ರಾಷ್ಟ್ರೀಯ ಪಕ್ಷಗಳಿಗೆ ದೇಣಿಗೆ ಪ್ರಮಾಣ ಏರಿಕೆ
Team Udayavani, Feb 16, 2023, 5:50 AM IST
ರಾಜಕೀಯ ಪಕ್ಷಗಳಿಗೆ ಆದಾಯದ ಮೂಲ ಎಂದರೆ ದೇಣಿಗೆಯೇ. ವಿಶೇಷವಾಗಿ ಕೈಗಾರಿಕಾ ಸಂಸ್ಥೆಗಳು, ಶ್ರೀಮಂತರು ಬೃಹತ್ ಮೊತ್ತವನ್ನು ದೇಣಿಗೆಯಾಗಿ ನೀಡುತ್ತಾರೆ. 2021-22ನೇ ಸಾಲಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಾಪ್ತವಾಗಿರುವ ದೇಣಿಗೆ ಪ್ರಮಾಣ 187.02 ಕೋಟಿ ರೂ.(ಶೇ.31.50) ಏರಿಕೆಯಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾಮ್ಸ್ (ಎಡಿಆರ್) ನಡೆಸಿದ ಅಧ್ಯಯನ ತಿಳಿಸಿದೆ.
7,141- ದೇಣಿಗೆ ನೀಡಿದವರ ಸಂಖ್ಯೆ
780.77 ಕೋಟಿ ರೂ.- ಸಂಗ್ರಹವಾದ ಒಟ್ಟು ಮೊತ್ತ
614 ಕೋಟಿ ರೂ.- 2021-22ರಲ್ಲಿ ಬಿಜೆಪಿಗೆ ಸಿಕ್ಕಿರುವುದು
477.55 ಕೋಟಿ ರೂ.- 2020-21ರಲ್ಲಿ ಬಿಜೆಪಿಗೆ ಪ್ರಾಪ್ತವಾಗಿದ್ದು
95 ಕೋಟಿ ರೂ.-2021-22ರಲ್ಲಿ ಕಾಂಗ್ರೆಸ್‌ಗೆ ಸಿಕ್ಕಿರುವುದು
74.52 ಕೋಟಿ ರೂ.- 2020-21ನೇ ಸಾಲಿನಲ್ಲಿ ಕಾಂಗ್ರೆಸ್‌ಗೆ ಸಿಕ್ಕಿದ್ದು
2.85 ಕೋಟಿ ರೂ.- ಸಿಪಿಎಂಗೆ ಸಿಕ್ಕಿದ್ದು
24.10 ಲಕ್ಷ ರೂ. – ಎನ್‌ಸಿಪಿ ಪಡೆದ ದೇಣಿಗೆ
2,551 ದೇಣಿಗೆಗಳು- ಪಕ್ಷಗಳಿಗೆ ಕಾರ್ಪೊರೇಟ್/ ಉದ್ದಿಮೆ ವಲಯದ ಕೊಡುಗೆ
4, 506 ದೇಣಿಗೆಗಳು- ವೈಯಕ್ತಿಕ ನೆಲೆಯಲ್ಲಿ ಪಾವತಿಯಾಗಿರುವುದು
ಎನ್‌ಸಿಪಿ, ಸಿಪಿಐ, ಸಿಪಿಎಂ, ಎನ್‌ಪಿಇಪಿ ಮತ್ತು ತೃಣಮೂಲ ಕಾಂಗ್ರೆಸ್‌ಗೆ ಸಿಕ್ಕಿರುವ ಒಟ್ಟು ದೇಣಿಗೆಗಿಂತ ಬಿಜೆಪಿಗೆ ಸಿಕ್ಕಿರುವ ಮೊತ್ತ 3 ಪಟ್ಟು ಹೆಚ್ಚು.
– ಬಿಎಸ್‌ಪಿಗೆ 20 ಸಾವಿರ ರೂ.ಗಳಿಗಿಂತ ಹೆಚ್ಚು ಮೊತ್ತದ ದೇಣಿಗೆ ಸಿಕ್ಕಿಲ್ಲ
– ರಾಷ್ಟ್ರೀಯ ಪಕ್ಷಗಳಿಗೆ ಹೆಚ್ಚಿನ ಮೊತ್ತ ದೇಣಿಗೆಯಾಗಿ ಸಲ್ಲಿಕೆಯಾಗಿರುವುದು ದೆಹಲಿಯಿಂದ. ಅದರ ಮೌಲ್ಯ 395.85 ಕೋಟಿ ರೂ.
– ಮಹಾರಾಷ್ಟ್ರದಿಂದ ಎರಡನೇ ಅತ್ಯಂತ ಹೆಚ್ಚಿನ ದೇಣಿಗೆ ಸಲ್ಲಿಕೆ. ಅದರ ಮೌಲ್ಯ 105.35 ಕೋಟಿ ರೂ.
– ಗುಜರಾತ್‌ನಿಂದ ಮೂರನೇ ಅತ್ಯಂತ ಹೆಚ್ಚಿನ ದೇಣಿಗೆ ಸಲ್ಲಿಕೆ. ಅದರ ಮೌಲ್ಯ 44.96 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.