ಟಿಪ್ಪುವನ್ನು ನಂಬುವ ಕಾಂಗ್ರೆಸ್‌, ಜೆಡಿಎಸ್‌ ಬೇಕೇ? ಅಮಿತ್‌ ಶಾ


Team Udayavani, Feb 12, 2023, 12:25 AM IST

ಟಿಪ್ಪುವನ್ನು ನಂಬುವ ಕಾಂಗ್ರೆಸ್‌, ಜೆಡಿಎಸ್‌ ಬೇಕೇ? ಅಮಿತ್‌ ಶಾ

ಮಂಗಳೂರು / ಪುತ್ತೂರು: ಬಿಜೆಪಿ ಸರಕಾರವನ್ನು ಪೂರ್ಣ ಬಹುಮತದಿಂದ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಟಿಪ್ಪುವನ್ನು ಬೆಂಬಲಿಸುವ ಕಾಂಗ್ರೆಸ್‌ ಬೇಕೋ ಅಥವಾ ವೀರವನಿತೆ ರಾಣಿ ಅಬ್ಬಕ್ಕನನ್ನು ಬೆಂಬಲಿಸುವ ಬಿಜೆಪಿ ಬೇಕೋ ಎಂದು ಯೋಚಿಸಿ ಎಂದು ಜನರಿಗೆ ಹೇಳಿದ್ದಾರೆ.

ತೆಂಕಿಲದ ವಿವೇಕಾನಂದ ಶಾಲೆಯ ಮೈದಾನದಲ್ಲಿ ಶನಿ ವಾರ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಕೃಷಿಕರು, ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತ ನಾಡಿದ ಅವರು, ಈ ಸಮಾವೇಶವು ಬಿಜೆಪಿ ಪಾಲಿಗೆ ಮುಂದಿನ ಚುನಾ ವಣೆಯ ತಯಾರಿಗೆ ದಿಕ್ಸೂಚಿ ಎನ್ನುವ ವಿಶ್ಲೇಷಣೆಯನ್ನು ಶಾ ಅವರ ಭಾಷಣ ಪುಷ್ಟೀಕರಿಸಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕೈಗಳನ್ನು ಬಲಪಡಿಸಿ ಎನ್ನುವ ಮೂಲಕ ಶಾ, ಕರಾವಳಿಯಲ್ಲಿ ಚುನಾ ವಣೆಗೆ ಸನ್ನದ್ಧ ರಾಗಿ ಎನ್ನುವ ನೇರ ಕರೆ ನೀಡಿದರು.

ಆರಂಭದಲ್ಲೇ ಕಾರ್ಯಕರ್ತರನ್ನು ಹುರಿದುಂಬಿಸಿದ ಶಾ, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರಕಾರ ವನ್ನು ಅಧಿಕಾ ರಕ್ಕೆ ತರಲು ಸಂಕಲ್ಪ ತೊಡಿ ಎಂದರು.

ಟಿಪ್ಪುವನ್ನು ನಂಬುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬೇಕೇ ಅಥವಾ ರಾಣಿ ಅಬ್ಬಕ್ಕಳನ್ನು ನಂಬುವ ಬಿಜೆಪಿ ಬೇಕೇ – ಆಯ್ಕೆ ನಿಮ್ಮದು. ಗಾಂಧಿ ಪರಿವಾರಕ್ಕೆ ಕರ್ನಾಟಕವನ್ನು ಎಟಿಎಂ ಮಾಡಿಕೊಟ್ಟ ಕಾಂಗ್ರೆಸ್‌ ಬೇಕೇ? ಎಂದು ಕೇಳಿದರಲ್ಲದೇ, ಅಭಿವೃದ್ಧಿ, ಸುಧಾರಣೆ ತರಲು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಗಳಿಗೆ ಎಂದೆಂದಿಗೂ ಸಾಧ್ಯ ವಿಲ್ಲ ಎಂದು ವಾಗ್ಧಾಳಿ ನಡೆಸಿದರು.

