ಮುಂದಿನ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಿ
Team Udayavani, Feb 20, 2023, 2:17 PM IST
ಬಂಗಾರಪೇಟೆ: ಯುವ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಿಯಲ್ಲಿ ಸೇರ್ಪಡಿಸುವುದರ ಮೂಲಕ ಮುಂದಿನ ಚುನಾವಣೆಯಲ್ಲಿ ಹೆಚ್ಚು ಮತದಾನವಾಗಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಚುನಾವಣಾ ಅಧಿಕಾರಿ ಬಿ.ಎಸ್. ಹೀರೆಮಠ್ ಅಧಿಕಾರಿಗಳಿಗೆ ಸೂಚಿಸಿದರು.
ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕಿನ ಹಲವು ಮತಗಟ್ಟೆ ಕೇಂದ್ರಗಳಿಗೆ ಶುಕ್ರವಾರ ಭೇಟಿ ನೀಡಿ, ಬಿಎಲ್ ಒಗಳ ಜೊತೆ ಮಾತುಕತೆ ನಡೆಸಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಿನ ರೀತಿಯಲ್ಲಿ ಆಗುವಂತೆ ಅರಿವು ಮೂಡಿಸಬೇಕು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೆಜಿಎಫ್ ತಾಲೂಕಿ ನಲ್ಲಿ ಶೇ.72.83, ಬಂಗಾರಪೇಟೆ ತಾಲೂಕಿನಲ್ಲಿ ಶೇ. 82.62, ಮಾಲೂರು ತಾಲೂಕಿನಲ್ಲಿ ಶೇ.88.34 ಕಡಿಮೆ ಮತದಾನವಾಗಿದೆ. ಆದರೆ, ಮುಳಬಾ ಗಿಲು ಕೋಲಾರ ಮತ್ತು ಶ್ರೀನಿವಾಸಪುರ ತಾಲೂ ಕುಗಳಲ್ಲಿ ಹೆಚ್ಚು ಮತದಾನವಾಗಿದೆ. ಇದಕ್ಕೆ ಕಾರಣ ವೇನು ಎಂದು ಅಧಿಕಾರಿಗಳಲ್ಲಿ ಪ್ರಶ್ನೆ ಮಾಡಿದರು.
ಕಾರ್ಮಿಕರ ಮನವೊಲಿಸಿ: ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕುಗಳಲ್ಲಿ ಹೆಚ್ಚು ಕೂಲಿ ಕಾರ್ಮಿಕ ರಿದ್ದು, ಬೆಂಗಳೂರು ಸೇರಿ ಹಲವು ಕಡೆ ಕೆಲಸಕ್ಕೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದರಿಂದಾಗಿ ಮತದಾನ ಕಡಿಮೆ ಆಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಕಾರ್ಮಿಕ ಇಲಾಖೆಯ ಅಧಿಕಾರಿ ಗಳೊಂದಿಗೆ ಸಭೆಯನ್ನು ನಡೆಸಿ, ಮತದಾನಕ್ಕೆ ಕಾರ್ಮಿಕರಲ್ಲಿ ಮನವೊಲಿಸುವಂತೆ ಹೇಳಿದರು. ಹೆಣ್ಣು ಮಕ್ಕಳ ನೋಂದಣಿ ಹೆಚ್ಚಿಸಿ: ಬಂಗಾರ ಪೇಟೆ ತಾಲೂಕಿನಲ್ಲಿ 4,747 ಯುವ ಮತದಾರರು ಹೊಸದಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರ ಪೈಕಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಯುವ ಕರು ಹೆಚ್ಚಿದ್ದು, ಹೆಣ್ಣು ಮಕ್ಕಳು ಕಡಿಮೆ ಪ್ರಮಾಣ ದಲ್ಲಿ ನೋಂದಣಿ ಮಾಡಿಸಿದ್ದಾರೆ. ಆದರೆ, ಚುನಾ ವಣೆಯ ಒಳಗಾಗಿ ಅವರ ಸಂಖ್ಯೆಯನ್ನೂ ಹೆಚ್ಚಿಸ ಬೇಕು ಎಂದು ಹೇಳಿದರು.
ಸೂಕ್ತ ಕ್ರಮಕೈಗೊಳ್ಳಿ: ಮತಗಟ್ಟೆ ಕೇಂದ್ರಗಳಲ್ಲಿ ಮತದಾನಕ್ಕೆ ಬರುವವರೆಗೆ ಮೂಲ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ಹಲವು ಸೌಲಭ್ಯ ಒದಗಿಸಬೇಕು. ಇವುಗಳ ಕೊರತೆಯಿಂದ ಯಾವುದೇ ಕಾರಣಕ್ಕೂ ಮತದಾನ ಕುಂಠಿತ ಆಗಬಾರದು. ಅದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ತಿಳಿಸಿದರು. ಮತದಾರರ ಬಳಿ ಚರ್ಚೆ: ಈ ವೇಳೆ ಹಲವು ಮತದಾರರ ಬಳಿ ತೆರಳಿ, ಮತದಾನ ಕುಂಠಿತಕ್ಕೆ ಕಾರಣದ ಬಗ್ಗೆ ಚರ್ಚಿಸಿ ಬಿಎಲ್ ಒಗಳು ಮತದಾ ನದ ಬಗ್ಗೆ ಮನವೊಲಿಸಿದ್ದಾರ ಎಂಬುದಾಗಿ ಸೋರೇ ಗೌಡನಕೋಟೆ ಮತ್ತು ಬೆಮೆಲ್ ನಗರಗಳಲ್ಲಿ ಚರ್ಚೆ ನಡೆಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮತ ದಾರರು, ಇಂದಿನ ಕಾಲಘಟ್ಟದಲ್ಲಿ ರಾಜಕೀಯ ಪರಿಸ್ಥಿತಿ ಸರಿ ಇಲ್ಲ, ಒಳ್ಳೆಯ ಅಭ್ಯರ್ಥಿಗಳು ಸಹ ಸ್ಪರ್ಧಿಸುತ್ತಿಲ್ಲ. ಆದ್ದರಿಂದ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ನೋಟಾ ಒತ್ತಿ: ಇದಕ್ಕೆ ಚುನಾವಣಾ ಅಧಿಕಾರಿ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಮತದಾನ ವನ್ನು ಮಾಡದೆ ಹಿಂದೆ ಉಳಿಯಬಾರದು. ನಿಮಗೆ ಅಭ್ಯರ್ಥಿ ಇಷ್ಟವಾಗದೇ ಇದ್ದರೆ ನೋಟಾಗೆ ಮತ ಚಲಾಯಿಸಿ ಎಂದು ಹೇಳಿದರು.
ಇಒ ಎನ್. ವೆಂಕಟೇಶಪ್ಪ, ಕೆಜಿಎಫ್ ತಾಪಂ ಇಒ ಎಂ. ಮಂಜುನಾಥ್, ಶಿರಸ್ತೇದಾರ್ ಚಂದ್ರಶೇಖರ್, ಉಪನ್ಯಾಸಕ ಬೋಡಿರೆಡ್ಡಿ, ಕಸಬಾ ಕಂದಾಯ ನಿರೀಕ್ಷಕ ಅಜಯ್, ಗ್ರಾಮಲೆಕ್ಕಿಗ ಯೋಗಿ, ಅಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.