ಅಮೇರಿಕದಲ್ಲಿ ಸರ್ವೇ ಸಾಮಾನ್ಯವಾದ ಗುಂಡಿನ ಮೊರೆತ: ʻಸಾಕು,ನಿಲ್ಲಿಸಿʼ ಎಂದ ಅಮೇರಿಕ ಅಧ್ಯಕ್ಷ

Team Udayavani, Feb 18, 2023, 12:10 PM IST

biden

ವಾಷಿಂಗ್ಟನ್‌: ಮಿಚಿಗನ್‌ನಲ್ಲಿ ವ್ಯಕ್ತಿಯೊಬ್ಬ ಯಾವುದೇ ಮೂಲ ಉದ್ದೇಶವಿಲ್ಲದೇ ವಿಶ್ವವಿದ್ಯಾಲಯದ ಕ್ಯಾಂಪಸ್‌ ಒಳಗೆ ನುಗ್ಗಿ ಗುಂಡಿಕ್ಕಿ ಮೂರು ಜನರನ್ನು ಕೊಂದ ಮಾರನೇ ದಿನವೇ ಮಿಸಿಸ್ಸಿಪಿಯಲ್ಲೂ ಭೀಕರ ಗುಂಡಿನ ದಾಳಿಯಾಗಿದೆ.  ಶುಕ್ರವಾರ ಅಮೇರಿಕಾದ ಮಿಸಿಸ್ಸಿಪಿಯಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಬಂಧೂಕುಧಾರಿಯೊಬ್ಬ ಗುಂಡಿನ ಮಳೆಗೆರೆದು ತನ್ನ ಮಾಜಿ ಪತ್ನಿ ಸಹಿತ ಆರು ಮಂದಿಯನ್ನು ಕೊಂದಿದ್ದಾನೆ.

ಸಾರ್ವಜನಿಕ ಪ್ರದೇಶಗಳಲ್ಲಿ ನಡೆಯುತ್ತಿರುವ ಸತತ ದಾಳಿಗಳಿಂದ ಎಚ್ಚೆತ್ತಿರುವ ಅಮೇರಿಕಾ ಅಧ್ಯಕ್ಷ ಜೋ ಬೈಡನ್‌ ಅಮೇರಿಕಾದಾದ್ಯಂತ ಬಂಧೂಕು ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸದ್ಯ ಬಂದೂಕು ಸುಧಾರಣಾ ಕಾಯ್ದೆ ದೇಶಕ್ಕೆ ತೀರಾ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಮಿಸಿಸ್ಸಿಪಿ ದಾಳಿಗೆ ಬೈಡನ್‌ ಮತ್ತು ಅವರ ಪತ್ನಿ ಸಂತಾಪ ಸೂಚಿಸಿದ್ದಾರೆ. ಈ ಎಲ್ಲಾ ದಾಳಿಗಳಿಗೆ ಬೇಸರ ವ್ಯಕ್ತಪಡಿಸಿದ ಅಮೇರಿಕಾ ಅಧ್ಯಕ್ಷ ಜೋ ಬೈಡನ್‌ ʻಸಾಕು,ನಿಲ್ಲಿಸಿʼ ಎಂದಿದ್ದಾರೆ.

ʻಹೊಸ ವರ್ಷಕ್ಕೆ ಕಾಲಿಟ್ಟು ಕೇವಲ 48 ದಿನಗಳಷ್ಟೇ ಆಗಿದೆ. ಅದಾಗಲೇ ದೇಶದಲ್ಲಿ ಕನಿಷ್ಥ 73 ಸಾರ್ವಜನಿಕ ದಾಳಿಯಾಗಿದೆ.ಕೇವಲ ಯೋಚನೆ ಮತ್ತು ಪ್ರಾರ್ಥನೆ ಸಾಲದು. ಬಂಧುಕು ದಾಳಿ ಒಂದು ಸಂಕ್ರಾಮಿಕದಂತಾಗಿದ್ದು, ಸಂಸತ್‌ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆʼ ಎಂದು ಬೈಡನ್‌ ಹೇಳಿದ್ದಾರೆ.

ಅಲ್ಲದೇ ಅಮೇರಿಕದಲ್ಲಿನ ಈ ಮುಂಚೆ 1994-2004ರ ವರೆಗೆ ಜಾರಿಯಲ್ಲಿದ್ದ ಬಂಧೂಕು ನಿಷೇಧ ಕಾನೂನನ್ನು ಮರು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಅಮೆರಿಕನ್‌ ಕಾಂಗ್ರೆಸ್‌ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದಿದ್ದಾರೆ. ಅಮೇರಿಕಾದಲ್ಲಿ ಈ ಹಿಂದೆ 10 ವರ್ಷಗಳ ಫೆಡರಲ್‌ ಬಂಧೂಕುಗಳ ದಾಳಿ ನಿಷೇಧ ಕಾನೂನು 1994 ಜಾರಿಗೆ ತರಲಾಗಿತ್ತು. ಆಗಿನ ಅಮೇರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಈ ಕಾನೂನಿಗೆ ಸಹಿ ಹಾಕಿದ್ದರು. ಆದರೆ 2004ರಲ್ಲಿ ಅದು ಅಂತ್ಯಗೊಂಡ ಬಳಿಕ ಅಮೇರಿಕದಲ್ಲಿ ಬಂದೂಕು ದಾಳಿಗಳು ಸರ್ವೇ ಸಾಮಾನ್ಯ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ವರ್ಷ ಭೀಕರ ಗುಂಡಿನ ದಾಳಿಗಳಿಂದಾಗಿ ಸುಮಾರು 44,000 ಮೃತ ಪಟ್ಟಿರುವುದಾಗಿ ವರದಿಯಾಗಿತ್ತು. ಅದರಲ್ಲಿ ಅರ್ಧದಷ್ಟು ಕೊಲೆ, ಸ್ವಯಂ ರಕ್ಷಣೆ, ಅಚಾನಕ್‌ ದಾಳಿಗಳೆಂದು ವರದಿಯಾಗಿದ್ದು ಮತ್ತೆ ಅರ್ಧದಷ್ಟು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು.

