ಪೊಲೀಸ್‌ ಸೋಗಿನಲ್ಲಿ ಚಿನ್ನ ದೋಚಿದ್ದ ಆರೋಪಿಗಳ ಸೆರೆ 

Team Udayavani, Feb 11, 2023, 12:57 PM IST

ಪೊಲೀಸ್‌ ಸೋಗಿನಲ್ಲಿ ಚಿನ್ನ ದೋಚಿದ್ದ ಆರೋಪಿಗಳ ಸೆರೆ 

ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಚಿನ್ನದ ವ್ಯಾಪಾರಿಯನ್ನು ದರೋಡೆ ಮಾಡಿ 3 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕೆಟ್‌ ಹಾಗೂ 6 ಲಕ್ಷ ರೂ. ನಗದು ದೋಚಿದ್ದ ಹೋಮ್‌ಗಾರ್ಡ್‌ ಸೇರಿ ಮೂವರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಎಸ್‌ಆರ್‌ಟಿಸಿಯಲ್ಲಿ ಹೋಮ್‌ಗಾರ್ಡ್‌ ಗಿರಿನಗರದ ಕಸ್ತೂರಿ ಬಾ ಕಾಲೋನಿ ನಿವಾಸಿ ನಾಗರಾಜ (31), ಆಟೋ ಚಾಲಕರಾದ ಬಾಪೂಜಿನಗರದ ಮಂಜುನಾಥ್‌ (39), ಅರುಣ್‌ ಕುಮಾರ್‌ (33) ಬಂಧಿತರು. ಆರೋಪಿಗಳಿಂದ 6 ಲಕ್ಷ ರೂ. ನಗದು ಹಾಗೂ 1 ಚಿನ್ನದ ಗಟ್ಟಿ, ಕೃತ್ಯಕ್ಕೆ ಬಳಸಿದ್ದ ಕಾರು, ಬಜಾಜ್‌ ಆಟೋವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ದರೋಡೆಗೊಳಗಾದ ಕೊಯಮತ್ತೂರಿನ ನಿವಾಸಿ ಸುಂದರಂ ಚಿನ್ನದ ವ್ಯಾಪಾರಿ ಉಪೇಂದ್ರನಾಥ ಎಂಬುವವರ ಬಳಿ ಕಳೆದ 5 ವರ್ಷಗಳಿಂದ ಚಿನ್ನಾಭರಣಗಳನ್ನು ಕೊಟ್ಟು ಗಟ್ಟಿ ಚಿನ್ನದ ಬಿಸ್ಕೆಟ್‌ ತೆಗೆದುಕೊಂಡು ಬರುತ್ತಿದ್ದರು. ಫೆ.5ರಂದು ಉಪೇಂದ್ರನಾಥ್‌ 180 ಗ್ರಾಂ ಚಿನ್ನಾಭರಣ ಹಾಗೂ 6 ಲಕ್ಷ ರೂ. ನಗದನ್ನು ಸುಂದರಂ ಕೈಗೆ ಕೊಟ್ಟು ಇದನ್ನು ದಾವಣರೆಗೆ ಹಾಗೂ ಶಿವಮೊಗ್ಗದಲ್ಲಿರುವ ಚಿನ್ನದ ವ್ಯಾಪಾರಿಗಳಿಗೆ ಕೊಟ್ಟು ಗಟ್ಟಿ ಬಂಗಾರ ತೆಗೆದುಕೊಂಡು ಬರುವಂತೆ ಸೂಚಿಸಿದ್ದರು.

ಅದರಂತೆ ಫೆ.6ಕ್ಕೆ ಬೆಂಗಳೂರಿಗೆ ಬಂದು ಅಲ್ಲಿಂದ ದಾವಣಗೆರೆಗೆ ತೆರಳಿದ್ದರು. ಅಲ್ಲಿ ಚಿನ್ನದ ಬಿಸ್ಕತ್‌ ಖರೀದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶಿವಮೊಗ್ಗದ ಜ್ಯುವೆಲ್ಲರಿ ಶಾಪ್‌ಗೆ ತೆರಳಿ ಚಿನ್ನಾಭರಣವನ್ನು 3 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಮಾಡಿಸಿಕೊಂಡು, ಫೆ.7ರಂದು ಬೆಂಗಳೂರಿನ ಸೆಟಲೈಟ್‌ ಬಸ್‌ ನಿಲ್ದಾಣಕ್ಕೆ ಸುಂದರಂ ಬಂದಿದ್ದರು.