ಕಾಂಗೈ, ಜೆಡಿಎಸ್‌ಗೆ ಚಾಟಿ
ಕಾಂಗ್ರೆಸ್‌ ಸರಕಾರ ಇದ್ದಾಗ 1,700 ಪಿಎಫ್‌ಐ ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದರೆ ಮೋದಿ ಸರಕಾರ ಪಿಎಫ್‌ಐಯನ್ನು ನಿಷೇಧಿಸಿ ಅದನ್ನು ಶಾಶ್ವತವಾಗಿ ಬಂದ್‌ ಮಾಡಿದೆ. ಕರ್ನಾಟಕವನ್ನು ಸುರಕ್ಷಿತಗೊಳಿಸುವುದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಕರ್ನಾಟಕದ ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯ. ಜೆಡಿಎಸ್‌ ಗೆ ಮತ ಹಾಕಿದರೆ ಕಾಂಗ್ರೆಸ್‌ಗೆ ಮತ ಹಾಕಿ ದಂತೆ. ಬಿಜೆಪಿಗೆ ಮತ ಎಂದರೆ ನವ ಕರ್ನಾಟಕಕ್ಕೆ ಮತ ಎಂದರು.

ಬಿಜೆಪಿಯು ದೇಶದಲ್ಲಿ ಉಗ್ರವಾದ, ನಕ್ಸಲ್‌ವಾದವನ್ನು ಮಟ್ಟಹಾಕಿದೆ. ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಮಾಡಿದಾಗ ಕಾಂಗ್ರೆಸ್‌ ವಿರೋ ಧಿಸಿತ್ತು. ಕಾಶ್ಮೀರದಲ್ಲಿ ರಕ್ತದ ಹೊಳೆ ಹರಿಯಬಹುದು ಎಂದಿತ್ತು. ಆದರೆ ಈಗ ಅಧಿಕಾರದಲ್ಲಿ ಇರುವುದು ಮೋದಿ ಸರಕಾರ. ರಕ್ತದ ಹೊಳೆ ಹರಿಸುವುದು ಬಿಡಿ, ಯಾರ ಕೂದ ಲನ್ನೂ ಕೊಂಕಿಸಲಾಗದು ಎಂದರು.

ಡಬಲ್‌ ಎಂಜಿನ್‌ ನಿಂದ ಪ್ರಗತಿ
ದಕ್ಷಿಣ ಕನ್ನಡದಲ್ಲಿ ಹೈಡ್ರೋಜನ್‌ ಸ್ಥಾವರ ಬರಲಿದೆ, 104 ಎಕರೆಯಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಬರುತ್ತಿದೆ, ಕ್ಯಾಂಪ್ಕೊ ಇನ್ನಷ್ಟು ಸುಧಾರಣೆ ಕಾಣಲಿದೆ. ಪ್ರಧಾನಮಂತ್ರಿ ಮತ್ಸé ಸಂಪದ ಯೋಜನೆಯ ಮೂಲಕ ಆಳ ಸಮುದ್ರ ಮೀನುಗಾರಿಕೆಗೆ ನೆರವು, ಮಂಗಳೂರು- ಬೆಂಗ ಳೂರು ಸ್ಟಾರ್ಟಪ್‌ ಹಬ್‌ ಸ್ಥಾಪನೆ ಯಾಗಲಿದೆ. ರಾಜ್ಯ ಸರಕಾರ ಶ್ರೀ ನಾರಾಯಣಗುರು ಹಾಸ್ಟೆಲ್‌ ಸ್ಥಾಪಿಸಲಿದೆ. 34,678 ಬುಡಕಟ್ಟು ಜನರಿಗೆ ಬೊಮ್ಮಾಯಿ ಸರಕಾರ ಭೂಮಿ ನೀಡಿದೆ. ಶಿರಾಡಿಯಲ್ಲಿ ಸುರಂಗ ಮಾರ್ಗ ನಿರ್ಮಾಣದ ಮೂಲಕ ಕರಾವಳಿ ಮತ್ತಷ್ಟು ಅಭಿವೃದ್ಧಿ ಆಗಲಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಎಂಎಸ್‌ಪಿ ಯೋಜನೆಯ ಮೂಲಕ ಕುಚ್ಚಲಕ್ಕಿ ಖರೀದಿಸಿ ರೈತರ ಪರವಾಗಿ ನಿಂತಿದೆ. ಪ್ರಧಾನಿ ಮೋದಿಯವರು ನವಮಂಗಳೂರು ಬಂದರು ಅಭಿ ವೃದ್ಧಿಯ ಐದು ಯೋಜನೆಗಳಿಗೆ, ಎಂಆರ್‌ಪಿಎಲ್‌ ವಿಸ್ತರಣೆ ಯೋಜ ನೆಗೆ ಚಾಲನೆ ಕೊಟ್ಟಿದ್ದಾರೆ ಎಂದರು.

