ಕೆನಡಾ: ರಾಮ ಮಂದಿರದ ಮೇಲೆ ಹಿಂದೂ ವಿರೋಧಿ ಬರಹ; ಸೂಕ್ತ ಕ್ರಮಕ್ಕೆ ಆಗ್ರಹ
Team Udayavani, Feb 15, 2023, 9:40 AM IST
ಟೊರೊಂಟೊ (ಕೆನಡಾ) : ಕೆನಡಾದ ಹಿಂದೂ ದೇವಾಲಯದ ಮೇಲೆ ಹಿಂದೂ ವಿರೋಧಿ, ದೇಶ ವಿರೋಧಿ ಗೋಡೆ ಬರಹ ಬರೆದ ಘಟನೆ ಬೆಳಕಿಗೆ ಬಂದಿದೆ.
ಕೆನಡಾದ ಮಿಸ್ಸಿಸೌಗಾದಲ್ಲಿರುವ ರಾಮ ಮಂದಿರದ ಗೋಡೆಗಳ ಹಿಂದೂ ವಿರೋಧಿ ಗೋಡೆ ಬರಹವನ್ನು ಕಿಡಿಗೇಡಿಗಳು ಬರೆದಿದ್ದಾರೆ. ಪ್ರಧಾನಿ ಮೋದಿ ಅವರ ಬಗ್ಗೆಯೂ ಆಕ್ಷೇಪಾರ್ಹ ಬರಹವನ್ನು ಬರೆದು, ಬಿಬಿಸಿಯ ಹೆಸರನ್ನು ಬರೆದಿದ್ದಾರೆ.
ಈ ಘಟನೆಗೆ ಟೊರೊಂಟೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತೀವ್ರವಾಗಿ ಖಂಡಿಸಿದ್ದು,ನಾವು ಮಿಸ್ಸಿಸೌಗಾದ ರಾಮ ಮಂದಿರದಲ್ಲಿ ಬರೆದ ದೇಶ ಹಾಗೂ ಹಿಂದೂ ವಿರೋಧಿ ಗೋಡೆ ಬರಹವನ್ನು ಖಂಡಿಸುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಲು ಹೇಳಿದ್ದೇವೆ ಎಂದಿದೆ.
ಇತ್ತೀಚೆಗೆ ಕೆನಡಾದ ಬ್ರಾಂಪ್ಟನ್ ನಲ್ಲಿರುವ ಹಿಂದೂ ದೇವಾಲಯವನ್ನು ಭಾರತ ವಿರೋಧಿ ಬರಹದಿಂದ ವಿರೂಪಗೊಳಿಸಲಾಗಿತ್ತು. ಇದು ಭಾರತೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. 2022ರ ಸೆಪ್ಟೆಂಬರ್ ನಲ್ಲಿ, ಕೆನಡಾದ ಸ್ವಾಮಿನಾರಾಯಣ ಮಂದಿರವನ್ನು ಭಾರತ ವಿರೋಧಿ ಗೀಚುಬರಹದ ಮೂಲಕ ಕೆನಡಿಯನ್ ಖಲಿಸ್ತಾನಿ ಉಗ್ರಗಾಮಿಗಳು ವಿರೂಪಗೊಳಿಸಿದ್ದರು.
We strongly condemn the defacing of Ram Mandir in Missisauga with anti-India graffiti. We have requested Canadian authorities to investigate the incident and take prompt action on perpetrators.
— IndiainToronto (@IndiainToronto) February 14, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.