ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆಗೆ ಕೊನೆ ಮೊಳೆ
Team Udayavani, Feb 18, 2023, 7:32 AM IST
ಶಿವಮೊಗ್ಗ: ವಿಐಎಸ್‌ಎಲ್ ಮುಚ್ಚುವುದಿಲ್ಲ, ಉಳಿಸಿಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಇತ್ತ ಭರವಸೆ ನೀಡುತ್ತಿದ್ದರೆ; ಅತ್ತ ಕೇಂದ್ರ ಸರಕಾರ ಕಾರ್ಖಾನೆ ಮುಚ್ಚುವುದು ಶತಸ್ಸಿದ್ಧ ಎಂದು ರಾಜ್ಯಸಭೆಯಲ್ಲೇ ಸ್ಪಷ್ಟ ಪಡಿಸುವ ಮೂಲಕ ಶತ ಮಾ ನಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ರಾಜ್ಯದ ಏಕೈಕ ಸಾರ್ವಜನಿಕ ಉಕ್ಕಿನ ಕಾರ್ಖಾನೆ ವಿಐಎಸ್‌ಎಲ್‌ಗೆ ಚರಮ ಗೀತೆ ಬರೆದಿದೆ. ಇಲ್ಲಿಗೆ ಕೈಗಾರಿಕಾ ನಗರದ ಇತಿಹಾಸವೂ ಕೊನೆಯಾಗಲಿದೆ.
ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ದೂರದೃಷ್ಟಿ ಫಲವಾಗಿ 1923ರ ಜ. 18ರಂದು ಆರಂಭಗೊಂಡ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯು ಇಲ್ಲಿನ ಸಾವಿರಾರು ಜನರಿಗೆ ಉದ್ಯೋಗ ನೀಡಿತ್ತಲ್ಲದೆ ರಾಜ್ಯದ ಲಕ್ಷಾಂತರ ಮಂದಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಜೀವನ ನೀಡಿತ್ತು.
ಕಾರ್ಖಾನೆಗೆ 1952ರಲ್ಲಿ ವಿದ್ಯುತ್ ಯಂತ್ರಗಳು ಆಗಮಿಸಿದವು. 1960ರಲ್ಲಿ ಜರ್ಮನ್ ತಂತ್ರಜ್ಞಾನದ ಹೊಸ ಯಂತ್ರೋ ಪಕರಣಗಳನ್ನು ಬಳಸಿ ಉತ್ಪಾದನೆ ಆರಂಭಿಸಲಾಯಿತು. ಈ ಯಂತ್ರ
ಗಳು 20 ವರ್ಷಗಳ ಕಾಲ ಕಂಪೆನಿಯನ್ನು ಲಾಭದಲ್ಲಿ ಇಟ್ಟಿದ್ದವು. ಬಳಿಕ ಅಧಃಪತನ ಆರಂಭವಾಯಿತು. ಹೊಸ ತಂತ್ರಜ್ಞಾನ, ಯಂತ್ರಗಳನ್ನು ಅಳವಡಿಸಿಕೊಳ್ಳದೆ ಕಾರ್ಖಾನೆ ಹಿಂದುಳಿಯಿತು.
ಕೇಂದ್ರ ಸರಕಾರ 3 ವರ್ಷಗಳ ಹಿಂದೆ ಖಾಸಗಿಗೆ ಕೊಡಲು ಗ್ಲೋಬಲ್ ಟೆಂಡರ್ ಕರೆದಿತ್ತು. ಆದರೆ ಯಾವುದೇ ಕಂಪೆನಿಗಳು ಬಿಡ್ ಮಾಡಲು ಮುಂದೆ ಬರಲಿಲ್ಲ. ಕೇಂದ್ರ ಸರಕಾರದ ಕೈಗಾರಿಕಾ ನೀತಿ ಅನುಸಾರ ಖಾಸಗೀಕರಣಕ್ಕೂ ವಿಫಲವಾಗಿರುವುದ ರಿಂದ ಮುಚ್ಚಲು ಪ್ರಕ್ರಿಯೆ ಆರಂಭವಾಗಿದೆ.
ಕಾರ್ಮಿಕರ ಭವಿಷ್ಯ ಅತಂತ್ರ
ಒಂದು ಕಾಲದಲ್ಲಿ 13 ಸಾವಿರ ಖಾಯಂ ನೌಕರರು, 5 ಸಾವಿರ ಗುತ್ತಿಗೆ ಕಾರ್ಮಿಕರು ಇದ್ದರು. ಈಗ ಉಳಿದಿರುವುದು 211 ಖಾಯಂ ನೌಕರರು, 1,300 ಗುತ್ತಿಗೆ ಕಾರ್ಮಿಕರು. ಕಂಪೆನಿ ಮುಚ್ಚಿದರೆ ಈ ನೌಕರರ ಭವಿಷ್ಯ, ಇವರನ್ನೇ ನಂಬಿರುವ ಕುಟುಂಬಗಳು, ಭದ್ರಾವತಿಯ ಆರ್ಥಿಕತೆಗೆ ಬಹು ದೊಡ್ಡ ಪೆಟ್ಟು ಬೀಳಲಿದೆ.
ನಾವು ಹೋರಾಟದ ಮುಂದಾಳತ್ವ ವಹಿಸಿಕೊಂಡಿಲ್ಲ. ನಾವು 10 ವರ್ಷಗಳಿಂದ ಖಾಸಗೀಕರಣ ಬೇಡ, ಬಂಡವಾಳ ಹಾಕಿ, ಗಣಿ ಕೊಡಿ ಎಂದು ಹೋರಾಟ ಮಾಡುತ್ತ ಬಂದಿದ್ದೇವೆ. ಕೇಂದ್ರ ಸರಕಾರದ ನೀತಿಯಲ್ಲಿ ಖಾಸಗಿಗೆ ಕೊಡುವ ಅಥವಾ ಮುಚ್ಚುವ ಎಂಬ ನಿಯಮ ಇದೆ. ನೀತಿಯಲ್ಲಿ ಬದಲಾವಣೆ ತಂದು ಸಚಿವ ಸಂಪುಟದಲ್ಲಿ ಮುಚ್ಚುವ ಆದೇಶ ಹಿಂಪಡೆದು ಪುನರುಜ್ಜೀವನಕ್ಕೆ ಅವಕಾಶ ಕೊಟ್ಟರೆ ಕಾರ್ಖಾನೆ ಉಳಿಯುವ ಅವಕಾಶ ಇದೆ.
– ಜಗದೀಶ್, ಅಧ್ಯಕ್ಷ, ವಿಐಎಸ್‌ಎಲ್ ಕಾರ್ಮಿಕರ ಸಂಘ
ಕಾರ್ಖಾನೆಗೆ ನೂರು ವರ್ಷ ತುಂಬಿದೆ. ಸಂಭ್ರಮಾಚರಣೆ ಮಾಡುವ ಬದಲು ಶೋಕಾಚರಣೆ ಮಾಡುವಂತಾಗಿದೆ. ಸಾವಿರಾರು ಕುಟುಂಬಗಳು ಇದನ್ನೇ ನಂಬಿವೆ. ಸರಕಾರ ಬಂಡವಾಳ ಹೂಡಲಿ.
– ಸುರೇಶ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
ತೀರ್ಥಹಳ್ಳಿಯಲ್ಲಿ ವೈಭವದ ಜಾತ್ರೆ; ಬುರ್ಖಾ ಧರಿಸಿದ್ದ ಅನಾಮಧೇಯ ವ್ಯಕ್ತಿ ಪತ್ತೆ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.