ಮೋದಿ ಹೆಸರು ಪ್ರಸ್ತಾವ
ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಪ್ರಸ್ತಾವಿಸುತ್ತ ಸಭಿಕರಲ್ಲಿ ಶಾ ಉತ್ಸಾಹ ತುಂಬಿದರು.ದೇಶ ಬಲಿಷ್ಠವಾಗಿರಲು ಮೋದಿ ಅನಿ ವಾರ್ಯ ಎಂದರು. ರಾಜ್ಯದ ಲ್ಲಿಯೂ ಮೋದಿ ಅವರ ಕೈ ಬಲ ಪಡಿಸಲು ಕೋರಿದರು. ಕೃಷಿ ಕ್ಷೇತ್ರಕ್ಕೆ ಅವರ ಕೊಡುಗೆಗಳ ಬಗ್ಗೆ ಪ್ರಸ್ತಾವಿಸಿದರು.

ಮೋದಿಗೆ ಕೇಳಲಿ !
ಭಾಷಣದ ವೇಳೆ ಎರಡೂ ಕೈ ಎತ್ತಿ ಭಾರತ್‌ ಮಾತಾ ಕಿ ಜೈ ಘೋಷಣೆ ಮೊಳಗಿಸುವಂತೆ ಶಾ ಕರೆ ನೀಡಿದರು. ಈ ವೇಳೆ ಕಾರ್ಯ ಕರ್ತರು ಧ್ವನಿ ಗೂಡಿಸಿದರು. ಪುತ್ತೂರಿ ನಿಂದ ಮೊಳ ಗುವ ಧ್ವನಿ ತ್ರಿಪುರಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯ ವರಿಗೆ ಕೇಳಿಸ ಬೇಕು ಎನ್ನುತ್ತಾ ಉತ್ತೇಜಿಸಿ ಮತ್ತೂಮ್ಮೆ ಜೈಕಾರ ಹಾಕಿಸಿದರು.

“ಪೂರ್ಣ ಬಹುಮತ ನೀಡಿ’
ಬಿಜೆಪಿಗೆ ಈ ಬಾರಿಯ ಚುನಾವಣೆ ಯಲ್ಲಿ ಗೆಲುವು ಅಷ್ಟು ಸಲೀಸಲ್ಲ ಅನ್ನುವ ವರದಿ ಪಕ್ಷದ ರಾಷ್ಟ್ರೀಯ ನಾಯಕರ ಗಮನಕ್ಕೂ ಬಂದಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ನೀಡಬೇಕು ಎನ್ನುವುದನ್ನು ಸಮಾವೇಶದಲ್ಲಿ ಬಹಿರಂಗವಾಗಿ ನಿವೇದಿಸಿಕೊಳ್ಳುವ ಮೂಲಕ ಅಮಿತ್‌ ಶಾ ಚುನಾವಣೆಗೆ ಸಿದ್ಧರಾಗಿ ಎನ್ನುವ ಕಹಳೆ ಮೊಳಗಿಸಿದರು.

