ಗುಂಡ್ಲುಪೇಟೆ: ವಿದ್ಯುತ್ ಸ್ಫರ್ಶದಿಂದ ನಿತ್ರಾಣಗೊಂಡ ಹೆಣ್ಣಾನೆ
Team Udayavani, Feb 14, 2023, 2:43 PM IST
ಗುಂಡ್ಲುಪೇಟೆ(ಚಾಮರಾಜನಗರ): ವಿದ್ಯುತ್ ತಂತಿ ತಗುಲಿ ಹೆಣ್ಣಾನೆಯೊಂದು ನಿತ್ರಾಣಗೊಂಡಿರುವ ಘಟನೆ ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಓಂಕಾರ ಅರಣ್ಯ ವಲಯ ಪ್ರದೇಶದ ಬರಗಿ ಹತ್ತಿರದ ನಾಗಪಟ್ಟಣದ ಬಳಿ ನಡೆದಿದೆ.
ಪುತ್ತನಪುರ ರಾಜು ಎಂಬವವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಹೆಣ್ಣಾನೆಯು ಮೇವು ಅರಸಿ ರಾಜು ಅವರ ಜಮೀನಿನ ಮಾರ್ಗವಾಗಿ ಬರುತ್ತಿದ್ದ ವೇಳೆ ಜಮೀನಿನಲ್ಲಿ ಅಳವಡಿಕೆ ಮಾಡಿದ್ದ ತಂತಿ ಬೇಲಿಗೆ ಸಿಲುಕಿ ವಿದ್ಯುತ್ ಸ್ಫರ್ಶವಾದ ಕಾರಣ ನಿತ್ರಾಣಗೊಂಡಿದೆ ಎನ್ನಲಾಗುತ್ತಿದೆ.
ಮಾಹಿತಿ ದೊರೆತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ನಂತರ ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ವಾಸೀಂ ಮಿರ್ಜಾ ಅವರನ್ನು ಕರೆಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಆನೆಗೆ ತೀವ್ರತರವಾಗಿ ವಿದ್ಯುತ್ ಸ್ಫರ್ಶವಾಗಿದೆ ಎಂದು ತಿಳಿದು ಬಂದಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ ಎಂದು ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.