ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸ್ವಾಗತಕ್ಕೆ ಕೇಸರಿ ರಂಗು
Team Udayavani, Feb 20, 2023, 7:15 AM IST
ಉಡುಪಿ: ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಬಳಿಕ ಸೋಮವಾರ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸುತ್ತಿರುವ ಜೆ.ಪಿ. ನಡ್ಡಾ ಅವರನ್ನು ಸ್ವಾಗತಿಸಲು ಎಲ್ಲ ರೀತಿಯ ಸಿದ್ಧತೆಗಳು ನಡೆದಿದ್ದು, ನಗರ ತುಂಬಾ ಕೇಸರಿ ಬಣ್ಣದಿಂದ ಕಂಗೊಳಿಸುತ್ತಿದೆ.
ಜಿಲ್ಲೆಯಾದ್ಯಂತ 8,000ಕ್ಕೂ ಅಧಿಕ ಬಿಜೆಪಿ ಹಾಗೂ ಕೇಸರಿ ಬಣ್ಣದ ಧ್ವಜ, ಬಂಟಿಂಗ್ಸ್‌ಗಳನ್ನು ಅಳವಡಿಸಲಾಗಿದೆ. ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಕಾರ್ಯಕ್ರಮ ನಡೆಯುವ ಎಂಜಿಎಂ ಕ್ರೀಡಾಂಗಣದ ವರೆಗೆ 2ರಿಂದ 3 ಸಾವಿರ ಧ್ವಜ, ಬಂಟಿಂಗ್ಸ್ ಅಳವಡಿಸಲಾಗಿದೆ.
ಸ್ವಾಗತ ಕಮಾನುಗಳು
ರಸ್ತೆಯ ಎರಡೂ ಬದಿ ಶುಭಕೋರುವ ಫಲಕಗಳು ಹಾಗೂ ಎಂಜಿಎಂ ಕ್ರೀಡಾಂಗಣ ಪ್ರವೇಶದ ಬಳಿ, ಕಲ್ಸಂಕ, ಮೈದಾನದ ಬಳಿ ಹಾಗೂ ಸಗ್ರಿ ದೇವಸ್ಥಾನ ರಸ್ತೆಯ ಬಳಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ.
12 ಸಾವಿರ ಮಂದಿಗೆ ವ್ಯವಸ್ಥೆ
ವೇದಿಕೆಯಲ್ಲಿ 38 ಮಂದಿ ಗಣ್ಯರು ಹಾಗೂ ಕೆಳಭಾಗದಲ್ಲಿ 12 ಸಾವಿರ ಮಂದಿ ಕಾರ್ಯಕರ್ತರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಮೊದಲ ಬಾರಿಗೆ ಜರ್ಮನ್ ಟೆಂಟ್ ಪೆಂಡಾಲ್‌ನಲ್ಲಿ ರಾಜಕೀಯ ಕಾರ್ಯಕ್ರಮವನ್ನು ಉಡುಪಿಯಲ್ಲಿ ಮಾಡಲಾಗುತ್ತಿದ್ದು, 60×40 ಸುತ್ತಳತೆಯ ವೇದಿಕೆ ನಿರ್ಮಿಸಲಾಗಿದೆ. 180×300 ಸುತ್ತಳತೆಯಲ್ಲಿ ಸಭಾಂಗಣ ರಚಿಸಲಾಗಿದೆ.
ಊಟೋಪಚಾರ, ಬಸ್ ವ್ಯವಸ್ಥೆ
ಬೆಳಗ್ಗೆ 9.30ಕ್ಕೆ ಜಗದೀಶ್ ಪುತ್ತೂರು ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಭಾಗವಹಿಸುವವರಿಗೆಲ್ಲ ಉಪಾಹಾರ ಹಾಗೂ ಊಟದ ವ್ಯವಸ್ಥೆ ಇದೆ. ಉಡುಪಿ ವಿಧಾನ ಸಭಾ ಕ್ಷೇತ್ರದಿಂದ 47, ಕುಂದಾಪುರದಿಂದ 48, ಕಾರ್ಕಳದಿಂದ 43 ಹಾಗೂ ಕಾಪುವಿನಿಂದ 39 ಬಸ್ ವ್ಯವಸ್ಥೆ ಮಾಡಲಾಗಿದೆ. ಬೈಂದೂರು ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯುವ ಕಾರಣ ಕೆಲವು ನಾಯಕರು ಮಾತ್ರ ಉಡುಪಿಗೆ ಆಗಮಿಸಲಿದ್ದಾರೆ.