ಶಾ ಸಮಾವೇಶ ವಿಶೇಷ
ಪುತ್ತೂರು: ಗೃಹ ಸಚಿವರಾದ ಬಳಿಕ ಮೊದಲ ಬಾರಿಗೆ ಪುತ್ತೂರಿಗೆ ಭೇಟಿ ನೀಡಿ ಕ್ಯಾಂಪ್ಕೋ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡ ಅಮಿತ್‌ ಶಾ ಅವರ ಕಾರ್ಯಕ್ರಮದ ಮುಖ್ಯಾಂಶಗಳು.
- ದಾಹ ನೀಗಲು ಬೆಲ್ಲ, ನೀರು
ರಸ್ತೆಯ ಇಕ್ಕೆಲಗಳಲ್ಲಿ ನಿರ್ಮಿಸಲಾದ ರಕ್ಷಣ ತಡೆಬೇಲಿಯ ಒಳಭಾಗದಿಂದ ಪಾದಚಾರಿಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಾರ್ಕಿಂಗ್‌ ಸ್ಥಳದಿಂದ ಬಿರು ಬಿಸಿಲಿಗೆ ಕಿ.ಮೀ. ದೂರದ ತನಕ ನಡೆದುಕೊಂಡು ಬಂದ ಜನರ ದಾಹ ನೀಗಿಸುವ ನಿಟ್ಟಿನಲ್ಲಿ ರಸ್ತೆ ಬದಿಯಲ್ಲಿ ಬೆಲ್ಲ, ನೀರು ನೀಡಲಾಯಿತು. ಮಜ್ಜಿಗೆಯ ಪ್ಯಾಕೇಟ್‌, ಕ್ಯಾಂಪ್ಕೋ ಚಾಕೋಲೆಟ್‌, ನೀರು ನೀಡಲಾಯಿತು.
 ಬಿಗಿ ತಪಾಸಣೆ
ವಿಐಪಿ ಹಾಗೂ ಜನಸಾಮಾನ್ಯರಿಗೆ ಪ್ರತ್ಯೇಕ ಪ್ರವೇಶ ದ್ವಾರ ತೆರೆಯಲಾಗಿತ್ತು. ಎರಡು ಕಡೆಗಳಲ್ಲಿ ಲೋಹ ಶೋಧಕ ಯಂತ್ರಗಳಿಂದ ತಪಾಸಣೆ ನಡೆಸಿದ ಬಳಿಕವಷ್ಟೇ ಸಭಾಂಗಣಕ್ಕೆ ತೆರಳಲು ಅವಕಾಶ ನೀಡಲಾಯಿತು. ವಿವೇಕಾನಂದ ವಿದ್ಯಾಸಂಸ್ಥೆಯ ರೋವರ್‌ ರೇಂಜರ್, ಎನ್ನೆಸೆಸ್‌ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸಿದರು.

 ತುಳು, ಕನ್ನಡ, ಮಲಯಾಳದಲ್ಲಿ ಮಾತು!
ಶಾ ಅವರ ಆಗಮನಕ್ಕಿಂತ ಮೊದಲು ಕ್ಯಾಂಪ್ಕೋ ನಿರ್ದೇಶಕರು ತುಳು, ಕನ್ನಡ, ಮಲಯಾಳ ಭಾಷೆಗಳಲ್ಲಿ ಕ್ಯಾಂಪ್ಕೋ ಸಾಧನೆಯ ಬಗ್ಗೆ ಭಾಷಣ ಮಾಡಿದ್ದು ಗಮನ ಸೆಳೆಯಿತು.

