ರಣಜಿ: ಕರ್ನಾಟಕಕ್ಕೆ ಸೋಲು, ಸೌರಾಷ್ಟ್ರ ಫೈನಲಿಗೆ
ಕರ್ನಾಟಕಕ್ಕೆ ಮುಳುವಾದ ಮೊದಲ ಇನ್ನಿಂಗ್ಸ್‌ನಲ್ಲಿನ ಭಾರೀ ಹಿನ್ನಡೆ
Team Udayavani, Feb 12, 2023, 11:31 PM IST
ಬೆಂಗಳೂರು: ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಸೌರಾಷ್ಟ್ರ ಎದುರು ಆತಿಥೇಯ ಕರ್ನಾಟಕ 4 ವಿಕೆಟ್‌ಗಳಿಂದ ಸೋಲನುಭವಿಸಿದ್ದು ಮತ್ತೊಮ್ಮೆ ಫೈನಲ್‌ಗೇರುವ ಅವಕಾಶ ವನ್ನು ಕಳೆದುಕೊಂಡಿದೆ.
2014-15ರಲ್ಲಿ ತಮಿಳುನಾಡನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದ ಕರ್ನಾಟಕವು ಆಬಳಿಕ ಫೈನಲ್‌ಗೂ ಏರಿಲ್ಲ ಎನ್ನುವು ದನ್ನು ಇಲ್ಲಿ ಗಮನಿಸಬೇಕು. ಇನ್ನು ವಿಜಯ್ ಹಜಾರೆ (ಏಕದಿನ), ಸೈಯದ್ ಮುಷ್ತಾಕ್ ಅಲಿ (ಟಿ20) ಕೂಟಗಳಲ್ಲೂ ಇತ್ತೀಚೆಗಿನ ವರ್ಷಗಳಲ್ಲಿ ಕರ್ನಾಟಕಕ್ಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಹೆಚ್ಚು ಅಂದರೆ ಸೆಮಿಫೈನಲ್‌ನಲ್ಲೇ ಹೊರಬೀಳು ವುದು ಜಾಸ್ತಿಯಾಗಿದೆ.
ಹೆಚ್ಚು ಕಡಿಮೆ ಶನಿವಾರವೇ ಸೌರಾಷ್ಟ್ರ ಫೈನಲ್‌ಗೇರುವುದು ಖಚಿತವಾಗಿತ್ತು. ಕರ್ನಾಟಕದ ಮುಂದೆ ಇದ್ದಿದ್ದು ಎರಡೇ ಆಯ್ಕೆ. ಕಷ್ಟಪಟ್ಟು ಆಡಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದು, ಇಲ್ಲವೇ ಸೋಲುವುದು. ಈ ಎರಡೂ ಸಾಧ್ಯತೆಗಳಲ್ಲಿ ಸೌರಾಷ್ಟ್ರವೇ ಫೈನಲ್‌ಗೇರು ತ್ತಿತ್ತು. ಗೆದ್ದರೆ ಮಾತ್ರ ಕರ್ನಾಟಕಕ್ಕೆ ಫೈನಲಿ ಗೇರುವ ಅವಕಾಶವಿತ್ತು. ಆದರೆ ಅದು ಬಾಕಿಯಿದ್ದ ಒಂದು ದಿನದಲ್ಲಿ ಅಸಾ ಧ್ಯವೇ ಎನ್ನಬಹುದಾದ ಮಟ್ಟದಲ್ಲಿತ್ತು. ಬಹುಶಃ 2ನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಇನ್ನೊಂದು 100 ರನ್ ಹೆಚ್ಚಿಗೆ ಗಳಿಸಿದ್ದರೆ ಗೆಲ್ಲುವ ಅವಕಾಶವಿದ್ದೇ ಇತ್ತು. ಆದರೆ ಪಿಚ್ ವರ್ತಿಸುತ್ತಿದ್ದ ರೀತಿ ನೋಡಿದರೆ 2ನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 234 ರನ್ ಗಳಿಸಿದ್ದೂ ದೊಡ್ಡ ಸಾಧನೆ.
