ರಾಜಕೀಯ ಪಕ್ಷಗಳ ಆರ್ಭಟ; ಮತದಾರ ಇನ್ನೂ “ಮೌನಿ’


Team Udayavani, Feb 14, 2023, 6:30 AM IST

ರಾಜಕೀಯ ಪಕ್ಷಗಳ ಆರ್ಭಟ; ಮತದಾರ ಇನ್ನೂ “ಮೌನಿ’

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ನೂರು ದಿನಗಳು ಸಹ ಉಳಿದಿಲ್ಲ. ರಾಜಕೀಯ ಪಕ್ಷಗಳು ಮತದಾರರ ಕೈಹಿಡಿಯಲು ಹಲವು ಕಸರತ್ತುಗಳೊಂದಿಗೆ ಮನೆ ಬಾಗಿಲು ಬಡಿಯುತ್ತಿವೆ. ಆದರೆ ಮತದಾರ ಮಾತ್ರ ಇನ್ನೂ ಯಾವ ಪಕ್ಷದ ಕಡೆಗೂ ತನ್ನ ವಾರೆನೋಟ ಬೀರಿಲ್ಲ. ಮತದಾರ ಪ್ರಭುವಿನ ಮೌನ ಹಾಗೂ ಪ್ರತೀ ಚುನಾವಣೆಯಲ್ಲೂ ನಿರ್ಣಾಯಕ ಪಾತ್ರವಹಿಸುವ ಯಾವ ಪಕ್ಷದ ಕಾರ್ಯಕರ್ತರೂ ಅಲ್ಲದ ತಟಸ್ಥ ಮತದಾರರೇ ಈ ಸಲ ಗೊಂದಲದಲ್ಲಿ ಮುಳುಗಿರುವುದು ರಾಜಕೀಯ ಪಕ್ಷಗಳನ್ನು ಆತಂಕಕ್ಕೆ ದೂಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿಕೊಂಡಿರುವಂತೆ ಅವರವರ ಪಕ್ಷದ ಪರವಾಗಿ ಅಲೆ ಎದ್ದಿಲ್ಲ, ಸದ್ಯಕ್ಕಂತೂ ಯಾವ ಕಡೆಗೂ ಯಾವುದೇ ಗಾಳಿ ಬೀಸುತ್ತಿಲ್ಲ. ಎಲ್ಲ ನಾಯಕರು ತಮ್ಮ ಪಕ್ಷದ ಪರವಾಗಿ ಅಲೆ ಎದ್ದಿದೆ ಎಂದು ಬಿಂಬಿಸಿಕೊಂಡು ಜನಾಭಿಪ್ರಾಯ ರೂಪಿಸಿಕೊಳ್ಳುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ.

ಪ್ರತೀ ಚುನಾವಣೆಯಲ್ಲಿ ಶೇ. 5ರಿಂದ 7ರಷ್ಟು ಮತದಾರರು ರಾಜಕೀಯ ಪಕ್ಷಗಳ ಚುನಾವಣ ಭವಿಷ್ಯ ನಿರ್ಧರಿಸುತ್ತಾರೆ. ಇವರು ಯಾವುದೇ ಪಕ್ಷದ ಕಾರ್ಯಕರ್ತರಲ್ಲ, ಸಾರಸಗಟು ಒಂದೇ ಪಕ್ಷದ ಮತದಾರರೂ ಅಲ್ಲ. ಇವರ ಮತದಾನ ಆಯ್ಕೆ ಪ್ರತೀ ಚುನಾವಣೆಯಲ್ಲೂ ಪಕ್ಷ ಮತ್ತು ಅಭ್ಯರ್ಥಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಇವರ ಮತ ಪಡೆದ ಪಕ್ಷ ಗೆಲುವಿನ ದಡ ಸೇರುತ್ತದೆ. ಇವರನ್ನು “ತಟಸ್ಥ’ ಮತದಾರ ರೆಂದೇ ರಾಜಕೀಯ ಪಕ್ಷಗಳು ಹೇಳುತ್ತವೆ. ಚುನಾವ ಣೆಯ ಕೊನೆದಿನದ ತನಕ ಕಾಯ್ದು ಯೋಚಿಸಿ ಮತ ಹಾಕುವ ಮಂದಿಯೇ ಪ್ರತೀ ಸಲವೂ ನಿರ್ಣಾಯಕರು.

