ನಾನ್ಯಾವತ್ತೂ ಒಕ್ಕಲಿಗ ವಿರೋಧಿ ಕೆಲಸ ಮಾಡಿಲ್ಲ: ಹುಣಸೂರು ಶಾಸಕ ಮಂಜುನಾಥ್

ಜಿಟಿಡಿಯದ್ದು ನಾಲ್ಕು ದೋಣಿ ಕಥೆ... ನನ್ನ ಮಗ ಒಕ್ಕಲಿಗ ಹುಡುಗಿಯನ್ನು ಮದುವೆಯಾಗಿದ್ದಾನೆ

Team Udayavani, Feb 12, 2023, 8:13 PM IST

1-fasdasdas

ಹುಣಸೂರು : ಪ್ರತಿ ಚುನಾವಣೆಯಲ್ಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಕ್ಕಲಿಗ ಸಮುದಾಯದ ಬೆಂಬಲವಿಲ್ಲವೆಂದು ಬಿಂಬಿಸಲಾಗುತ್ತಿದೆ. ಇಂದಿನ ಒಕ್ಕಲಿಗರ ಸಭೆ ವಿರೋಧಿ ಪಕ್ಷಕ್ಕೆ ಭ್ರಮನಿರಸನಗೊಳಿಸಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಕಟಕಿದರು.

ನಗರದ ಖಾಸಗಿ ಬಡಾವಣೆಯಲ್ಲಿ ಫೆ 15ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕ್ಷೇತ್ರಕ್ಕೆ ಬರುತ್ತಿರುವ ಪ್ರಜಾಧ್ವನಿ ಯಾತ್ರೆ ಸಂಬಂಧ ಒಕ್ಕಲಿಗ ಸಮುದಾಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 2008 ರಲ್ಲಿ ಅಂದಿನ ಶಾಸಕ ಜಿ.ಟಿ.ದೇವೇಗೌಡರ ದುರಾಡಳಿತಕ್ಕೆ ಬೇಸತ್ತ ಮತದಾರ ತಮ್ಮನ್ನು ಆಯ್ಕೆ ಮಾಡಿ ಸ್ನೇಹ ಜೀವಿ ಮಂಜುನಾಥ್ ಆಡಳಿತ ಕಂಡ ನಿರಂತರವಾಗಿ ಕಳೆದ ಮೂರು ಅವಧಿಗೂ ಆಯ್ಕೆ ಮಾಡುತ್ತಿದ್ದಾರೆ. ಮತದಾರರು ಪ್ರಜ್ಞಾವಂತರಿದ್ದು, ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾದುಕೊಳ್ಳುವ ಮತ್ತು ಸರ್ವರು ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸುವ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ದಿಟ್ಟತನ ತೋರಿ ಜೆಡಿಎಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆಂದರು.

ಒಕ್ಕಲಿಗ ವಿರೋಧಿ ಹಣೆಪಟ್ಟಿ
ಪ್ರತಿ ಚುನಾವಣೆಗಳಲ್ಲಿ ನನ್ನನ್ನು ಒಕ್ಕಲಿಗ ವಿರೋಧಿಎಂದು ಬಿಂಬಿಸಲಾಗುತ್ತಿದೆ. ಒಕ್ಕಲಿಗ ಸಮುದಾಯದ ಮುಖಂಡರಿಗೆ ಒಳ್ಳೆಯ ಅವಕಾಶ ಕೊಟ್ಟು ಬೆಳೆಸಿದ್ದೆ ಆದರೆ ಕೈಕೊಟ್ಟಿರುವವರು ನಿಮ್ಮ ಮುಂದೆಯೇ ಇದ್ದಾರೆ. ನನ್ನ ಮಗ ಒಕ್ಕಲಿಗ ಸಮುದಾಯದ ಹುಡುಗಿಯನ್ನು ಇಷ್ಟಪಟ್ಟಿದ್ದು, ಸಂಬಂಧ ಬೆಳೆಸಿದ್ದೇನೆ, ನಾನು ಒಕ್ಕಲಿಗ ವಿರೋಧಿಯಾಗಿದ್ದರೆ, ಮದುವೆಯನ್ನೇ ವಿರೋಧಿಸುತ್ತಿದ್ದೆನಲ್ಲಾ ಎಂದು ಟಾಂಗ್ ನೀಡಿದರು.
ಪ್ರತಿ ಚುನಾವಣೆಯಲ್ಲಿ ತಮ್ಮನ್ನು ಒಕ್ಕಲಿಗ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಸಿ ಒಕ್ಕಲಿಗ ಸಮುದಾಯದ ಮತಕ್ಕೆ ಕನ್ನ ಹಾಕುವ ಕೆಲಸ ಮಾಡುತ್ತಿದ್ದ ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಅದು ಅಸಾಧ್ಯ ಎಂಬ ಸಂದೇಶ ಇಂದಿನ ಸಭೆಯಿಂದ ಸಾಬೀತಾಗಿದೆ, ಎರಡು ದೋಣಿಯಲ್ಲಿ ಕಾಲಿಟ್ಟವರ ಕಥೆ ನೋಡಿದ್ದೆವೆ, ಇವರದು ನಾಲ್ಕು ದೋಣಿಕಥೆ, ಈಗಾಗಲೇ ಮೂರು ಬಾರಿ ತಾಲೂಕು ಜನತೆ ಬುದ್ದಿ ಕಲಿಸಿದ್ದಾರೆ, ಹುಣಸೂರು ಕ್ಷೇತ್ರದಲ್ಲಿ ಹಣ ಹೆಂಡಕ್ಕೆ ಜಾಗ ಇಲ್ಲ. ಏನಿದ್ದರೂ ಮಾನವಿಯ ಮೌಲ್ಯವಿರುವವರಿಗೆ ಮಾತ್ರ ಇಲ್ಲಿ ಜಾಗ ಎಂದರು.

