ತಮಿಳಿನ ಖ್ಯಾತ ಹಾಸ್ಯ ನಟ ಮೈಲ್ ಸ್ವಾಮಿ ನಿಧನ: ಕಾಲಿವುಡ್ ಕಂಬನಿ
Team Udayavani, Feb 19, 2023, 10:54 AM IST
ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಮೈಲ್ ಸ್ವಾಮಿ (57) ಭಾನುವಾರ ಮುಂಜಾನೆ ( ಫೆ.19 ರಂದು ) ನಿಧನರಾಗಿದ್ದಾರೆ.
1980 ರ ದಶಕದಲ್ಲಿ ಸಣ್ಣ ಪಾತ್ರಗಳಿಂದ ಬಣ್ಣದ ಲೋಕದ ಯಾನವನ್ನು ಆರಂಭಿಸಿದ ಮೈಲ್ ಸ್ವಾಮಿ, ಕಮಲ್ ಹಾಸನ್ ಅಭಿನಯದ ʼಅಪೂರ್ವ ಸಾಗೋಧರರ್ಗಲ್ʼ, ʼಮೈಕೆಲ್ ಮದನ ಕಾಮ ರಾಜನ್ʼ ಚಿತ್ರಗಳಲ್ಲಿ ನಟಿಸಿ, ಆ ಬಳಿಕ ಹತ್ತಾರು ಹಾಸ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ʼಪೂವೆಲ್ಲಂ ಉನ್ವಾಸಂʼ, ʼಪಾರ್ಥಲೆ ಪರವಾಸಂʼ, ʼವಿಜಿಲ್ʼ ,ʼಗಿಲ್ಲಿʼ ಚಿತ್ರದಲ್ಲಿ ಗಮನ ಸೆಳೆದಿದ್ದರು.
ʼಕಂಗಳಲ್ ಕೈದು ಸೇʼ ಸಿನಿಮಾದಲ್ಲಿನ ಹಾಸ್ಯ ಪಾತ್ರಕ್ಕಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ತಮಿಳಿನ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿಯೂ ಮೈಲ್ ಸ್ವಾಮಿ ಕಾಣಿಸಿಕೊಂಡಿದ್ದರು.
ಹೃದಯಾಘಾತದಿಂದ ಅವರು ನಿಧನರಾಗಿದ್ದು, ಅನಾರೋಗ್ಯದಿಂದಲೂ ಬಳಲುತ್ತಿದ್ದರು ಎಂದು ವರದಿಯೊಂದು ತಿಳಿಸಿದೆ.
ಹಾಸ್ಯನಟನ ನಿಧನಕ್ಕೆ ಸಿಎಂ ಸ್ಟ್ಯಾಲಿನ್, ಕಮಲ್ ಹಾಸನ್,ನಟ ವಿಕ್ರಮ್, ಶರತ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ಸಂತಾಪ ಸೂಚಿಸಿದ್ದಾರೆ.
நகைச்சுவை நடிப்பில் தனக்கென்று ஒரு பாணியை முன்னிறுத்தி வெற்றி கண்டவர் நண்பர் மயில்சாமி. உதவும் சிந்தையால் பலராலும் நினைக்கப்படுவார். அன்பு நண்பருக்கென் அஞ்சலி #Mayilsamy
— Kamal Haasan (@ikamalhaasan) February 19, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suniel Shetty: ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಅವಘಡ; ಸುನಿಲ್ ಶೆಟ್ಟಿಗೆ ಗಂಭೀರ ಗಾಯ
Threat Call: ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೂ ಜೀವ ಬೆದರಿಕೆ
SRK: ಶಾರುಖ್ ಭೇಟಿಗೆ 95 ದಿನ ಮನೆ ಹೊರಗೆ ಕಾದು ಕೂತ ಅಭಿಮಾನಿ; ನಟ ಕೊಟ್ಟ ಉಡುಗೊರೆ ಏನು?
BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್ ʼಛಾವಾʼ; ರಿಲೀಸ್ ಡೇಟ್ ಮುಂದೂಡಿಕೆ?
Ramayana: ಎರಡು ಭಾಗಗಳಾಗಿ ಬರಲಿದೆ ಬಿಗ್ ಬಜೆಟ್ ʼರಾಮಾಯಣʼ; ರಿಲೀಸ್ ಡೇಟ್ ಅನೌನ್ಸ್
MUST WATCH
ಹೊಸ ಸೇರ್ಪಡೆ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.