ಆಹಾರ ತ್ಯಾಜ್ಯ ಸಂಸ್ಕರಣೆಗೆ ಪ್ರತ್ಯೇಕ ಘಟಕ
Team Udayavani, Feb 12, 2023, 10:52 AM IST
ಬೆಂಗಳೂರು: ನಗರದಲ್ಲಿ ಎಲ್ಲ ಬಗೆಯ ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡುತ್ತಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ, ಇದೀಗ ಆಹಾರ ತ್ಯಾಜ್ಯ ಸಂಸ್ಕರಣೆಗಾಗಿಯೇ ಪ್ರತ್ಯೇಕ ಘಟಕ ಸ್ಥಾಪಿಸುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ 4,500ರಿಂದ 5 ಸಾವಿರ ಟನ್‌ವರೆಗೆ ಮಿಶ್ರ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅದರಲ್ಲಿ 3,500 ಟನ್‌ಗೂ ಹೆಚ್ಚಿನ ತ್ಯಾಜ್ಯ ಹಸಿ ತ್ಯಾಜ್ಯವಾಗಿದೆ. ಹೀಗೆ ಉತ್ಪತ್ತಿ ಯಾಗುವ ತ್ಯಾಜ್ಯವನ್ನು ಮನೆಗಳಿಂದ ಸಂಗ್ರಹಿಸುವ ವೇಳೆ ಹಸಿ, ಒಣ ಮತ್ತು ಸ್ಯಾನಿಟರಿ ತ್ಯಾಜ್ಯ ಬೇರ್ಪಡಿಸಿ ನೀಡುವಂತೆ ಸಾರ್ವಜ ನಿಕರಿಗೆ ಬಿಬಿಎಂಪಿ ತಿಳಿಸಿದೆ.
ಅಲ್ಲದೆ, ಈ ಹಿಂದಿನಿಂದಲೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಮಿಶ್ರ ತ್ಯಾಜ್ಯ ನೀಡುವ ಮನೆಯವರಿಂದ ತ್ಯಾಜ್ಯ ಸಂಗ್ರಹಿಸದಂತೆ ಗುತ್ತಿಗೆದಾರರಿಗೂ ತಿಳಿಸಲಾಗಿತ್ತು. ಹೀಗೆ ಉತ್ಪತ್ತಿಯಾಗುವ ಹಸಿ ತ್ಯಾಜ್ಯದಲ್ಲಿ ಶೇ. 80 ಭಾಗ ಆಹಾರ ತ್ಯಾಜ್ಯವಾಗಿದ್ದು, ಅವುಗಳನ್ನು ಇದೀಗ ಪ್ರತ್ಯೇಕವಾಗಿ ಸಂಸ್ಕರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿನ ತ್ಯಾಜ್ಯ ಸಮಸ್ಯೆ ನಿವಾರಣೆಗಾಗಿ ಹಾಗೂ ಸಮರ್ಪಕವಾಗಿ ತ್ಯಾಜ್ಯ ಸಂಸ್ಕರಿಸಿ, ನಿರ್ವಹಣೆ ಮಾಡುವ ಸಲು ವಾಗಿ ರಾಜ್ಯ ಸರ್ಕಾರವು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಸ್ಥಾಪಿಸಿದೆ.
ಈ ಸಂಸ್ಥೆಯು ಇದೀಗ ನಗರಾದ್ಯಂತ ತ್ಯಾಜ್ಯ ಸಂಗ್ರಹಿಸಿ ತ್ಯಾಜ್ಯ ಭೂಭರ್ತಿ ಕೇಂದ್ರ ಹಾಗೂ ಸಂಸ್ಕರಣಾ ಕೇಂದ್ರ ಗಳಲ್ಲಿ ವಿಲೇವಾರಿ ಮಾಡಲು ಹೊಸದಾಗಿ ಗುತ್ತಿಗೆದಾರರನ್ನು ನೇಮಿಸುತ್ತಿದೆ. ಅದಕ್ಕಾಗಿ 80ಕ್ಕೂ ಹೆಚ್ಚಿನ ಪ್ಯಾಕೇಜ್‌ನಲ್ಲಿ ಟೆಂಡರ್ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಹೀಗೆ ಟೆಂಡರ್ ಪ್ರಕ್ರಿಯೆ ಮುಗಿದು ಹೊಸ ಗುತ್ತಿಗೆದಾರರು ತ್ಯಾಜ್ಯ ಸಂಗ್ರಹಣೆ ಆರಂಭಿಸುವ ಸಂದರ್ಭದಲ್ಲಿ ಆಹಾರ ತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹಿಸುವಂತೆ ಸೂಚಿಸುವ ಕುರಿತು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಚಿಂತನೆ ನಡೆಸಿದೆ.
