ಹೆರಿಗೆಯಾದ ಕೆಲವೇ ಗಂಟೆಯಲ್ಲಿ 10ನೇ ತರಗತಿ ಪರೀಕ್ಷೆಗೆ ಹಾಜರಾದ 22ರ ಯುವತಿ.!
Team Udayavani, Feb 18, 2023, 6:05 PM IST
ಪಾಟ್ನಾ: ಹೆರಿಗೆಯಾಗಿ ಕೆಲವೇ ಗಂಟೆಗಳಲ್ಲಿ ಯುವತಿಯೊಬ್ಬಳು 10ನೇ ತರಗತಿ ಬೋರ್ಡ್ ಎಕ್ಸಾಂ ಬರೆದ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ.
ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ರುಕ್ಮಿಣಿ ಕುಮಾರಿ 22 ವರ್ಷದ ಯುವತಿ ಗಣಿತ ಪರೀಕ್ಷೆ ಬರೆದ ಬಳಿಕ, ತನ್ನ ಮೆಚ್ಚಿನ ವಿಜ್ಞಾನ ಪರೀಕ್ಷೆಯನ್ನು ಬರೆಯಲು ಕುತೂಹಲದಿಂದ ಇದ್ದರು. ಹೊಟ್ಟೆಯಲ್ಲಿ ಮಗುವನ್ನಿಟ್ಟುಕೊಂಡು ಪರೀಕ್ಷೆಗೆ ಓದುತ್ತಿದ್ದ ಯುವತಿಗೆ, ಬುಧವಾರ ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ರುಕ್ಮಿಣಿ ಅವರನ್ನು ಕರೆದೊಯ್ಯಲಾಗಿತ್ತು.
ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ರುಕ್ಮಿಣೆ ಜನ್ಮ ನೀಡುತ್ತಾರೆ. ಒಂದು ಕಡೆ ಮಗ ಬಂದ ಸಂತಸದಲ್ಲಿದ್ದ ರುಕ್ಮಿಣಿಗೆ ವಿಶ್ರಾಂತಿ ಮಾಡಿ ಎಂದು ವೈದ್ಯರು ಹೇಳಿದ್ದಾರೆ ಆದರೆ ರುಕ್ಮಿಣಿ ಇದನ್ನುನಿರಾಕರಿಸಿ, ತನಗೆ ವಿಜ್ಞಾನ ಪರೀಕ್ಷೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ.
ಆಂಬ್ಯುಲೆನ್ಸ್ ನಲ್ಲಿ ತೆರೆಳಿ ಪರೀಕ್ಷೆ ಬರೆದಿದ್ದಾರೆ. ಮೂರು ಗಂಟೆ ಪರೀಕ್ಷೆ ಬರೆದು ಆಸ್ಪತ್ರೆಗೆ ಬಂದಿದ್ದಾರೆ. ನನ್ನ ಮಗ ದೊಡ್ಡವನಾದ ಮೇಲೆ ಆತ ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸಬೇಕು. ನಾನು ನನ್ನ ಮಗನಿಗೆ ಒಳ್ಳೆಯ ಉದಾಹರಣೆಯಾಗಬೇಕು. ನನ್ನ ಪರೀಕ್ಷೆ ಒಳ್ಳೆಯ ರೀತಿ ಸಾಗಿದೆ. ನಾನು ಉತ್ತಮ ಅಂಕ ಗಳಿಸಬಹುದು ಎಂದು ರುಕ್ಮಿಣಿ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.