ತಡೆರಹಿತ ಲಾಜಿಸ್ಟಿಕ್ಸ್ ಸೇವೆಗೆ “ಗತಿ ಶಕ್ತಿ’; ರೈಲು-ಪೋಸ್ಟ್ ಎಕ್ಸ್ಪ್ರೆಸ್ ಸೇವೆ
Team Udayavani, Feb 19, 2023, 7:20 AM IST
ಭಾರತೀಯ ರೈಲ್ವೆ ಇಲಾಖೆ ಮತ್ತು ಅಂಚೆ ಇಲಾಖೆ ಜಂಟಿಯಾಗಿ ಕೈಗೊಂಡಿರುವ “ರೈಲ್ ಪೋಸ್ಟ್ ಗತಿ ಶಕ್ತಿ ಎಕ್ಸ್ಪ್ರೆಸ್’ ಕಾರ್ಗೊ ಸೇವೆಯು ಪ್ರಾರಂಭವಾಗಿದೆ. ಪಾರ್ಸೆಲ್ ಮತ್ತು ಲಾಜಿಸ್ಟಿಕ್ಸ್ ಸೇವೆಯನ್ನು ತ್ವರಿತಗತಿಯಲ್ಲಿ ಒದಗಿಸುವುದು ಈ ಸೇವೆಯ ಉದ್ದೇಶವಾಗಿದೆ. ಈ ಸೇವೆ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
4 ಮಾರ್ಗಗಳಲ್ಲಿ ಸಂಚಾರ
ಪ್ರಸ್ತುತ ನಾಲ್ಕು ಮಾರ್ಗಗಳಲ್ಲಿ ಈ ರೈಲುಗಳು ಚಲಿಸುತ್ತಿವೆ. ಕಳೆದ ವರ್ಷದ ಬಜೆಟ್ನಲ್ಲಿ ಈ ಯೋಜನೆ ಘೋಷಿಸಲಾಗಿತ್ತು.ಪ್ರಾಯೋಗಿಕವಾಗಿ ಕಳೆದ ವರ್ಷದ ಮಾ.31ರಂದು ಸೂರತ್ ಮತ್ತು ವಾರಾಣಸಿ ನಡುವೆ ಸಾಪ್ತಾಹಿಕ ಸೇವೆ ಆರಂಭವಾಗಿತ್ತು. ಈಗ ಅಂದರೆ ಫೆ.16ರಿಂದ ಬೆಂಗಳೂರು-ಗುವಾಹಟಿ, ದೆಹಲಿ-ಕೋಲ್ಕತಾ, ಸೂರತ್-ಮುಜಾಫರ್ಪುರ್ ಮತ್ತು ಹೈದರಾಬಾದ್-ಹಜರತ್ ನಿಜಾಮುದ್ದೀನ್ ಮಾರ್ಗಗಳಲ್ಲಿ ಸೇವೆ ಆರಂಭವಾಗಿದೆ.
ಡೆಲಿವರಿ ಹೇಗೆ?
ಭಾರತೀಯ ಅಂಚೆ ಇಲಾಖೆಯು ಗ್ರಾಹಕರ ಮನೆ ಬಾಗಿಲಿನಿಂದ ಪಾರ್ಸೆಲ್ ಪಡೆಯುತ್ತದೆ. ನಂತರ ಅದನ್ನು ಸಮೀಪದ ರೈಲು ನಿಲ್ದಾಣಕ್ಕೆ ಒಯ್ಯಲಾಗುತ್ತದೆ. ನಿಗದಿತ ರೈಲು ನಿಲ್ದಾಣ ಬಂದ ಕೂಡಲೇ ಪಾರ್ಸೆಲ್ ಇಳಿಸಿ, ತಲುಪಬೇಕಾದ ಸ್ಥಳಕ್ಕೆ ಅದನ್ನು ಡೆಲಿವರಿ ಮಾಡಲಾಗುತ್ತದೆ.
ಸೇವೆಯ ಕುರಿತು…
– ದೇಶದ ಸೇವಾ ವಲಯಕ್ಕೆ ತಡೆರಹಿತ ಲಾಜಿಸ್ಟಿಕ್ಸ್ ಸೇವೆ ಒದಗಿಸಲು ಈ ಉಪಕ್ರಮ.
– ಮೊದಲ ಹಂತದಲ್ಲಿ 15 ಮಾರ್ಗಗಳಲ್ಲಿ ಶೀಘ್ರ ಸೇವೆ ಆರಂಭ.
– ಲಗೇಜ್ ತೂಕಕ್ಕೆ ಯಾವುದೇ ಮಿತಿ ಇಲ್ಲ. ಬಾಕ್ಸ್ಗಳಲ್ಲಿ ಇರಿಸಿ ಸೀಲ್ ಮಾಡಿ ಸುರಕ್ಷಿತವಾಗಿ ಡೆಲಿವರಿ ಮಾಡಲಾಗುತ್ತದೆ.
– ನಿಗದಿತ ಸಮಯಕ್ಕೆ ರೈಲು ಹೊರಟು, ನಿಗದಿತ ಸಮಯಕ್ಕೆ ತಲುಪಬೇಕಾದ ನಿಲ್ದಾಣ ತಲುಪಲಿದೆ.
– ಅಂಚೆ ಇಲಾಖೆಯಿಂದ ಪಾರ್ಸೆಲ್ಗೆ ಥರ್ಡ್ ಪಾರ್ಟಿ ವಿಮೆ ಸೌಲಭ್ಯವನ್ನೂ ಒದಗಿಸಲಾಗುತ್ತದೆ.
– ಪಾರ್ಸೆಲ್ ಕೆಜಿಗೆ ಕೇವಲ 6 ರೂ. ಚಾರ್ಜ್ ಮಾಡಲಾಗುತ್ತದೆ. ಗ್ರಾಹಕರು ತಮ್ಮ ಪಾರ್ಸೆಲ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆಯೂ ಇದೆ.
– ಇದಕ್ಕಾಗಿಯೇ ಪ್ರತ್ಯೇಕ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರಾಹಕರು ಆ್ಯಪ್ ಸಹಾಯದಿಂದ ಬುಕ್ಕಿಂಗ್, ಟ್ರ್ಯಾಕ್ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.