ಅಲ್ಲಿಂದ ತಮಿಳುನಾಡಿನ ಸೇಲಂಗೆ ಹೋಗುವ ಬಸ್‌ನಲ್ಲಿ ಕುಳಿತುಕೊಂಡಿದ್ದರು. ಆ ವೇಳೆ ಪೊಲೀಸ್‌ ಧಿರಿಸಿನಲ್ಲಿ ಸುಂದರಂ ಬಳಿ ಬಂದ ಆರೋಪಿಗಳು, ನಾವು ಪೊಲೀ ಸರು ನಿಮ್ಮ ಬ್ಯಾಗ್‌ ಅನ್ನು ಪರಿಶೀಲಿಸಬೇಕು ಎಂದು ಹೇಳಿ ಸುಂದರಂ ಅವರನ್ನು ಬಸ್‌ನಿಂದ ಕೆಳಗಿಳಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಸ್ವಲ್ಪ ದೂರ ಹೋಗುತ್ತಿದ್ದಂತೆ ಸುಂದರಂ ಅವರನ್ನು ಹೆದರಿಸಿ ಬ್ಯಾಗ್‌ನಲ್ಲಿದ್ದ 6 ಲಕ್ಷ ರೂ., ಬಟ್ಟೆಯೊಳಗೆ ಇಟ್ಟಿದ್ದ 3 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಬಿಸ್ಕೆಟ್‌ ಕಿತ್ತುಕೊಂಡು ಪರಾರಿಯಾಗಿದ್ದರು.

ಆರೋಪಿಗಳ ಸುಳಿವು ಕೊಟ್ಟ ಸಿಸಿ ಕ್ಯಾಮೆರಾ : ದರೋಡೆ ಕೃತ್ಯವನ್ನು ಯಾರಿಗಾದರೂ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಚಿನ್ನದ ವ್ಯಾಪಾರಿ ಸುಂದರಂ ಅವರಿಗೆ ಆರೋಪಿಗಳು ಬೆದರಿಸಿದ್ದರು. ಇದಾದ ಬಳಿಕ ಸುಂದರಂ ಅವರನ್ನು ಮಾರ್ಗಮಧ್ಯೆ ಕಾರಿನಿಂದ ಕೆಳಗಿಸಿ ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್‌ ಠಾಣೆಗೆ ಸುಂದರಂ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಸೆಟಲೈಟ್‌ ಬಸ್‌ ನಿಲ್ದಾಣದ ಸಮೀಪದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ತಾಂತ್ರಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಮೊದಲು ಹೋಮ್‌ಗಾರ್ಡ್‌ನನ್ನು ಬಲೆಗೆ ಬೀಳಿಸಿ, ಬಳಿಕ ಇಬ್ಬರು ಆಟೋ ಚಾಲಕರನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್

Jammu-Kashmir: ಇಬ್ಬರು ಉಗ್ರರ ಹತ್ಯೆ… ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ

Jammu-Kashmir: ಇಬ್ಬರು ಉಗ್ರರ ಹತ್ಯೆ… ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ

