ಪ್ರೇಮ ನಿವೇದನೆಗೆ ತರಹೇವಾರಿ ಗುಲಾಬಿ


Team Udayavani, Feb 13, 2023, 3:19 PM IST

tdy-7

ದೇವನಹಳ್ಳಿ: ಪ್ರೇಮಿಗಳ ದಿನಾಚರಣೆಗೆ ಕ್ಷಣಗಣನೆ ಶುರುವಾಗುತ್ತಿದ್ದಂತೆ, ರಾಜ್ಯದಲ್ಲಿಯೇ ಪುಪ್ಪೋದ್ಯಮಕ್ಕೆ ಹೆಸರಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆಯುವ ತರಹೇವಾರಿ ಗುಲಾಬಿ ಹೂವುಗಳು ಇದೀಗ ಪ್ರೇಮಿಗಳ ಮಧ್ಯೆ ಪ್ರೇಮ ನಿವೇದನೆಗೆ ಕಲರವಿಸುತ್ತಿದೆ.

ಹೌದು.. ಪ್ರತಿವರ್ಷ ವ್ಯಾಲೆಂಟೈನ್ಸ ಡೇಗೆ ಕಾದು ನೋಡುವ ಪ್ರೇಮಿಗಳು ತಮ್ಮ ಪ್ರೇಯಸಿಗಾಗಿ ಬಗೆಬಗೆಯ ಬಣ್ಣದ ಗುಲಾಬಿ ಹೂಗುಚ್ಚ ನೀಡಲು ಹಾತೊರೆ ಯುತ್ತಾರೆ. ಫೆ.14 ಪ್ರೇಮಿಗಳ ದಿನ ಬಂತೆಂದರೆ ಗುಲಾಬಿ ಹೂಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌. ಪ್ರೇಮಿಗಳು ತಮ್ಮ ಮನಗೆದ್ದ ಪ್ರೇಯಸಿಗೆ ಗುಲಾಬಿ ಹೂವು ನೀಡುವ ಮೂಲಕ ನಿವೇದನೆ ಮಾಡಿಕೊಳ್ಳು ತ್ತಾರೆ. ಇದರಿಂದ ಈದಿನ ಮಾರುಕಟ್ಟೆಯಲ್ಲಿ ಸಾಮಾನ್ಯ ದರಕ್ಕಿಂತ ಹೆಚ್ಚಿನ ದರ ಮಾರಾಟವಾಗಿ ಭರ್ಜರಿ ಲಾಭ ಗಳಿಸುತ್ತಾರೆ.

ಬೆಳೆಗಾರರಿಗೆ ಲಾಭವಿಲ್ಲ: ಗುಲಾಬಿ ಬೆಳೆಯುವ ಬೆಳೆಗಾರರಿಗೆ ಮಾತ್ರ ಲಾಭವಾಗುತ್ತಿಲ್ಲ. ಹೆಚ್ಚಿನ ಬೆಲೆ, ಬೇಡಿಕೆ ಯಿದ್ದರೂ, ಮಾಮೂಲಿ ದರದಲ್ಲಿ ರೈತರಿಗೆ ಹಣ ನೀಡು ತ್ತಾರೆ. ವಿವಿಧ ಜಾತಿಯ ಗುಲಾಬಿ ಹೂವುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ದರದಲ್ಲಿ ಬಿಕರಿಯಾಗುತ್ತಿದೆ. ಪ್ರೇಮಿಗಳ ದಿನಾಚರಣೆಗೆ ರಫ್ತಾ ಗುತ್ತಿ ರುವ 26 ಗುಲಾಬಿ ಹೂವುಗಳ ಬಂಚ್‌ನ ಬೆಲೆ ಕೇವಲ 26 ರೂ.ಗೆ ರೈತರಿಂದ ಮಾರಾಟ ಗಾರರು ಖರೀದಿ ಸುತ್ತಾರೆ. ಹಬ್ಬ ಹರಿದಿನವಿರಲಿ, ಪ್ರೇಮಿಗಳ ದಿನ ವಿರಲಿ ಕೇವಲ 20 ರೂ.ಗೆ ಗುಲಾಬಿ ಹೂಗಳ ಬಂಚ್‌ನ್ನು ಖರೀದಿಸುತ್ತಾರೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.