ಬೂತ್ ಅಧ್ಯಕ್ಷರೊಂದಿಗೆ ಸಂವಾದ
ರಾಷ್ಟ್ರಾಧ್ಯಕ್ಷರು ಜಿಲ್ಲೆಯ 1,111 ಬೂತ್‌ಗಳ ಅಧ್ಯಕ್ಷರೊಂದಿಗೆ ಸಂವಾದ ನಡೆಸಲಿದ್ದಾರೆ. 1968ರಿಂದ ಜನಸಂಘ ಕಾಲದ ಬಿಜೆಪಿ ನಾಯಕರು ವಿಶೇಷ ಅತಿಥಿಗಳಾಗಿ ಭಾಗವಹಿಸುತ್ತಿರುವುದು ಮತ್ತೂಂದು ವೈಶಿಷ್ಟé. ಕಾರ್ಯಕ್ರಮವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತ ಮಾಡುವ ಉದ್ದೇಶದಿಂದ ಲೋಟ, ಹೂಜಿಯಲ್ಲಿ ನೀರು ನೀಡಲಾಗುವುದು ಎಂದು ಜಿಲ್ಲಾ ವಕ್ತಾರ ಕೆ. ರಾಘವೇಂದ್ರ ಕಿಣಿ ತಿಳಿಸಿದ್ದಾರೆ.
ಅಂಬಲಪಾಡಿ, ಕಡೆಕಾರು, ತೆಂಕ ನಿಡಿಯೂರು, ಪಡುಕೆರೆ, ಬಡಾನಿಡಿ ಯೂರು ಸಹಿತ ಉಡುಪಿ ವಿಧಾನ ಸಭಾ ಕ್ಷೇತ್ರದ ವಿವಿಧ ಕಡೆ ಶಾಸಕ ಕೆ. ರಘುಪತಿ ಭಟ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದಾರೆ.
ಪರಿಶೀಲನೆ
ಮುನ್ನೆಚ್ಚರಿಕೆ ಕ್ರಮವಾಗಿ ಸಿಆರ್‌ಪಿಎಫ್, ಶ್ವಾನದಳ, ಇಂಟೆಲಿಜೆನ್ಸ್ ಸಿಬಂದಿ ರವಿವಾರ ಕ್ರೀಡಾಂಗಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು.
ವಾಹನ ನಿಲುಗಡೆ ವ್ಯವಸ್ಥೆ
ಕುಂದಾಪುರ ಮತ್ತು ಬ್ರಹ್ಮಾವರದ ಕಡೆಯಿಂದ ಬರುವ ಬಸ್‌ಗಳು ಬೀಡಿನ ಗುಡ್ಡೆ ಮೈದಾನದಲ್ಲಿ, ಕಾರ್ಕಳ ಮತ್ತು ಕಾಪುವಿನಿಂದ ಬರುವ ಬಸ್‌ಗಳು ಮಣಿಪಾಲ ಪ.ಪೂ. ಕಾಲೇಜಿನ ಮೈದಾನದಲ್ಲಿ, ಉಡುಪಿ ನಗರದಿಂದ ಬರುವ ಬಸ್‌ಗಳು ಮುಖ್ಯ ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಬೇಕು. ವಿಐಪಿ ವಾಹನಗಳಿಗೆ ಎಂಜಿಎಂ ಮೈದಾನದ ಹಿಂಭಾಗ ಇರುವ ಎಸ್.ಆರ್.ಎಸ್. ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಪಾರ್ಕಿಂಗ್ ವ್ಯವಸ್ಥೆಯ ಉಸ್ತುವಾರಿ ದಿನಕರ್ ಪೂಜಾರಿ ಕುಂಜಿಬೆಟ್ಟು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.