ಪಾಟೀದಾರ್ ನಾಯಕ,ಬಿಜೆಪಿ ಶಾಸಕ ಹಾರ್ದಿಕ್ ಪಟೇಲ್ ಬಂಧನಕ್ಕೆ ವಾರಂಟ್
Team Udayavani, Feb 16, 2023, 6:39 PM IST
ಗುಜರಾತ್: ಬಿಜೆಪಿ ಶಾಸಕ, ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ವಿರುದ್ದ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿದೆ.
2017ರ ಗುಜರಾತ್ ವಿಧಾರಸಭೇಗೂ ಮೊದಲು ಸಮಾವೇಶವೊಂದರಲ್ಲಿ ಸರ್ಕಾರದ ಆದೇಶದ ಹೊರತಾಗಿಯೂ ಭಾಷಣ ಮಾಡಿದ ಕಾರಣಕ್ಕೆ ಹಾರ್ದಿಕ್ ಮೇಲೆ ಪ್ರಕರಣ ದಾಖಲಾಗಿತ್ತು.
ಈ ಸಂಬಂಧದ ಪ್ರಕರಣದ ವಿಚಾರಣೆಗೆ ಹಾಜರಾಗದ ಹಾರ್ದಿಕ್ ಪಟೇಲ್ ವಿರುದ್ಧ ಇದೀಗ ಗುಜರಾತಿನ ಸುರೇಂದ್ರ ನಗರ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿದೆ. ಮುಂದಿನ ವಿಚಾರಣೆಗೆ ಹಾರ್ದಿಕ್‌ರನ್ನು ನ್ಯಾಯಾಲದ ಮುಂದೆ ಹಾಜರುಪಡಿಸುವಂತೆ ಧ್ರಾಂಗಧರಾ ಪೋಲಿಸ್ ಠಾಣೆಯ ಅಧಿಕಾರಿಗೆ ಕೋರ್ಟ್ ತಾಕೀತು ಮಾಡಿದೆ.
2017ರ ನವೆಂಬರ್ 26ರಂದು ಹರಿಪರ್ ಗ್ರಾಮದಲ್ಲಿ ಸಭೆ ಆಯೋಜಿಸಿದ್ದ ಹಾರ್ದಿಕ್ ಪಟೇಲ್ ಪತ್ತು ಕೌಶಿಕ್ ಪಟೇಲ್ ಸರ್ಕಾರದ ಷರತ್ತುಗಳನ್ನು ಉಲ್ಲಂಘಿಸಿದ್ದಾಗಿ 2018 ಜ.12ರಂದು ಪ್ರಕರಣ ದಾಖಲಾಗಿತ್ತು.
ಧುತಾರ್ಪರ್ ಗ್ರಾಮದಲ್ಲೂ 2017ರ ನವೆಂಬರ್‌ನಲ್ಲಿ ಸರ್ಕಾರದ ಷರತ್ತುಗಳನ್ನು ಉಲ್ಲಂಘಿಸಿ ಭಾಷಣ ಮಾಡಿದ್ದರು ಎಂದು ಆರೋಪಿಸಿ ಹಾರ್ದಿಕ್ ಮೇಲೆ ಪ್ರಕರಣ ದಾಖಲಾಗಿ, ಕಳೆದ ವಾರವಷ್ಟೇ ಖುಲಾಸೆಯಾಗಿದ್ದರು.
2017ರ ವೇಳೆ ಹಾರ್ದಿಕ್ ಪಾಟೀದಾರ್ ಅನಾಮತ್ ಆಂದೋಲನ ಸಮಿತಿಯ ನಾಯಕರಾಗಿದ್ದರು. ಈ ಸಮಿತಿ ಪಾಟೀದಾರ್ ಸಮುದಾಯಕ್ಕೆ ಒಬಿಸಿ ಮೀಸಲಾತಿಗಾಗಿ ರಾಜ್ಯದೆಲ್ಲೆಡೆ ಹೋರಾಟ ನಡೆಸಿತ್ತು. ಕೆಲವೆಡೆ ಈ ಹೋರಾಟ ಹಿಂಸಾರೂಪಕ್ಕೂ ತಿರುಗಿತ್ತು.
ಆ ಬಳಿಕ 2019ರಲ್ಲಿ ಕಾಂಗ್ರೆಸ್ ಸೇರಿದ್ದ ಹಾರ್ದಿಕ್ 2022 ರ ಗುಜರಾತ್ ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. ಬಿಜೆಪಿಯಿಂದ ಅಹಮದಾಬಾದ್‌ನ ವಿರಾಮಗಾಮ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಗೋವಾ ಪ್ರವಾಸದಲ್ಲಿ ರಿಷಿ ಸುನಕ್ ಪತ್ನಿ ಅಕ್ಷತಾ ಮತ್ತು ಮಕ್ಕಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.