ಫೆಬ್ರವರಿಯಲ್ಲಿ ಹೆಚ್ಚಿನ ಬೇಡಿಕೆ: ಫೆಬ್ರವರಿಯಲ್ಲಿ ಗುಲಾಬಿ ಹೂಗಳಿಗೆ ಹೆಚ್ಚಿನ ಬೇಡಿಕೆ ಆರಂಭವಾಗುತ್ತದೆ. ಈ ಹಿಂದೆ ವಿದೇಶಗಳಿಗೆ ಹೆಚ್ಚಾಗಿ ರಫ್ತಾಗುತ್ತಿತ್ತು. ಈಗ ಸ್ಥಳೀಯ ಮಾರುಕಟ್ಟೆಗಳಲ್ಲೇ ಬೇಡಿಕೆಯಿದೆ. ಒಂದು ಬಂಚ್‌ಗೆ 26ರೂ ಇದ್ದದ್ದು, 180 ರಿಂದ 200ರೂ.ಗೆ ಮುಟ್ಟಿದ್ದು ಗುಣಮಟ್ಟದ ಅನುಗುಣವಾಗಿ ಬೆಲೆ ಸಿಗುತ್ತದೆ.

ಡಚ್‌ ರೋಸ್‌ಗಳ ಬೆಳೆ: ಡಚ್‌ ರೋಜ್‌ಗಳು ಸಾಧಾರಣ ವಾಗಿ ಕೆಂಪು, ಬಿಳಿ ಪಿಂಕ್‌, ಹಳದಿ, ಹಿತ್ತಾಳೆ ಬಣ್ಣ ದಲ್ಲಿ ಬೆಳೆಯಲಾಗುತ್ತದೆ. ಅತಿ ಹೆಚ್ಚಿನ ಉಷ್ಣಾಂಶ ವಿದ್ದರೆ ಹೂವುಗಳು ಬೇಗನೆ ಅರಳುತ್ತದೆ. ಸಾಧಾರಣವಾಗಿ ಮದುವೆ ಸೀಜನ್‌ಗಳಲ್ಲಿ ಹೆಚ್ಚು ಮಾರಾಟ ಆಗುತ್ತಿರುವ ಗುಲಾಬಿ ಹೂವುಗಳಿಗೆ ಪ್ರೇಮಿಗಳ ದಿನಾಚರಣೆಗೆ ಬೋನಸ್‌ ಸಿಕ್ಕಿದ್ದು, ರಫ್ತು ವಹಿವಾಟು ಹೆಚ್ಚಾಗಿದೆ. ಮಾರು ಕಟ್ಟೆಯಲ್ಲಿ ಒಂದು ಗುಲಾಬಿ ಹೂವು ಬಂಚ್‌ಗೆ ಪ್ರೇಮಿಗಳ ದಿನದಂದು 50 ರೂ. ವರೆಗೂ ಮಾರಾಟ ವಾಗುತ್ತದೆ. ಹೂವುಗಳು ಬೇಗ ಅರುಳುವುದನ್ನು ತಡೆಯಲು ಮೊಗ್ಗುಗಳಿಗೆ ಕ್ಯಾಪ್‌ ಹಾಕಲಾಗುವುದು. ಒಂದು ಎಕರೆಗೆ ಸಾಧಾರಣವಾಗಿ 1,500 ಹೂವುಗಳನ್ನು ಬೆಳೆಯ ಬಹುದಾಗಿದೆ. ಒಂದು ಹೂವಿನ ಬೆಲೆ 05-10 ರೂ ಇರುತ್ತದೆ.

ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 800 ಎಕರೆ ಗುಲಾಬಿ ತೋಟ : ತಾಲೂಕಿನ ಅಗಲಕೋಟೆ ಗ್ರಾಮದಲ್ಲಿ ಸುಮಾರು 50 ಎಕರೆ ಅಷ್ಟು ಗುಲಾಬಿ ಹೂ ಬೆಳೆಯುತ್ತಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಈ ತೋಟಗಳಲ್ಲಿ ಹೂವು ಬೆಳೆಸಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಬೆಳೆಯುತ್ತಿರುವ ಗುಲಾಬಿ ಮಂಗಳೂರು, ಬೆಂಗಳೂರು, ಕಾರ್ಕಾಳ, ಬಟ್ಕಾಳ, ಹೈದರಾಬಾದ್‌ ಇನ್ನಿತರೆ ಕಡೆಗಳಿಗೆ ಹೂವನ್ನು ಸರಬರಾಜು ಮಾಡಲಾಗುತ್ತದೆ. ಹೈದರಾಬಾದ್‌ ಮಾರುಕಟ್ಟೆಯಲ್ಲಿ 200ರೂ.ಗೆ ಗುಲಾಬಿ ಹೂ ಮಾರಾಟವಾಗುತ್ತಿದೆ. ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಪಾಲಿ ಹೌಸ್‌ ಮತ್ತು ಬಯಲು ಪ್ರದೇಶದಲ್ಲಿ ಹೂವು ಬೆಳೆಯುವುದು ಸೇರಿದಂತೆ ಒಟ್ಟು 800 ಎಕರೆ ಗುಲಾಬಿ ಹೂವು ಬೆಳೆಯುತ್ತಿದ್ದಾರೆ.