 ಯಡಿಯೂರಪ್ಪ , ಪೂಂಜ ಪರ ಜೈಕಾರ
ಅಮಿತ್‌ ಶಾ ವೇದಿಕೆ ಪ್ರವೇಶಿಸುತ್ತಿದ್ದಂತೆ ಕಾರ್ಯಕರ್ತರ ಜೈಕಾರ ಮುಗಿಲು ಮುಟ್ಟಿತ್ತು. ಅತಿಥಿಗಳು ಆಸೀನರಾದ ಕೆಲವು ನಿಮಿಷಗಳ ಬಳಿಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸಿದರು. ಆಗಲೂ ಕಾರ್ಯಕರ್ತರಿಂದ ಭಾರೀ ಜೈಕಾರ ಮೊಳಗಿತು. ಯಡಿಯೂರಪ್ಪ ಭಾಷಣದ ಅವಧಿಯಲ್ಲೂ ಕಾರ್ಯಕರ್ತರು ಅವರ ಪರ ಘೋಷಣೆ ಮೊಳಗಿಸಿದರು. ಸ್ವಾಗತ ಭಾಷಣದ ಅನಂತರ ಅತಿಥಿಗಳಿಗೆ ಗೌರವಾರ್ಪಣೆ ವೇಳೆ ಹರೀಶ್‌ ಪೂಂಜ ಅವರ ಹೆಸರು ಉಲ್ಲೇಖೀಸುತ್ತಿದ್ದಂತೆ ಮಗದೊಮ್ಮೆ ಕಾರ್ಯಕರ್ತರಿಂದ ಜೈಕಾರ ಮೇರೆ ಮೀರಿತ್ತು.

 ರಾರಾಜಿಸಿದ ಬಿಜೆಪಿ ಚಿಹ್ನೆಯಳ್ಳ ಟೋಪಿ!
ಕ್ಯಾಂಪ್ಕೋ ಸುವರ್ಣ ಮಹೋತ್ಸವದ ಸಮಾವೇಶವಾಗಿದ್ದು ಪಕ್ಷದ ಧ್ವಜ, ಬಾವುಟಗಳು ಇರುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಇಡೀ ಸಭಾಂಗಣದಲ್ಲಿ ಬಿಜೆಪಿ ಪಕ್ಷದ ಚಿಹ್ನೆಯುಳ್ಳ ಟೋಪಿ, ಕೇಸರಿ ಶಾಲು ಧರಿಸಿಯೇ ಕಾರ್ಯಕರ್ತರು ಹಾಜರಾಗಿದ್ದರು.

40 ನಿಮಿಷ ತಡ
ಕಣ್ಣೂರಿನಿಂದ ಹನುಮಗಿರಿಗೆ ಅಪರಾಹ್ನ 2.30ಕ್ಕೆ ಆಗಮಿಸಬೇಕಿದ್ದ ಅಮಿತ್‌ ಶಾ 40 ನಿಮಿಷ ತಡವಾಗಿ 3.08ಕ್ಕೆ ಆಗಮಿಸಿದರು. ಆದರೆ ತೆಂಕಿಲ ಸಮಾವೇಶದಲ್ಲಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಕ್ಯಾಂಪ್ಕೋ ಅಧ್ಯಕ್ಷರು ಕಡಿಮೆ ಸಮಯದಲ್ಲಿ ಮಾತು ಮುಗಿಸುವ ಮೂಲಕ ವಿಳಂಬವನ್ನು ಸರಿದೂಗಿಸುವ ಪ್ರಯತ್ನ ಮಾಡಿದರು. ಹೀಗಾಗಿ ಅಮಿತ್‌ ಶಾ ನಿರ್ಗಮನ ಪೂರ್ವನಿಗದಿತ ಸಮಯಕ್ಕಿಂತ ಕೇವಲ 10 ನಿಮಿಷ ಮಾತ್ರ ತಡವಾಗಿತ್ತು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.