ಇವರ ಒಲವು ಏನೆಂಬುದನ್ನು ತಿಳಿಯಲು ರಾಜಕೀಯ ಪಕ್ಷಗಳಿಗೆ ಇನ್ನೂ ಆಗಿಲ್ಲ. ತಟಸ್ಥ ಮತದಾರರು ಇದುವರೆಗೂ ತಟಸ್ಥರಾಗಿರುವುದೇ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ. ಮೂರು ಪಕ್ಷಗಳ ಆಡಳಿತ ವೈಖರಿ ಗಮನಿಸಿರುವ ಮತದಾರರು ಭ್ರಮನಿರಸನರಾಗಿದ್ದಾರೆ. “ಬೆಸ್ಟ್‌’ ಆಯ್ಕೆ ಇಲ್ಲದೇ ಇರುವುದರಿಂದ ಮೂವರಲ್ಲಿಯೇ ಆಯ್ಕೆ ಅನಿವಾರ್ಯವಾ ಗಿದೆ. ಹೀಗಾಗಿ ಮತದಾರರ ಮನಗೆಲ್ಲಲು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಹಲವು ಕಸರತ್ತು ನಡೆಸಿದರೂ ಇವರು ಮಾತ್ರ ಮೌನವಾಗಿದ್ದಾರೆ. ಅಭ್ಯರ್ಥಿಗಳ ಘೋಷಣೆಯಾಗುವ ತನಕ ಕ್ಷೇತ್ರವಾರು ಸ್ಪಷ್ಟ ಚಿತ್ರಣ ಸಿಗುವುದು ಕಷ್ಟ.

ಮ್ಯಾಜಿಕ್‌ ನಂಬರ್‌ ದಾಟದ ಸಮೀಕ್ಷೆ: ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ನಡೆಸಿರುವ ಅಂತರಿಕ ಸಮೀಕ್ಷೆಗಳು ವಾಸ್ತವವಾಗಿ ಮ್ಯಾಜಿಕ್‌ ನಂಬರ್‌ (113) ದಾಟಿಲ್ಲ. ಆದರೆ ಈ ಎರಡೂ ಪಕ್ಷಗಳು 125 ರಿಂದ 130 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಹೇಳಿಕೊಂಡಿವೆ. ಶತಕ ದಾಟಿದರೆ ಸಾಕು ಅಧಿಕಾರ ಗ್ಯಾರೆಂಟಿ ಎಂಬ ಲೆಕ್ಕಾಚಾರದಲ್ಲಿರುವ ಪಕ್ಷಗಳು ಸೆಂಚುರಿ ಬಾರಿಸಲು ಪ್ರಯತ್ನಿಸುತ್ತಿವೆ. ಈ ಲೆಕ್ಕಾಚಾರವನ್ನೇ ಅವಲೋಕಿಸಿದರೆ ರಾಜ್ಯದ ಮತದಾರ ಇನ್ನೂ ಯಾವ ಪಕ್ಷದ ಕಡೆಗೂ ಕಣ್ಣು ಬಿಟ್ಟಿಲ್ಲ ಎಂಬುದಕ್ಕೆ ನಿದರ್ಶನ.