ಕರ್ನಾಟಕದ ಪಾಲಿಗೆ ಮುಳುವಾ ಗಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ ಅನು ಭವಿಸಿದ್ದ 120 ರನ್ ಭಾರೀ ಹಿನ್ನಡೆ. ಇದು ಕಡಿಮೆಯಿದ್ದಿದ್ದರೆ ಕರ್ನಾಟಕಕ್ಕೆ ಗೆಲುವಿನ ಅವಕಾಶವಿದ್ದೇ ಇತ್ತು. ಮೊದಲ ಇನ್ನಿಂಗ್ಸ್‌ನಲ್ಲಿನ ಭಾರೀ ಹಿನ್ನ ಡೆಯ ಬಳಿಕ ಕಣಕ್ಕಿಳಿದ ಕರ್ನಾಟಕ, 2ನೇ ಇನ್ನಿಂಗ್ಸ್‌ನಲ್ಲಿ 234 ರನ್ನಿಗೆ ಆಲೌ ಟಾಯಿತು. ನಿಕಿನ್ ಜೋಸ್ 109 ರನ್ ಗಳಿಸಿ ತಂಡಕ್ಕೆ ನೆರವಾದರು. ಅಗರ್ವಾಲ್ 55 ರನ್ ಗಳಿಸಿದ್ದರು. ಸೌರಾಷ್ಟ್ರ ಪರ ಚೇತನ್ ಸಕಾರಿಯ, ಧರ್ಮೇಂದ್ರ ತಲಾ 4 ವಿಕೆಟ್ ಪಡೆದರು.
ಪರಿಣಾಮ ಸೌರಾಷ್ಟ್ರಕ್ಕೆ ಗೆಲುವಿನ ಗುರಿ ಸಿಕ್ಕಿದ್ದು 115 ರನ್‌ಗಳು ಮಾತ್ರ. ಇಷ್ಟರೊಳಗೇ ಎದುರಾಳಿಯನ್ನು ನಿಯಂತ್ರಿಸಲು ಕರ್ನಾಟಕ ತೀವ್ರ ಶ್ರಮಿ ಸಿತು. ಆದರೆ ಗುರಿ ಚಿಕ್ಕದಾಗಿದ್ದರಿಂದ ಅಂತೂ ಇಂತೂ 6 ವಿಕೆಟ್ ಕಳೆದು ಕೊಂಡು ಸೌರಾಷ್ಟ್ರ 117 ರನ್ ಗಳಿಸಿ ಗೆಲುವು ಸಾಧಿಸಿತು. ನಾಯಕ ಅರ್ಪಿತ್ ವಸವಡ ಅಜೇಯ 47 ರನ್ ಗಳಿಸಿ ತಂಡವನ್ನು ದಡ ಹತ್ತಿಸಿದರು. ಕರ್ನಾಟಕ ಪರ ಕೆ.ಗೌತಮ್, ವಾಸುಕಿ ಕೌಶಿಕ್ ತಲಾ 3 ವಿಕೆಟ್ ಪಡೆದಿದ್ದರು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ 407 ಮತ್ತು 234 (ನಿಕಿನ್ ಜೋಸ್ 109, ಮಾಯಾಂಕ್ 55, ಚೇತನ್ ಸಕಾರಿಯ 45ಕ್ಕೆ 4, ಧರ್ಮೇಂದ್ರ ಜಡೇಜ 79ಕ್ಕೆ 4). ಸೌರಾಷ್ಟ್ರ 527 ಮತ್ತು 117/6 (ಅರ್ಪಿತ್ ವಸವಡ 47, ಕೆ.ಗೌತಮ್ 38ಕ್ಕೆ 3, ವಾಸುಕಿ ಕೌಶಿಕ್ 32ಕ್ಕೆ 3).
ಫೈನಲಿಗೆ ಜೈದೇವ್ ಲಭ್ಯ
ಕೋಲ್ಕತಾ: ವೇಗಿ ಜೈದೇವ್ ಉನಾದ್ಕತ್ ಅವರು ಕೋಲ್ಕತಾದಲ್ಲಿ ಫೆ. 16ರಿಂದ ಆರಂಭವಾಗುವ ಬಂಗಾಲ ವಿರುದ್ಧದ ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರಾಷ್ಟ್ರ ತಂಡದ ನಾಯಕತ್ವ ವಹಿಸಲು ಲಭ್ಯರಿರಲಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ಭಾರತೀಯ ತಂಡದಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.
ರಣಜಿ ಟ್ರೋಫಿ ಫೈನಲ್‌ನಲ್ಲಿ ಆಡಲು ಜೈದೇವ್ ಬಯಸಿದ್ದರು. ಇದಕ್ಕಾಗಿ ಅವರು ಭಾರತೀಯ ತಂಡ ಆಡಳಿತಕ್ಕೆ ಮನವಿ ಮಾಡಿದ್ದರು. ಇದಕ್ಕಿಂತ ಮೊದಲು ಅವರ ಬಿಡುಗಡೆಗೆ ಆಯ್ಕೆಗಾರರು ಒಪ್ಪಿಗೆ ಸೂಚಿಸಿದ್ದರು.
