![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 14, 2023, 12:42 PM IST
ದೊಡ್ಡಬಳ್ಳಾಪುರ: ಬೇಸಿಗೆ ಕಾಲ ಬಂತೆಂದರೆ ಬೆಂಕಿ ಬಿದ್ದು ಬೆಟ್ಟ-ಗುಡ್ಡಗಳು ಸುಟ್ಟುಹೋಗುವುದು ಸಾಮಾನ್ಯವಾದರೂ, ಬೆಟ್ಟದ ತಪ್ಪಲಿನಲ್ಲಿ ಕೃಷಿ ಭೂಮಿ ಹಸನು ಮಾಡಿಕೊಳ್ಳಲು ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚುವ ಪರಿಪಾಠ ಬೆಳೆಸಿಕೊಂಡಿದ್ದಾರೆ ಎಂದು ಜಿಲ್ಲೆಯ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಾಕಳಿ ಬೆಟ್ಟದ ತಪ್ಪಲಿನಲ್ಲಿ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡು ಎಕರೆಗಳಷ್ಟು ಅರಣ್ಯ ಸುಟ್ಟು ಭಸ್ಮವಾಗಿದೆ. ಇನ್ನು ಇಲ್ಲಿನ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸುವ ಪ್ರಮಾಣ ತೀರಾ ಕಡಿಮೆ. ಆದರೂ, ಬೇಸಿಗೆಯಲ್ಲಿ ತಾಲೂಕಿನ ಅರಣ್ಯ ಪ್ರದೇಶಗಳಿಗೆ ಪ್ರತಿವರ್ಷ ಬೆಂಕಿ ಬೀಳುವುದು ಹೆಚ್ಚು ಕಂಡುಬರುತ್ತಿದೆ.
ಕೆಲಸ ಮಾಡುತ್ತಿಲ್ಲ: ಮಾಕಳಿ ಬೆಟ್ಟದಲ್ಲಿ ಬೆಳೆದು ವಿವಿಧ ಜಾತಿಯ ಗಿಡಗಳು, ಪ್ರಾಣಿ, ಪಕ್ಷಿಗಳು ಬೆಂಕಿ ಕೆನ್ನಾಲಿಗೆಗೆ ಬಲಿಯಾಗಿವೆ. ಬೆಟ್ಟದ ತಪ್ಪಲಿನಲ್ಲಿ ಕೃಷಿ ಭೂಮಿ ಹಸನು ಮಾಡಿಕೊಳ್ಳುವ ಉದ್ದೇಶದಿಂದಲೇ ಬೆಟ್ಟದ ತಪ್ಪಲಿನಲ್ಲಿ ಬೆಂಕಿ ಹಚ್ಚಲಾಗುತ್ತಿದೆ ಎಂಬುದು ಪರಿಸರ ಪ್ರೇಮಿಗಳ ಮಾತಾಗಿದೆ. ಇನ್ನು ಬೆಂಕಿ ಕಾಣಿ ಸಿಕೊಂಡಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಅಧಿಕಾರಿಗಳು ಬೆಂಕಿ ನಂದಿಸುವ ಕೆಲಸ ಮಾಡುತ್ತಿಲ್ಲ ಎಂದು ದೂರುತ್ತಿದ್ದಾರೆ.
ನಿರ್ಲಕ್ಷ್ಯ: ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಅರಣ್ಯ ಭಾಗದಲ್ಲಿ ಬೆಂಕಿ ಬಿದ್ದರೆ ನಂದಿಸುವ ಬಗ್ಗೆ ಎಚ್ಚರ ವಹಿಸಲು ತಾತ್ಕಾಲಿಕ ಕಂಟೊ›àಲ್ ರೂಂ ಸ್ಥಾಪನೆ ಮಾಡಲು ಜನ ಆಗ್ರಹಿಸುತ್ತಿದ್ದರೂ ಅರಣ್ಯ ಇಲಾಖೆ ಇನ್ನೂ ಸಿದ್ಧತೆ ನಡೆಸದಿರುವುದು ನಿರ್ಲಕ್ಷ್ಯಕ್ಕಿಡಿದ ಕನ್ನಡಿಯಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 14 ಮೀಸಲು ಅರಣ್ಯ ಪ್ರದೇಶ ಸೇರಿ 20, 296 ಎಕರೆ ಅರಣ್ಯವಿದೆ. ಮಾಕಳಿ ದುರ್ಗ, ಉಜ್ಜನಿ, ಮುದ್ದೇನಹಳ್ಳಿ, ಘಾಟಿ ಸುಬ್ರಹ್ಮಣ್ಯ, ಹುಲುಕುಡಿ, ದೇವರಬೆಟ್ಟ, ಗಂಡ್ರ ಗೋಳಿಪುರದ ಅರಣ್ಯ, ಕಲ್ಲುಕೋಟೆ ಸೇರಿದಂತೆ ಸುಮಾರು 5,000 ಎಕರೆಗಿಂತಲೂ ಹೆಚ್ಚು ಅರಣ್ಯ ಪ್ರದೇಶ ಹಲವು ಬಾರಿ ನಡೆದ ಬೆಂಕಿ ಪ್ರಕರಣಗಳಲ್ಲಿ ಸಿಲುಕಿ ಸುಟ್ಟು ಕರಕಲಾಗಿವೆ.
ಬೆಂಕಿ ನಂದಿಸಲು ಕೈಗೊಳ್ಳಬೇಕಿರುವ ಕ್ರಮಗಳು :
ಬೆಂಕಿ ಬಿದ್ದರೆ ಕ್ಷಣ ಮಾತ್ರದಲ್ಲಿ ಸುಟ್ಟುಹೋಗುತ್ತದೆ. ಅರಣ್ಯ ಇಲಾಖೆ ತಮ್ಮ ಪ್ರಯತ್ನದೊಂದಿಗೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. – ಚಿದಾನಂದ್, ಯುವ ಸಂಚಲನದ ಅಧ್ಯಕ್ಷ
-ಡಿ.ಶ್ರೀಕಾಂತ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.