ರಾಜ್ಯದ ಪ್ರಜ್ಞಾವಂತ ಮತದಾರರು ಈ ಹಿಂದಿನ ಚುನಾವಣೆಗಳಲ್ಲಿ ಮತದಾನ ನಡೆಯುವ ಕೊನೆ ದಿನದ ತನಕವೂ ತನ್ನ ನಾಡಿಮಿಡಿತ ಏನೆಂಬುದನ್ನು ಬಿಟ್ಟು ಕೊಟ್ಟಿಲ್ಲ. ಅದೇ ಸ್ಥಿತಿ ರಾಜ್ಯದಲ್ಲಿ ಈಗಲೂ ಇದೆ. ಆಡಳಿತರೂಢ ಬಿಜೆಪಿ ಬಗ್ಗೆ ಪೂರ್ಣ ಸಮಾಧಾನವೂ ಇಲ್ಲ, ಕಾಂಗ್ರೆಸ್‌ ಬಗ್ಗೆ ಪರಿಪೂರ್ಣ ಒಲವೂ ಇಲ್ಲ. ಇನ್ನು ಜೆಡಿಎಸ್‌ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಯಾವ ಪಕ್ಷದ ಕಡೆಗೂ ವಾಲದ ಮತದಾರನ ಮನಮಿಡಿಯುವಿಕೆ ತಿಳಿಯಲು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಉರಿ ಬಿಸಿಲಿನಲ್ಲೂ ಕ್ಷೇತ್ರವಾರು ಪ್ರವಾಸಕೊಂಡು ಧೂಳೆಬ್ಬಿಸುತ್ತಿವೆ.
ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಚುನಾವಣ ಕಾವು ಈಗಷ್ಟೇ ಶುರುವಾಗಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ವಲಯದಲ್ಲಿ ಒಂದಷ್ಟು ಹುರುಪು, ಉತ್ಸಾಹ ಕಾಣುತ್ತಿದೆ. ಅಲ್ಲದೆ ಹಲವು ಕಡೆ ಅಸಮಾಧಾನವೂ ಇದೆ. ಅಧಿಕಾರ ಇದ್ದಾಗ ಸರಿಯಾಗಿ ನಡೆಸಿಕೊಂಡಿಲ್ಲ, ಅಧಿಕಾರ ನೀಡಿಲ್ಲ ಎಂಬ ಕೊರಗು ಇದೆ. ಹೀಗಾಗಿ ಕಾರ್ಯಕರ್ತರನ್ನು ಸರಿಪಡಿಸಿಕೊಂಡು ಮುನ್ನುಗ್ಗುವ ಪ್ರಯತ್ನಗಳು ನಡೆದಿವೆ.

ಟ್ರೆಂಡ್‌ ಸೆಟ್‌ಗೆ ಸಿದ್ಧ ವಾ ಗದ ಭೂಮಿಕೆ
ಜನ ಸೇರುವುದು ಬೇರೆ, ಜನ ಬರುವುದು ಬೇರೆ. ಈಗ ನಡೆಯುತ್ತಿರುವ ರಾಜಕೀಯ ಪಕ್ಷಗಳ ಸಮಾವೇಶದಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಜನಜಂಗುಳಿ ಎಲ್ಲ ಪಕ್ಷಗಳ ಸಮಾವೇಶಗಳಲ್ಲೂ ಕಂಡುಬರುತ್ತದೆ. ಟಿಕೆಟ್‌ ಆಕಾಂಕ್ಷಿಗಳು ಸ್ಥಳೀಯವಾಗಿ ತಮ್ಮ ಶಕ್ತಿಪ್ರದರ್ಶನ ಮಾಡಲು ಜನರನ್ನು ಸೇರಿಸುತ್ತಿದ್ದಾರೆ. ಅವು ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆ ಆಗುತ್ತವೆ ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ. ಆದರೆ ಕಾರ್ಯಕರ್ತರಿಗೆ ಮಾತ್ರ ಇದು ಸುಗ್ಗಿಕಾಲ. ಚುನಾವಣ ಕಾವು ಮತದಾರ ಸಮುದಾಯಕ್ಕೆ ಬಿಸಿ ತಟ್ಟಿಲ್ಲ. ಹೀಗಾಗಿ “ಟ್ರೆಂಡ್‌ ಸೆಟ್‌’ ಆಗಿಲ್ಲ. ಬಜೆಟ್‌ ಮಂಡನೆ ಅಥವಾ ಅಧಿವೇಶನ ಮುಗಿದ ಬಳಿಕ ಎಲ್ಲರೂ ಕ್ಷೇತ್ರಗಳಿಗೆ ದೌಡಾಯಿಸುವುದರಿಂದ ಚುನಾವಣ ಕಾವು ಏರತೊಡಗುವ ಸಾಧ್ಯತೆಗಳಿದ್ದು ಅಲ್ಲಿಂದ “ಟ್ರೆಂಡ್‌ ಸೆಟ್‌’ಗೆ ಭೂಮಿಕೆ ಸಿದ್ಧವಾಗಲಿದೆ.

– ಎಂ.ಎನ್‌.ಗುರುಮೂರ್ತಿ

ಟಾಪ್ ನ್ಯೂಸ್

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Kannada-Horata

Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.