![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 17, 2023, 6:35 AM IST
ಭೋಪಾಲ್: ಕೊರೊನಾ ಪರಿಸ್ಥಿತಿಯ ನಂತರ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನದ ನಡುವಿನ ಸಮತೋಲನ ಕಾಪಾಡಿಕೊಳ್ಳುವುದು ಬಹುತೇಕರಿಗೆ ಕಷ್ಟವಾಗಿದೆ. ತಮ್ಮ ಉದ್ಯೋಗಿಗಳು ಈ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗುವಂತೆ ಮಧ್ಯಪ್ರದೇಶ ಮೂಲದ ಐಟಿ ಕಂಪನಿ “ಸಾಫ್ಟ್ ಗ್ರಿಡ್’ ಕೆಲವು ವಿಶೇಷ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ.
ಕಂಪನಿಯು ಉದ್ಯೋಗಿಗಳು ಬಳಸುವ ಕಂಪ್ಯೂಟರ್‌ಗಳಲ್ಲಿ ವಿಶೇಷ ಸಾಫ್ಟ್ವೇರ್ ಅಳವಡಿಸಲಾಗಿದೆ. ಒಮ್ಮೆ ಶಿಫ್ಟ್ ಸಮಯ ಪೂರ್ಣಗೊಳ್ಳುತ್ತಿದ್ದಂತೆ ಕಂಪ್ಯೂಟರ್ ಶಟ್ ಡೌನ್ ಆಗಲಿದೆ. ಇದಕ್ಕೂ 10 ನಿಮಿಷಗಳ ಮುನ್ನ ಕಂಪ್ಯೂಟರ್ ಸ್ಕ್ರೀನ್ ಮೇಲೆ ನೆನಪಿನ ಸಂದೇಶ ಮೂಡುತ್ತದೆ. ಅದರಲ್ಲಿ “ನಿಮ್ಮ ಕೆಲಸದ ಅವಧಿ ಮುಗಿದಿದೆ. ಇನ್ನು 10 ನಿಮಿಷಗಳಲ್ಲಿ ನಿಮ್ಮ ಸಿಸ್ಟಮ್ ಶಟ್ ಡೌನ್ ಆಗಲಿದೆ. ದಯವಿಟ್ಟು ನೀವು ಮನೆಗೆ ಹೋಗಿ’ ಎಂಬ ಸಂದೇಶ ಬರುತ್ತದೆ.
ಈ ಕುರಿತು ಮಾಹಿತಿ ನೀಡಿರುವ ಸಾಫ್ಟ್ ಗ್ರಿಡ್’ ಕಂಪ್ಯೂಟರ್ ಎಚ್‌ಆರ್ ತನ್ವಿ ಖಂಡೇಲ್ವಾಲ್, “ಇದರ ಜತೆಗೆ ಉದ್ಯೋಗಿಗಳ ಸ್ನೇಹಿಯಾಗಿ ಮತ್ತಷ್ಟು ಕ್ರಮಗಳನ್ನು ಕಂಪನಿ ತೆಗೆದುಕೊಂಡಿದೆ. ಕೆಲಸದ ಅವಧಿ ಮುಗಿದ ಮೇಲೆ ಕಚೇರಿಯ ವಿಷಯವಾಗಿ ಉದ್ಯೋಗಿಗಳಿಗೆ ಅವರ ಬಾಸ್‌ಗಳು ಫೋನ್ ಕರೆ ಅಥವಾ ಇಮೇಲ್ ಮಾಡುವಂತಿಲ,’ ಎಂದು ತಿಳಿಸಿದರು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.