ಮಾರ್ಚ್‌ ಅಂತ್ಯಕ್ಕೆ ಚತುಷ್ಪಥ ರಸ್ತೆ ಪೂರ್ಣ


Team Udayavani, Feb 14, 2023, 1:22 PM IST

tdy-18

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75 ಚತುಷ್ಪಥ ರಸ್ತೆ ಕಾಮಗಾರಿ ಸಕಲೇಶಪುರ ಹಾಸನದವರೆಗೆ ಬಹುತೇಕವಾಗಿ ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿದೆ. ಆದರೆ, ಬೈಪಾಸ್‌ ರಸ್ತೆ ಕಾಮಗಾರಿ ಮುಗಿಯುವುದು ಸದ್ಯಕ್ಕೆ ಅನು ಮಾನವಾಗಿರುವುದರಿಂದ ಪಟ್ಟ ಣದ ಜನತೆ ಟ್ರಾಫಿಕ್‌ ಕಿರಿಕಿರಿಯಿಂದ ಮುಕ್ತರಾಗುವುದು ಅನುಮಾನವಾಗಿದೆ.

ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯಿಂದಾಗಿ ನರಕವಾಗಿದ್ದ ಸಕಲೇಶಪುರ-ಹಾಸನದ ನಡುವಿನ ಸಂಚಾರ ಸತತ ಆರು ವರ್ಷಗಳ ನಂತರ ಸುಗುಮವಾಗುವ ಹಂತ ತಲುಪಿದೆ. ಹಾಸನದ ಹೊರವರ್ತುಲ ರಸ್ತೆಯಿಂದ ತಾಲೂಕಿನ ಹೆಗದ್ದೆ ಗ್ರಾಮದ ಹೊರವಲಯದವರಗಿನ 45 ಕಿ.ಮಿ ರಸ್ತೆ ಚತುಷ್ಪಥಕ್ಕೆ 2016ರಲ್ಲಿ ಟೆಂಡರ್‌ ಕರೆಯಲಾಗಿದೆ. 2019ರ ಏಪ್ರಿಲ್‌ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಕಾಮಗಾರಿ ಕೈಗೆತ್ತಿಕೊಂಡ ಐಸೋಲೆಕ್ಸ್‌ ಕಂಪನಿ ಯಾವುದೇ ಮುಂದಾಲೋಚನೆ ಇಲ್ಲದೆ ತುಂಡು ಗುತ್ತಿಗೆ ನೀಡುವ ಮೂಲಕ 45 ಕಿ.ಮೀ. ರಸ್ತೆಗಾಗಿ ಇಕ್ಕೆಲಗಳಲ್ಲಿನ ಮಣ್ಣು ತೆಗೆದ ಪರಿಣಾಮ ಹಲವೆಡೆ ಭೂ ಕುಸಿತಕ್ಕೆ ಕಾರಣವಾಗಿತ್ತು.

ಇನ್ನೂ ಐಸೋಲೆಕ್ಸ್‌ ಕಂಪನಿ ದಿವಾಳಿಯಾಗಿದ್ದರಿಂದ ಐಸೋಲೆಕ್ಸ್‌ ಕಂಪನಿಯಿಂದ ಉಪಗುತ್ತಿಗೆ ಪಡೆದ ರಾಜ್‌ಕಮಲ್‌ ಕಂಪನಿ ಕಳೆದ 5 ವರ್ಷಗಳಿಂದ ಕಾಮಗಾರಿಯನ್ನು ಆಮೆ ಗತಿಯಲ್ಲಿ ನಡೆಸುತ್ತಿದೆ. ಇದೀಗ ಹಾಸನ ಸಕಲೇಶಪುರ ನಡುವೆ ಕಾಮಗಾರಿ ಬಹುತೇಕವಾಗಿ ಮುಕ್ತಾಯದ ಹಂತಕ್ಕೆ ಬಂದಿದೆ.

ಬೈಪಾಸ್‌ ರಸ್ತೆ ಕಾಮಗಾರಿ ಇನ್ನೂ ವಿಳಂಬ: ಬೈಪಾಸ್‌ ರಸ್ತೆಯಲ್ಲಿ ಬಹುತೇಕ ಕಾಂಕ್ರೀಟಿಕರಣ ಮುಗಿದಿದೆ. ಆದರೆ, ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒಂದು ಮೇಲ್ಸು ತುವೆ, ಒಂದು ಅಂಡರ್‌ ಪಾಸ್‌ ಹಾಗೂ ಹೇಮಾವತಿ ನದಿಗೆ ಸೇತುವೆ ನಿರ್ಮಾಣವಾಗಬೇಕಾಗಿದ್ದು, ಈ ಕಾಮ ಗಾರಿಗಳು ಸದ್ಯಕ್ಕೆ ಮುಗಿಯು ವುದು ಅನುಮಾನವಾಗಿದೆ. ಇದರಿಂದಾಗಿ ಪಟ್ಟಣದ ಜನತೆ ಟ್ರಾμಕ್‌ ಕಿರಿ ಕಿರಿಯಿಂದ ಮುಕ್ತಾಯಗೊಳ್ಳುವುದು ಅನುಮಾನವಾಗಿದೆ.