ಪ್ರತಿದಿನ ಮೂರು ಸಾವಿರ ಹೂವು ಮಾರಾಟ : ಕಳೆದ 8 ವರ್ಷಗಳಿಂದ ಗುಲಾಬಿ ತೋಟವನ್ನು ಮಾಡುತ್ತಾ ಬಂದಿದ್ದು, ಪ್ರತಿದಿನವೂ ಗುಲಾಬಿ ಹೂ ವವನ್ನು ಕಟ್ಟು ಮಾಡಿ ಇಲ್ಲಿಯೇ ವ್ಯಾಪರಸ್ಥರು ಖರೀದಿಸಿಕೊಂಡು ಹೋಗುತ್ತಾರೆ. 3 ಲಕ್ಷ ರೂ. ಹಣವನ್ನು ತೋಟಕ್ಕೆ ವೆಚ್ಚ ಮಾಡಿದ್ದೇವೆ. 4 ದಿನಕ್ಕೊಮ್ಮೆ ನೀರನ್ನು ಹಾಕುತ್ತೇವೆ. ಪ್ರತಿ 6 ತಿಂಗಳಿಗೆ ಗೊಬ್ಬರ ಹಾಕಬೇಕು. ಪ್ರತಿದಿನ 3 ಸಾವಿರ ಹೂವುಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಅಗಲಕೋಟೆಯ ರೈತ ದೇವರಾಜ್‌ ಹೇಳುತ್ತಾರೆ.

ಜಿಲ್ಲೆಯಲ್ಲಿ ವಿವಿಧ ತಳಿಗಳ ಗುಲಾಬಿ ಹೂವನ್ನು ರೈತರು ಬೆಳೆಯುತ್ತಿದ್ದಾರೆ. ರೋಸ್‌ ಬೆಳೆಯುವ ರೈತರಿಗೆ ಅರ್ಧ ಅಥವಾ ಒಂದು ಎಕರೆ ಇರಲಿ ಪಾಲಿಹೌಸ್‌ಗೆ ಸಹಾಯ ಧನ, ಬಯಲು ಪ್ರದೇಶದಲ್ಲಿ ಬೆಳೆಯುವ ರೈತರಿಗೆ ನೆರಗಾ ಯೋಜನೆಯಡ್ಲಿ ಪ್ರೋತ್ಸಾಹ ನೀಡಲಾಗುವುದು. ಜಿಲ್ಲೆಯಲ್ಲಿ ಡಚ್‌ ಜಾತಿಯ ರೋಸ್‌ ಬೆಳೆಯುತ್ತಿದ್ದಾರೆ. – ಗುಣವಂತ, ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ

ಪ್ರೇಮಿಗಳ ದಿನಾಚರಣೆ ಹಾಗೂ ಇನ್ನಿತರೆ ದಿನವಾಗಲಿ ಒಂದು ಗುಲಾಬಿ ಹೂಗಳ ಬಂಚ್‌ಗೆ ವ್ಯಾಪಾರಸ್ಥರು ಕೇವಲ 20 ರೂ. ನೀಡುತ್ತಾರೆ. ಶ್ರಮವಹಿಸಿ ಗುಲಾಬಿ ಹೂವನ್ನು ಬೆಳೆದರೆ ಶ್ರಮಕ್ಕೆ ತಕ್ಕ ಫ‌ಲ ಸಿಗುತ್ತದೆ. ಯಾವುದಾದರೂ ಕೆಲಸಕ್ಕೆ ಹೋದರೆ ತಿಂಗಳಿಗೆ 15 ಸಾವಿರ ಸಂಬಳ ನೀಡುತ್ತಾರೆ. ತೋಟದಲ್ಲಿ ಹೂವು ಬೆಳೆದರೆ ತಿಂಗಳಿಗೆ 60 ಸಾವಿರ ಹಣ ಗಳಿಸಬಹುದು. – ದೇವರಾಜ್‌, ಗುಲಾಬಿ ಹೂವು ಬೆಳೆಗಾರ 

-ಎಸ್.ಮಹೇಶ್

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

14-ragi-crop

Devanahalli: ಕೈಕೊಟ್ಟ ಮಳೆ: ಮೊಳಕೆಯಲ್ಲೇ ಒಣಗುತ್ತಿದೆ ರಾಗಿ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

16

Ullal: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ

15

Blind Chess World C’ships: ವಿಶ್ವ ಅಂಧರ ಚೆಸ್‌: ಪ್ರಶಸ್ತಿ ಸನಿಹಕ್ಕೆ ಲುಬೋವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.