ಸುಳ್ಯ: ಪಯಸ್ವಿನಿ ನದಿಯಲ್ಲಿ ಮುಳುಗಿ ಪುತ್ತೂರಿನ ಇಬ್ಬರು ಯುವಕರು ಸಾವು

ಸ್ನೇಹಿತರೊಂದಿಗೆ ನದಿಗೆ ಈಜಲು ಬಂದಿದ್ದ ವೇಳೆ ನಡೆದ ದುರ್ಘ‌ಟನೆ

Team Udayavani, Feb 11, 2023, 10:37 PM IST

ಸುಳ್ಯ: ಪಯಸ್ವಿನಿ ನದಿಯಲ್ಲಿ ಮುಳುಗಿ ಪುತ್ತೂರಿನ ಇಬ್ಬರು ಯುವಕರು ಸಾವು

ಸುಳ್ಯ : ಈಜಲು ನದಿಗೆ ಇಳಿದ ವೇಳೆ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ದೊಡ್ಡೇರಿ ಸಮೀಪದ ಪಯಸ್ವಿನಿ ನದಿಯಲ್ಲಿ ಶನಿವಾರ ಸಂಭವಿಸಿದೆ.

ಪುತ್ತೂರು ತಾಲೂಕಿನ ಕೌಡಿಚ್ಚಾರು ಸಮೀಪದ ಅರಿಯಡ್ಕದ ದೇರ್ಲ ನಾರಾಯಣ ಪಾಟಾಳಿ ಅವರ ಪುತ್ರ ಜಿತೇಶ್‌ (19) ಮತ್ತು ಪಡುವನ್ನೂರು ಗ್ರಾಮದ ಅಂಬಟೆಮೂಲೆಯ ಕೃಷ್ಣ ನಾಯ್ಕರ ಪುತ್ರ ಪ್ರವೀಣ್‌ (19) ಮೃತ ಯುವಕರು.

ಪುತ್ತೂರಿನ ಕೌಡಿಚ್ಚಾರ್‌ಸುತ್ತಮುತ್ತಲ 6 ಮಂದಿ ಯುವಕರು ಜತೆಯಾಗಿ ಸುಳ್ಯದ ಪಯಸ್ವಿನಿ ನದಿಗೆ ಈಜಲು ಶನಿವಾರ ಬಂದಿದ್ದರು. ಯುವಕರಲ್ಲಿ ಒಬ್ಬ ನೀರಿಗಿಳಿದನು. ನೀರಿಗಿಳಿದ ಸ್ಥಳ ಪ್ರಪಾತವಾಗಿದ್ದರಿಂದ ಆತ ನೀರಿನಲ್ಲಿ ಮುಳುಗುತ್ತಿದ್ದಂತೆ ಆತನನ್ನು ರಕ್ಷಿಸಲು ಹೋದ ಇನ್ನೊರ್ವ ಸ್ನೇಹಿತನೂ ನೀರು ಪಾಲಾಗಿದ್ದಾನೆ.

ಸಂತೋಷ್‌ ಅಂಬಟೆಮೂಲೆ, ಸತ್ಯಾನಂದ ಚಂದುಕೂಡ್ಲು, ಯುವರಾಜ ಅಂಬಟೆಮೂಲೆ, ನಿತೀಶ್‌ ಬಳ್ಳಿ ಕಾನ, ಜಿತೇಶ್‌ ಮತ್ತು ಪ್ರವೀಣ್‌ ಜತೆಯಾಗಿ ಸುಳ್ಯಕ್ಕೆ ಬಂದಿದ್ದರು. ಸುಳ್ಯದ ಓಡಬಾಯಿ ಬಳಿಯ ತೂಗುಸೇತುವೆ ಸಮೀಪ ಕಾರನ್ನು ನಿಲ್ಲಿಸಿ ಸೇತುವೆಯಲ್ಲಿ ನಡೆದು ದೊಡ್ಡೇರಿಯ ಸಂಬಂಧಿಕರ ಮನೆಗೆ ಹೋಗಿ ಬಂದು ಬಳಿಕ ಪಯಸ್ವಿನಿ ನದಿಗೆ ಇಳಿದಿದ್ದರು. ಈ ವೇಳೆ ದುರ್ಘ‌ಟನೆ ಸಂಭವಿಸಿದೆ. ಸ್ಥಳೀಯ ಈಜುಗಾರ ಯುವಕರು ಕಾರ್ಯಾಚರಣೆ ನಡೆಸಿ ನೀರಲ್ಲಿ ಮುಳುಗಿದ್ದ ಯುವಕರ ಶವವನ್ನು ಮೇಲೆತ್ತಿದ್ದಾರೆ.