ಕಳೆದ ತಿಂಗಳು ಕ್ಯಾಲಿಫೋರ್ನಿಯಾದಲ್ಲಿ ವಾರದೊಳಗೆಯೇ ಎರಡು ಭೀಕರ ಸಾಮೂಹಿಕ ಗುಂಡಿನ ದಾಳಿ ನಡೆದು ಹಲವು ಮಂದಿ ಮೃತಪಟ್ಟಿದ್ದರು.

ಇದನ್ನೂ ಓದಿ: ಇರಾನ್‌ನಲ್ಲಿ ಮತ್ತೆ ಪ್ರತಿಭಟನೆಗಳು ತೀವ್ರ ; ಮುಂದುವರಿದ ಜನರ ಆಕ್ರೋಶ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-87: ಎದೆಗಾರಿಕೆಗೆ ಮಾದರಿ ಮಹಿಳೆ ಕುಂತಿ

Udupi: ಗೀತಾರ್ಥ ಚಿಂತನೆ-87: ಎದೆಗಾರಿಕೆಗೆ ಮಾದರಿ ಮಹಿಳೆ ಕುಂತಿ

Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್‌ ಡೆಲ್ಲಿ

Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್‌ ಡೆಲ್ಲಿ

KAR-BE

Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ

Test match: ಭಾರತ “ಎ’ ಮತ್ತೆ ಬ್ಯಾಟಿಂಗ್‌ ವೈಫ‌ಲ್ಯ

Test match: ಭಾರತ “ಎ’ ಮತ್ತೆ ಬ್ಯಾಟಿಂಗ್‌ ವೈಫ‌ಲ್ಯ

Women’s Big Bash League: “ದಶಕದ ತಂಡ’ದ ರೇಸ್‌ನಲ್ಲಿ ಕೌರ್‌

Women’s Big Bash League: “ದಶಕದ ತಂಡ’ದ ರೇಸ್‌ನಲ್ಲಿ ಕೌರ್‌

Gadag-Sp–Money

Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ

BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ

BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangladesh: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೈರಲ್‌

Bangladesh: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್‌

Stop Wars: ನಾನು ಯುದ್ಧ ಆರಂಭಿಸಲ್ಲ… ನಿಲ್ಲಿಸುವೆ: ವಿಜಯೋತ್ಸದಲ್ಲಿ ಟ್ರಂಪ್‌ ಘೋಷಣೆ

Stop Wars: ನಾನು ಯುದ್ಧ ಆರಂಭಿಸಲ್ಲ… ನಿಲ್ಲಿಸುವೆ: ವಿಜಯೋತ್ಸದಲ್ಲಿ ಟ್ರಂಪ್‌ ಘೋಷಣೆ

US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್‌

US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್‌

US Election: ಟ್ರಂಪ್‌ಗೆ ಅಭಿನಂದಿಸುವ ಯೋಜನೆಯಿಲ್ಲ… ರಷ್ಯಾ

US Election: ಟ್ರಂಪ್‌ಗೆ ಅಭಿನಂದಿಸುವ ಯೋಜನೆಯಿಲ್ಲ… ರಷ್ಯಾ

US Election: ಸೋಲಿನ ಬೆನ್ನಲ್ಲೇ ಭಾಷಣ ರದ್ದುಪಡಿಸಿದ ಕಮಲಾ ಹ್ಯಾರಿಸ್‌!

US Election: ಸೋಲಿನ ಬೆನ್ನಲ್ಲೇ ಭಾಷಣ ರದ್ದುಪಡಿಸಿದ ಕಮಲಾ ಹ್ಯಾರಿಸ್‌!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-87: ಎದೆಗಾರಿಕೆಗೆ ಮಾದರಿ ಮಹಿಳೆ ಕುಂತಿ

Udupi: ಗೀತಾರ್ಥ ಚಿಂತನೆ-87: ಎದೆಗಾರಿಕೆಗೆ ಮಾದರಿ ಮಹಿಳೆ ಕುಂತಿ

Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್‌ ಡೆಲ್ಲಿ

Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್‌ ಡೆಲ್ಲಿ

KAR-BE

Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ

Test match: ಭಾರತ “ಎ’ ಮತ್ತೆ ಬ್ಯಾಟಿಂಗ್‌ ವೈಫ‌ಲ್ಯ

Test match: ಭಾರತ “ಎ’ ಮತ್ತೆ ಬ್ಯಾಟಿಂಗ್‌ ವೈಫ‌ಲ್ಯ

Women’s Big Bash League: “ದಶಕದ ತಂಡ’ದ ರೇಸ್‌ನಲ್ಲಿ ಕೌರ್‌

Women’s Big Bash League: “ದಶಕದ ತಂಡ’ದ ರೇಸ್‌ನಲ್ಲಿ ಕೌರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.