ಟ್ರಾಫಿಕ್‌ ಕಿರಿಕಿರಿ: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ದಿನ ನಿತ್ಯ 10000ಕ್ಕೂ ಹೆಚ್ಚು ವಾಹನಗಳು ಸಂಚರಿಸುವು ದರಿಂದ ಚತುಷ್ಪಥ ರಸ್ತೆ ಕಾಮಗಾರಿಯನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಸಮಸ್ಯೆಯನ್ನು ಜನಪ್ರತಿನಿಧಿಗಳು ಬಗೆಹರಿಸದ ಕಾರಣ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು, ಇದೀಗ ಬೈಪಾಸ್‌ ರಸ್ತೆ ಕಾಮಗಾರಿ ವಿಳಂಬವಾಗುತ್ತಿದ್ದು, ಇದರಿಂದ ಪಟ್ಟಣದ ಜನ ಟ್ರಾಫಿಕ್‌ ಕಿರಿಕಿರಿ ಅನುಭವಿಸಬೇಕಾಗಿದೆ. ಹಾಸನ ದಿಂದ ಸಕಲೇಶಪುರಕ್ಕೆ 40 ನಿಮಿಷಕ್ಕೆ ಬಂದರೆ, ಸಕಲೇಶಪುರ ಪಟ್ಟಣದ ಬಾಳೆ ಗದ್ದೆಯಿಂದ ಆನೆಮಹಲ್‌ ದಾಟಲು 30 ನಿಮಿಷಕ್ಕೂ ಹೆಚ್ಚು ಕಾಲ ತೆಗೆದುಕೊಳ್ಳುತ್ತಿದೆ. ಇದರಿಂದ ಪಟ್ಟಣ ವ್ಯಾಪ್ತಿಯಲ್ಲಿ ಸಂಚರಿಸುವ ವರು ಸಹ ಟ್ರಾಫಿಕ್‌ ಕಿರಿಕಿರಿಗೆ ಸಿಕ್ಕಿ ಹಾಕಿಕೊಳ್ಳು ವಂತಾಗಿದೆ. ಅದರಲ್ಲೂ ಕೆಲವೊಂದು ಧಾರ್ಮಿಕ ಕಾರ್ಯಕ್ರಮಗಳು, ಪ್ರತಿಭಟನೆ ಕಾರ್ಯಕ್ರಮಗಳು, ರಾಜಕೀಯ ಪಕ್ಷ ಗಳ ಕಾರ್ಯಕ್ರಮಗಳ ವೇಳೆ ಅಪಾರ ಜನ ಸೇರುವುದರಿಂದ ಟ್ರಾಫಿಕ್ ಅವ್ಯವಸ್ಥೆ ಆಗಾಗ ಕಂಡು ಬರು ತ್ತಲೆ ಇರುತ್ತದೆ.

ಮಾರ್ಚ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣ : ಸದ್ಯ ಕಾಮಗಾರಿ ಕೈಗೆತ್ತಿಕೊಂಡಿರುವ ರಾಜ್‌ಕಮಲ್‌ ಕಂಪನಿ ನೀಡಿರುವ ಗುತ್ತಿಗೆ ಅವಧಿ 2023 ಮಾರ್ಚ್‌ ಅಂತ್ಯಕ್ಕೆ ಕೊನೆಗಾಣಲಿರುವುದರಿಂದ ಕನಿಷ್ಠ ಸಕಲೇಶಪುರದವರಗೆ ಚತುಷ್ಪಥ ಕಾಮಗಾರಿ ಮುಗಿಸುವ ಯೋಜನೆ ಹಾಕಿಕೊಂಡಿರುವ ಕಂಪನಿ ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿದೆ. ಆದರೂ ಸಹ ಕೌಡಹಳ್ಳಿ ಸಮೀಪ ಹೇಮಾವತಿ ನದಿಗೆ ಸೇತುವೆ ನಿರ್ಮಾಣ ಹಾಗೂ ಹಾಲೇಬೇಲೂರು ಪಟ್ಟಣ ಸಂಪರ್ಕಿಸುವ ರಸ್ತೆ ಅಂಡರ್‌ ಪಾಸ್‌ ಹಾಗೂ ಕೊಲ್ಲಹಳ್ಳಿ ಮೇಲ್ಸುತವೆ ಕಾಮಗಾರಿ ಸದ್ಯಕ್ಕೆ ಮುಗಿಯುವುದು ಅನುಮಾನವಾಗಿದೆ.