ಮೃತ ಯುವಕರು ಹುಲ್ಲು ತೆಗೆಯುವ ಕೆಲಸ ಮಾಡುತ್ತಿದ್ದರು. ಶನಿವಾರ ಪುತ್ತೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರ ಕಾರ್ಯಕ್ರಮ ಇದ್ದ ಕಾರಣ ಕೆಲಸಕ್ಕೆ ರಜೆ ಮಾಡಿ ಸುತ್ತಾಡಲು ಹೊರಟಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಉಳ್ಳಾಲದಲ್ಲಿ ಬೆಂಕಿ ಅವಘಡ: ಸುಟ್ಟು ಕರಕಲಾದ ಫಾಸ್ಟ್‌ ಫುಡ್‌ ಅಂಗಡಿ

ಟಾಪ್ ನ್ಯೂಸ್

Summer

Weather Change: ಹವಾಮಾನ ತೀವ್ರ ಬದಲಾವಣೆ: ಕೆಮ್ಮು, ಶೀತ, ಜ್ವರ ಆತಂಕ

Isaac Newton: ಇನ್ನು 35 ವರ್ಷಗಳ ಬಳಿಕವಿಶ್ವ ಅಂತ್ಯ- ನ್ಯೂಟನ್‌ ಭವಿಷ್ಯ

Isaac Newton: ಇನ್ನು 35 ವರ್ಷಗಳ ಬಳಿಕವಿಶ್ವ ಅಂತ್ಯ- ನ್ಯೂಟನ್‌ ಭವಿಷ್ಯ

BJP-0Delhi

BJP is Set: ಇಂದು ದಿಲ್ಲಿ ಸಿಎಂ ಆಯ್ಕೆ ಸಾಧ್ಯತೆ: ನಾಳೆಯೇ ಪ್ರಮಾಣ ಸ್ವೀಕಾರ ಸಂಭವ

1-aaa

RTC-Aadhaar ಪ್ರತೀ ಜೋಡಣೆಗೆ ವಿಎಗಳಿಗೆ 1 ರೂ.!

Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ

Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ

Rice-Distri

Padubidri: ಕೆವೈಸಿ ಸಮಸ್ಯೆಯಿಂದ ಪಡಿತರಕ್ಕೆ ಅಡಚಣೆ: ಸ್ಪಂದಿಸಿದ ಆಹಾರ ಇಲಾಖೆ

highcourt

145 ವರ್ಷಗಳ ಆಸ್ತಿ ವ್ಯಾಜ್ಯ ರಾಜಿ ಸಂಧಾನದಲ್ಲಿ ಇತ್ಯರ್ಥ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Summer

Weather Change: ಹವಾಮಾನ ತೀವ್ರ ಬದಲಾವಣೆ: ಕೆಮ್ಮು, ಶೀತ, ಜ್ವರ ಆತಂಕ

Isaac Newton: ಇನ್ನು 35 ವರ್ಷಗಳ ಬಳಿಕವಿಶ್ವ ಅಂತ್ಯ- ನ್ಯೂಟನ್‌ ಭವಿಷ್ಯ

Isaac Newton: ಇನ್ನು 35 ವರ್ಷಗಳ ಬಳಿಕವಿಶ್ವ ಅಂತ್ಯ- ನ್ಯೂಟನ್‌ ಭವಿಷ್ಯ

BJP-0Delhi

BJP is Set: ಇಂದು ದಿಲ್ಲಿ ಸಿಎಂ ಆಯ್ಕೆ ಸಾಧ್ಯತೆ: ನಾಳೆಯೇ ಪ್ರಮಾಣ ಸ್ವೀಕಾರ ಸಂಭವ

1-aaa

RTC-Aadhaar ಪ್ರತೀ ಜೋಡಣೆಗೆ ವಿಎಗಳಿಗೆ 1 ರೂ.!

20

B.Y.Vijayendra: ನನಗೆ ನನ್ನ ತಂದೆಯೇ ರಾಜಕೀಯ ಗುರು; ಬಿ.ವೈ.ವಿಜಯೇಂದ್ರ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.