ಉತ್ತರ ಕರ್ನಾಟಕ ಮಂಡಕ್ಕಿ ಗಿರ್ಮಿಟ್ ಈ ತರ ಮಾಡಿ ನೋಡಿ… ಏನಂತೀರಿ…
ಈ ಪಾಕವಿಧಾನವು ಅತ್ಯಂತ ಸರಳ ಹಾಗೂ ಸುಲಭ ರೀತಿಯಲ್ಲಿ ತಯಾರಿಸಬಹುದು.
ಶ್ರೀರಾಮ್ ನಾಯಕ್, Feb 17, 2023, 5:47 PM IST
ಉತ್ತರ ಕರ್ನಾಟಕದ ಅತ್ಯಂತ ಜನಪ್ರಿಯ ಖಾದ್ಯಗಳಲ್ಲಿ ಒಂದು ಮಂಡಕ್ಕಿ ಗಿರ್ಮಿಟ್. ಇದನ್ನು ಮುಂಜಾನೆಯ ಉಪಹಾರವಾಗಿ ಅಥವಾ ಸಾಯಂಕಾಲದ ತಿಂಡಿಯನ್ನಾಗಿಯೂ ಸವಿಯಬಹುದು.
ಈ ಪಾಕವಿಧಾನವು ಅತ್ಯಂತ ಸರಳ ಹಾಗೂ ಸುಲಭ ರೀತಿಯಲ್ಲಿ ತಯಾರಿಸಬಹುದು.
ಸಂಜೆ ಸಮಯದಲ್ಲಿ ಟೀ, ಕಾಫಿ ಜೊತೆ ಏನಾದ್ರೂ ತಿನ್ನಬೇಕು ಅನಿಸ್ತಿದಿಯಾ? ಹಾಗಾದ್ರೆ ಇದು ಅತ್ಯುತ್ತಮವಾದ ಆಯ್ಕೆ. ನೀವು ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ, ನಿಮ್ಮವರಿಗೆ ಸವಿಯಲು ನೀಡಿ.
ಬೇಕಾಗುವ ಸಾಮಗ್ರಿಗಳು
ಮಂಡಕ್ಕಿ 2 ಕಪ್, ಈರುಳ್ಳಿ – 2, ಟೊಮೇಟೊ – 1, ಹುರಿಗಡಲೆ ಪುಡಿ – 2 ಚಮಚ, ಜೀರಿಗೆ – 2 ಚಮಚ, ಬೆಲ್ಲ 2 ಚಮಚ, ಸಾಸಿವೆ – 1 ಚಮಚ, ಹುಣಸೆ ರಸ –4 ಚಮಚ, ಹಸಿ ಮೆಣಸಿನಕಾಯಿ – 3, ಅರಿಶಿನ ಪುಡಿ – 1/4 ಚಮಚ, ಎಣ್ಣೆ – 2 ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಕರಿಬೇವು-ಸ್ವಲ್ಪ, ತುರಿದ ಕ್ಯಾರೆಟ್- ಸ್ವಲ್ಪ, ಸೇವ್- ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:
-ಒಂದು ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಒಗ್ಗರಣೆಗೆ ಸಾಸಿವೆ, ಜೀರಿಗೆ ಹಾಕಿ.
-ನಂತರ ಸಣ್ಣಗೆ ಹಚ್ಚಿದ ಹಸಿ ಮೆಣಸಿನಕಾಯಿ, ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿ.
– ತದನಂತರ ಅರಿಶಿನ ಪುಡಿ ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ 2 ನಿಮಿಷ ಫ್ರೈ ಮಾಡಿ.
– ಸ್ವಲ್ಪ ಹುಣಸೆ ರಸ ಮತ್ತು ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ .
-ಮತ್ತೊಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ ಅದಕ್ಕೆ ಮಾಡಿಟ್ಟ ಗಿರ್ಮಿಟ್ ಮಸಾಲ, ಸಣ್ಣಗೆ ಕತ್ತರಿಸಿದ ಟೊಮೆಟೊ, ಈರುಳ್ಳಿ, 2 ಚಮಚ ಹುರಿಗಡಲೆ ಪುಡಿ ಹಾಕಿ ಮಿಕ್ಸ್ ಮಾಡಿ.
-ಕೊನೆಯದಾಗಿ ಮೇಲ್ಗಡೆ ಸ್ವಲ್ಪ ಕೊತ್ತಂಬರಿ ಸೊಪ್ಪು, ತುರಿದ ಕ್ಯಾರೆಟ್, ಸೇವ್ ಉದುರಿಸಿ ಮೆಣಸಿನಕಾಯಿ ಬಜ್ಜಿ ಜೊತೆಗೆ ಸವಿಯಿರಿ.
-ಶ್ರೀರಾಮ್ ಜಿ . ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…
Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?
UV Fusion: ಮಾನವನ ಸ್ವಾರ್ಥ ವಿನಾಶಕ್ಕೆ ಕಾರಣವಾಗುತ್ತಿದೆಯೇ?
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
MUST WATCH
ಹೊಸ ಸೇರ್ಪಡೆ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.