ಸ್ಥಾನಮಾನ ಸಿಗದಿದ್ದವರಿಂದ ಪಕ್ಷ ವಿರೋಧಿ ಹೇಳಿಕೆ: ಜಿಟಿಡಿ ವಿರುದ್ದ ಜೋಶಿ ಕಿಡಿ

Hubli: ಸ್ಥಾನಮಾನ ಸಿಗದಿದ್ದವರಿಂದ ಪಕ್ಷ ವಿರೋಧಿ ಹೇಳಿಕೆ: ಜಿಟಿಡಿ ವಿರುದ್ದ ಜೋಶಿ ಕಿಡಿ

Hiriyur: ಹೆದ್ದಾರಿಗೆ ಮಣ್ಣು ಕುಸಿದು  ಹತ್ತು ಕಿ.ಮೀ ಟ್ರಾಫಿಕ್‌ ಜಾಮ್

Hiriyur: ಹೆದ್ದಾರಿಗೆ ಮಣ್ಣು ಕುಸಿದು  ಹತ್ತು ಕಿ.ಮೀ ಟ್ರಾಫಿಕ್‌ ಜಾಮ್

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

Uttarakhand: 200 ಅಡಿ ಆಳದ ಕಂದಕಕ್ಕೆ ಬಿದ್ದ ಮದುವೆ ದಿಬ್ಬಣದ ಬಸ್, 30ಕ್ಕೂ ಹೆಚ್ಚು ಸಾ*ವು

Uttarakhand: 200 ಅಡಿ ಆಳದ ಕಂದಕಕ್ಕೆ ಬಿದ್ದ ಮದುವೆ ದಿಬ್ಬಣದ ಬಸ್, 30ಕ್ಕೂ ಹೆಚ್ಚು ಸಾ*ವು

Bhairadevi Review; ಅಘೋರಿ ಹಿಂದೆ ಘೋರ ಕಥನ

Bhairadevi Review; ಅಘೋರಿ ಹಿಂದೆ ಘೋರ ಕಥನ

Gayathri: ಟಾಲಿವುಡ್ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ ಹೃದಯಾಘಾತದಿಂದ ಮೃತ್ಯು

Gayathri: ಟಾಲಿವುಡ್ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ ಹೃದಯಾಘಾತದಿಂದ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-bng

Bengaluru: ಬಿಡಿಎಗೆ ವಂಚನೆ: 19 ಮಂದಿ ವಿರುದ್ಧ ಕೇಸ್‌

Bengalru-Bomb

Bomb Threat: ಬೆಂಗಳೂರು ನಗರದ ಪ್ರತಿಷ್ಠಿತ ಮೂರು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ!

Manipal Hospital has set a new Guinness World Record by performing 3,319 CPRs in just 24 hours!

24 ಗಂಟೆಗಳಲ್ಲಿ 3,319 ಸಿಪಿಆರ್; ಗಿನ್ನೆಸ್ ವಿಶ್ವ ದಾಖಲೆ ಬರೆದ ಮಣಿಪಾಲ್‌ ಆಸ್ಪತ್ರೆ

7-bng

Bengaluru ನಗರದಲ್ಲಿ ಸಂಭ್ರಮದ ನವರಾತ್ರಿ, ವಿಶೇಷ ಪೂಜೆ

6-darshan

Darshan Bail: ಇಂದು ದರ್ಶನ್‌ ಜಾಮೀನು ಅರ್ಜಿ ವಿಚಾರಣೆ: ಕುತೂಹಲ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Jammu-Kashmir: ಇಬ್ಬರು ಉಗ್ರರ ಹತ್ಯೆ… ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ

Jammu-Kashmir: ಇಬ್ಬರು ಉಗ್ರರ ಹತ್ಯೆ… ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ

Kinnigoli ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ

Kinnigoli ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ

Gopilola Movie Review

Gopilola Movie Review: ಹೆಣ್ಣು ಮಣ್ಣಿನ ಮಧ್ಯೆ ಗೋಪಿ ಆಟ

ಸ್ಥಾನಮಾನ ಸಿಗದಿದ್ದವರಿಂದ ಪಕ್ಷ ವಿರೋಧಿ ಹೇಳಿಕೆ: ಜಿಟಿಡಿ ವಿರುದ್ದ ಜೋಶಿ ಕಿಡಿ

Hubli: ಸ್ಥಾನಮಾನ ಸಿಗದಿದ್ದವರಿಂದ ಪಕ್ಷ ವಿರೋಧಿ ಹೇಳಿಕೆ: ಜಿಟಿಡಿ ವಿರುದ್ದ ಜೋಶಿ ಕಿಡಿ

Hiriyur: ಹೆದ್ದಾರಿಗೆ ಮಣ್ಣು ಕುಸಿದು  ಹತ್ತು ಕಿ.ಮೀ ಟ್ರಾಫಿಕ್‌ ಜಾಮ್

Hiriyur: ಹೆದ್ದಾರಿಗೆ ಮಣ್ಣು ಕುಸಿದು  ಹತ್ತು ಕಿ.ಮೀ ಟ್ರಾಫಿಕ್‌ ಜಾಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.