ಕಾಂಗ್ರೆಸ್ ನಲ್ಲಿ ಹತ್ತು ಜನ ಸಿಎಂ ರೇಸ್ ನಲ್ಲಿದ್ದು, ನಾನು ಕೂಡ ಒಬ್ಬ: ಡಾ. ಜಿ.ಪರಮೇಶ್ವರ್
ಬಸವರಾಜ ಬೊಮ್ಮಾಯಿ ಸುಳ್ಳಿನ ಸರದಾರ...
Team Udayavani, Feb 15, 2023, 10:25 PM IST
ಮಧುಗಿರಿ: ರಾಜ್ಯದ ಜನತೆಗೆ ಹಣವಿಲ್ಲದ ಸುಳ್ಳಿನ ಬಜೆಟ್ ಘೋಷಣೆ ಮಾಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಸುಳ್ಳಿನ ಸರದಾರ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಬಿಜೆಪಿ ವಿರೋಧ ಪಕ್ಷದಲ್ಲಿ ಇರಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ.ಪರಮೇಶ್ವರ್ ತಿಳಿಸಿದರು.
ತಾಲೂಕಿನ ಪುರವರ ಹೋಬಳಿಯ ಹನುಮಂತಪುರದಲ್ಲಿ ಕಾಂಗ್ರೆಸ್ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹಣ ನೀಡದೆ ಕೇವಲ ಖಾಲಿ ಬಜೆಟ್ ಘೋಷಣೆ ಮಾಡಿ ಜನರಿಗೆ ಮಂಕುಬೂದಿ ಎರಚುತ್ತಿರುವ ಸಿಎಂ ಬೊಮ್ಮಾಯಿ ಹಣ ನೀಡದೆ ವಂಚಿಸುತ್ತಿದ್ದಾರೆ. ಹಣ ನೀಡಿ ಬಜೆಟ್ ಘೋಷಣೆ ಮಾಡಿದರೆ ನಮ್ಮದೇನು ತಕರಾರು ಇಲ್ಲ ಕೇವಲ ಚುನಾವಣಾ ದೃಷ್ಟಿಯಿಂದ ಸುಳ್ಳಿನ ಬಜೆಟ್ ಮಂಡನೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು ಈ ತಿಂಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದೇವೆ ಎಂದರು.
ಹೊಸ ಪಕ್ಷಗಳಿಗೆ ನೆಲೆ ಇಲ್ಲ
ರಾಜ್ಯದಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ ರೆಡ್ಡಿ ಪಾರ್ಟಿ, ಎಂಐಎಂ, ಕೆಆರ್ ಎಸ್, ಇತರೆ ಪಕ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆಯಾಗಲ್ಲ. ಆದರೆ ಮೂರು ಪಕ್ಷಗಳ ಸ್ವಲ್ಪ ಮತಗಳನ್ನು ಪಡೆಯಬಹುದಷ್ಟೇ. ಜೆಡಿಎಸ್ 123 ಸ್ಥಾನಗಳ ಬಗ್ಗೆ ಉತ್ತರಿಸಿದ ಪರಂ, ಅದು ಒಂದು ಪ್ರಾದೇಶಿಕ ಪಕ್ಷವಾಗಿದ್ದು ಅವರದ್ದೆ ಆದ ರಿಪೋರ್ಟ್ ಇರುತ್ತದೆ. ಮೊದಲು 224 ಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ಉಳಿದದನ್ನು ನೋಡಬಹುದು. ಆದರೆ ಕಾಂಗ್ರೆಸ್ 224 ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದು, ಅಧಿಕಾರಕ್ಕೆ ಬರಲಿದೆ ಎಂದರು.
ಕಾಂಗ್ರೆಸ್ ನಲ್ಲಿ ಹತ್ತು ಜನ ಸಿಎಂ ರೇಸ್ ನಲ್ಲಿದ್ದು ನಾನು ಕೂಡ ಅದರಲ್ಲಿ ಒಬ್ಬ. ದಲಿತ ಸಿಎಂ ಬಗ್ಗೆ ಮಾತನಾಡಿದ ಅವರು ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕಿದ್ದು ದಲಿತ ಸಿಎಂ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು. ಲೆಕ್ಕಕೊಟ್ಟು ಮತ ಕೇಳುತ್ತಿದ್ದೇನೆ
ತಾಲೂಕಿನ ಅಭಿವೃದ್ಧಿಗೆ ಕಳೆದ ಐದು ವರ್ಷದಲ್ಲಿ ಎರಡುವರೆ ಸಾವಿರ ಕೋಟಿ ಅನುದಾನ ತಂದಿದ್ದು ಸಮಗ್ರ ಅಭಿವೃದ್ಧಿ ಮಾಡಿದ ತೃಪ್ತಿ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ, ಮನೆ ಯಜಮಾನಿಗೆ ಪ್ರತಿ ತಿಂಗಳು 2000 ಹಣ. ಹಾಗೂ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ನೀಡುವ ಕಾರ್ಯಕ್ರಮ ನೀಡಲಿದ್ದೇವೆ. ಕ್ಷೇತ್ರಕ್ಕೆ 20 ಸಾವಿರ ಮನೆಗಳನ್ನು ತಂದಿದ್ದು ಮೂಲಭೂತ ಕಾಮಗಾರಿಗಳನ್ನು ನೋಡಿ ನನಗೆ ಮತ ನೀಡುವಂತೆ ಮನವಿ ಮಾಡಿದರು.
ತಾಲೂಕು ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಭೈರಪ್ಪ ಮಾತನಾಡಿ ಕಳೆದ ಬಾರಿ ಮತಕೊಡದಿದ್ದರೂ ಹನುಮಂತಪುರ ಗ್ರಾಮಕ್ಕೆ 85 ಲಕ್ಷ ಅನುದಾನವನ್ನು ಶಾಸಕರು ನೀಡಿದ್ದಾರೆ. ಆದರೆ ಮಾಜಿ ಶಾಸಕರು ಯಾವುದೇ ಕೆಲಸ ಮಾಡದಿದ್ದರೂ ಪರಮೇಶ್ವರ್ ಮೇಲೆ ವೃತ ಆರೋಪ ಮಾಡುತ್ತಿದ್ದು ನಂಬಬೇಡಿ. ಈ ಬಾರಿ ನಮ್ಮ ಗ್ರಾಮದ 350 ಮತಗಳಲ್ಲಿ 320 ಮತಗಳು ಪರಮೇಶ್ವರ್ ಗೆ ಬೀಳಬೇಕು. ಅವರಿಂದಲೇ ಗಾರ್ಮೆಂಟ್ಸ್ ಮಾಡಿ ನೂರಾರು ಜನರಿಗೆ ಕೆಲಸ ನೀಡಿದ್ದು, ಇದು ಹುಸಿಯಾದರೆ ನಾನು ರಾಜಕೀಯ ಹಾಗೂ ಜನಸೇವೆಯಿಂದ ದೂರ ಉಳಿಯುವುದಾಗಿ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Koratagere: ಕಂದಾಯ ಇಲಾಖೆ ಸಿಬ್ಬಂದಿ ಸೇರಿ ನಾಲ್ವರ ಮೇಲೆ ಹೆಜ್ಜೇನು ದಾಳಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.