ಅದು ನಾಟೌಟ್..: ವಿರಾಟ್ ಕೊಹ್ಲಿ ಔಟ್ ನೀಡಿದ್ದಕ್ಕೆ ಅಭಿಮಾನಿಗಳ ತೀವ್ರ ಆಕ್ರೋಶ


Team Udayavani, Feb 18, 2023, 3:13 PM IST

ಅದು ನಾಟೌಟ್..: ವಿರಾಟ್ ಕೊಹ್ಲಿ ಔಟ್ ನೀಡಿದ್ದಕ್ಕೆ ಅಭಿಮಾನಿಗಳ ತೀವ್ರ ಆಕ್ರೋಶ

ಹೊಸದಿಲ್ಲಿ: ಬಾರ್ಡರ್ – ಗಾವಸ್ಕರ್ ಟ್ರೋಫಿಯ ಎರಡನೇ ಪಂದ್ಯದ ಎರಡನೇ ದಿನದಾಟ ನಡೆಯುತ್ತಿದ್ದು, ಭಾರತೀಯ ಅಗ್ರಕ್ರಮಾಂಕದ ಬ್ಯಾಟರ್ ಗಳು ಪರದಾಡಿದರು. ಆದರೆ ಈ ವೇಳೆ ವಿರಾಟ್ ಕೊಹ್ಲಿ ಅವರ ಔಟಾದ ಬಗ್ಗೆ ಭಾರೀ ಅಪಸ್ವರ ಕೇಳಿಬಂದಿದೆ.

ಒಂದೆಡೆ ಭಾರತೀಯ ಬ್ಯಾಟರ್ ಗಳು ವಿಕೆಟ್ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ ಮತ್ತೊಂದೆಡೆ ಮಾಜಿ ನಾಯಕ ವಿರಾಟ್ ಕೊಹ್ಲಿ ಕ್ರೀಸ್ ಕಚ್ಚಿನಿಂತು ಬ್ಯಾಟಿಂಗ್ ಮಾಡುತ್ತಿದ್ದರು. ರವೀಂದ್ರ ಜಡೇಜಾ ಜೊತೆ ಜೊತೆಯಾಟ ನಡೆಸಿದ ವಿರಾಟ್ ತಂಡಕ್ಕೆ ತಕ್ಕಮಟ್ಟಿನ ರಿಲೀಫ್ ನೀಡಿದ್ದರು.

ಆದರೆ 44 ರನ್ ಗಳಿಸಿದ್ದ ವೇಳೆ ಆಸೀಸ್ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಎಸೆದ ಚೆಂಡು ಕೊಹ್ಲಿ ಕಾಲಿಗೆ ಬಡಿಯುತು. ಅಂಪೈರ್ ನಿತಿನ್​ ಮೆನನ್ ಔಟ್ ತೀರ್ಮಾನ ನೀಡಿದರು. ಕೂಡಲೇ ವಿರಾಟ್ ರಿವೀವ್ ಪಡೆದುಕೊಂಡರು. ರಿವೀವ್ ವೇಳೆ  ಚೆಂಡು ಬ್ಯಾಟ್ ಮತ್ತು ಪ್ಯಾಡ್ ಎರಡಕ್ಕೂ ಬಡಿದಿದೆ ಎಂದು ಅಲ್ಟ್ರಾಎಡ್ಜ್ ಸ್ಪಷ್ಟವಾಗಿ ತೋರಿಸಿದೆ.

ಇದನ್ನೂ ಓದಿ:ಏಪ್ರಿಲ್ 25 ರಂದು ತೆರೆಯಲಿರುವ ಕೇದಾರನಾಥ ದೇಗುಲದ ಬಾಗಿಲು

ಆದರೆ, ಚೆಂಡು ಮೊದಲು ಬ್ಯಾಟ್‌ ಗೆ ತಾಗಿತ್ತೋ ಅಥವಾ ಪ್ಯಾಡ್‌ ಗೆ ತಗುಲಿತೋ ಎಂಬುದು ಸ್ಪಷ್ಟವಾಗಿಲ್ಲ. ಚೆಂಡು ಮೊದಲು ಬ್ಯಾಟ್‌ ಗೆ ಬಡಿದರೆ, ಅದನ್ನು ಲೆಗ್ ಬಿಫೋರ್ ವಿಕೆಟ್‌ಗೆ ನೀಡಲಾಗುವುದಿಲ್ಲ. ಯಾವುದೇ ಸ್ಪಷ್ಟ ಪುರಾವೆಗಳು ಇಲ್ಲದಿದ್ದರೂ, ಮೂರನೇ ಅಂಪೈರ್ ರಿಚರ್ಡ್ ಇಲಿಂಗ್ವರ್ತ್ ಅವರು ಆ ಚೆಂಡು ಮೊದಲು ಪ್ಯಾಡ್‌ ಗೆ ಹೊಡೆಯುತ್ತಿರುವಂತೆ ತೋರಿತು ಎಂದು ಹೇಳಿ ಔಟ್ ನೀಡಿದರು.

