ಚುನಾವಣೆ ಹೊಸ್ತಿಲಲ್ಲಿ ಚಾಣಕ್ಯನ ಭೇಟಿ
ಗೆಲುವಿನ ರೂಪುರೇಷೆ ಚರ್ಚೆ ಸಂಭವ ; ಅಡಿಕೆ ಕೃಷಿಕರಿಗೆ ಸಿಹಿ ಸುದ್ದಿ ನಿರೀಕ್ಷೆ
Team Udayavani, Feb 11, 2023, 7:14 AM IST
ಪುತ್ತೂರು: ಬಿಜೆಪಿಯ ಚುನಾವಣ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ತೂರು ಭೇಟಿಯ ಹಿಂದೆ ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆಯ ಕಹಳೆ ಊದುವ ತಂತ್ರಗಾರಿಕೆ ಅಡಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೃಷಿ ವರ್ಗ, ಹಿಂದುತ್ವದ ಆಧಾರದಲ್ಲಿ ಮತ ಸೆಳೆಯಲು ಬಿಜೆಪಿಯ ಶಕ್ತಿ ಕೇಂದ್ರ ಎನಿಸಿರುವ ಕರಾವಳಿಯಲ್ಲೇ ತಂತ್ರಗಾರಿಕೆ ಹೆಣೆಯುವ ಲೆಕ್ಕಾಚಾರದಿಂದಲೇ ಈ ಭೇಟಿ ನಿಗದಿಪಡಿಸಲಾಗಿದೆ. ಸಹಕಾರ ಮತ್ತು ಅಡಿಕೆ ಬೆಳೆಗಾರರ ಸಮಾವೇಶ ರಾಜಕೀಯ ರಹಿತ ಎಂದು ಬಿಂಬಿಸಲಾಗಿದ್ದರೂ ಅಮಿತ್ ಶಾ ಭೇಟಿ ಬಿಜೆಪಿ ಸಂಘಟನೆಗೆ ಶಕ್ತಿ ತುಂಬುವ ಉದ್ದೇಶವೇ ಎಂದು ಹೇಳಲಾಗುತ್ತಿದೆ.
ಕರಾವಳಿಯ ಆರ್ಥಿಕ ಬೆನ್ನೆಲುಬು ಅಡಿಕೆ ಬೆಳೆಗಾರರು. ಇಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಡಿಕೆ ಕೃಷಿಕರಿದ್ದಾರೆ.
ಹೀಗಾಗಿ ಸುವರ್ಣ ಮಹೋತ್ಸವ ಬಿಜೆಪಿ ಪಾಲಿಗೆ ಕೃಷಿಕರನ್ನು ಸೆಳೆಯುವ ವೇದಿಕೆಯೂ ಆಗಬಹುದು. ಅಡಿಕೆ ಬೆಳೆಗಾರರ ಬಹು ಬೇಡಿಕೆ ಆಗಿರುವ ಅಡಿಕೆ ಕನಿಷ್ಠ ಆಮದು ಸುಂಕ ಏರಿಸಬೇಕೆಂಬ ಬೇಡಿಕೆಯನ್ನು ಸಮಾವೇಶದಲ್ಲಿ ಗೃಹ ಸಚಿವರು ಈಡೇರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಡಿಕೆ ಕೃಷಿಗೆ ಭವಿಷ್ಯ ಇಲ್ಲ ಎಂಬರ್ಥದಲ್ಲಿ ರಾಜ್ಯ ಗೃಹ ಸಚಿವರು ಆಡಿದ ಮಾತಿನಿಂದ ಉಂಟಾಗಿರುವ ಹಾನಿಯನ್ನು ಸರಿ ಪಡಿಸುವ ಅನಿವಾರ್ಯವೂ ಬಿಜೆಪಿಗೆ ಇದೆ. ಹಾಗಾಗಿ ಬೆಳೆ ಗಾರರ ಒಲವು ಗಳಿಸಲು ಹೊಸ ಯೋಜನೆಗಳನ್ನು ಪ್ರಕಟಿ ಸುವ ಸಾಧ್ಯತೆಯೂ ಇದೆ. ದಶಕಗಳಿಂದ ಅಡಿಕೆ ಬೆಳೆಗಾರರನ್ನು ಕಾಡು ತ್ತಿರುವ ಸಮಸ್ಯೆಗಳನ್ನು ಶಾ ಮುಂದಿರಿಸಿ ಬಿಜೆಪಿಯು ರೈತ ಪರ ವಾಗಿದೆ ಎನ್ನುವ ಸಂದೇಶ ರವಾನಿಸುವ ಪ್ರಯತ್ನವೂ ಇದೆ.
