿಗೆ ಸೋದರನ ರೀತಿ ಬಾಗಿನ ಅರ್ಪಿಸಿ ಕಾರ್ಯಕ್ರಮಗಳನ್ನು ಮಾಡಿ ಗಮನ ಸೆಳೆದರೆ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮನೆ ಮನೆಗೆ ಕುಕ್ಕರ್ ಹಂಚಿ ಮತದಾರರನ್ನು ಸೆಳೆಯಲು ಈಗಲೇ ಯತ್ನ ನಡೆಸಿದ್ದಾರೆ. ತುಮಕೂರು ಶಾಸಕ ಜಿ.ಬಿ.ಜ್ಯೋತಿಗಣೇಶ್ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಉತ್ತೇಜನ ನೀಡಿ ಮತ ಸೆಳೆಯುವ ಕಾರ್ಯ ಮಾಡುತ್ತಿದ್ದಾರೆ.
ಮಂಡ್ಯ
ಪುನೀತೋತ್ಸವ
ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಕಳೆದ ನವೆಂಬರ್‌ನಲ್ಲಿ ಪುನೀತೋತ್ಸವ ಆಚರಣೆ ಮಾಡುವ ಮೂಲಕ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಮೂಡಿಸಿದರು. ಮೂರು ದಿನಗಳ ಕಾಲ ನಡೆದ ಪುನೀತೋತ್ಸವದಲ್ಲಿ ಮೇಲುಕೋಟೆ ಕ್ಷೇತ್ರದ ಇತಿಹಾಸದಲ್ಲಿ ದಾಖಲಾಗುವಂತೆ ಮಾಡಿದೆ. ಉತ್ಸವದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಕ್ಷೇತ್ರದ ಜನತೆ ಭಾಗವಹಿಸಿದ್ದರು. ಇದು ಶಾಸಕ ಸಿ.ಎಸ್.ಪುಟ್ಟರಾಜುಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತು. ಚುನಾವಣೆಯಲ್ಲಿ ಮತ್ತೂಮ್ಮೆ ಗೆಲ್ಲುವ ನಿರೀಕ್ಷೆ ಹುಟ್ಟಿಸಿದೆ. ಚುನಾವಣೆ ಘೋಷಣೆಯಾಗುವುದರೊಳಗೆ ರಾಷ್ಟ್ರಮಟ್ಟದ ಕ್ರೀಡಾಕೂಟ ಆಯೋಜಿಸುವ ಉದ್ದೇಶವಿದೆ ಎನ್ನಲಾಗುತ್ತಿದೆ.
ಮೇಳದಿಂದಲೇ ಸುದ್ದು ಮಾಡಿದ ಸಚಿವ: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರವು ಕಳೆದ ವರ್ಷ ಮೇಳಗಳಿಂದಲೇ ಸದ್ದು ಮಾಡಿತು. ರೇಷ್ಮೆ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಉದ್ಯೋಗ ಮೇಳ, ಆರೋಗ್ಯ ಮೇಳ ಆಯೋಜಿಸುವ ಮೂಲಕ ಕ್ಷೇತ್ರದಲ್ಲಿ ಸದ್ದು ಮಾಡಿದರು. ರಾಜಕೀಯವಾಗಿ ಇದು ಸಚಿವ ಕೆ.ಸಿ.ನಾರಾಯಣ ಗೌಡರಿಗೆ ಮೈಲೇಜ್ ತಂದುಕೊಟ್ಟಿತು. ಸಾಕಷ್ಟು ಯುವಕರಿಗೆ ಉದ್ಯೋಗ ಹಾಗೂ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿಸಿದರು.