ಹಾಲಿ ಚಾಂಪಿಯನ್ ಮಧ್ಯಪ್ರದೇಶಕ್ಕೆ ಸೋಲು
ಇಂಧೋರ್: ಬಂಗಾಲ ತಂಡದ ಆಲ್‌ರೌಂಡ್ ಪ್ರದರ್ಶನದಿಂದಾಗಿ ಹಾಲಿ ಚಾಂಪಿಯನ್ ಮಧ್ಯ ಪ್ರದೇಶ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಸೆಮಿಫೈನಲ್ ಪಂದ್ಯದಲ್ಲಿ 306 ರನ್ನುಗಳಿಂದ ಸೋಲನ್ನು ಕಂಡಿದೆ.
1989-90ರ ಋತುವಿನಲ್ಲಿ ಈ ಹಿಂದೆ ಪ್ರಶಸ್ತಿ ಜಯಿಸಿದ್ದ ಬಂಗಾಲ ತಂಡವು ಫೈನಲ್‌ನಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ಲೀಗ್ ಹಂತದಲ್ಲಿ ಸೌರಾಷ್ಟ್ರಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದ ಬಂಗಾಲ ತಂಡವು ಫೈನಲ್ ಪಂದ್ಯದ ಆತಿಥ್ಯ ವಹಿಸಲಿದೆ. ಇದು 2020ರ ಫೈನಲ್‌ನ ಪುನರಾವರ್ತನೆಯಾಗಲಿದೆ.
ಆಕಾಶ್‌ದೀಪ್ ಅವರ ಅಮೋಘ ಬೌಲಿಂಗ್ ನಿರ್ವಹಣೆಯಿಂದಾಗಿ ಬಂಗಾಲ ತಂಡವು ಕಳೆದ ಮೂರು ಋತುಗಳಲ್ಲಿ ಎರಡನೇ ಬಾರಿ ಫೈನಲಿಗೇರಿದ ಸಾಧನೆ ಮಾಡಿತು. ಆಕಾಶ್ ಅವರಲ್ಲದೇ ಅನುಸ್ತುಪ್ ಮಜುಂದಾರ್ ಮತ್ತು ಸುದೀಪ್ ಕುಮಾರ್ ಘರಾಮಿ ಬ್ಯಾಟಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ್ದರು. ಅವರಿಬ್ಬರು ಅನುಕ್ರಮವಾಗಿ 200 ಮತ್ತುಎ 153 ರನ್ ಗಳಿಸಿದ್ದರಿಂದ ಬಂಗಾಲ ಮೊದಲ ಇನ್ನಿಂಗ್ಸ್‌ನಲ್ಲಿ 438 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು.
ಪ್ರದಿಪ್ತ ಪ್ರಾಮಾಣಿಕ್ ಅವರ ಆಲ್‌ರೌಂಡ್ ನಿರ್ವಹಣೆ ಬಂಗಾಲದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಅಜೇಯ 60 ರನ್ ಗಳಿಸಿದ್ದ ಅವರು ಮಧ್ಯಪ್ರದೇಶದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಿತ್ತು ಗಮನ ಸೆಳೆದರು.
ಅಂತಿಮ ದಿನವಾದ ರವಿವಾರ ಬಂಗಾಲ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 279 ರನ್ ಗಳಿಸಿತ್ತು. ಇದರಿಂದ ಮಧ್ಯಪ್ರದೇಶ ಗೆಲ್ಲಲು 548 ರನ್ ಗಳಿಸುವ ಗುರಿ ಪಡೆದಿತ್ತು. ಆದರೆ ಮಧ್ಯಪ್ರದೇಶ 39.5 ಓವರ್‌ಗಳಲ್ಲಿ 241 ರನ್ನಿಗೆ ಆಲೌಟಾದ ಕಾರಣ ಬಂಗಾಲ 306 ರನ್ನುಗಳಿಂದ ಜ¿¸ಭೇರಿ ಬಾರಿಸಿತು.
ಸಂಕ್ಷಿಪ್ತ ಸ್ಕೋರು: ಬಂಗಾಲ 438 ಮತ್ತು 279; ಮಧ್ಯ ಪ್ರದೇಶ 170 ಮತ್ತು 241 (ರಜತ್ ಪಟಿದಾರ್ 52, ಪ್ರದಿಪ್ತ ಪ್ರಾಮಾಣಿಕ್ 51ಕ್ಕೆ 5, ಮುಕೇಶ್ ಕುಮಾರ್ 35ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.