ಬೈಂದೂರು: ಕಂಬಳ ಓಟಗಾರ ನೇಣು ಬಿಗಿದುಕೊಂಡು ಆತ್ಮಹತ್ಯೆ
Team Udayavani, Feb 11, 2023, 1:12 AM IST
ಬೈಂದೂರು: ಶಿರೂರು ಟೋಲ್ಗೇಟ್ ಬಳಿಯ ನಿವಾಸಿ, ಕಂಬಳ ಓಟಗಾರ ಸುರೇಶ ಕಾಡಿನತಾರು (37) ಅವರು ಫೆ. 9ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೋರ್ಟ್ ಪ್ರೋಸೆಸ್ ಹುದ್ದೆಯಲ್ಲಿದ್ದ ಅವರು ಪ್ರಸ್ತುತ ಪ್ರಕರಣವೊಂದಕ್ಕೆ ಸಂಬಂಧಿಸಿ ಅಮಾನತುಗೊಂಡಿದ್ದರು. ಇದರಿಂದ ಮನನೊಂದು ಪತ್ನಿಗೆ ವಾಯಿಸ್ ಮೆಸೇಜ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟೋಲ್ಗೇಟ್ ಹಿಂಬದಿಯ ಸರಕಾರಿ ಹಾಡಿಯಲ್ಲಿ ಸುರೇಶ್ ಅವರ ಮೃತದೇಹವು ಗೇರು ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಶ್ ಮೇಲೆ ಬೈಂದೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕ ರಣಕ್ಕೆ ಸಂಬಂಧಿಸಿ ಅವರನ್ನು ಕೋರ್ಟ್ ಪ್ರೋಸೆಸ್ ಹುದ್ದೆಯಿಂದ ಅಮಾನತು ಮಾಡಲಾಗಿತ್ತು. ಕಂಬಳ ಪೋಷಕರಾಗಿದ್ದ ಅವರು ಹಗ್ಗ ವಿಭಾಗದ ಓಟಗಾರರಾಗಿದ್ದಾರೆ. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಯಾರೂ ಕಾರಣರಲ್ಲ
“ಸಾರಿ ಸಾರಿ ಸಾರಿ, ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಮನೆಯವರು ನಿನಗೆ ರಗಳೆ ಮಾಡಬಹುದು. ಅವರಿಗೆಲ್ಲ ವಾಯಿಸ್ ಮೆಸೇಜ್ ತೋರಿಸು. ನನಗೆ ಕೆಲಸ ಆಗಲಿಲ್ಲ. ಅದೇ ತಲೆಬಿಸಿಯಲ್ಲಿ ತಪ್ಪು ಮಾಡುತ್ತಿದ್ದೇನೆ. ನನ್ನಿಂದ ಈ ತರಹ ಹೇಡಿ ಕಂಡ ಹಾಗೆ ಬದುಕಲು ಆಗುವುದಿಲ್ಲ, ನಾನು ಸಾಯುತ್ತಿದ್ದೇನೆ. ಗೇರು ಮರಕ್ಕೆ ನೇಣು ಹಾಕಿಕೊಳ್ಳುತ್ತಿದ್ದೇನೆ ಬೇರೆ ಎಲ್ಲೂ ಹುಡುಕುವುದು ಬೇಡ’ ಎಂದು ಪತ್ನಿಯ ಮೊಬೈಲ್ಗೆ ಸುರೇಶ್ ವಾಯಿಸ್ ಮೆಸೇಜ್ ಕಳುಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.