ಕಲಬುರಗಿ
ಸಾಮೂಹಿಕ ವಿವಾಹ ಜೋರು
ಜೇವರ್ಗಿ ಶಾಸಕ ಡಾ|ಅಜಯ ಸಿಂಗ್ ಕಳೆದ ತಿಂಗಳು ತಮ್ಮ ತಂದೆ ಮಾಜಿ ಸಿಎಂ ಧರ್ಮಸಿಂಗ್ ಜನ್ಮದಿನಾಚರಣೆ ಅಂಗವಾಗಿ 108 ಜೋಡಿಗಳ ಉಚಿತ ಸಾಮೂಹಿಕ ವಿವಾಹ ನೆರವೇರಿಸಿದ್ದಾರೆ. ಜೇವರ್ಗಿಯಲ್ಲಿ ಮಾಜಿ ಶಾಸಕ ಬಿಜೆಪಿಯ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಬೃಹತ್ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಂಡಿದ್ದಾರೆ. ಕಳೆದ ತಿಂಗಳು ತಮ್ಮ ಜನ್ಮದಿನಕ್ಕೆ ರಸಮಂಜರಿ ಆಯೋಜಿಸಿ ಸಾವಿರಾರು ಜನರನ್ನು ಸೇರಿಸಿದ್ದಾರೆ. ಚಿಂಚೋಳಿ ಕ್ಷೇತ್ರದ ಶಾಸಕ ಡಾ|ಅವಿನಾಶ ಜಾಧವ್ ಚಿಂಚೋಳಿ ಪ್ರೀಮಿಯರ್ ಪಂದ್ಯ ನಡೆಸಿರುವುದು ವಿಶ್ವ ದಾಖಲೆಯಾಗಿದೆ. ಕ್ರಿಕೆಟ್‌ನಲ್ಲಿ 224ಕ್ಕೂ ಅಧಿಕ ತಂಡಗಳು, 75 ವಾಲಿಬಾಲ್ ತಂಡಗಳು ಪಾಲ್ಗೊಂಡಿದ್ದವು. ಕಲಬುರಗಿ ಉತ್ತರ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಚಂದ್ರಕಾಂತ ಪಾಟೀಲ್ ಈಗಾಗಲೇ ಕಾರ್ಯಕರ್ತರಿಗೆ ಅಂಜನಾದ್ರಿ ಬೆಟ್ಟ, ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯ ದರ್ಶನ ಮಾಡಿಸಿದ್ದಾರೆ. ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ರಾಜ್ಯಮಟ್ಟದ ಸಹಕಾರ ಸಪ್ತಾಹ ನಡೆಸಿದ್ದಾರೆ. ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದಾರೆ.ಅಫಜಲಪುರ ಶಾಸಕ ಕಾಂಗ್ರೆಸ್‌ನ ಎಂ.ವೈ.ಪಾಟೀಲ ತಮ್ಮ ಮೊಮ್ಮಗಳ ಮದುವೆ ಜತೆಗೆ ಕ್ಷೇತ್ರದ ಬಡವರ 108 ಉಚಿತ ಮದುವೆ ಮಹೋತ್ಸವ ನೆರವೇರಿಸಿಕೊಟ್ಟಿದ್ದಾರೆ.
ಬಳ್ಳಾರಿ
ಕ್ರೀಡೆ, ಸಾಂಸ್ಕೃತಿಕ ರಂಗು
ಬಳ್ಳಾರಿ ವಿಭಜನೆಯಾದ ಬಳಿಕ ಹಂಪಿ ಉತ್ಸವ ವಿಜಯನಗರ ಜಿಲ್ಲೆಗೆ ಸೀಮಿತವಾದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಪಟ್ಟು ಹಿಡಿದು ಬಳ್ಳಾರಿ ಉತ್ಸವ ಆಯೋಜಿಸಿದರು. ಎರಡು ದಿನಗಳ ಉತ್ಸವದಲ್ಲಿ ಸಿನಿ ಗಾಯಕರನ್ನು ಕರೆಸುವ ಮೂಲಕ ಬಳ್ಳಾರಿ ಜನರಿಗೆ ಭರ್ಜರಿ ಮನೋ ರಂಜನೆ ನೀಡಿದರು. ಹೂವಿನ ಹಡಗಲಿ ಎಸ್‌ಸಿ ಮೀಸಲು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎಚ್.ಹನುಮಂತಪ್ಪ, ಬುದ್ಧ, ಬಸವ, ಅಂಬೇಡ್ಕರ್ ಹೆಸರಲ್ಲಿ ಸ್ಟಂಪರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದರು. ಹಗರಿ ಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ, ಸಾರ್ಥಕ ನಮನ ಕಾರ್ಯಕ್ರಮ ಆಯೋಜಿಸಿ 5 ಸಾವಿರ ಮಹಿಳೆ ಯರಿಗೆ ಉಡಿ ತುಂಬಿದ್ದಾರೆ. ಕ್ರಿಕೆಟ್ ತಂಡಗಳಿಗೆ ಕಿಟ್‌ಗಳನ್ನು ವಿತರಿಸಿದ್ದಾರೆ. ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ರಾಮಸಾಗರದ ನಾರಾಯಣಪ್ಪ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದಾರೆ. ಸಿರುಗುಪ್ಪ ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಆಕಾಂಕ್ಷಿಗಳಾದ ಕಾಂಗ್ರೆಸ್‌ನ ಮುರಳಿಕೃಷ್ಣ, ಕೆಆರ್‌ಪಿಪಿಯ ಧರಪ್ಪ ನಾಯಕ ಸಹ ಬೆಂಬಲಿಗರ ಹೆಸರಲ್ಲಿ ಕಬಡ್ಡಿ ಸಹಿತ ಇನ್ನಿತರ ಪಂದ್ಯ ಆಯೋಜಿಸುವುದರ ಜತೆಗೆ ಬಯಲಾಟ, ಜಾತ್ರೆಗಳಿಗೆ ದೇಣಿಗೆಯನ್ನೂ ಸಹ ನೀಡಿ ಗಮನ ಸೆಳೆಯುತ್ತಿದ್ದಾರೆ.