ಈ ಅಂಪೈರಿಂಗ್ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗದೆ. ವಿರಾಟ್ ಕೊಹ್ಲಿ ವಿಚಾರದಲ್ಲಿ ಪ್ರತಿಬಾರಿಯೂ ಅಂಪೈರ್ ಗಳು ಕುಟಿಲ ಆಟವಾಡುತ್ತಾರೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದೂರುತ್ತಿದ್ದಾರೆ.

ಟಾಪ್ ನ್ಯೂಸ್

1-bhole-baba

America ಶ್ವೇತ ಭವನದಂತಿದೆ ಭೋಲೆ ಬಾಬಾ ಭವ್ಯ ಆಶ್ರಮ

1wess

First case in the world; ಕೆಲಸದ ಒತ್ತಡಕ್ಕೆ ಬೇಸತ್ತು ರೋಬೋಟ್‌ ಆತ್ಮಹತ್ಯೆ!

Exam

6th class ಮಕ್ಕಳಿಗೆ ಇನ್ನೂ ಪಠ್ಯ ಪುಸ್ತಕಗಳನ್ನೇ ನೀಡಿಲ್ಲ!

jairam 2

Election; ದಿಲ್ಲಿ, ಹರಿಯಾಣ ಚುನಾವಣೆಯಲ್ಲಿ ಆಪ್‌ ಜತೆಗಿಲ್ಲ ಮೈತ್ರಿ: ಕಾಂಗ್ರೆಸ್‌

NItin Gadkari

Soon…132 ಸೀಟು, ಸಖಿಯರುಳ್ಳ ಎಸಿ ಬಸ್‌ ಸೇವೆ ಶುರು: ಸಚಿವ ಗಡ್ಕರಿ

Jaishankar

Border ಅತಿಕ್ರಮಣ ಬೇಡ: ಚೀನಕ್ಕೆ ಭಾರತ ಎಚ್ಚರಿಕೆ

BJP Vs ಸಿಎಂ ಸಿದ್ದರಾಮಯ್ಯ ಮುಡಾ ಕಾಳಗ

BJP Vs ಸಿಎಂ ಸಿದ್ದರಾಮಯ್ಯ ಮುಡಾ ಕಾಳಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rohan Bopanna

Wimbledon tennis match: ಬೋಪಣ್ಣ-ಎಬ್ಡೆನ್‌ ಮುನ್ನಡೆ

1-athli

Paris Olympics; ಆ್ಯತ್ಲೀಟ್‌ ಗಳಿಂದ ಶ್ರೇಷ್ಠ ನಿರ್ವಹಣೆ: ಮೋದಿ ವಿಶ್ವಾಸ

1-jock

Wimbledon ಟೆನಿಸ್‌ : ಜೊಕೋವಿಕ್‌ 3ನೇ ಸುತ್ತಿಗೆ

INdia-team

Team India: ಮುಂಬೈಯಲ್ಲಿ ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

1-bhole-baba

America ಶ್ವೇತ ಭವನದಂತಿದೆ ಭೋಲೆ ಬಾಬಾ ಭವ್ಯ ಆಶ್ರಮ

1wess

First case in the world; ಕೆಲಸದ ಒತ್ತಡಕ್ಕೆ ಬೇಸತ್ತು ರೋಬೋಟ್‌ ಆತ್ಮಹತ್ಯೆ!

Exam

6th class ಮಕ್ಕಳಿಗೆ ಇನ್ನೂ ಪಠ್ಯ ಪುಸ್ತಕಗಳನ್ನೇ ನೀಡಿಲ್ಲ!

jairam 2

Election; ದಿಲ್ಲಿ, ಹರಿಯಾಣ ಚುನಾವಣೆಯಲ್ಲಿ ಆಪ್‌ ಜತೆಗಿಲ್ಲ ಮೈತ್ರಿ: ಕಾಂಗ್ರೆಸ್‌

NItin Gadkari

Soon…132 ಸೀಟು, ಸಖಿಯರುಳ್ಳ ಎಸಿ ಬಸ್‌ ಸೇವೆ ಶುರು: ಸಚಿವ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.