ಮಂಗಳೂರು ಬೆಂಗಳೂರು ನಡುವೆ ಸರಕು ಸಾಗಾಣೆಗಾಗಿ ಸಂಚರಿಸುವ 10 ಚಕ್ರದ ಲಾರಿಗಳು, ಟ್ಯಾಂಕರ್‌ ಗಳಿಂದ ಹಿಡಿದು ಇತರ ಟ್ರಕ್‌ಗಳು, ಕಾರುಗಳು, ದ್ವಿಚಕ್ರವಾಹನಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಪಟ್ಟಣದ ಮುಖಾಂತರವೇ ತಿರುಗಾಡಬೇಕಾಗಿರುವುದರಿಂದ ಜನಸಾಮಾನ್ಯರು ಟ್ರಾಫಿಕ್‌ಗೆ ಹಿಡಿಶಾಪ ಹಾಕುವುದು ಕಂಡು ಬರುತ್ತಿದೆ.

ಸಕಲೇಶಪುರದಿಂದ ಮಾರನಹಳ್ಳಿವರೆಗೆ ಚತುಷ್ಪಥ ರಸ್ತೆ ಕಾಮಗಾರಿ ನಡೆಸಲು ಗುತ್ತಿಗೆ ಪಡೆದಿರುವ ರಾಜ್‌ಕಮಲ್‌ ಕಂಪನಿ ಕಾಮಗಾರಿ ಕಳೆದ 6 ವರ್ಷಗಳಿಂದ ವಿಳಂಬಗತಿಯಲ್ಲಿ ಕಾಮಗಾರಿ ನಡೆಸುತ್ತಿದ್ದು ಈ ಕುರಿತು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿರವರ ಗಮನಕ್ಕೆ ತರಲಾಗಿದೆ. – ಎಚ್‌.ಕೆ ಕುಮಾರಸ್ವಾಮಿ, ಶಾಸಕ

ಪಟ್ಟಣದಲ್ಲಿ ಟ್ರಾಫಿಕ್‌ ಕಿರಿಕಿರಿಯಿಂದ ಆಟೋ ಚಾಲಕರು ತೊಂದರೆ ಅನು ಭವಿಸುವಂತಾಗಿದೆ. ಈ ಹಿನ್ನೆಲೆ ಬೈಪಾಸ್‌ ರಸ್ತೆ ಕಾಮಗಾರಿಯನ್ನು ವೇಗವಾಗಿ ಮುಗಿಸಲು ಕ್ರಮ ಕೈಗೊಳ್ಳಬೇಕು. – ರವಿ, ಆಟೋಚಾಲಕ

– ಸುಧೀರ್‌ ಎಸ್‌.ಎಲ್‌

ಟಾಪ್ ನ್ಯೂಸ್

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

13

ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನ ಸಮರ್ಪಣೆ

12

Politics: ಖರ್ಗೆ ತಳ್ಳಿದ ಡಿಕೆಶಿ; ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಟೀಕಿಸಿದ ಬಿಜೆಪಿ

Karkala: ಗ್ರಾಹಕನ ಸೋಗಿನಲ್ಲಿ ಜ್ಯುವೆಲರಿ ಶಾಪ್‌ಗೆ ಬಂದು ಒಡವೆ ಕದ್ದು ಪರಾರಿಯಾದ ಕಳ್ಳ

Karkala: ಗ್ರಾಹಕನ ಸೋಗಿನಲ್ಲಿ ಜ್ಯುವೆಲರಿ ಶಾಪ್‌ಗೆ ಬಂದು ಒಡವೆ ಕದ್ದು ಪರಾರಿಯಾದ ಕಳ್ಳ

1-mn

Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ

Road Mishap: ಬೈಕ್‌ ವ್ಹೀಲಿಂಗ್‌ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು

Road Mishap: ಬೈಕ್‌ ವ್ಹೀಲಿಂಗ್‌ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು

10

Poonch; ಸೇನಾ ವಾಹನ ದುರಂತ: ಕೊಡಗಿನ ಯೋಧ ಚಿಂತಾಜನಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ 

State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ 

H. D. Deve Gowda: ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ತಂದವರು ಸಿಂಗ್‌: ದೇವೇಗೌಡ

H. D. Deve Gowda: ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ತಂದವರು ಸಿಂಗ್‌: ದೇವೇಗೌಡ

sand

Karkala: ಪರವಾನಿಗೆ ಇಲ್ಲದೆ ಮರಳು ಲೂಟಿ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

ssa

Manipal: ಗಾಂಜಾ ಸೇವನೆ; ವ್ಯಕ್ತಿ ಪೊಲೀಸ್‌ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.