ಶಿವಮೊಗ್ಗ
ಶುಭ ಕಾರ್ಯಗಳಿಗೆ ಗಣ್ಯರ ದಂಡು
ಗೃಹ ಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಕ್ಷೇತ್ರಕ್ಕೆ ಹೆಚ್ಚು ಸಮಯ ಕೊಡುತ್ತಿದ್ದಾರೆ. ಪ್ರತಿದಿನ ಜನತಾ ದರ್ಶನ, ಮದುವೆ, ಮೃತರ ಮನೆಗಳಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಶಾಸಕ ಕೆ.ಎಸ್.ಈಶ್ವರಪ್ಪ ಈಚೆಗೆ 60ಕ್ಕೂ ಹೆಚ್ಚು ಬಸ್‌ಗಳಲ್ಲಿ ಓಂ ಶಕ್ತಿ ಪ್ರವಾಸಕ್ಕೆ ಮಹಿಳೆಯರನ್ನು ಕಳುಹಿಸಿಕೊಟ್ಟರು. ಮುಷ್ಟಿ ಅಕ್ಕಿ ಅಭಿಯಾನದ ಮೂಲಕ ನಗರದ ಪ್ರತೀ ಮನೆ ಮನೆಯಲ್ಲೂ ಅಕ್ಕಿ ಸಂಗ್ರಹಿಸಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಕಳುಹಿಸಿಕೊಟ್ಟರು. ಈಗ ಮಾರಿ ಜಾತ್ರೆಗಳ ಸೀಸನ್ ಆಗಿದ್ದು ಶಾಸಕರು ಪ್ರತೀ ಜಾತ್ರೆ, ದೇವಸ್ಥಾನ ಉದ್ಘಾಟನೆ, ಶಂಕುಸ್ಥಾಪನೆಗಳಿಗೆ ತೆರಳಿ ದೇಣಿಗೆ ನೀಡುತ್ತಿದ್ದಾರೆ. ಮದುವೆ, ತಿಥಿ, ಶುಭ ಕಾರ್ಯಗಳಿಗೆ ತಪ್ಪದೇ ಹಾಜರಾಗುತ್ತಿದ್ದಾರೆ. ಸಾಗರ ಶಾಸಕ ಹರತಾಳು ಹಾಲಪ್ಪ ಸಾಗರ ಮಾರಿಕಾಂಬಾ ಜಾತ್ರೆಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಶಿವಮೊಗ್ಗ ಗ್ರಾ. ಶಾಸಕ ಕೆ.ಬಿ.ಅಶೋಕ್ ನಾಯ್ಕ ಬಂಜಾರ ಕನ್ವೆನ್ಶನ್ ಹಾಲ್ ಉದ್ಘಾಟನೆ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಶಕ್ತಿ ಪ್ರದರ್ಶನದ ವೇದಿಕೆಯಾಗಿ ಬಳಸುತ್ತಿದ್ದಾರೆ.
