ಹುಣಸೂರು: ಅಪಾರ ಸಾಲ ಮಾಡಿಕೊಂಡಿದ್ದ ಯುವ ರೈತ ಆತ್ಮಹತ್ಯೆಗೆ ಶರಣು
Team Udayavani, Feb 18, 2023, 11:40 AM IST
ಹುಣಸೂರು: ಅಪಾರ ಸಾಲ ಮಾಡಿಕೊಂಡಿದ್ದ ಯುವಕನೊರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬನ್ನಿಕುಪ್ಪೆಯಲ್ಲಿ ನಡೆದಿದೆ.
ತಾಲೂಕಿನ ಬನ್ನಿಕುಪ್ಪೆ ನಿವಾಸಿ ಸಣ್ಣಮೊಗಯ್ಯರ ಪುತ್ರ ಚೇತನ್ (30) ಆತ್ಮಹತ್ಯೆ ಮಾಡಿಕೊಂಡ ಯುವ ರೈತ. ಇವರಿಗೆ ತಂದೆ-ತಾಯಿ, ಸಹೋದರ ಇದ್ದಾರೆ.
ಘಟನೆ ವಿವರ: ಚೇತನ್ ತಮ್ಮ ಜನೀನಿನಲ್ಲಿ ತಂಬಾಕು ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಕೃಷಿಗಾಗಿ ಎಚ್.ಡಿ.ಎಫ್.ಸಿ., ಆಕ್ಸಿಸ್, ಇಕ್ವಿಟಾಸ್ ಬ್ಯಾಂಕ್ ಗಳಲ್ಲಿ 7 ಲಕ್ಷ ಹಾಗೂ ಸಾಕಷ್ಟು ಕೈಸಾಲ ಮಾಡಿಕೊಂಡಿದ್ದರು.
ಎರಡು ವರ್ಷಗಳಿಂದ ನಿರೀಕ್ಷೆಯಂತೆ ಬೆಳೆ ಕೈ ಹತ್ತದೆ, ಸೂಕ್ತ ದರವೂ ಸಿಗದೆ ಸಾಲ ತೀರಿಸಲಾಗದೆ ಕಂಗಾಲಾಗಿದ್ದು, ಈ ಬಗ್ಗೆ ಮನೆಯವರ ಬಳಿ ಆಗಾಗ್ಗೆ ಹೇಳಿಕೊಳ್ಳುತ್ತಿದ್ದರು.
ಫೆ. 15 ರಂದು ಬುಧವಾರ ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದಾತನ ಬೈಕ್ ಗ್ರಾಮಕ್ಕೆ ಸಮೀಪದ ಕೆಂಚನಕೆರೆ ಏರಿ ಮೇಲೆ ಶುಕ್ರವಾರ ಪತ್ತೆಯಾಗಿತ್ತು. ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಶವಕ್ಕಾಗಿ ಶೋಧ ನಡೆಸಿದ ವೇಳೆ ಮದ್ಯಾಹ್ನ ಕೆರೆಯಲ್ಲಿ ಶವ ಪತ್ತೆಯಾಗಿದ್ದು, ಈ ಬಗ್ಗೆ ಮೃತನ ತಾಯಿ ವಸಂತ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.