ಆಹಾರ ತ್ಯಾಜ್ಯ ಸಂಸ್ಕರಣೆಗಾಗಿ ಪ್ರತ್ಯೇಕ ಘಟಕ: ಸದ್ಯ ಬೆಂಗಳೂರಿನಲ್ಲಿ ಹಸಿ ಮತ್ತು ಒಣ ತ್ಯಾಜ್ಯಗಳ ಸಂಸ್ಕರಣೆಗಾಗಿ ಪ್ರತ್ಯೇಕ ಘಟಕಗಳಿವೆ. ಅಲ್ಲದೆ ಮಿಶ್ರ ತ್ಯಾಜ್ಯವನ್ನು ಮಿಟ್ಟಗಾನಹಳ್ಳಿ ಭೂಭರ್ತಿ ಕೇಂದ್ರದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಅದರ ಜತೆಗೆ ಇದೀಗ ಆಹಾರ ತ್ಯಾಜ್ಯ ಸಂಸ್ಕರಿಸುವುದಕ್ಕಾಗಿಯೇ ಪ್ರತ್ಯೇಕ ಘಟಕ ಸ್ಥಾಪಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಮುಂದಾಗಿದೆ.
ಅದಕ್ಕಾಗಿ ಯೋಜನೆ ರೂಪಿಸಿದ್ದು, ನಗರದಲ್ಲಿ ಉತ್ಪತ್ತಿಯಾಗುವ 2 ಸಾವಿರ ಟನ್‌ಗೂ ಹೆಚ್ಚಿನ ಆಹಾರ ತ್ಯಾಜ್ಯ ಸಂಸ್ಕರಿಸುವುದಕ್ಕಾಗಿ ಪ್ರತ್ಯೇಕ ಘಟಕ ಸ್ಥಾಪಿಸಲಾಗುತ್ತಿದೆ. ಪ್ರಮುಖವಾಗಿ ನಗರದಲ್ಲಿ ಹೋಟೆಲ್‌ಗಳು, ಸಮುದಾಯ ಭವನಗಳಲ್ಲಿ ಸಂಗ್ರಹವಾಗುವ ಆಹಾರ ತ್ಯಾಜ್ಯವನ್ನು ನೂತನವಾಗಿ ಸ್ಥಾಪಿಸುವ ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಲಾಗುತ್ತದೆ. ಈ ಘಟಕ ಸ್ಥಾಪನೆಗಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ 2 ಕೋಟಿ ರೂ. ವ್ಯಯಿಸುತ್ತಿದ್ದು, ಯಂತ್ರ ಪೂರೈಕೆ, ಘಟಕ ಸ್ಥಾಪನೆಗಾಗಿ ಗುತ್ತಿಗೆದಾರರನ್ನು ನೇಮಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಗ್ರಹಿಸಲಾಗುವ ಆಹಾರ ತ್ಯಾಜ್ಯವನ್ನು ನೂತನವಾಗಿ ಸ್ಥಾಪಿಸಲಾಗುವ ಘಟಕದಲ್ಲಿಯೇ ಸಂಸ್ಕರಿಸುವಂತೆ ಮಾಡಲಾಗುತ್ತದೆ. ಅದರ ಬದಲು ಹಸಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕಳುಹಿಸದಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಆಹಾರ ತ್ಯಾಜ್ಯದಿಂದ ಗೊಬ್ಬರ, ಪ್ರಾಣಿಗಳ ಆಹಾರ ಸಿದ್ಧಪಡಿಸುವ ಕೆಲಸ ಮಾಡಲಾಗುತ್ತದೆ. ಅದರ ಜತೆಗೆ ಜೈವಿಕ ಇಂಧನವನ್ನೂ ಉತ್ಪಾದಿಸಲಾಗುತ್ತದೆ. ಒಂದು ವೇಳೆ ಆಹಾರ ಚೆನ್ನಾಗಿದ್ದರೆ ಅದನ್ನು ಅಗತ್ಯವಿರುವವರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಬ್ಲ್ಯಾಕ್‌ಸ್ಪಾಟ್ ನಿವಾರಣೆಗೆ ಒತ್ತು : ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ ತ್ಯಾಜ್ಯ ಸಂಗ್ರಹವಾಗುವ 100ಕ್ಕೂ ಹೆಚ್ಚಿನ ಬ್ಲ್ಯಾಕ್ ಸ್ಪಾಟ್‌ಗಳಿವೆ. ಅಲ್ಲಿ ತ್ಯಾಜ್ಯ ಸಂಗ್ರಹವಾಗುವುದನ್ನು ತಪ್ಪಿಸುವ ಸಲುವಾಗಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೀಗ ಆಹಾರ ತ್ಯಾಜ್ಯ ಸಂಸ್ಕರಣಾ ಘಟಕವೂ ಬ್ಲ್ಯಾಕ್ ಸ್ಪಾಟ್‌ಗಳ ನಿವಾರಣೆ ಉದ್ದೇಶದಿಂದಲೇ ಸ್ಥಾಪಿಸಲಾಗುತ್ತಿದೆ. ಜನರು ಹೆಚ್ಚಾಗಿ ಆಹಾರ ತ್ಯಾಜ್ಯವನ್ನೇ ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ವಿಲೇವಾರಿ ಮಾಡುತ್ತಿದ್ದಾರೆ. ಅದನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
–ಗಿರೀಶ್ ಗರಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.