ಚಿಕ್ಕಬಳ್ಳಾಪುರ
ಅದ್ದೂರಿ ಚಿಕ್ಕಬಳ್ಳಾಪುರ ಉತ್ಸವ
ಚಿಕ್ಕಬಳ್ಳಾಪುರ ಜಿಲ್ಲೆಯೆಂದರೇ ಬರಪೀಡಿತ ಜಿಲ್ಲೆ ಎಂದು ಅಪಖ್ಯಾತಿಗೆ ಗುರಿಯಾಗಿದ್ದು ಆದರೆ ಕಳೆದ ಸಾಲಿನಲ್ಲಿ ಸುರಿದ ಮಳೆಯಿಂದಾಗಿ ಬಹುತೇಕ ಜಿಲ್ಲೆಯ ಕೆರೆಗಳು ಭರ್ತಿಯಾಗಿ ಕೋಡಿ ಹರಿದಿದೆ. ಈ ಹಿನ್ನೆಲೆಯಲ್ಲಿ ರೈತರು ಮತ್ತು ಜನಸಾಮಾನ್ಯರು ಸಮೃದ್ಧಿಯಿಂದ ಜೀವನ ನಡೆಸುವ ಉದ್ದೇಶದಿಂದ ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಚಿಕ್ಕಬಳ್ಳಾಪುರ ಉತ್ಸವ, ಊರ ಜಾತ್ರೆಯನ್ನು ಮಾಡುವ ಮೂಲಕ ಇಡೀ ರಾಜ್ಯದ ಮತ್ತು ರಾಷ್ಟ್ರದ ಗಮನ ಸೆಳೆಯುವಂತಹ ಕೆಲಸ ಮಾಡಿದರು. ಈ ಉತ್ಸವ ಎಂಟು ದಿನ ಗಳ ಕಾಲ ನಡೆಯಿತು. ಸಿಎಂ ಬೊಮ್ಮಾಯಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಆದಿ ಚುಂಚನಗಿರಿ ಶ್ರೀ ಡಾ| ನಿರ್ಮಲಾನಂದನಾಥ ಸ್ವಾಮೀಜಿ ಅವರು ಕಾರ್ಯ ಕ್ರಮ ಉದ್ಘಾಟಿಸಿದ್ದರು. ಸತತವಾಗಿ 8 ದಿನಗಳ ಕಾಲ ನಾಡಿನ ಮತ್ತು ದೇಶದ ಹೆಸರಾಂತ ನಟ-ನಟಿಯರನ್ನು, ಪ್ರಖ್ಯಾತ ಗಾಯಕರನ್ನು ವಿವಿಧ ಕ್ಷೇತ್ರದ ಕಲಾವಿದರನ್ನು ಆಮಂತ್ರಿಸಿದ್ದರು. ಈ ಮೂಲಕ ಸುಧಾಕರ್ ಅವರು ಕ್ಷೇತ್ರದ ಜನರೊಂದಿಗೆ ಮತ್ತಷ್ಟು ಸಂಪರ್ಕ ಸಾಧಿಸಲು ಸಹಕಾರಿಯಾಗಿದೆ ಎಂಬ ವಿಶ್ಲೇಷಣೆಗಳು ಸಹ ನಡೆಯುತ್ತಿವೆ.
ಚಿಕ್ಕಮಗಳೂರು
ಕಾಫಿ ನಾಡಿನಲ್ಲಿ ಉತ್ಸವದ ಗುಂಗು
ಕಾಫಿ ನಾಡಿನಲ್ಲೂ ಚುನಾವಣೆ ಗುಂಗು ಜೋರಾಗಿದೆ. ಚಿಕ್ಕಮಗಳೂರಿನಲ್ಲಿ ಅದ್ದೂರಿ ಯಾಗಿ ಜಿಲ್ಲಾ ಉತ್ಸವ ನಡೆ ಸ ಲಾ ಗಿದೆ. ಇದರ ಬೆನ್ನಲ್ಲೇ ಕೊಪ್ಪ ಉತ್ಸವ ವೈಭವದಿಂದ ನಡೆದಿದೆ. ತರೀಕೆರೆ ಮತ್ತು ಮೂಡಿಗೆರೆ ಉತ್ಸವಕ್ಕೆ ಸಿದ್ಧತೆ ನಡೆದಿದೆ. ಉತ್ಸವಗಳು ಜನರನ್ನು ಒಗ್ಗೂಡಿಸುವ ಕೆಲಸ ಮಾಡಲಿದ್ದು, ಇದರ ಲಾಭ ಪಡೆಯಲು ರಾಜಕಾರಣಿಗಳು ಮುಂದಾಗಿದ್ದಾರೆ. ಇದರಿಂದ ಒಂದಷ್ಟು ಮತಗಳಾಗಿ ಪರಿವರ್ತನೆಯಾಗುವ ನಿರೀಕ್ಷೆ ಹೊಂದಿದ್ದಾರೆ. ಕೋವಿಡ್ ಅನಂತರ ಎಲ್ಲ ಉತ್ಸವಗಳಿಗೂ ಬ್ರೇಕ್ ಹಾಕಲಾಗಿತ್ತು. ಇದರಿಂದ ಜನರು ಮಾನಸಿಕವಾಗಿ ಜರ್ಝರಿತರಾಗಿದ್ದರು. ಉತ್ಸವಗಳು ಜನರಿಗೆ ಮಾನಸಿಕ ಸ್ಥೈರ್ಯವನ್ನು ತುಂಬುವ ಕೆಲಸವನ್ನು ಮಾಡಿರುವುದು ಸುಳ್ಳಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.