ಹಿಂದುತ್ವ ಡ್ಯಾಮೇಜ್ ಕಂಟ್ರೋಲ್
ಕರಾವಳಿಯಲ್ಲಿ ಬಿಜೆಪಿ ಗೆಲುವಿನ ಪ್ರಮುಖ ಅಸ್ತ್ರ ಹಿಂದುತ್ವ. ಇತ್ತೀಚೆಗಿನ ಕೆಲವು ವರ್ಷಗಳಿಂದ ಸಂಘ ಪರಿವಾರ ಹಾಗೂ ಬಿಜೆಪಿ ಮಧ್ಯೆ ಸಂಬಂಧ ಹಿಂದಿನಂತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಸಂಘ ಪರಿವಾರದ ಪ್ರಮುಖ ನಾಯಕರು ಬಿಜೆಪಿ ವಿರುದ್ಧ ಧ್ವನಿ ಎತ್ತುತ್ತಿರುವುದು, ಪ್ರವೀಣ್ ನೆಟ್ಟಾರು ಹತ್ಯೆ ವೇಳೆ ಬಿಜೆಪಿ ಜನಪ್ರತಿನಿಧಿಗಳ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರ ಬಹಿರಂಗ ಆಕ್ರೋಶ, ಸಂಘ ಪರಿವಾರದವರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಹೆಚ್ಚು ತ್ತಿರುವುದು- ಇವೆಲ್ಲ ಬೆಳವಣಿಗೆಗಳಿಗೆ ಪರಿಹಾರ ಹುಡುಕ ಬೇಕಿದೆ. ಕರಾವಳಿಯಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಕಳೆದು ಕೊಳ್ಳದಂತೆ ಪರಿಸ್ಥಿತಿ ನಿರ್ವಹಿಸುವಲ್ಲಿ ಅಮಿತ್ ಶಾ ಭೇಟಿ ಮಹತ್ವ ಪಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜಾತಿ ಲೆಕ್ಕಾಚಾರ
ಹಿಂದುತ್ವದ ಆಧಾರದಲ್ಲಿಯೇ ಬಿಜೆಪಿಯ ಚುನಾವಣೆ ಲೆಕ್ಕಾಚಾರ ನಡೆಯುತ್ತಿದ್ದ ಕರಾವಳಿಯಲ್ಲಿ ಈ ಬಾರಿ ಜಾತಿ ಅಸ್ತ್ರವೂ ಮುನ್ನೆಲೆಗೆ ಬರುತ್ತಿದೆ. ಪ್ರಬಲ ಸಮುದಾಯಗಳು ಬೇರೆಬೇರೆ ರೂಪದಲ್ಲಿ ಶಕ್ತಿ ಪ್ರದರ್ಶನ ನಡೆಸಿರುವುದೂ ಬಿಜೆಪಿ ಗಮನಿಸಿದೆ. ಜಾತಿ ಬಲ ಆಧಾರಿತವಾಗಿ ಅಭ್ಯರ್ಥಿಗಳ ಆಯ್ಕೆಗೆ ಒತ್ತಡ ಬಂದರೆ ಏನು ಮಾಡಬೇಕೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಮುಳುಗಿದೆ. ಇಂತಹ ಸಂದಿಗ್ಧ ಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅಮಿತ್ ಶಾ ಬಿಜೆಪಿ ನಾಯಕರಿಗೆ ಮಾರ್ಗದರ್ಶನ ನೀಡುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.