ತಮ್ಮ ಅವಧಿಯಲ್ಲಿ ಮುಗ್ದರ ಮೇಲೆ ಕೇಸ್ ಹಾಕಿಸಿದ್ದೇನೆನ್ನುತ್ತಿದ್ದಾರೆ, ತಾಲೂಕಿನಲ್ಲಿ 200 ರಷ್ಟು ಪ್ರಕರಣ ದಾಖಲಾಗಿದ್ದರೆ ಚಾಮುಂಡೇಶ್ವರಿಯಲ್ಲಿ 900 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಹಾಗಾದರೆ ಅದೂ ಜಿಟಿಡಿ ಹಾಕಿಸಿದ್ದಾ, ಅಪ ಪ್ರಚಾರ ನಡೆಸೋದು ತರವಲ್ಲ. ಈಗ ಹಣ ಕೊಡಲು ಬರುವವರು ಪ್ರವಾಹ, ಕೋವಿಡ್ ವೇಳೆ ಎಲ್ಲಿದ್ದರು, ಅವರಷ್ಟೇ ನಾನೂ ಹಣ ಕೊಡಬಲ್ಲೆ, ಆದರೆ ನನ್ನ ಹಣ ಬಡವರ ಆರೋಗ್ಯ, ಕಷ್ಟ, ದೇವಾಲಯಜೀರ್ಣೋದ್ದಾರ, ಶಿಕ್ಷಣಕ್ಕೆ ಮೀಸಲಾಗಿರಿಸಿದ್ದೇನೆಂದು ಮಾರ್ಮಿಕವಾಗಿ ನುಡಿದು. ಫೆ.15ರಂದು ತಾಲೂಕಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಪ್ರಜಾಧ್ವನಿಯಾತ್ರೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಕಾರ್ಯಕರ್ತರು ಸಭೆಗೆ ಆಗಮಿಸಿ ಯಶಸ್ವಿ ಮಾಡಬೇಕೆಂದು ಶಾಸಕರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ಒಕ್ಕಲಿಗ ಸಮುದಾಯದ ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದರು.

ಕಾರ್ಯಕ್ರಮದಲ್ಲಿ ಮಾವಿನಹಳ್ಳಿ ಸಿದ್ದೇಗೌಡ, ಮಾದೇಗೌಡ, ಬೀರಿಹುಂಡಿ ಬಸವಣ್ಣ ಜಿ.ಟಿ.ದೇವೇಗೌಡರ ವಿರುದ್ಧ ಸಭೆಯಲ್ಲಿ ಹರಿಹಾಯ್ದರು.

ವೇದಿಕೆಯಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ತಾ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾರಾಯಣ್, ರಮೇಶ್, ದೇವರಾಜ್, ಒಕ್ಕಲಿಗ ಮುಖಂಡ ವೆಂಕಟೇಶ್, ಸುನಿತಾ ಜಯರಾಮೇಗೌಡ, ಶ್ವೇತಾ,ರಾಜು ಶಿವರಾಜೇಗೌಡ, ಬಿಳಿಕೆರೆ ಬಾಬು, ಗಣೇಶ್, ಕಸ್ತೂರಿಗೌಡ, ಸಿಂಡೆನಹಳ್ಳಿ ಜವರೇಗೌಡ, ಹಿರಿಕ್ಯಾತನಹಳ್ಳಿ ಸುರೇಶ್, ಗದ್ದಿಗೆ ದೇವರಾಜ್, ಜವರೇಗೌಡ, ಸೇರಿದಂತೆ ಇತರರಿದ್ದರು.

ಟಾಪ್ ನ್ಯೂಸ್

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yoga-nara

Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ

Untitled-1

Mysuru: ಕೆಆರ್‌ಎಸ್‌ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್‌

Dali-dhanajaya

Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ

2-hunsur

Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.