ಸುಲಿಗೆ, ಸಾಲದ ಬಜೆಟ್: ಯು.ಟಿ.ಖಾದರ್ ಆರೋಪ
Team Udayavani, Feb 19, 2023, 6:15 AM IST
ಮಂಗಳೂರು: ರಾಜ್ಯದ ಸಂಸದರ ಮೌನ, ಅಸಹಾಯಕತೆ, ಕೇಂದ್ರದ ಮಲತಾಯಿ ಧೋರಣೆ ಮೊದಲಾದವುಗಳಿಂದ ರಾಜ್ಯದ ಜನತೆಯನ್ನು ಸಾಲಗಾರರನ್ನಾಗಿ ಮಾಡುವ ಪರಿಸ್ಥಿತಿಗೆ ಸರಕಾರ ತಲು
ಪಿದ್ದು, ಸುಲಿಗೆ, ಸಾಲದ ಬಜೆಟ್ ಮಂಡನೆಯಾಗಿದೆ ಎಂದು ಶಾಸಕ ಯು.ಟಿ.ಖಾದರ್ ಪತ್ರಿಕಾ
ಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಸ್ವಾತಂತ್ರ್ಯ ಬಂದ ನಂತರದಿಂದ 2018ರ ಸಿದ್ದರಾಮಯ್ಯ ಸರಕಾರದ ಅಂತ್ಯದ ವರೆಗೆ 2.42ಲಕ್ಷ ಕೋ.ರೂ.ಇದ್ದ ರಾಜ್ಯ ಸರಕಾರದ ಸಾಲ 2023ರಲ್ಲಿ 5.64 ಲಕ್ಷ ಕೋ.ರೂ.ಗೆ ಏರಿಕೆಯಾಗಿದೆ. 5 ವರ್ಷದಲ್ಲಿ 3.20 ಲಕ್ಷ ಕೋಟಿ ರೂ. ಸಾಲ ಮಾಡಿ ಜನರ ಮೇಲೆ ಇಟ್ಟಿದೆ. 3.9 ಲಕ್ಷ ಕೋಟಿ ರೂ.ಬಜೆಟ್‌ನಲ್ಲಿ 2.45 ನಿಗದಿತ ವೆಚ್ಚಕ್ಕೆ ಮೀಸಲಾಗಿರಿಸಲಾಗಿದ್ದು, ಇದು ಅಭಿವೃದ್ಧಿಯಲ್ಲಿ ಬರುವುದಿಲ್ಲ. ಎಂದರು.
ಬಜೆಟ್‌ನಲ್ಲಿ ಕರಾವಳಿ ಮೀನುಗಾರರಿಗೆ ಬಂಪರ್ ಎಂದು ಬಿಂಬಿಸ ಲಾಗಿದೆ.ಆದರೆ ಸಂಪೂರ್ಣಮೋಸ ಮಾಡಲಾಗಿದೆ. ಮೀನು ಗಾರಿಕಾ ಕೊಂಡಿ ರಸ್ತೆ, ಕಡಲು ಕೊರೆತ ತಡೆ, ಅಳಿವೆ ಬಾಗಿಲು ಡ್ರೆಜ್ಜಿಂಗ್ ಇವುಗಳ ಪ್ರಸ್ತಾವನೆಯೇ ಇಲ್ಲ. ಎಂದರು.
ಟಿಪ್ಪುವೇ ಸರಕಾರಕ್ಕೆ ಆಕ್ಸಿಜನ್
ರಾಜ್ಯ ಸರಕಾರ ಕೊನೇ ಉಸಿರು ಎಳೆಯುತ್ತಿರುವ ಸಂದರ್ಭದಲ್ಲಿ ಅಭಿವೃದ್ಧಿಯ ಬದಲು ಟಿಪ್ಪು, ಪಾಕಿಸ್ಥಾನ, ಭಯೋತ್ಪಾದನೆ, ತಾಲಿಬಾನ್, ಎಸ್‌ಡಿಪಿಐ, ಎಂಐಎಂ ಇವುಗಳೇ ಸರಕಾರಕ್ಕೆ ಆಕ್ಸಿಜನ್. ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಾದ ಉಚಿತ ವಿದ್ಯುತ್ ಮತ್ತು ಮನೆ ಯಜಮಾನಿಗೆ 2 ಸಾವಿರ ರೂ. ಘೋಷಣೆಗೆ ಬದ್ಧವಾಗಿದೆ ಎಂದವರು ಹೇಳಿದರು.
ಸದಾಶಿವ ಉಳ್ಳಾಲ, ಸಂತೋಷ್ ಕುಮಾರ್ ಶೆಟ್ಟಿ, ದೀಪಕ್ ಪೂಜಾರಿ, ವೃಂದಾ ಪೂಜಾರಿ, ಸೊಹೈಲ್ ಕಂದಕ್ ಮೊದಲಾದವರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.