ನಿಮ್ಮ ಮಕ್ಕಳಿಗೆ ಇಂತಹ ಕಳಪೆ ಊಟ ನೀಡುತ್ತೀರಾ? IRCTC ವಿರುದ್ಧ ಮಹಿಳಾ ಪ್ರಯಾಣಿಕರ ಟ್ವೀಟ್

ಈ ಪೋಸ್ಟ್ ಯಾವುದೇ ಐಆರ್ ಸಿಟಿಸಿ ಸಿಬಂದಿಯನ್ನು ಗುರಿಯಾಗಿರಿಸಿ ಬರೆದಿಲ್ಲ

Team Udayavani, Feb 15, 2023, 12:21 PM IST

ನಿಮ್ಮ ಮಕ್ಕಳಿಗೆ ಇಂತಹ ಕಳಪೆ ಊಟ ನೀಡುತ್ತೀರಾ? IRCTC ವಿರುದ್ಧ ಮಹಿಳಾ ಪ್ರಯಾಣಿಕರ ಟ್ವೀಟ್

ನವದೆಹಲಿ: ನಾವು ಯಾವಾಗಲೂ ದೀರ್ಘ ಪ್ರಯಾಣಕ್ಕಾಗಿ ರೈಲನ್ನೇ ಹೆಚ್ಚು ಇಷ್ಟಪಡುತ್ತೇವೆ. ಅದರ ಜೊತೆಗೆ ರೈಲು ಪ್ರಯಾಣದಲ್ಲಿ ಅತೀ ರೋಮಾಂಚನಾಕಾರಿ ಭಾಗವೆಂದರೆ ತಿನ್ನಲು ಸಿಗುವ ಆಯಾ ಪ್ರದೇಶದ ತಿಂಡಿ, ತಿನಿಸುಗಳು. ಆದರೆ ಇತ್ತೀಚೆಗೆ ಐಆರ್ ಸಿಟಿಸಿಯ ಕಳಪೆ ಗುಣಮಟ್ಟದ ಆಹಾರದಿಂದಾಗಿ ಮನೆಯಿಂದಲೂ ತಿಂಡಿ, ಊಟವನ್ನು ತೆಗೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಭಾರತೀಯ ರೈಲ್ವೆಯಲ್ಲಿ ನೀಡಿರುವ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ಮಹಿಳಾ ಪ್ರಯಾಣಿಕರೊಬ್ಬರು ಟ್ವೀಟರ್ ನಲ್ಲಿ ಶೇರ್ ಮಾಡಿರುವುದು ವೈರಲ್ ಆಗಿದೆ.

ಇದನ್ನೂ ಓದಿ:ಬಿಲಿಯನ್‌ ಡಾಲರ್‌ ಟ್ವಿಟರ್‌ ಸಂಸ್ಥೆಗೆ ಈ ನಾಯಿಯೇ ಸಿಇಒ.! : ಎಲಾನ್‌ ಮಸ್ಕ್‌ ಟ್ವೀಟ್‌ ವೈರಲ್

ಇತ್ತೀಚೆಗೆ ಐಆರ್ ಸಿಟಿಸಿಯಲ್ಲಿ ಪ್ರಯಾಣಿಸಿದ್ದ ಭೂಮಿಕಾ ಎಂಬವರು, ಟ್ವೀಟರ್ ನಲ್ಲಿ ಅರ್ಧ ತಿಂದ ದಾಲ್, ಸಬ್ಜಿ, ರೊಟ್ಟಿ ಮತ್ತು ಅನ್ನದ ಫೋಟೋವನ್ನು ಶೇರ್ ಮಾಡಿದ್ದು, “ಐಆರ್ ಸಿಟಿಸಿ ಅಧಿಕಾರಿಗಳೇ ನೀವು ಎಂದಾದರೂ ನಿಮ್ಮ ರೈಲ್ವೆ ಆಹಾರದ ರುಚಿ ನೋಡಿದ್ದೀರಾ? ನಿಮ್ಮ ಹೆಂಡತಿ, ಮಕ್ಕಳಿಗೆ ಇಂತಹ ಕೆಟ್ಟ ಗುಣಮಟ್ಟದ ಆಹಾರ ನೀಡುತ್ತೀರಾ? ಇದು ಕೈದಿಗಳಿಗೆ ನೀಡುವ ಆಹಾರದಂತಿದೆ. ದಿನದಿಂದ ದಿನಕ್ಕೆ ಟಿಕೆಟ್ ಬೆಲೆ ಹೆಚ್ಚಿಸುತ್ತೀರಿ, ಆದರೆ ನಿಮ್ಮ ಪ್ರಯಾಣಿಕರಿಗೆ ಮಾತ್ರ ಕಳಪೆ ಗುಣಮಟ್ಟದ ಊಟ ನೀಡುತ್ತೀರಿ” ಎಂದು ದೂರಿದ್ದಾರೆ.

ಈ ಪೋಸ್ಟ್ ಯಾವುದೇ ಐಆರ್ ಸಿಟಿಸಿ ಸಿಬಂದಿಯನ್ನು ಗುರಿಯಾಗಿರಿಸಿ ಬರೆದಿಲ್ಲ, ಇದು ಆಹಾರ ತಯಾರಿಸುವ ಸಿಬ್ಬಂದಿಯ ತಪ್ಪಲ್ಲ. ಅವರು ನಮಗೆ ಐಆರ್ ಸಿಟಿಸಿ ಆಹಾರ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಆಹಾರ ಸಿಬ್ಬಂದಿ ನಮ್ಮ ಹಣವನ್ನು ಮರುಪಾವತಿಸಲು ಮುಂದಾಗಿದ್ದರು, ಆದರೆ  ಅದು ಅವರ ತಪ್ಪಲ್ಲ ಎಂದು ಭೂಮಿಕಾ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಈ ಟ್ವೀಟ್ ಗೆ ಹಲವರು ಪ್ರತಿಕ್ರಿಯಿಸಿದ್ದು, ಇಂತಹ ಸಂದರ್ಭಗಳನ್ನು ತಪ್ಪಿಸಲು ಮನೆಯಿಂದ ಊಟ ಕೊಂಡೊಯ್ಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬ ಟ್ವೀಟರ್ ಬಳಕೆದಾರ, ರೈಲ್ವೆ ಆಹಾರ ಸೇವೆ ತುಂಬಾ ಕೆಟ್ಟದ್ದಾಗಿದೆ. ವೆಬ್ ಸೈಟ್  ತುಂಬಾ ಕಳಪೆ ಮಟ್ಟದ್ದಾಗಿದೆ. ಶುಲ್ಕ ದುಬಾರಿಯಾದರೂ ಕೂಡಾ ಗುಣಮಟ್ಟ ಮಾತ್ರ ಕಳಪೆಯಾಗಿದೆ ಎಂದು ಆರೋಪಿಸಿದ್ದಾರೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.